ಹಾವಿನ ಜತೆ ನಗರಸಭೆ ಮುಂದೆ ಧರಣಿ
ನೀರು, ಒಳಚರಂಡಿ ಸಮಸ್ಯೆ ಬಗೆಹರಿಸಲು ನಿವಾಸಿಗಳ ಮನವಿ
Team Udayavani, May 18, 2019, 3:55 PM IST
ಕೋಲಾರದಲ್ಲಿ ಕುಡಿಯುವ ನೀರು, ಒಳಚರಂಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜಯನಗರ, ಕನಕನಪಾಳ್ಯ ಬಡಾವಣೆ ವಾಸಿಗಳು ಹಾವಿನ ಸಮೇತ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೋಲಾರ: ಕುಡಿಯುವ ನೀರು, ಒಳಚರಂಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಇಲ್ಲಿನ ಜಯನಗರ ಮತ್ತು ಕನಕನಪಾಳ್ಯ ಬಡಾವಣೆ ವಾಸಿಗಳು ನಗರಸಭೆ ಕಚೇರಿಗೆ ಮನೆಯೊಂದರ ಶೌಚಾಲಯಕ್ಕೆ ಬಂದಿದ್ದ ಹಾವಿನ ಸಮೇತ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕನಕನಪಾಳ್ಯದಲ್ಲಿ ಒಳಚರಂಡಿ ತುಂಬಿರುವುದರಿಂದ ಹಾವುಗಳ ಕಾಟ ಹೆಚ್ಚಾಗಿದೆ. 4 ಬಾರಿ ಹಾವುಗಳು ಸಿಕ್ಕಿವೆ. ನಮ್ಮ ಪರಿಸ್ಥಿತಿ ಅರ್ಥಮಾಡಿಸುವ ಸಲುವಾಗಿ ಡಬ್ಬಿಯಲ್ಲಿ ಹಾವನ್ನು ಹಾಕಿಕೊಂಡು ಬಂದಿರುವುದಾಗಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕನಕನಪಾಳ್ಯ ಬಡಾವಣೆಯಲ್ಲಿ ಸಾಕಷ್ಟು ದಿನಗಳಿಂದಲೂ ಒಳಚರಂಡಿ ಸಮಸ್ಯೆಯಿರುವ ಬಗ್ಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ನಗರಸಭೆ ಕ್ರಮಕೈಗೊಳ್ಳುತ್ತಿಲ್ಲ. ಒಳಚರಂಡಿ ತುಂಬಿರುವುದರಿಂದಾಗಿ ಹಾವುಗಳು ಹೊರಬಂದು ಮನೆಗಳಿಗೆ ನುಗ್ಗುತ್ತಿವೆ. ಇಷ್ಟಾದರೂ ಅಧಿಕಾರಿಗಳು ಅತ್ತ ಸುಳಿದಿಲ್ಲ ಎಂದು ಕಿಡಿಕಾರಿದರು. ನಗರಸಭೆಗೆ ಸದ್ಯ ಡಿ.ಸಿ.ಯವರೇ ಆಡಳಿತಾಧಿಕಾರಿಗಳಾಗಿದ್ದು, ಕೂಡಲೇ ನಮ್ಮ ವಾರ್ಡ್‌ನ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಒಳಚರಂಡಿ ಸಮಸ್ಯೆಯೂ ಮಿತಿ ಮೀರಿದ್ದು, ವಾಹನಗಳ ಚಾಲಕರನ್ನು ಮಾತನಾಡಿಸು ವಂತಿಲ್ಲ. ಈಗ ಹೇಳಿದರೆ 15 ದಿನಗಳಾ ದರೂ ಬರುವುದಿಲ್ಲ, 3 ಸಾವಿರ ಕೊಟ್ಟರೆ ತಕ್ಷಣ ಬರುತ್ತಾರೆ. ಈ ಅಕ್ರಮಗಳಿಗೆ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿಲ್ಲ ಎಂದು ಆರೋಪಿಸಿದರು. ಚಂದ್ರೇಗೌಡ, ಎಸ್.ವಿ.ಮುನಿವೆಂಕಟಪ್ಪ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.