ತಾಲೂಕು ನಂ.1 ಮಾಡಲು ಶ್ರಮ

ಕೋಚಿಮುಲ್ ನೂತನ ನಿರ್ದೇಶಕ ನಾಗರಾಜ್‌ • ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರಿಂದ ಅಭಿನಂದನೆ

Team Udayavani, May 18, 2019, 4:05 PM IST

kolar-tdy-3..

ಮುಳಬಾಗಿಲು ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ನೂತನ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್‌ ಅವರನ್ನು ಮುಖಂಡ ಸಮೃದ್ಧಿ ಮಂಜುನಾಥ್‌, ಆಲಂಗೂರು ಶಿವಣ್ಣ ಅಭಿನಂದಿಸಿದರು.

ಮುಳಬಾಗಿಲು: ಕೋಚಿಮುಲ್ನಲ್ಲೇ ತಾಲೂಕನ್ನು ಮೊದಲ ಸ್ಥಾನಕ್ಕೆ ತರಲು ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ನೂತನ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್‌ ಹೇಳಿದರು.

ನಗರದ ಕೋಚಿಮುಲ್ ಶಿಬಿರ ಕಚೇರಿ ಆವರಣದಲ್ಲಿ ತಾಲೂಕು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೈತ್ರಿ ಧರ್ಮದಂತೆ ಸಂಸದ ಕೆ.ಎಚ್.ಮುನಿಯಪ್ಪ ಅವರ ಸೂಚನೆ ಮೇರೆಗೆ, ತಾಲೂಕು ಕಾಂಗ್ರೆಸ್‌ ಮುಖಂಡರು ಪಕ್ಷ ಬೆಂಬಲಿತ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸದೇ, ತಮ್ಮ ಗೆಲುವಿಗೆ ಶ್ರಮಿಸಿದ್ದಾರೆ. ಯಾವುದೇ ಸಂಘಗಳೊಂದಿಗೆ ದ್ವೇಷ ಸಾಧಿಸದೇ ತಾಲೂಕಿನ 174 ಡೇರಿಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಅದೇ ರೀತಿ ಹಾಲು ಉತ್ಪಾದಕರೂ ಪ್ರಸ್ತುತ 8.30 ಗುಣಮಟ್ಟದಲ್ಲಿ ಹಾಲು ನೀಡಿದರೆ ಸಾಲದು, ಸಂಘಗಳು ಉಳಿಯಬೇಕಾದಲ್ಲಿ ಹೆಚ್ಚಿನ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು. ಆಗ ಕೋಚಿಮುಲ್ನಲ್ಲಿ ತಾಲೂಕು ಮೊದಲ ಸ್ಥಾನಕ್ಕೆ ಬರಲು ಸಾಧ್ಯ ಎಂದು ಹೇಳಿದರು.

ತಾವು ಈಗಾಗಲೇ ಎರಡು ಅವಧಿಗೆ ಕೋಚಿಮುಲ್ ನಿರ್ದೇಶಕರಾಗಿ, ಒಮ್ಮೆ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಒಕ್ಕೂಟದ ನಡೆಯ ಬಗ್ಗೆ ಅರಿವಿದ್ದು, ಗುಣಮಟ್ಟದ ಪಶು ಆಹಾರದ ಕೊರತೆ, ಡೇರಿ ಕಾರ್ಯದರ್ಶಿ, ನೌಕರರಿಗೆ ಭದ್ರತೆ ಇಲ್ಲದಿರುವುದು, ಇತರೆ ಸಮಸ್ಯೆಗಳಿಂದ ಹಾಲು ಉತ್ಪಾದಕರು ನಲುಗಿಹೋಗಿದ್ದಾರೆ. ಅವರಿಗೆ ದತ್ತಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕಳೆದ 5 ವರ್ಷಗಳಿಂದ ಹಾಲಿನ ಬೆಲೆಯೂ ಏರಿಕೆ ಮಾಡಿಲ್ಲ. ಇದರಿಂದ ಈ ವಿಚಾರಗಳನ್ನು ಮುಂದಿನ ನಿರ್ದೇಶಕರ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಅಲ್ಲದೇ, ಶಿಬಿರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಪ್ರತಿ ದಿನವೂ ಹಳ್ಳಿಗಳಿಗೆ ಭೇಟಿ ನೀಡಿ ಉತ್ಪಾದಕರ ಸಮಸ್ಯೆ ಆಲಿಸಿ ಕ್ರಮಕೈಗೊಳ್ಳಬೇಕು ಎಂದರು.

ಅಧ್ಯಕ್ಷ ಸ್ಥಾನಕ್ಕೆ ಒತ್ತಡ: ಜೆಡಿಎಸ್‌ ಯುವ ಮುಖಂಡ ಸಮೃದ್ಧಿ ಮಂಜುನಾಥ್‌ ಮಾತನಾಡಿ, ತಾಲೂಕು ಮುಖಂಡರ ನೇತೃತ್ವದಲ್ಲಿ ಶನಿವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೈತ್ರಿ ಧರ್ಮದಂತೆ ಕೋಚಿಮುಲ್ನ ಅಧ್ಯಕ್ಷ ಸ್ಥಾನ ಒಂದು ಅವಧಿಗೆ ಜೆಡಿಎಸ್‌ಗೆ ಬಿಟ್ಟು ಕೊಡುವಂತೆ ಕಾಂಗ್ರೆಸ್‌ ಮೇಲೆ ಒತ್ತಡ ತರಲಾಗುವುದು. ಅದು ಸಪಲವಾದಲ್ಲಿ ಕಾಡೇನಹಳ್ಳಿ ನಾಗರಾಜ್‌ಗೆ ಕೋಚಿಮುಲ್ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಹೇಳಿದರು.

ಗೆಲುವಿಗೆ ಶ್ರಮ: ಈ ಚುನಾವಣೆಯಲ್ಲಿ ತಾಲೂಕಿನಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಬೆಂಬಲಿತ ಕಾಂಗ್ರೆಸ್‌ ಮುಖಂಡರಾದ ಜಿ.ರಾಮಲಿಂಗಾರೆಡ್ಡಿ ಆವಣಿ ಬ್ಲಾಕ್‌ ಅಧ್ಯಕ್ಷ ಅನಂದ ರೆಡ್ಡಿ, ಜಿಪಂ ಸದಸ್ಯ ಅರವಿಂದ್‌, ಉತ್ತನೂರು ಶ್ರೀನಿವಾಸ್‌, ಪಕ್ಷದ ಮುಖಂಡರು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದು, ಧನ್ಯವಾದ ಸಲ್ಲಿಸಿದರು.

ಕೆಲವರಿಂದ ಕ್ಷೇತ್ರ ಕಲುಷಿತ: ಜೆಡಿಎಸ್‌ ಮುಖಂಡ ಆಲಂಗೂರು ಶಿವಣ್ಣ ಮತ್ತು ಯುವ ಮುಖಂಡ ಕಲ್ಲುಪಲ್ಲಿ ಪ್ರಕಾಶ್‌ ಮಾತನಾಡಿ, ಐದು ವರ್ಷಗಳಿಂದ ತಾಲೂಕಿನಲ್ಲಿದ್ದ ನಿರ್ದೇಶಕರ ದುರಾಡಳಿತದಿಂದ ಬೇಸತ್ತಿದ್ದ ಉತ್ಪಾದಕರ ಸಂಘಗಳ ಮತದಾರರು ಈ ಬಾರಿ ಜೆಡಿಎಸ್‌ ಅಭ್ಯರ್ಥಿ ಕಾಡೇನಹಳ್ಳಿ ನಾಗರಾಜ್‌ಗೆ ಮತ ನೀಡಿ ಗೆಲುವಿಗೆ ಶ್ರಮಿಸಿದ್ದಾರೆ. ಅಲ್ಲದೇ, ಸಹಕಾರಿ ಕ್ಷೇತ್ರದಲ್ಲಿ ಹಲವು ಮಹನೀಯರು ಶ್ರಮಿಸಿ ತಮ್ಮ ಹೆಸರನ್ನು ಉಳಿಸಿ ಹೋಗಿದ್ದಾರೆ. ಅಂತಹ ಕ್ಷೇತ್ರವನ್ನು ಕೆಲವರು ಹಣ, ಆಮಿಷಗಳ ಮೂಲಕ ಕಲುಷಿತಗೊಳಿಸಿದ್ದು ಸರಿಯಲ್ಲ ಎಂದರು. ತಾಲೂಕು ಜೆಡಿಎಸ್‌ ಕಾರ್ಯದರ್ಶಿ ನಲ್ಲೂರು ರಘುಪತಿರೆಡ್ಡಿ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ತೇಜೋರಮಣ, ಜಂಟಿ ಕಾರ್ಯದರ್ಶಿ ಕವತನಹಳ್ಳಿ ಮುನಿಶಾಮಿಗೌಡ, ಜಿಪಂ ಮಾಜಿ ಸದಸ್ಯರಾದ ಬಿ.ವಿ.ಶ್ಯಾಮೇಗೌಡ, ಶ್ರೀನಿವಾಸ್‌ ತಾಪಂ ಮಾಜಿ ಅಧ್ಯಕ್ಷ ಎಂ.ಎಸ್‌.ಶ್ರೀನಿವಾಸರೆಡ್ಡಿ, ಆರ್‌ಎಂಸಿ ಮಾಜಿ ಅಧ್ಯಕ್ಷ ಸಿ.ರಘುಪತಿ, ಎಚ್.ಗೊಲ್ಲಹಳ್ಳಿ ಸತೀಶ್‌, ಸನ್ಯಾಸಪಲ್ಲಿ ತಿಮ್ಮರಾಜು, ರೋಟರಿ ಅಧ್ಯಕ್ಷ ಪಿ.ಎಸ್‌.ರಮೇಶ್‌, ರೆಡ್ಡಪ್ಪರೆಡ್ಡಿ, ಚಿನ್ನ ಹಳ್ಳಿ ಗೋಪಾಲ್, ನಾಗಮಂಗಲ ಶಂಕರಪ್ಪ ಇದ್ದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDP ಮುಖಂಡನ ಹತ್ಯೆಗೆ ನೆರವು: ಇಬ್ಬರು ಪೊಲೀಸರ ಅಮಾನತು

Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!

Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!

14-bng

Kolar: 1.25 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳು ಪತ್ತೆ

CM-Dineh

Eagles Eye: ಭ್ರೂಣಲಿಂಗ ಪತ್ತೆ ತಡೆಗೆ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನಿಗಾ: ದಿನೇಶ್‌

Benga-Club

Bengaluru Press Club: ಸುದ್ದಿಗೋಷ್ಠಿ ನಡುವೆಯೇ ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.