ಛಾಯಾಚಿತ್ರಗಳಲ್ಲಿ ಯತಿ ಜೀವನ ದರ್ಶನ
Team Udayavani, May 19, 2019, 6:00 AM IST
ವಿರಕ್ತ ಯತಿಗಳ ಬದುಕು ಸಾರ್ವಜನಿಕರಿಗೆ ನಿಗೂಢವೇ. ಕಠಿಣವ್ರತ ನಿಯಮಗಳ ಅನುಷ್ಠಾನದಿಂದಾಗಿ ಯತಿಗಳಿಗೆ ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಸುಪ್ರಸಿದ್ಧ ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ದಿನಚರಿಯ ಬಗ್ಗೆ , ಅವರ ಖಾಸಗಿ ಸಮಯದ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲವಿರುವುದು ಸಹಜ. ಅವರು ಚಕ್ರ ಕಟ್ಟಿಕೊಂಡವರಂತೆ ದೇಶ ಸುತ್ತುವವರು. ಸದಾ ಕ್ರಿಯಾಶೀಲರಾಗಿರುವ ಪೇಜಾವರ ಶ್ರೀಗಳ ಸ್ತಬ್ಧಚಿತ್ರ (ಸ್ಟಿಲ್ಸ್)ಗಳನ್ನು ಸಂಕಲನ ಮಾಡುವ ಅರ್ಥಪೂರ್ಣ ಪ್ರಯತ್ನ ಎ ಡೇ ವಿಥ್ ದ ಸೈಂಟ್: ದೆನ್ ಆ್ಯಂಡ್ ನೌ ಇತ್ತೀಚೆಗೆ ಬಿಡುಗಡೆಯಾಗಿದೆ.
ದೇವಪೂಜಾಕಾರ್ಯ ದಿಂದ ತೊಡಗಿ ಸಮಾಜಸೇವಾ ಕೈಂಕರ್ಯದವರೆಗಿನ ಅನೇಕ ಅಮೂಲ್ಯ ಕ್ಷಣಗಳು ಆ್ಯಸ್ಟ್ರೋ ಮೋಹನ್ ಅವರ ಈ ಛಾಯಾಚಿತ್ರಕೃತಿ ಯಲ್ಲಿ ಸಂಗ್ರಹಗೊಂಡಿವೆ. 2012ರಿಂದ 2018ರ ವರೆಗಿನ 16 ವರ್ಷಗಳ, ಅಂದರೆ ಪರ್ಯಾಯದಿಂದ ಪರ್ಯಾಯ ದವರೆಗಿನ “ಯತಿಯೊಬ್ಬರ ನಿಯತಿ’ದ ದರ್ಶನವನ್ನು ಸಮರ್ಥವಾಗಿ ಮಾಡಿಸುವಲ್ಲಿ ಛಾಯಾಚಿತ್ರಣದ ಕೌಶಲ
ಎದ್ದು ತೋರುತ್ತದೆ.
ಎ ಡೇ ವಿಥ್ ದ ಸೈಂಟ್: ದೆನ್ ಆ್ಯಂಡ್ ನೌ
ಲೇ.: ಆಸ್ಟ್ರೋಮೋಹನ್
ಪ್ರ.: ಭೂತರಾಜ ಪಬ್ಲಿಕೇಷನ್ಸ್ , ಹೇಮಾದ್ರಿ, ಡೋರ್ ನಂ. 1-1-99 ಬಿ (1), 1ನೇ ಮಹಡಿ, ಬಿಎಡ್ ಕಾಲೇಜು ರಸ್ತೆ, ಕುಂಜಿಬೆಟ್ಟು , ಉಡುಪಿ-576102 ಮೊಬೈಲ್: 9448104000
ಮೊದಲ ಮುದ್ರಣ: 2019 ಬೆಲೆ: ರೂ. 1000
ರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.