ಶ್ರದ್ಧಾಕೇಂದ್ರಗಳಿಂದ ಆಧ್ಯಾತ್ಮಿಕ ಶಕ್ತಿ: :ಒಡಿಯೂರುಶ್ರೀ
Team Udayavani, May 19, 2019, 6:10 AM IST
ಕುಂಬಳೆ: ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೂಲಕ ಆಧ್ಯಾತ್ಮಿಕ ಶಕ್ತಿ ವೃದ್ದಿಯ ಜೊತೆಗೆ ಪಾರಮಾರ್ಥಿಕತೆಯ ಚಿಂತನೆಗಳು ಮಾನವ ಜೀವನಕ್ಕೆ ಶ್ರೇಯಸ್ಸನ್ನು ಒದಗಿಸಿಕೊಡುತ್ತದೆ. ಕ್ಲೇಶ ರಹಿತ ವ್ಯಕ್ತಿ, ವ್ಯಕ್ತಿತ್ವ ರೂಪಿಸುವಲ್ಲಿ ಆಧ್ಯಾತ್ಮದ ಒಲವನ್ನು ಬೆಳೆಸುವ ಜೊತೆಗೆ ಬದುಕಿನ ಸಾಫಲ್ಯವನ್ನು ಕಂಡುಕೊಳ್ಳುವಲ್ಲಿ ಯುವ ಸಮಾಜ ತೊಡಗಿಸಿಕೊಳ್ಳಬೇಕೆಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.ಬಾಯಾರು ಹಿರಣ್ಯ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೂಜ್ಯರು ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮದ ಮೋಹನ ದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನಗೆ„ದು ದೇವಾಲ ಯಗಳು ಪುನರುಜ್ಜೀವನಗೊಳ್ಳುತ್ತಿರುವುದು ಕಂಡುಬರುತ್ತಿದೆ. ಶಕ್ತಿ, ಸಂಪನ್ನತೆಗಳ ಮೂಲಕ ಆಲಯಗಳ ಅಭಿವೃದ್ದಿಗೆ ತೊಡಗಿಸುವ ನಾವು ಭಕ್ತಿಯ ನವಶಕ್ತಿಯಿಂದ ಉಳಿಸಿ ಬೆಳೆಸುವ ಮನೋಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕೆಂದರು ದುರ್ಗುಣಗಳಿಗೆ ಬಲಿಯಾಗದೆ ಸತ್ ಚಿಂತನೆಯ ಮನಸ್ಸು, ಬುದ್ದಿಗಳನ್ನು ಪ್ರಚೋದಿಸುವ ದೆ„ವೀ ಕಾರ್ಯಗಳಿಗೆ ತೊಡಗಿಸಿ ಕೊಳ್ಳುವುದರಿಂದ ಸಾಮಾಜಿಕ ಏಕತೆ, ಆಧ್ಯಾತ್ಮಿಕ ಶಕ್ತಿ ಚೆ„ತನ್ಯಗಳು ಬದುಕನ್ನು ಸುಗಮಗೊಳಿಸುವುದು. ರಾಷ್ಟ್ರದ ಮೌಲ್ಯಗಳನ್ನು ಪುನಶ್ಚೇತನಗೊಳಿಸುವಲ್ಲಿ ಆಧ್ಯಾತ್ಮಿಕತೆಯ ತಳಹದಿಯ ಮೆಟ್ಟಲುಗಳ ಮೂಲಕ ತ್ಯಾಗರೂಪಿ ಗಳಾಗಿ ಭಗವದ್ ಅನುಗ್ರಹಕ್ಕೆ ಪಾತ್ರರಾಗಬೇಕು .ಲೋಕದ ಸಮಸ್ತರ ಒಳಿತನ್ನು ಬಯಸುವ ಸನಾತನ ಧರ್ಮದ ಮೇರು ಗುರುತ್ವವನ್ನು ಬಲಪಡಿಸುವಲ್ಲಿ ದೇವಾಲಯಗಳ ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನಗಳ ಜೊತೆಗೆ ವ್ಯಕ್ತಿ ವ್ಯಕ್ತಿಗಳೊಳಗಿನ ಸಕರ್ಮಗಳಿಂದ ಸಾಧನಾಶೀಲರಾಗೋಣವೆಂದರು.
ಡಾ| ಬಿ.ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪೈವಳಿಕೆ ಚಿತ್ತಾರಿಯ ರಂಗತೈÅ ಬಲ್ಲಾರಸರು,ಮಂಕುಡೆವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಶ್ರೀನಿವಾಸ ಆಚಾರ್ಯ, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ವೇದಶ್ರೀ ಪದ್ಮನಾಭ ಶರ್ಮ, ನಿವೃತ್ತ ಪ್ರಾಂಶುಪಾಲ ಪೊÅ| ಎ.ಶ್ರೀನಾಥ್ ಕಾಸರಗೋಡು, ಆನಂದ ಭಟ್ ಹಿರಣ್ಯ, ರಮಾನಾಥ ಭಂಡಾರಿ ಪೆವೊìಡಿ ಬೀಡು, ಶಿವರಾಮ ಶೆಟ್ಟಿ ಕಲ್ಲಗದ್ದೆ, ಮಾಣಿಪ್ಪಾಡಿ ನಾರಾಯಣ ಭಟ್, ಮೋನಪ್ಪ ಶೆಟ್ಟಿ ಕಟ್ನಬೆಟ್ಟು ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ| ಎಂ.ಶ್ರೀಧರ ಭಟ್ ಸ್ವಾಗತಿಸಿದರು, ಶೇಖರ ಶೆಟ್ಟಿ ಮಾಸ್ತರ್ ಕುಳಾÂರ್ ವಂದಿಸಿದರು. ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು.
ಸಮಾರಂಭದಲ್ಲಿ ವಾಸ್ತುಶಿಲ್ಪಿ ಪ್ರಸನ್ನ ಭಟ್ ಮುಳಿಯಾಲ, ಬ್ರಹ್ಮಶ್ರೀಅನಂತನಾರಾಯಣ ಭಟ್ ಪರಕ್ಕಜೆ, ಹಿರಣ್ಯ ತಿರುಮಲೇಶ್ವರ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಕುಣಿತ ಭಜನೆ, ತೆಲಿಕೆದ ಕಲಾವಿದೆರ್ ಕೊ„ಲ ತಂಡದಿಂದ ತುಳು ನಾಟಕ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.