![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 19, 2019, 6:00 AM IST
ಉಳ್ಳಾಲ: ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಭವಾನಿ ಸ್ಯಾನಿಟರಿ ಜಪ್ಪು ಮಂಗಳೂರು ಇದರ ಮಾಲಕಿ ಭವಾನಿ ಕಾರ್ಯಕ್ರಮ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಗೌರವ ಕಾರ್ಯದರ್ಶಿ ನಿವೃತ್ತ ಅಪರ ಜಿಲ್ಲಾ ಅಧಿಕಾರಿ ಎಸ್. ಎ. ಪ್ರಭಾಕರ ಶರ್ಮ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ವಸಂತ ಪೈ, ಕಿರಣ್ ಕುಮಾರ್, ಕೆಎಂಸಿಯ ಹರ್ಬರ್ಟ ಮಾರಿಯೋ ಪಿರೇರಾ, ಡಾ| ರಾಜೇಶ್, ಡಾ| ಶ್ರೇಯಾ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಹಾಬಲ ಶೆಟ್ಟಿ , ಮಹಿಳಾ ಮಂಡಳಿ ಅಧ್ಯಕ್ಷೆ ಮೀನಾ ಬಾಲಕೃಷ್ಣ, ರೆಡ್ ಕ್ರಾಸ್ ಸೊಸೈಟಿಯ ಪ್ರವೀಣ್ ಹಾಗೂ ಎಡ್ವರ್ಡ್ಸ್ ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ ಅಧ್ಯಕ್ಷ ರಾಕೇಶ್ ತುಳುನಾಡು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಭಾಕರ ಕೊಲ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೈಲೇಶ್ ಕೊಲ್ಯ ಸ್ವಾಗತಿಸಿದರು.ತುಳುನಾಡು ಪ್ರಂಡ್ಸ್‌ನ ಸುಜಿತ್ ವಂದಿಸಿದರು.
ನಾರಾಯಣ ಕುಂಪಲ ಕಾರ್ಯಕ್ರಮ ಸಂಯೊಜಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.