ಆರ್‌ಟಿಒ ಕಚೇರಿಯಲ್ಲಿ ಈಗ ಕೇವಲ 17 ಸಿಬಂದಿ !

ನಿವೃತ್ತರ ಸಂಖ್ಯೆ ಹೆಚ್ಚುತ್ತಿದೆ; ಹೊಸ ನೇಮಕಾತಿ ನಡೆಯುತ್ತಿಲ್ಲ

Team Udayavani, May 19, 2019, 6:00 AM IST

1705MLR4-RTO

ಮಹಾನಗರ: ಮಂಜೂರಾದ ಹುದ್ದೆಯ ಪ್ರಕಾರ ಈ ಕಚೇರಿಯಲ್ಲಿ 92 ಮಂದಿ ಸಿಬಂದಿ ಇರಬೇಕಿತ್ತು. ಆದರೆ ಪ್ರಸ್ತುತ ಇರುವುದು ಕೇವಲ 17 ಮಂದಿ !

ಇದು ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯ ದುಸ್ಥಿತಿ. ಇಲ್ಲಿ ಹನ್ನೊಂದು ವರ್ಷಗಳಿಂದ ನಿವೃತ್ತರ ಸಂಖ್ಯೆ ಹೆಚ್ಚಾಗುತ್ತಿದೆಯೇ ವಿನಾ ಹೊಸಬರ ನೇಮಕಾತಿ ನಡೆಯುತ್ತಿಲ್ಲ. ಪರಿಣಾಮ, ಹಾಲಿ ಕೆಲಸದಲ್ಲಿರುವವರ ಹೆಗಲ ಮೇಲೆ ಹೆಚ್ಚುವರಿ ಹೊಣೆಗಾರಿಕೆ ಬೀಳುತ್ತಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ವಾಹನಗಳ ನೋಂದಣಿ, ಚಾಲನಾ ಪರವಾನಿಗೆ ಪರೀಕ್ಷೆ, ಚಾಲನ ಪರವಾನಿಗೆ ಪತ್ರ ನೀಡುವಿಕೆ, ಲರ್ನ್ ಆಫ್‌ ಲೈಸೆನ್ಸ್‌, ಆಕ್ಸಿಡೆಂಟ್‌ ವೆಹಿಕಲ್‌ ಇನ್‌ಸ್ಪೆಕ್ಷನ್‌, ವಾಹನ ಫಿಟೆ°ಸ್‌ ಟೆಸ್ಟಿಂಗ್‌ ಸಹಿತ ವಿವಿಧ ರೀತಿಯ ಕರ್ತವ್ಯಗಳನ್ನು ಆರ್‌ಟಿಒ ಕಚೇರಿ ಸಿಬಂದಿ ನಿರ್ವಹಿಸಬೇಕು. ಈ ಎಲ್ಲ ಕೆಲಸಗಳನ್ನು ಪೂರೈಸಲು ಮಂಗಳೂರು ಆರ್‌ಟಿಒ ಕಚೇರಿಗೆ 92 ಹುದ್ದೆಗಳು ಮಂಜೂರಾಗಿವೆ. ಆದರೆ, ಈ ಪೈಕಿ ಇನ್‌ಸ್ಪೆಕ್ಟರ್‌ಗಳು, ಕಚೇರಿ ಸಿಬಂದಿ ಸೇರಿ 17 ಹುದ್ದೆ ಮಾತ್ರ ಭರ್ತಿಯಿರುವುದು.

2008ರಿಂದ ನೇಮಕಾತಿಯಾಗಿಲ್ಲ
ವಿಪರ್ಯಾಸವೆಂದರೆ 2008 ರಿಂದೀಚೆಗೆ ಯಾವ ನೇಮಕಾತಿ ಯೂ ನಡೆದಿಲ್ಲ. ಪ್ರತಿ ವರ್ಷ ಕನಿಷ್ಠ ಐವರು ನಿವೃತ್ತರಾಗುತ್ತಿದ್ದಾರೆ. ಆ ಜಾಗಕ್ಕೆ ಹೊಸ ಬರ ನೇಮಕ ನಡೆಯದೇ, ಇರುವ ಸಂಖ್ಯೆಯಲ್ಲಿಯೂ ಕುಸಿತ ಆಗುತ್ತಿದೆ. ಕಳೆದೊಂದು ವರ್ಷದ ಹಿಂದೆ 36 ಮಂದಿ ಸಿಬಂದಿ ಇದ್ದರೆ, 17ಕ್ಕಿಳಿದಿದೆ.

ಅನಿವಾರ್ಯದ ಸ್ಥಿತಿ
ಸಿಬಂದಿ ಕೊರತೆಯಿಂದಾಗಿ ಅವಧಿ ಮೀರಿದರೂ ಕೆಲಸ ಮಾಡಬೇಕಾದ ಅನಿವಾರ್ಯದ ಸ್ಥಿತಿ ಈಗಿರುವ ಸಿಬಂದಿಯದ್ದು. ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಕೆಲಸ ನಿರ್ವಹಿಸಬೇಕೆಂಬುದು ಸರಕಾರಿ ನಿಯಮ.

ಆದರೆ, ಇಲ್ಲಿ ರಾತ್ರಿ ಎಂಟಾದರೂ ಕೆಲಸ ಮುಗಿಯುವುದಿಲ್ಲ ಎನ್ನುತ್ತಾರೆ ಕಚೇರಿ ಸಿಬಂದಿ. ಅಲ್ಲದೆ, ಮುಖ್ಯವಾದ ಕೆಲಸಗಳನ್ನೇ ಮಾಡಲು ಸಿಬಂದಿ ಇಲ್ಲದಿರುವುದರಿಂದ ನಿಯಮಗಳ ಪರಿಣಾಮಕಾರಿ ಅನುಷ್ಠಾನವೂ ಸಾಧ್ಯವಾಗದೆ ಅಧಿಕಾರಿಗಳು ಕೈ ಚೆಲ್ಲಿದ್ದಾರೆ.

ವಾಹನಗಳ ಸಂಬಂಧಿಸಿದಂತೆ ಹಲವಾರು ಕೆಲಸಗಳನ್ನು ಇರುವ 17 ಮಂದಿ ಸಿಬಂದಿ ನಿರ್ವಹಿಸಬೇಕಾಗುತ್ತದೆ. ಇದರೊಂದಿಗೆ ಪೊಲ್ಯೂಶನ್‌ ಡ್ರೈವ್‌, ರಸ್ತೆ ಸುರಕ್ಷತಾ ಸಪ್ತಾಹ, ಚುನಾವಣೆ ಸಂಬಂಧಿ ಕೆಲಸಗಳು ಸಹಿತ ಇತರ ಕೆಲಸಗಳನ್ನೂ ಇದೇ ಸಿಬಂದಿ ನಿರ್ವಹಿಸಬೇಕಾಗುತ್ತದೆ. ಇದರಿಂದ ಸಾರ್ವಜನಿಕರು ತಿಂಗಳಗಟ್ಟಲೆ ಕಾಯಬೇಕಾಗಿದೆ ಎನ್ನುತ್ತಾರೆ ವಾಹನ ಚಾಲಕ ಶಿವಪ್ರಸಾದ್‌.

ಶಾಶ್ವತ ಆರ್‌ಟಿಒ ಇಲ್ಲ
ನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ ಶಾಶ್ವತ ಸಾರಿಗೆ ಅಧಿಕಾರಿ ನೇಮಕವಾಗದೇ 2019ರ ಆಗಸ್ಟ್‌ಗೆ ನಾಲ್ಕು ವರ್ಷ. 2015ರ ಬಳಿಕ ಶಾಶ್ವತ ನೇಮಕಾತಿಯೇ ನಡೆದಿಲ್ಲ. ಪ್ರಭಾರ ಆರ್‌ಟಿಒ ನಿಯೋಜನೆಗೊಂಡು ಕನಿಷ್ಠ ಸಮಯದಲ್ಲೇ ವರ್ಗಾವಣೆ ನಡೆಯುತ್ತಿದೆ. 2015ರಿಂದ ಇಲ್ಲಿವರೆಗೆ ಹತ್ತು ಬಾರಿ ಪ್ರಭಾರ ಆರ್‌ಟಿಒಗಳ ನಿಯೋಜನೆಯಾಗಿದ್ದು, ಕೆಲವರು ಎರಡೆರಡು ಬಾರಿ ಪ್ರಭಾರ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜಾನ್‌ ಮಿಸ್ಕಿತ್‌ ಅವರು ಪ್ರಭಾರ ಆರ್‌ಟಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 ಸಿಬಂದಿ ಅಗತ್ಯ
ನಗರದ ಆರ್‌ಟಿಒ ಕಚೇರಿಯಲ್ಲಿ ಸಿಬಂದಿ ಕೊರತೆ ಇದೆ. ಈ ಬಗ್ಗೆ ಪ್ರತಿ ಬಾರಿ ಮೀಟಿಂಗ್‌ನಲ್ಲಿಯೂ ಪ್ರಸ್ತಾವಿಸಲಾಗುತ್ತಿದೆ. ನಿಯಮಗಳನ್ನು ಪರಿಣಾಮಕಾರಿಯಾಗಿ ಫಾಲೋ ಅಪ್‌ ಮಾಡಲಾಗುತ್ತಿದೆ. ಆದರೆ, ಸಿಬಂದಿ ನೇಮಕಾತಿ ನಡೆದು ಸಿಬಂದಿ ಸಂಖ್ಯೆ ಹೆಚ್ಚಾದಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ.
-ಜಾನ್‌ ಮಿಸ್ಕಿತ್‌,
ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ

-  ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.