ದೇವಸ್ಥಾನ, ಪ್ರವಾಸಿ ತಾಣಗಳಿಗೂ ತಟ್ಟಿದ ನೀರಿನ ಅಭಾವ

ಅನ್ನ ಪ್ರಸಾದ ತಯಾರಿ, ವಾಟರ್‌ ಪಾರ್ಕ್‌ಗೂ ಬೇಕು ಟ್ಯಾಂಕರ್‌ ನೀರು!

Team Udayavani, May 19, 2019, 6:00 AM IST

1805MLR77-TANKER

ವಿಶೇಷ ವರದಿ- ಮಹಾನಗರ: ನೀರಿನ ಅಭಾವ ದೇವಸ್ಥಾನಗಳಲ್ಲಿ ನಡೆಯುವ ಅನ್ನ ಪ್ರಸಾದ, ಪ್ರವಾಸಿ ತಾಣಗಳಿಗೂ ತಟ್ಟಿದೆ. ನಗರದ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರಿಗೆ ನೀಡುವ ಅನ್ನಪ್ರಸಾದ ತಯಾರಿಸಲು ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾದ ಪಿಲಿಕುಳದ ಮಾನಸ ಅಮ್ಯೂಸ್‌ಮೆಂಟ್‌ ವಾಟರ್‌ ಪಾರ್ಕ್‌ಗೂ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

ನಗರದಲ್ಲಿ ಮನೆ, ಸಾರ್ವಜನಿಕ ಸ್ಥಳ, ಕಚೇರಿ, ದೇವ ಮಂದಿರಗಳಲ್ಲಿಯೂ ನೀರಿನ ಕೊರತೆ ಹೆಚ್ಚಿದ್ದು, ಭಕ್ತರ ಸಂಖ್ಯೆ ಅಧಿಕವಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾ ದೇವಿ ದೇವಸ್ಥಾನ, ಉರ್ವ ಮಾರಿಯಮ್ಮ ದೇವಸ್ಥಾನಗಳಲ್ಲಿ ಅನ್ನಪ್ರಸಾದ ತಯಾರಿಸಲು ಟ್ಯಾಂಕರ್‌ ನೀರನ್ನೇ ಅವಲಂಬಿಸಬೇಕಾಗಿದೆ. ಆದರೆ, ಅತೀ ಹೆಚ್ಚು ಭಕ್ತರು ಆಗಮಿಸುವ ಕದ್ರಿ ಮಂಜುನಾಥ ದೇವಸ್ಥಾನ, ಕುದ್ರೋಳಿ ಭಗವತೀ ದೇವಸ್ಥಾನಗಳಲ್ಲಿ ಸದ್ಯ ಕೆರೆ, ಬಾವಿಗಳಲ್ಲಿ ನೀರಿರುವುದರಿಂದ ಸಮಸ್ಯೆ ಅಷ್ಟೇನು ಬಿಗಡಾಯಿಸಿಲ್ಲ.

ಕುದ್ರೋಳಿ ದೇಗುಲಕ್ಕೆ
ಟ್ಯಾಂಕರ್‌ ನೀರು
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬಾವಿ, ಬೋರ್‌ವೆಲ್‌ ವ್ಯವಸ್ಥೆ ಇಲ್ಲದಿರುವುದರಿಂದ ವರ್ಷಪೂರ್ತಿ ಪಾಲಿಕೆ ನೀರನ್ನೇ ಉಪಯೋಗಿಸಲಾಗುತ್ತದೆ. ಇದೀಗ ನಾಲ್ಕು ದಿನ ನೀರು, ಮೂರು ದಿನ ಸ್ಥಗಿತವಾಗಿರುವುದರಿಂದ ದೇಗುಲಕ್ಕೆ ನೀರಿನ ಅಭಾವ ಉಂಟಾಗಿದೆ. ಅಲ್ಲಿ ಪ್ರತಿ ದಿನ ಅನ್ನಪ್ರಸಾದದ ವ್ಯವಸ್ಥೆ ಇರುವುದರಿಂದ ತಯಾರಿಕೆಗೆ ಹೆಚ್ಚು ನೀರು ಅವಶ್ಯವಿದೆ. ಅದಕ್ಕಾಗಿ ನೀರು ಸ್ಥಗಿತ ಮಾಡಿದ
ದಿನಗಳಂದು 2-3 ಟ್ಯಾಂಕರ್‌ ನೀರು ತರಿಸಲಾಗುತ್ತದೆ.

ಭಕ್ತರು ನೀರಿನ ಮಿತ
ಬಳಕೆಗೆ ಆದ್ಯತೆ ನೀಡಬೇಕೆಂದು ದೇಗುಲದ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.ಮಂಗಳಾದೇವಿಯ ಬಾವಿಯಲ್ಲಿ ನೀರು ಕಡಿಮೆ ಮಂಗಳಾದೇವಿ ದೇವಸ್ಥಾನದಲ್ಲಿ ಬೋರ್‌ವೆಲ್‌ ಇದ್ದರೂ ನೀರು ಕಡಿಮೆಯಾಗಿದೆ. ಇದರಿಂದ ನೀರು ಬಾರದ ದಿನಗಳಲ್ಲಿ ಒಂದು ಟ್ಯಾಂಕರ್‌ ಮತ್ತು ಅನ್ನಪ್ರಸಾದ ನೀಡಲಾಗುವ ಶುಕ್ರವಾರದಂದು ಎರಡು ಟ್ಯಾಂಕರ್‌ ನೀರು ತರಿಸಲಾಗುತ್ತದೆ. ನೀರಿನ ಮಿತ ಬಳಕೆ ಮಾಡುವಂತೆ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಅಲ್ಲಿನ ವಾಚ್‌ಮನ್‌ಗಳು ಪ್ರತಿದಿನ ಹೇಳುತ್ತಾರೆ ಎನ್ನುತ್ತಾರೆ ಆಡಳಿತ ಮೊಕ್ತೇಸರರು.

ಕಡಿಮೆ ನೀರು ಬಳಕೆಗೆ ಕ್ರಮ
ಉರ್ವ ಮಾರಿಯಮ್ಮ ದೇವಸ್ಥಾನದ ಬಾವಿಯಲ್ಲಿ ನೀರು ಕಡಿಮೆಯಾಗಿ ಪಂಪಿಂಗ್‌ ಆಗದಿರುವುದರಿಂದ ನೀರಿನ ಸಮಸ್ಯೆ ಜಟಿಲವಾಗಿದೆ.

ಪ್ರತಿ ಮಂಗಳವಾರ, ಶುಕ್ರವಾರ ಈ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಇರುವುದರಿಂದ ಈ ಎರಡು ದಿನಗಳಂದು ಆರು ಸಾವಿರ ಲೀ. ಟ್ಯಾಂಕರ್‌ ನೀರನ್ನು ತರಿಸಲಾಗುತ್ತದೆ. ಉಳಿದ ದಿನಗಳಂದು ಟ್ಯಾಪ್‌ಗ್ಳಲ್ಲಿ ನೀರಿನ ಹರಿವನ್ನು ಕಡಿಮೆಗೊಳಿಸಿ ಅಗತ್ಯಕ್ಕೆ ತಕ್ಕಂತೆ ಬಳಸಲಾಗುತ್ತದೆ.

ಮಳೆಯತ್ತ ನೋಟ
ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕೆರೆ ಇರುವುದರಿಂದ ನೀರಿಗೆ ಸಮಸ್ಯೆ ಎದುರಾಗಿಲ್ಲ. ಆದರೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಭಕ್ತರು ಆದಷ್ಟು ಈ ಸಮಯದಲ್ಲಿ ಬರುವುದನ್ನು ಮುಂದೂಡಿ ಮಳೆಗಾಲದಲ್ಲಿ ಬಂದರೆ ಉತ್ತಮ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಎಸ್‌. ಪ್ರದೀಪಕುಮಾರ ಕಲ್ಕೂರ ಮನವಿ ಮಾಡಿದ್ದಾರೆ.
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದ್ದರೂ ಬೋರ್‌ವೆಲ್‌ ಇರುವುದರಿಂದ ವಿಪರೀತವಾಗಿಲ್ಲ ಎಂದು ಆಡಳಿತ ಮಂಡಳಿ ಕಾರ್ಯದರ್ಶಿ ಸುಧೀರ್‌ ಜೆಪ್ಪು, ತಿಳಿಸಿದ್ದಾರೆ.

ನಗರದ ವಿವಿಧ ದೇವಸ್ಥಾನ, ಪ್ರಾರ್ಥನಾ ಮಂದಿರ, ಚರ್ಚ್‌, ಮಸೀದಿಗಳಲ್ಲಿಯೂ ಮಳೆಗಾಗಿ ಪ್ರಾರ್ಥಿಸಲಾಗುತ್ತಿದೆ.

ಪಿಲಿಕುಳದಲ್ಲಿ ಬೋರ್‌ವೆಲ್‌ ನೀರು
ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮ ದಲ್ಲಿ ಬೋರ್‌ವೆಲ್‌ ಇರುವುದರಿಂದ ಕುಡಿ ಯುವ ನೀರಿನ ಸಮಸ್ಯೆ ಇಲ್ಲ. ಪಕ್ಕದಲ್ಲಿಯೇ ನದಿ ಇರುವುದರಿಂದ ನದಿ ನೀರನ್ನೂ ಪ್ರಾಣಿ ಸಂಗ್ರಹಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಆದರೆ, ಹೆಚ್ಚುತ್ತಿರುವ ತಾಪಮಾನದಿಂದ ಪ್ರಾಣಿಗಳನ್ನು ರಕ್ಷಿಸುವ ಸಲುವಾಗಿ ಸ್ಪಿಂಕರ್‌ಗಳ ಮೂಲಕ ನೀರು ಹಾಯಿಸಲಾಗುತ್ತಿದೆ. ಅಲ್ಲದೆ, ಪ್ರಾಣಿ ಸಂಗ್ರಹಾಲಯದಲ್ಲಿ ಫ್ಯಾನ್‌, ಕೂಲರ್‌ಗಳನ್ನು ಹಾಕಿ ಪ್ರಾಣಿಗಳನ್ನು ತಂಪಗಿಡಲಾಗುತ್ತಿದೆ.

ಬಸ್‌ ತೊಳೆಯಲು ಮಿತ ನೀರು ಬಳಸಿ
ವಾಹನಗಳನ್ನು ತೊಳೆಯಲು ನೀರಿನ ಬಳಸುವುದನ್ನು ಕಡಿಮೆ ಮಾಡಿ ಎಂದು ಈಗಾಗಲೇ ಜಿಲ್ಲಾಡಳಿತ, ಪಾಲಿಕೆ ಸಾರ್ವಜನಿಕರಲ್ಲಿ ವಿನಂತಿಸಿದೆ. ಸರಕಾರಿ ವಾಹನಗಳಿಗೂ ಇದು ಅನ್ವಯವಾಗುತ್ತದೆ. ಕೆಎಸ್ಸಾರ್ಟಿಸಿಯಲ್ಲಿ ಬಾವಿ ನೀರು ಇರುವುದರಿಂದ ಬಸ್‌ಗಳನ್ನು ತೊಳೆಯಲು ಸದ್ಯಕ್ಕೆ ಸಮಸ್ಯೆಯಾಗಿಲ್ಲ. ಆದರೆ, ನೀರಿನ ಸಮಸ್ಯೆ ಇರುವುದರಿಂದ ಸರಕಾರಿ ಬಸ್‌ ತೊಳೆಯಲು ಜಾಗರೂಕತೆಯಿಂದ ನೀರು ಬಳಸುವುದಕ್ಕೆ ಸೂಚಿಸಿರುವುದಾಗಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಾಣಧಿಕಾರಿ ತಿಳಿಸಿದ್ದಾರೆ.

ನಿರ್ಮಾಣ ಕ್ಷೇತ್ರಕ್ಕೂ ತೊಂದರೆ
ನಗರದಲ್ಲಿ ಬಹಳಷ್ಟು ಕಡೆಗಳಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ. ಆದರೆ, ಎಲ್ಲೆಲ್ಲಿ ಬೋರ್‌ವೆಲ್‌ ನೀರಿನ ವ್ಯವಸ್ಥೆಯಿಲ್ಲವೋ ಅಂಥಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ನಿಗದಿತ ಅವಧಿಗೆ ಮನೆ-ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ಈಡೇರುವುದು ಕಷ್ಟ.

ಹೆಚ್ಚಿದ ಆಕ್ರೋಶ
ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೂ ಕಾಡಿದ ನೀರಿನ ಅಭಾವದಿಂದಾಗಿ ಜನತೆ ಮತ್ತಷ್ಟು ಆತಂಕಿತರಾಗಿದ್ದು, ಜಿಲ್ಲೆಗೆ ಈ ಪರಿಸ್ಥಿತಿ ಬರಲುಬ ಎತ್ತಿನಹೊಳೆ ಯೋಜನೆಯೇ ಕಾರಣ ಎಂದು ಸಾಮಾಜಿಕ ತಾಣಗಳಲ್ಲಿ ಆರೋಪ ಮಾಡುತ್ತಿದ್ದಾರೆ. ಮಾತ್ರವಲ್ಲ, ಆ ಯೋಜನೆಗೆ ಕಾರಣರಾದ ರಾಜಕಾರಣಿಗಳ ವಿರುದ್ಧ ಜಿಲ್ಲೆ ಸಾಮಾಜಿಕ ತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಟರ್‌ ಪಾರ್ಕ್‌ನಲ್ಲೇ ನೀರಿಗೆ ಬರ!
ನಗರದ ಪ್ರಮುಖ ಪ್ರವಾಸಿ ತಾಣವಾಗಿರುವ ಮಾನಸ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ನೀರಿನಲ್ಲಿ ಆಟವಾಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಎಪ್ರಿಲ್‌-ಮೇ ತಿಂಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ಹೆತ್ತವರು ಮಕ್ಕಳನ್ನು ಇಲ್ಲಿಗೆ ಕರೆ ತರುತ್ತಾರೆ. ಆದರೆ ಇದೀಗ ನೀರಿನ ಅಭಾವ ಎದುರಾಗಿರುವುದರಿಂದ ಟ್ಯಾಂಕರ್‌ ಮೂಲಕ ನೀರು ತಂದು ವಾಟರ್‌ ಪಾರ್ಕ್‌ಗೆ ಹಾಕಲಾಗುತ್ತಿದೆ. ಪ್ರತಿದಿನ 12 ಟ್ಯಾಂಕರ್‌ನಷ್ಟು ನೀರನ್ನು ಈ ಪಾರ್ಕ್‌ಗೆ ತರಿಸಲಾಗುತ್ತಿದೆ ಎನ್ನುತ್ತಾರೆ ಪಾರ್ಕ್‌ ಸಿಬಂದಿ.

 ಮಿತ ಬಳಕೆಗೆ ಮನವಿ
ದೇಗುಲದಲ್ಲಿ ಪ್ರತಿದಿನ ಅನ್ನ ಸಂತರ್ಪಣೆ ಇದೆ. ಇದಕ್ಕೆ ನೀರು ಹೆಚ್ಚು ಬೇಕಾಗುತ್ತದೆ. ಹಾಗಾಗಿ ನೀರು ಸ್ಥಗಿತಗೊಂಡ ದಿನ 2-3 ಟ್ಯಾಂಕರ್‌ ನೀರು ತರಿಸುತ್ತೇವೆ. ನೀರಿನ ಮಿತ ಬಳಕೆಗೆ ಭಕ್ತರಿಗೆ ಮನವಿ ಮಾಡಲಾಗುತ್ತಿದೆ.
– -ಪದ್ಮರಾಜ್‌ ಆರ್‌.,
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮಂಡಳಿ ಖಜಾಂಚಿ

 ಬಾವಿಯಲ್ಲಿ ನೀರು ಕಡಿಮೆ
ಉರ್ವ ಮಾರಿಯಮ್ಮ ದೇವಸ್ಥಾನದ ಬಾವಿಯಲ್ಲಿ ನೀರು ಕಡಿಮೆಯಾಗಿದ್ದು, ಸಮಸ್ಯೆ ಹೆಚ್ಚಿದೆ. ಶುಕ್ರವಾರ, ಮಂಗಳವಾರ ಅನ್ನ ಸಂತರ್ಪಣೆಗೆ ನೀರು ಬೇಕೇ ಬೇಕು. ಹಾಗಾಗಿ ಹಣ ನೀಡಿ ಟ್ಯಾಂಕರ್‌ ಮೂಲಕ ನೀರು ತರಿಸುತ್ತೇವೆ. ನೀರಿನ ಹರಿವನ್ನು ಟ್ಯಾಪ್‌ಗ್ಳಲ್ಲಿ ಕಡಿಮೆ ಮಾಡಲಾಗಿದೆ.
ಪುರುಷೋತ್ತಮ್‌,
ಉರ್ವ ಮಾರಿಯಮ್ಮ ದೇವಸ್ಥಾನ ಮ್ಯಾನೇಜರ್‌

ಟ್ಯಾಂಕರ್‌ ನೀರಿನ ಮೊರೆ
ಮಂಗಳಾದೇವಿ ದೇವಸ್ಥಾನದಲ್ಲಿ ನೀರು ತುಂಬಾ ಕಡಿಮೆ ಇದೆ. ದೇಗುಲಕ್ಕೆ ಆಗಮಿಸುವ ಭಕ್ತರಿಗೆ ನೀರಿನ ಮಿತ ಬಳಕೆ ಮಾಡಲು ನಮ್ಮ ವಾಚ್‌ಮೆನ್‌ಗಳು ಹೇಳುತ್ತಾರೆ. ಬೋರ್‌ವೆಲ್‌ ಇದ್ದರೂ, ಮೊದಲಿನಷ್ಟು ವೇಗವಾಗಿ ನೀರು ಬರುವುದಿಲ್ಲ. ಅಂತರ್ಜಲ ಕುಸಿದಿದೆ. ಟ್ಯಾಂಕರ್‌ ನೀರನ್ನು ತರಿಸಲಾಗುತ್ತದೆ.
– ರಮಾನಾಥ ಹೆಗ್ಡೆ,
ಆಡಳಿತ ಮೊಕ್ತೇಸರರು, ಮಂಗಳಾದೇವಿ ದೇವಸ್ಥಾನ

ಟಾಪ್ ನ್ಯೂಸ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.