ವಿಶ್ವಕಪ್‌ಗೆ ಕೇದಾರ್ ಜಾಧವ್ ಫಿಟ್
Team Udayavani, May 19, 2019, 6:00 AM IST
ಹೊಸದಿಲ್ಲಿ: ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಗಾಯದ ಕಾರಣದಿಂದ ಬಳುತ್ತಿದ್ದ ಕೇದಾರ್ ಜಾಧವ್ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಬಿಸಿಸಿಐಗೆ ತಂಡದ ಫಿಸಿಯೋ ಪ್ಯಾಟ್ರಿಕ್ ಫರರ್ಟ್ ವರದಿ ನೀಡಿದ್ದಾರೆ ಎಂದು ವರದಿಯಾಗಿದೆ.
ಕೇದಾರ್ ಜಾಧವ್ ಐಪಿಎಲ್ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ವಿಶ್ವಕಪ್ ಕೂಟವನ್ನು ಕಳೆದುಕೊಳ್ಳುವ ಭೀತಿಗೂ ಸಿಲುಕಿದ್ದರು. ಇದೀಗ ಜಾಧವ್‌ಗೆ ಮುಂಬಯಿಯಲ್ಲಿ ಫಿಟೆ°ಸ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಉತ್ತೀರ್ಣರಾಗಿದ್ದಾರೆ ಎನ್ನುವ ವರದಿಯನ್ನು ಫಿಸಿಯೋ ಬಿಸಿಸಿಐಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಅಂತಿಮವಾಗಿ ಬಿಸಿಸಿಐ ತನ್ನ ನಿರ್ಧಾರ ಪ್ರಕಟಿಸಲಿದೆ. ಮೇ 22ರಂದು ಭಾರತ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಈ ವೇಳೆ ಜಾಧವ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.