ನಾಟಿ ಕೋಳಿಗಳಿಗೆ ‘ರಾಣಿಕೆಟ್’ ವೈರಸ್ ಕಾಯಿಲೆ
ರೋಗದಿಂದ ಸಾಯುತ್ತಿವೆ ಊರಿನ ಕೋಳಿಗಳು; ಹೆಚ್ಚಿದ ಆತಂಕ
Team Udayavani, May 19, 2019, 6:00 AM IST
ಸವಣೂರು: ನಾಟಿಕೋಳಿ ಸಾಕಾಣೆಗೆ ವಿಶೇಷವಾಗಿ ಕರಾವಳಿ ಭಾಗಗಳು ಹೆಸರುವಾಸಿ. ಇಲ್ಲಿನ ನಾಟಿಕೋಳಿಗಳಿಗೆ ಬೇಡಿಕೆ ಹೆಚ್ಚು. ಆದರೆ ಈಗ ನಾಟಿಕೋಳಿಗಳಿಗೆ ವೈರಸ್ ಕಾಯಿಲೆಯಿಂದಾಗಿ ಹಲವೆಡೆ ನಾಟಿಕೋಳಿಗಳು ಸಾಯತ್ತಿದ್ದು, ಸಾಕಾಣೆ ದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ಕೋಳಿಗೆ ಕಾಯಿಲೆ ಬಂದರೆ ಔಷಧ ನೀಡಿದರೂ ಕೋಳಿಗಳು ಸಾಯುತ್ತವೆ. ಇದರಿಂದಾಗಿ ನಾಟಿ ಕೋಳಿಯ ಸಂತತಿಯೇ ವಿನಾಶವಾಗಲಿದೆ ಎಂದು ಸಾಕಾಣೆದಾರರು ಆತಂಕಿತ ರಾಗಿದ್ದಾರೆ.
ಕರಾವಳಿ ಭಾಗಗಳಲ್ಲಿ ನಾಟಿ ಕೋಳಿಗಳನ್ನು ಫಾರಂ ಹೊರತಾಗಿಯೂ ಹೆಚ್ಚಿನೆಲ್ಲ ಮನೆಗಳಲ್ಲೂ ಸಾಕುತ್ತಾರೆ. ಮನೆಯೊಂದರಲ್ಲಿ ಕನಿಷ್ಠ 30ರಿಂದ 40ರ ತನಕ ಕೋಳಿಗಳು ಇದ್ದೇ ಇರುತ್ತವೆ. ಈ ಕೋಳಿಗಳು ಈಗ ಕಾಯಿಲೆಯಿಂದ ಸಾಯುತ್ತಿದ್ದು, ಇದಕ್ಕೆ ಪರಿಹಾರ ಏನೆಂಬುದು ತೋಚುತ್ತಿಲ್ಲ. ರೋಗದ ಲಕ್ಷಣ ಕಂಡು ಬಂದ ಕೆಲ ದಿನದಲ್ಲೇ ಕೋಳಿಗಳು ಸಾಯುತ್ತವೆ. ಈ ರೋಗ ಪುತ್ತೂರು, ಸುಳ್ಯ, ಕಡಬ ತಾಲೂಕಿನ ವಿವಿಧೆಡೆಗಳಲ್ಲಿ ವ್ಯಾಪಿಸಿದೆ.
ಈ ರೋಗ ರಾಣಿಕೆಟ್ಎನ್ನುವ ವೈರಸ್ ನಿಂದ ಬರುತ್ತಿದ್ದು, ಈ ರೋಗ ಬಂದಾಗ ಕೋಳಿ ಕೊಕ್ಕರೆ ರೀತಿಯಲ್ಲಿ ನಿಲ್ಲುವುದರಿಂದ ಇದಕ್ಕೆ ಕೊಕ್ಕರೆ ರೋಗ ಎಂದೂ ಕರೆಯುತ್ತಾರೆ ಎಂದು ಪಶುವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೋಗಕ್ಕೆ ತುತ್ತಾದ ಕೋಳಿಯ ಒಂದು ಚಿಕ್ಕ ಗರಿಯಿಂದಲೂ ವೈರಸ್ ಹರಡುತ್ತದೆ. ಸತ್ತ ಕೋಳಿಯನ್ನು ಸೂಕ್ತವಾಗಿ ವಿಲೇ ಮಾಡದಿದ್ದರೆ ಈ ರೋಗ ವ್ಯಾಪಕವಾಗುತ್ತದೆ.
ರೋಗ ಲಕ್ಷಣಗಳು
ಈ ರೋಗಕ್ಕೆ ತುತ್ತಾದ ಕೋಳಿ ಕೊಕ್ಕರೆಯ ರೀತಿ ಕೂಗಾಡುತ್ತದೆ. ತತ್‌ಕ್ಷಣದಿಂದ ಆಹಾರ ಸೇವನೆ ನಿಲ್ಲಿಸಿ ಹೆಚ್ಚಾಗಿ ನೀರನ್ನೇ ಸೇವಿಸುತ್ತದೆ. ತೂಕ ಇಳಿದು ನಿತ್ರಾಣಕ್ಕೊಳಗಾಗುತ್ತದೆ. ಬಿಳಿ ಬಣ್ಣದ ಮಲ ವಿಸರ್ಜಿಸುತ್ತದೆ. ಆಹಾರ ಸೇವನೆ ಬಿಟ್ಟು ನಿಃಶಕ್ತಿಯಿಂದ ಕೋಳಿ ನಡೆಯಲಾಗದೆ ರೆಕ್ಕೆ, ಕಾಲುಗಳನ್ನು ಅಗಲಿಸಿ ಕೊಕ್ಕರೆಯಂತೆ ಮುದುಡಿಕೊಳ್ಳುತ್ತದೆ. ಕೋಳಿಗಳ ತಲೆಯಲ್ಲಿ ಕಜ್ಜಿಯಾಗಿ ಬಾಯಲ್ಲಿ ರಕ್ತ ಬರುವ ಸಾಧ್ಯತೆಯೂ ಇರುತ್ತದೆ. ರೋಗಕ್ಕೆ ತುತ್ತಾದ ಕೋಳಿ ಒಂದೇ ವಾರದಲ್ಲಿ ಸಾಯುತ್ತದೆ.
ಹೇಗೆ ನಿಯಂತ್ರಿಸಬೇಕು?
ರೋಗ ಬಾರದಂತೆ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ. ಪ್ರತೀ ಆರು ತಿಂಗಳಿಗೊಮ್ಮೆ ಕೋಳಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು. ಒಂದು ಕೋಳಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತತ್‌ಕ್ಷಣ ಆ ಕೋಳಿಯನ್ನು ಪ್ರತ್ಯೇಕಿಸಿ ಉಳಿದ ಕೋಳಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಬೇಕು.
ಮೊಟ್ಟೆಯೊಡೆದ ಮರಿಗಳಿಗೆ ಲಸಿಕೆ ಹಾಕಿಸಬೇಕು. ಬಳಿಕ 4 ವಾರದ ಬಳಿಕವೂ ಲಸಿಕೆ ಹಾಕಿಸಿದರೆ ರೋಗ ಬಾರದಂತೆ ತಡೆಗಟ್ಟಬಹುದು. ಬಳಿತ ಕೋಳಿಗಳಿಗೆ ್ಕ2ಆ ಲಸಿಕೆ ನೀಡುವುದರಿಂದಲೂ ರೋಗ ಬಾರದಂತೆ ಕಡೆಗಟ್ಟಬಹುದು. ಪ್ರತಿ ತಿಂಗಳ ಶನಿವಾರ ಪುತ್ತೂರು ಪಶು ವೈದ್ಯಕೇಂದ್ರದಲ್ಲಿ ಲಸಿಕೆ ನೀಡಲಾಗುತ್ತದೆ.
ಎಲ್ಲ ಕೋಳಿಗಳೂ ಸತ್ತಿವೆ
– ಶಿವರಾಮ, ಪಾಲ್ತಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
S.Africa: ಫಿಕ್ಸಿಂಗ್ ಕೇಸ್‌ನಲ್ಲಿ ಜೈಲು ಪಾಲಾದ ದ. ಆಫ್ರಿಕಾದ ಮಾಜಿ ನಂಬರ್ 1 ಬೌಲರ್
Wedding Story: ಕಂಕಣ ಕಾಲ-3: ವಿವಾಹ ಭೋಜನವಿದು.. ನಾರ್ತ್ ಭಕ್ಷ್ಯಗಳಿವು…
Relationships: ಸಂಬಂಧಗಳಲ್ಲಿ ಮಾಯವಾದ ಸಹಿಷ್ಣುತೆ : ಸಹಿಷ್ಣು ಗುಣದಿಂದಲೇ ಬಾಂಧವ್ಯದ ಪ್ರಗತಿ
Sirsi: ಹೃದಯಾಘಾತದಿಂದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ನಿಧನ
Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.