ಬಾರದ ಮಳೆ: ನೀರಿಲ್ಲದೆ ಒಣಗುತ್ತಿರುವ ಬೆಳೆ
Team Udayavani, May 19, 2019, 11:17 AM IST
ಬನಹಟ್ಟಿ: ನೀರಿಲ್ಲದೇ ಒಣಗುತ್ತಿರುವ ಕಬ್ಬಿನ ಬೆಳೆ.
ಬನಹಟ್ಟಿ: ಈ ಬಾರಿ ಮುಂಗಾರು ಪೂರ್ವ ಮಳೆ ಸುರಿಯದಿರುವುದು ತಾಲೂಕಿನ ಜನರ ನಿರೀಕ್ಷೆ ಹುಸಿಯಾಗಿದ್ದು, ರೈತರು ಆತಂಕಗೊಂಡಿದ್ದಾರೆ.
ಬಿರು ಬೇಸಿಗೆಯ ಬಿಸಿಲಿನ ಝಳಕ್ಕೆ ಜನರು ತತ್ತರಿಸಿದಾರೆ. ಕಳೆದ ವರ್ಷ ಏಪ್ರಿಲ್ ಮತ್ತು ಮೇ ಮಧ್ಯಭಾಗದಲ್ಲಿ ಎರಡು ಬಾರಿ ಸಾಮಾನ್ಯ ಮಳೆಯಾಗಿತ್ತು. ಇದರಿಂದಾಗಿ ಬಿಸಿಲಿನ ಝಳ ಕೊಂಚ ಕಡಿಮೆಯಾಗಿ ಜನರಲ್ಲಿ ನೆಮ್ಮದಿ ಮೂಡಿಸಿತ್ತು. ಆದರೆ, ಮೇ 3ನೇ ವಾರದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಸಾಮಾನ್ಯ ಮಳೆ ಆಗಿಲ್ಲ. ತಾಲೂಕಿನ ಕೃಷ್ಣಾ ನದಿ ಬರಿದಾಗಿದ್ದು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ಬೆಳೆಗಳು ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ತಾಲೂಕಿನ ಕೃಷಿಕರಲ್ಲಿ ಕೊಳವೆ ಬಾವಿಗಳಿದ್ದರೂ ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ರೈತರು ಬಳಕೆಗೆ ಕೊಳವೆ ಬಾವಿಗಳನ್ನೇ ನಂಬಿದ್ದು, ಈ ಭಾಗದ ಕೃಷ್ಣಾ ನದಿ ಬತ್ತಿರುವುದರಿಂದ ನೀರಿನ ಅಂತರಜಲ ಕಡಿಮೆಯಾಗುತ್ತಿರುವುದು ಚಿಂತೆ ಮೂಡಿಸಿದೆ.
ತಾಲೂಕಿನಲ್ಲಿ ಕಬ್ಬು, ಬಾಳೆ, ವೀಳ್ಯೆದೆಲೆ ಸೇರಿದಂತೆ ಮುಂತಾದ ಬೆಳೆಗಳನ್ನು ಬೆಳೆಯಲಾಗಿದ್ದು, ಈ ಬೆಳೆಗಳಿಗೆ ನೀರು ಸಿಗದೆ ಒಣಗುವ ಹಂತ ತಲುಪಿವೆ. ಬೋರ್‌ವೆಲ್ ಹೊಂದಿರುವ ರೈತರ ಬೋರ್‌ವೆಲ್ಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಇರುವ ನೀರಿನಲ್ಲಿಯೇ ತಾವು ಬೆಳೆದ ಬೆಳೆ ಉಳಿಸಿಕೊಳ್ಳಲು ಹೆಣಗಾಡುವಂತಾಗಿದೆ.
ಹೆಚ್ಚಿದ ಬಿಸಿಲಿನ ತಾಪಮಾನ, ಕೃಷ್ಣಾ ನದಿ ಖಾಲಿಯಾಗಿರುವುದು ಹಾಗೂ ವಾಡಿಕೆ ಮಳೆ ಕೈ ಕೊಟ್ಟಿದ್ದರಿಂದ ಅಂತರಜಲ ಮಟ್ಟ ಕುಸಿದಿದೆ ಇದರಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ಬೋರವೆಲ್ಗಳ ಮೂಲಕ ಇರುವ ಕೆಲವು ಬೆಳೆಗಳನ್ನಾದರೂ ಉಳಿಸಿಕೊಳ್ಳಲು ರೈತರು ಪ್ರಯತ್ನಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.