ಮಣ್ಣಿನ ಬುಟ್ಟಿ ಹೊತ್ತು ಶ್ರಮದಾನ ಮಾಡಿದ ಜಿಪಂ ಸಿಇಒ
Team Udayavani, May 19, 2019, 12:34 PM IST
ಹಾನಗಲ್ಲ: ಮಾಸನಕಟ್ಟಿಯ ದೊಡ್ಡಕೆರೆ ಅಂಗಳದಲ್ಲಿ ರೋಜಗಾರ್ ದಿನ ಮತ್ತು ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಕರಪತ್ರಗಳನ್ನು ಜಿಪಂ ಸಿಇಒ ಕೆ. ಲೀಲಾವತಿ ವಿತರಿಸಿದರು.
ಹಾನಗಲ್ಲ: ಜಲಾಮೃತ ಯೋಜನೆಯ ಕಾಮಗಾರಿಗಳ ವೀಕ್ಷಣೆಗೆ ಶನಿವಾರ ತಾಲೂಕಿಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಲೀಲಾವತಿ ಮಾಸನಕಟ್ಟಿ ಗ್ರಾಮದಲ್ಲಿ ನರೇಗಾ ಕೂಲಿಕಾರರ ಜೊತೆಯಲ್ಲಿ ಶ್ರಮದಾನ ಮಾಡಿದರು.
ಗ್ರಾಮದ ದೊಡ್ಡಕೆರೆ ಮತ್ತು ಬೆಂಡಿಕಟ್ಟೆ ಕೆರೆಗಳಲ್ಲಿ ಕಳೆದ 15 ದಿನಗಳಿಂದ ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದೆ. ಶನಿವಾರ ದೊಡ್ಡಕೆರೆ ಕಾಮಗಾರಿಗೆ 170 ಜನ ಮತ್ತು ಬೆಂಡಿಕಟ್ಟೆ ಕೆರೆ ಕೆಲಸದಲ್ಲಿ 90 ಜನ ಸ್ಥಳೀಯರು ಭಾಗವಹಿಸಿದ್ದರು. ನರೇಗಾ ಕೂಲಿಕಾರರಿಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಬಿರು ಬಿಸಿಲಿನಲ್ಲಿ ಲೀಲಾವತಿ ಕೆ. ಮಣ್ಣಿನ ಬುಟ್ಟಿ ಹೊತ್ತು ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೀಲಾವತಿ ಕೆ., ಕೆರೆಗಳ ಹೂಳೆತ್ತುವುದು, ಅಂತರ್ಜಲ ಹೆಚ್ಚಿಸುವುದು, ಕೆರೆಗಳ ಪೂರಕ ಕಾಲುವೆಗಳ ದುರಸ್ತಿಗೆ ನರೇಗಾ ಅಡಿಯಲ್ಲಿ ಕಾಮಗಾರಿ ಹಮ್ಮಿಕೊಂಡು ಸರ್ಕಾರ ಘೋಷಿಸಿರುವ ಜಲಾವರ್ಷ ಆಚರಣೆಯನ್ನು ಸಾರ್ಥಕ ಮಾಡಲಾಗುತ್ತಿದೆ ಎಂದರು.
ಈಗ ಬರ ಆವರಿಸಿದೆ. ಸ್ಥಳೀಯರು ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ 100 ದಿನಗಳ ಕೆಲಸ ಲಭ್ಯವಾಗುತ್ತಿದೆ. ನರೇಗಾ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು. ಬದು ನಿರ್ಮಾಣ, ಇಂಗು ಗುಂಡಿ ರಚನೆ, ಬಾಳೆತೋಟ ಮಾಡಿಕೊಳ್ಳಲು ಅವಕಾಶ ಇದೆ ಎಂದರು.
ಸ್ಥಳದಲ್ಲಿ ಹಾಜರಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ, ತಾಲೂಕಿನ 20 ಗ್ರಾಪಂಗಳಲ್ಲಿ ಈಗಾಗಲೇ 20 ಕೆರೆಗಳನ್ನು ಹೂಳು ತೆಗೆಯುವ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಸ್ಥಳೀಯ ಜನರು ಹೆಚ್ಚು ಸಂಖ್ಯೆಯಲ್ಲಿ ನರೇಗಾ ಕಾರ್ಯಕ್ಕೆ ಕೈಜೊಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕೆರೆ ಅಂಗಳದಲ್ಲಿ ರೋಜ್‌ಗಾರ್ ದಿನ ಆಚರಿಸಲಾಯಿತು. ನರೇಗಾ ಮಹತ್ವ ತಿಳಿಸಿಕೊಟ್ಟ ಲೀಲಾವತಿ ಕೆ., ನರೇಗಾ ಯೋಜನೆ ಬಳಸಿಕೊಂಡು ಗ್ರಾಮಾಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಗ್ರಾಪಂ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದರು.
ಜೂನ್ 1 ರಿಂದ 30 ರ ತನಕ ಸ್ವಚ್ಛಮೇವ ಜಯತೆ ಮಾಸಾಚರಣೆ ಆಚರಿಸಲಾಗುತ್ತದೆ. ಪ್ರತಿಯೊಂದು ಗ್ರಾಪಂನಲ್ಲಿ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಕೈ ತೊಳೆಯುವ ಕಾರ್ಯಕ್ರಮ ಆಯೋಜಿಸಬೇಕು. ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಕೈಗೊಳ್ಳಬೇಕು ಎಂದು ಲೀಲಾವತಿ ಕೆ ಹೇಳಿದರು.
ಗ್ರಾಪಂ ಪಿಡಿಒ ‘ಗುಡ್ ಮಾರ್ನಿಂಗ್’ ತಂಡ ರಚಿಸಿಕೊಂಡು ಬೆಳಗಿನ ಜಾವದಲ್ಲಿ ಬಯಲು ಶೌಚಕ್ಕೆ ಹೊರಟವರನ್ನು ತಡೆದು, ಮನವೋಲಿಸಿ, ಶೌಚಾಲಯ ಬಳಸಲು ಮನವಿ ಮಾಡಿಕೊಳ್ಳಬೇಕು. ಇದಕ್ಕೆ ಸ್ಥಳೀಯವಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯನ್ನು ನೇಮಿಸಿಕೊಳ್ಳಬೇಕು ಎಂದರು. ಬಳೀಕ ನರೇಗಾ ಕೂಲಿಕಾರರಿಗೆ ಸ್ವಚ್ಛಮೇವ ಜಯತೆ ಮಾಸಾಚರಣೆಯ ವಿವರಗಳುಳ್ಳ ಕರಪತ್ರಗಳನ್ನು ವಿತರಿಸಲಾಯಿತು. ತಾಪಂ ಅಧ್ಯಕ್ಷ ಸಿದ್ಧಪ್ಪ ಹಿರಗಪ್ಪನವರ, ಗ್ರಾಪಂ ಅಧ್ಯಕ್ಷೆ ಮುಜಾನಬಿ ಮುಜಾವರ, ಪಿಡಿಒ ಹನುಮಂತಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.