ರೇವಣ ಸಿದ್ದೇಶ್ವರ ಮಹಾರಥೋತ್ಸವ ರದ್ದು
60 ಅಡಿ ಬದಲು 15 ಅಡಿ ಉದ್ದದ ಅಗ್ನಿಕುಂಡ ನಿರ್ಮಿಸಿದ ಅಧಿಕಾರಿಗಳು | ಸ್ಥಳೀಯರಿಂದ ವಿರೋಧ
Team Udayavani, May 19, 2019, 4:01 PM IST
ರಾಮನಗರದ ಶ್ರೀ ರೇವಣ ಸಿದ್ದೇಶ್ವರ ಜಾತ್ರೆ ನಿಮಿತ್ತ ಬೆಟ್ಟದಲ್ಲಿ ವಿವಾದದಿಂದಾಗಿ ನಿಂತಲ್ಲೇ ನಿಂತ ಮಹಾರಥಕ್ಕೆ ಭಕ್ತಾದಿಗಳು ತಮ್ಮ ಭಕ್ತಿ ಸಮರ್ಪಿಸಿಕೊಂಡರು.
ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಅವ್ವೇರಹಳ್ಳಿ ಬಳಿಯ ಶ್ರೀ ರೇವಣ ಸಿದ್ದೇಶ್ವರ ಕ್ಷೇತ್ರದ ಅಗ್ನಿ ಕೊಂಡೋತ್ಸವ ನಡೆಯದ ಕಾರಣ ಮಹಾರಥೋತ್ಸವ ರದ್ದಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ರದ್ದಾ ಗಲು ಜಿಲ್ಲಾಡಳಿತ, ದತ್ತಿ ಇಲಾಖೆಯ ಅಧಿಕಾರಿಗಳೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಯಾಕೆ? ಏನು?: ರಾಜ್ಯಾದ್ಯಂತ ಧಾರ್ಮಿಕವಾಗಿ ಖ್ಯಾತಿ ಇರುವ ರೇವಣ ಸಿದ್ದೇಶ್ವರ ಕ್ಷೇತ್ರ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಪ್ರತಿ ವರ್ಷ ಬಸವೇಶ್ವರರ ಅಗ್ನಿಕುಂಡೋತ್ಸವ ಮತ್ತು ಮಹಾ ರಥೋತ್ಸವವನ್ನು ಸ್ಥಳೀಯ ಗ್ರಾಮಸ್ಥರು, ಭಕ್ತಾದಿಗಳ ಸಹಕಾರದಲ್ಲಿ ಜಿಲ್ಲಾಡಳಿತ ಆಚರಿಸುತ್ತ ಬಂದಿದೆ. ಬಸವೇಶ್ವರ ಅಗ್ನಿಕೊಂಡೋತ್ಸವಕ್ಕೆ 60 ಅಡಿ ಉದ್ದದ ಅಗ್ನಿಕೊಂಡವನ್ನು ನಿರ್ಮಿಸುವುದು ವಾಡಿಕೆ. ಕಳೆದ ವರ್ಷ ನಡೆದ ಅಗ್ನಿ ಕೊಂಡವನ್ನು ಹಾಯುವ ವೇಳೆ ವಿಜಯ್ ಕುಮಾರ್ ಅವರು ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಚಕರ ತಂಡ ಅಗ್ನಿಕೊಂಡದ ಉದ್ದವನ್ನು ಕಡಿಮೆ ಮಾಡು ವಂತೆ ಮನವಿ ಮಾಡಿಕೊಂಡಿದ್ದರು. ಮನವಿಗೆ ಸ್ಪಂದಿ ಸಿದ ಜಿಲ್ಲಾಡಳಿತ 60 ಅಡಿ ಉದ್ದಕ್ಕೆ ಬದಲಿಗೆ 15 ಅಡಿ ಉದ್ದದ ಅಗ್ನಿಕೊಂಡವನ್ನು ನಿರ್ಮಿಸಿತು. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಪದ್ಧತಿಯಂತೆ 60 ಅಡಿ ಉದ್ದದ ಅಗ್ನಿಕೊಂಡವನ್ನು ನಿರ್ಮಿಸಿ ಎಂದು ಪಟ್ಟು ಹಿಡಿದು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ತಮ್ಮ ಆಕ್ಷೇಪಕ್ಕೆ ಜಿಲ್ಲಾಡಳಿತ ಸ್ಪಂದಿಸ ದಿದ್ದರಿಂದ ಶನಿವಾರ ಬೆಳಿಗ್ಗೆ ನಡೆಯಬೇಕಿದ್ದ ಅಗ್ನಿ ಕೊಂಡ ಮಹೋತ್ಸವವನ್ನು ಸ್ಥಳೀಯರು ಬಹಿಷ್ಕರಿಸಿ ದರು. ಹೀಗಾಗಿ ಅಗ್ನಿಕುಂಡೋತ್ಸವ ನೆರವೇರಲಿಲ್ಲ.
ಮಹಾರಥೋತ್ಸವ ಸ್ಥಗಿತ: ಪದ್ಧ್ದತಿಯಂತೆ ಅಗ್ನಿಕುಂಡ ವನ್ನು ನಿರ್ಮಿಸದಿದ್ದರಿಂದ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಅಗ್ನಿಕುಂಡೋತ್ಸವ ನಡೆಯದೆ ರಥೋ ತ್ಸವ ನಡೆಸುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಸಂಪ್ರದಾಯದಂತೆ ರಥವನ್ನು ಎಳೆಯಬೇಕಾದ ಸಮುದಾಯ ಮುಂದೆಬರದ ಕಾರಣ ಮಹಾರಥೋತ್ಸವವು ರದ್ದಾಯಿತು. ಮಧ್ಯಾ ಹ್ನ 12.05ಕ್ಕೆ ನಡೆಯಬೇಕಿದ್ದ ಮಹಾರಥೋತ್ಸವಕ್ಕೆ ಉಪವಿಭಾಗಾಧಿಕಾರಿ ಕೃಷ್ಣಮೂರ್ತಿಯವರು ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿದರಾದರೂ, ರಥವನ್ನು ಎಳೆಯಬೇಕಿದ್ದ ಸಮುದಾಯ ಮುಂದಾಗದ ಕಾರಣ ಮಹಾರಥೋತ್ಸವವನ್ನು ರದ್ದು ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಕೊನೆಗೆ ಶ್ರೀ ರೇವಣ ಸಿದ್ದೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು.
ಭಕ್ತ ಸಾಗರಕ್ಕೆ ನಿರಾಸೆ: ರಾಜ್ಯದ ವಿವಿಧ ಭಾಗಗಳಿಂದ ಮಹಾರಥೋತ್ಸವ ಮತ್ತು ಅಗ್ನಿಕೊಂಡೊತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಶ್ರೀ ಕ್ಷೇತ್ರದಲ್ಲಿ ಆದ ಬೆಳೆವಣಿಗೆಯಿಂದ ನಿರಾಸೆಗೊಂಡರು.
ಹಿರಿಯ ಅಧಿಕಾರಿಗಳ ಭೇಟಿ: ಕ್ಷೇತ್ರದಲ್ಲಿ ಉಂಟಾದ ಗೊಂದಲ, ಗದ್ದಲದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಮುಲ್ಲೈ ಮುಹಿಲನ್, ಜಿಲ್ಲಾ ಎಸ್‌ಪಿ ರಮೇಶ್, ಡಿವೈಎಸ್ಪಿ ಪುರುಷೋತ್ತಮ್, ಸಿಪಿಐ ಸವೀನ್, ಗ್ರಾಮಾಂತರ ಎಸ್‌ಐ ಲಕ್ಷ್ಮಣಗೌಡ, ಎಸ್‌ಐ ಗಳಾದ ಮಹದೇವಸ್ವಾಮಿ, ಶೋಭಾ, ತಹಸೀಲ್ದಾರ್ ರಾಜು, ಶ್ರೀ ಕ್ಷೇತ್ರದ ಉಸ್ತುವಾರಿ ಮಂಗಳಮ್ಮ, ಉಪತಹಸೀಲ್ದಾರ್ ವಿಲಿಯಂ, ರಾಜಸ್ವ ನಿರೀಕ್ಷಕ ಬಸವರಾಜು, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರೇಣುಕಾಪ್ರಸಾದ್ ಭೇಟಿ ನೀಡಿದರು.
ಸ್ಥಳೀಯರು ಅಧಿಕಾರಿಗಳ ನಡುವೆ ವಾಗ್ವಾದ:
ರಾಜ್ಯಾದ್ಯಂತ ಪ್ರಸಿದ್ದ ಪಡೆದಿರುವ ತಾಲೂಕಿನ ಕೈಲಾಂಚ ಹೋಬಳಿ ಅವ್ವೇರಹಳ್ಳಿ ಗ್ರಾಮದ ಬಳಿಯ ಎಸ್‌ಆರ್‌ಎಸ್ ಕ್ಷೇತ್ರದಲ್ಲಿ ಶನಿವಾರ ದತ್ತಿ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ವಾಕ್ಸಮರ ನಡೆಯಿತು.
ಪದ್ಧ್ದತಿಯಂತೆ ಅಗ್ನಿಕುಂಡವನ್ನು ನಿರ್ಮಿಸದ ಅಧಿ ಕಾರಿಗಳು ಹಾಗೂ ಅರ್ಚಕರ ವಿರುದ್ದವೂ ಗ್ರಾಮ ಸ್ಥರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
60 ಅಡಿ ಬದಲಿಗೆ 15 ಅಡಿ ಉದ್ದದ ಅಗ್ನಿಕೊಂಡ ನಿರ್ಮಿಸಿದ್ದೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾ ಯಿತು. ಅಗ್ನಿಕುಂಡ ವನ್ನು ಹಾಯದೆ ರಥೋತ್ಸವ ನಡೆಯುವುದು ಸರಿಯಲ್ಲ ಎಂದ ಕೆಲವು ಗ್ರಾಮ ಸ್ಥರು ಮಹಾರಥದ ಸಿಂಗಾರವನ್ನು ತಡೆದರು.
ಅಗ್ನಿಕುಂಡದ ಬಳಿ ಜಮಾಯಿಸಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಮತ್ತು ದತ್ತಿ ಇಲಾಖೆ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರಾದರು. ಗ್ರಾಮ ಸ್ಥರು ತಮ್ಮ ಪಟ್ಟು ಬಿಡಲಿಲ್ಲ. ರಾಜ್ಯಾದ್ಯಂತ ಭಕ್ತರು ಆಗಮಿಸಿದ್ದು ಅವರನ್ನು ನಿರಾಸೆಗೊಳಿಸಬೇಡಿ ಎಂದು ಅಧಿಕಾರಿಗಳು ಪರಿಪರಿಯಾಗಿ ಮಾಡಿ ಕೊಂಡ ಮನವಿಗೆ ಪ್ರತಿಭಟನೆ ಕೈಬಿಟ್ಟರು. ನಂತರ ರಥಕ್ಕೆ ನಡೆಯಬೇಕಿದ್ದ ಸಿಂಗಾರ ಮುಂದು ವರೆಯಿತು. ರಥದಲ್ಲಿ ಉತ್ಸವ ಮೂರ್ತಿ ಸ್ಥಾಪನೆ, ಮಂಗಳವಾದ್ಯ ಮೊಳಗಿತು. ಉಪವಿಭಾಗಾಧಿಕಾರಿ ಗಳು ರಥೋತ್ಸವಕ್ಕೆ ಪೂಜೆಯನ್ನು ನೆರೆವೇರಿಸಿದರು. ಆದರೆ ರಥವನ್ನು ಎಳೆಯಬೇಕಿದ್ದ ಸಮುದಾಯ ಸ್ಥಳಕ್ಕೆ ಬರಲಿಲ್ಲ. ಹೀಗಾಗಿ ರಥ ಮುಂದೆ ಸಾಗಲೇ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.