ಒನ್ ಪ್ಲಸ್ ಒನ್‌ನ ಹೊಸ ಆಟ
ಒಂದು ಕ್ಲಾಸ್‌ಗೆ, ಒಂದು ಮಾಸ್‌ಗೆ
Team Udayavani, May 20, 2019, 6:00 AM IST
ಒನ್ ಪ್ಲಸ್ ಕಂಪೆನಿಯ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಒನ್ ಪ್ಲಸ್ 7 ಮತ್ತು 7 ಪ್ರೊ ಫೋನ್‌ಗಳ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗಿತ್ತು. ಒನ್‌ಪ್ಲಸ್ ಸಹಸ್ಥಾಪಕ ಕಾರ್ಲ್ಪೀ , ನೂತನ ಫೋನ್‌ಗಳನ್ನು ಲೋಕಾರ್ಪಣೆ ಮಾಡಿದರು. ಸಾಮಾನ್ಯವಾಗಿ ಒಂದು ಫೋನ್ ಬಿಡುಗಡೆ ಮಾಡುತ್ತಿದ್ದ ಒನ್‌ಪ್ಲಸ್, ಈ ಬಾರಿ ಎರಡು ಫೋನ್ ಬಿಡುಗಡೆ ಮಾಡಿದ್ದು ವಿಶೇಷ.
ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಒನ್ ಪ್ಲಸ್ ಕಂಪೆನಿಯದು ವಿಶಿಷ್ಟವಾದ ಹೆಸರು. ಅತ್ಯುನ್ನತ ದರ್ಜೆಯ ಪ್ರೊಸೆಸರ್, ಹೆಚ್ಚಿನ ರ್ಯಾಮ್, ಉತ್ತಮ ಕ್ಯಾಮರಾ, ಉತ್ತಮ ಗುಣಮಟ್ಟವುಳ್ಳ ಅಗ್ರಶ್ರೇಣಿಯ (ಫ್ಲಾಗ್‌ಶಿಪ್) ಮೊಬೈಲ್‌ಗಳೆಲ್ಲ ಸಾಮಾನ್ಯ ಬಳಕೆದಾರರರ ಕೈಗೆಟುಕುವುದಿಲ್ಲ ಎಂಬ ನಂಬಿಕೆಯನ್ನು ತೊಡೆದು ಹಾಕಿ, ಸಾಮಾನ್ಯರಿಗೂ ಅಗ್ರಶ್ರೇಣಿ (ಫ್ಲಾಗ್‌ಶಿಪ್) ಮೊಬೈಲ್‌ಗಳು ದೊರಕುವಂತೆ ಮಾಡಿದ್ದು ಈ ಕಂಪೆನಿ. 2014ರಲ್ಲಿ ಇದರ ಮೊದಲ ಫ್ಲಾಗ್‌ಶಿಪ್ ಫೋನ್ ಒನ್ ಪ್ಲಸ್ ಒನ್ ಬಂದಾಗ , ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಕ್ರಾಂತಿಯನ್ನೇ ಮಾಡಿತು. 19 ಸಾವಿರ ರೂ.ಗಳಿಗೇ ಫ್ಲಾಗ್‌ಶಿಪ್ ಫೋನ್ ನೀಡಿ ಘಟನಾಘಟಿ ಕಂಪೆನಿಗಳಿಗೆ ಆತಂಕ ಸೃಷ್ಟಿಸಿತು. 2015ರಲ್ಲಿ ಒನ್‌ಪ್ಲಸ್ ಎಕ್ಸ್ ಎಂಬ ಮಧ್ಯಮ ದರ್ಜೆಯ ಫೋನ್ ಅನ್ನು ಈ ಕಂಪೆನಿ ಬಿಡುಗಡೆ ಮಾಡಿದ್ದು ಬಿಟ್ಟರೆ ಇದುವರೆಗೂ ಪ್ರತಿ ವರ್ಷ ಕೇವಲ ಫ್ಲಾಗ್‌ಶಿಪ್ ಫೋನ್‌ಗಳನ್ನೇ ನೀಡುತ್ತಾ ಬಂದಿದೆ. ಪ್ರತಿ ವರ್ಷ ಒಂದೇ ಫೋನ್ ಬಿಡುಗಡೆ ಮಾಡುತ್ತಿದ್ದ ಒನ್‌ಪ್ಲಸ್ 2016ರ ನಂತರ ಒಂದು ಫೋನ್ ಬಿಡುಗಡೆ ಮಾಡಿ, ಕೆಲ ತಿಂಗಳ ನಂತರ ಆ ಫೋನ್‌ನ ಕೆಲವು ತಾಂತ್ರಿಕ ಅಂಶಗಳನ್ನು ಬದಲಿಸಿ ಅದರ ಟಿ ಆವೃತ್ತಿ ಬಿಡಲಾರಂಭಿಸಿತು. ಸಾಮಾನ್ಯವಾಗಿ ಪ್ರತಿ ವರ್ಷ ಮೇ ಅಥವಾ ಜೂನ್‌ನಲ್ಲಿ ತನ್ನ ಹೊಸ ಫೋನನ್ನು ಒನ್‌ಪ್ಲಸ್ ಜಗತ್ತಿನಾದ್ಯಂತ ಬಿಡುಗಡೆ ಮಾಡುತ್ತದೆ.
ಇಂತಿಪ್ಪ ಒನ್‌ಪ್ಲಸ್, ಈ ಬಾರಿ ತನ್ನ ಹಳೆಯ ಸಂಪ್ರದಾಯವನ್ನು ಮುರಿದು ಮೊನ್ನೆ ಮೇ 14ರಂದು ಒಂದರ ಬದಲು ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿತು. (ಈ ಅರ್ಥದಲ್ಲಿ ಒನ್ ಪ್ಲಸ್ ಒನ್ ಎಂಬುದು ಅನ್ವರ್ಥವಾದೀತು!) ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಒನ್‌ಪ್ಲಸ್ ಅಭಿಮಾನಿಗಳ ನಡುವೆ ಕಂಪೆನಿಯ ಸಹ ಸ್ಥಾಪಕ ಕಾರ್ಲ್ ಪೀ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದರು. ಈ ಎರಡೂ ಮೊಬೈಲ್‌ಗಳ ತಾಂತ್ರಿಕ ಅಂಶಗಳು (ಸ್ಪೆಸಿಫಿಕೇಷನ್) ಇಂತಿವೆ:
ಒನ್ ಪ್ಲಸ್ 7 ಪ್ರೊ: ಫ್ಲೋಯಿಡ್ ಅಮೋಲೆಡ್ ಪರದೆ ಇದರ ವಿಶೇಷ. ಸಾಮಾನ್ಯವಾಗಿ ಮೊಬೈಲ್‌ಗಳಲ್ಲಿ ಟಿಎಫ್ಟಿ, ಎಲ್‌ಸಿಡಿ, ಎಲ್‌ಟಿಪಿಎಸ್ ಹಾಗೂ ಅಮೋಲೆಡ್ ಪರದೆಗಳನ್ನು ಅಳವಡಿಸಲಾಗುತ್ತದೆ. ಅಮೋಲೆಡ್ ಪರದೆಯಲ್ಲಿ ಚಿತ್ರಗಳು ಹೆಚ್ಚು ಶ್ರೀಮಂತವಾಗಿ ಮೂಡಿಬರುತ್ತವೆ. ಮತ್ತಿದು ಕಡಿಮೆ ಬ್ಯಾಟರಿ ಬಳಸುತ್ತದೆ. ಅಮೋಲೆಡ್ ಪರದೆಯನ್ನು ಇನ್ನಷ್ಟು ಕಸ್ಟಮೈಸ್ ಮಾಡಿ ಅದಕ್ಕೆ ಫೂÉಯಿಡ್ ಅಮೋಲೆಡ್ ಎಂದು ಒನ್‌ಪ್ಲಸ್ ಕರೆದಿದೆ. 6.7 ಇಂಚು ಪರದೆಯನ್ನು ಇದು ಹೊಂದಿದ್ದು, ಸೆಲ್ಫಿà ಕ್ಯಾಮರಾ ಫೋನಿನ ದೇಹದ ಒಳಗಿನಿಂದ ಈಚೆ ಬರುವ ತಾಂತ್ರಿಕತೆ ಅಳವಡಿಸಲಾಗಿದೆ. ಇದಕ್ಕೆ ಪಾಪ್ ಅಪ್ ಕ್ಯಾಮರಾ ಎಂದು ಕರೆಯಲಾಗುತ್ತದೆ. ಅಂದರೆ ಫೋಟೋ ಸೆಲ್ಫಿ ತೆಗೆಯುವಾಗ ಅದರ ಕ್ಯಾಮರಾ ಫೋನ್ ಮಧ್ಯದಿಂದ ಮೇಲಕ್ಕೆ ಸರಿಯುತ್ತದೆ!
ಈ ರೀತಿ ಮೇಲೆ ಬರುವ ತಾಂತ್ರಿಕತೆಯಿಂದು ಅದು ಬೇಗ ಹಾಳಾಗುವುದಿಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಜನರ ಅನುಮಾನವನ್ನು ಚೆನ್ನಾಗಿ ಗ್ರಹಿಸಿರುವ ಒನ್‌ಪ್ಲಸ್, ಬಿಡುಗಡೆ ಸಮಾರಂಭದಲ್ಲಿ ಅದನ್ನು ನಿವಾರಿಸುವ ವಿಡಿಯೋ ತೋರಿಸಿತು. ಫೋನಿನಿಂದ ಈಚೆ ಬರುವ ಪಾಪ್ ಅಪ್ ಭಾಗಕ್ಕೆ ದಾರ ಕಟ್ಟಿ 22 ಕೆಜಿ ತೂಕದ ಸಿಮೆಂಟ್ ಇಟ್ಟಿಗೆಯನ್ನು ಅದರಿಂದ ಎತ್ತುವ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಪ್ರತಿಬಾರಿ ಸೆಲ್ಫಿ ತೆಗೆದಾಗ ಈಚೆ ಬರುವ ಪಾಪ್ ಅಪ್‌ನ ಮೋಟರ್ ಪ್ರತಿದಿನಕ್ಕೆ 50 ಫೋಟೋ ತೆಗೆದರೆ 16.5 ವರ್ಷದವರೆಗೂ ಬಾಳಿಕೆ ಬರುವಷ್ಟು ಗುಣಮಟ್ಟದಿಂದ ಕೂಡಿದೆ ಎಂದು ಕಂಪೆನಿ ಹೇಳಿಕೊಂಡಿತು! ಪರದೆಯ ರೆಸ್ಯೂಲೇಷನ್ ಕ್ವಾಡ್ ಹೆಚ್‌ಡಿ (3120*1440) ಇದ್ದು, 516 ಪಿಪಿಐ ಹೊಂದಿದೆ. ಇದೇ ಮೊದಲ ಬಾರಿಗೆ ಒನ್‌ಪ್ಲಸ್ ಅಂಚಿನ ತುದಿಗೆ ಮಡಚಿದಂತಿರುವ (ಎಡ್ಜ್ ಡಿಸ್‌ಪ್ಲೇ) ಡಿಸ್‌ಪ್ಲೇ ಅಳವಡಿಸಿದೆ.
ಕ್ಯಾಮರಾ ವಿಭಾಗಕ್ಕೆ ಬಂದರೆ ಹಿಂಬದಿಯ ಕ್ಯಾಮರಾ ಮೂರು ಲೆನ್ಸ್ ಹೊಂದಿದೆ. ಒನ್‌ಪ್ಲಸ್‌ನಲ್ಲಿ ಇದೇ ಮೊದಲ ಬಾರಿಗೆ ಟ್ರಿಪಲ್ ಲೆನ್ಸ್ ಬಳಸಲಾಗಿದೆ. ಇದರಲ್ಲಿ 48 ಎಂಪಿ ಮುಖ್ಯ ಲೆನ್ಸ್ 8 ಎಂಪಿ ಟೆಲೆಫೋಟೋ ಲೆನ್ಸ್ ! 16 ಎಂಪಿ ವೈಡ್ ಆ್ಯಂಗಲ್ ಲೆನ್ಸ್‌ಗಳಿವೆ. ಸೆಲ್ಫಿà ಕ್ಯಾಮರಾ 16 ಮೆ.ಪಿ. ಒಂದು ಲೆನ್ಸ್ ಹೊಂದಿದೆ.
ಇದು ಸ್ನಾಪ್‌ಡ್ರಾಗನ್ 855 ಫ್ಲಾಗ್‌ಶಿಪ್ (ಅಗ್ರಶ್ರೇಣಿಯ) ಎಂಟು ಕೋರ್‌ಗಳ, 2.84 ಗಿಗಾಹಟ್ಜ್ ಶಕ್ತಿಯ ಪ್ರೊಸೆಸರ್ ಹೊಂದಿದೆ. 128 ಜಿಬಿ ಆಂತರಿಕ ಸಂಗ್ರಹ 6 ಜಿಬಿ ರ್ಯಾಮ್ ಹಾಗೂ 256 ಜಿಬಿ ಆಂತರಿಕ ಸಂಗ್ರಹ ಮತ್ತು 8 ಜಿಬಿ ರ್ಯಾಮ್ ಹಾಗೂ 12 ರ್ಯಾಮ್ ಮತ್ತು 256 ಜಿಬಿ ಸಂಗ್ರಹ ಉಳ್ಳ ಮೂರು ಆವೃತ್ತಿಯನ್ನು ಹೊಂದಿದೆ. ಸ್ಟಾಕ್ ಅಂಡ್ರಾಯ್ಡಗೆ ಸನಿಹವಾದ ಒನ್ ಪ್ಲಸ್ ಸೃಷ್ಟಿಯ ಆಕ್ಸಿಜನ್ ಆಪರೇಟಿಂಗ್ ಸಿಸ್ಟಂ ಅನ್ನು ಇದು ಒಳಗೊಂಡಿದೆ.
4000 ಎಂಎಎಚ್ ಬ್ಯಾಟರಿ ಹೊಂದಿದ್ದು, ಇದಕ್ಕೆ ಫಾಸ್ಟ್ ಚಾರ್ಜ್‌ಗಿಂತಲೂ ವೇಗವಾಗಿ ಚಾರ್ಜ್ ಆಗುವ ರ್ಯಾಪ್ ಚಾರ್ಜರ್ ನೀಡಲಾಗಿದೆ. ಇದು 20 ನಿಮಿಷದಲ್ಲಿ ಶೇ. 50ರಷ್ಟು ಬ್ಯಾಟರಿ ಚಾರ್ಜ್ ಮಾಡುತ್ತದೆಂದು ಕಂಪೆನಿ ತಿಳಿಸಿದೆ.
ಸುರಕ್ಷತೆಗಾಗಿ ಪರದೆಯ ಮೇಲೆ ಬೆರಳಚ್ಚು, ಪರದೆಯ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗಾಜು, ಎರಡು 4ಜಿ ಸಿಮ್ ಸ್ಲಾಟ್, ಸಿಟೈಪ್ ಕೇಬಲ್ ಇದೆ. ಇದರ ದರ ಹಿಂದಿನ ಒನ್‌ಪ್ಲಸ್ ಫೋನ್‌ಗಳಿಗಿಂತ ಹೆಚ್ಚಾಗಿದೆ. ಆದರೆ ಆಪಲ್, ಸ್ಯಾಮ್‌ಸಂಗ್ ಫ್ಲಾಗ್‌ಶಿಪ್ ಫೋನ್‌ಗಳಿಗೆ ಹೋಲಿಸಿದರೆ ಕಡಿಮೆ ಇದೆ. ದರ 6ಜಿಬಿ 128 ಜಿಬಿಗೆ 48,999 ರೂ., 8ಜಿಬಿ 256 ಜಿಬಿಗೆ 52999 ರೂ., 12 ಜಿಬಿ 256 ಜಿಬಿಗೆ 57,999 ರೂ. ಅಮೇಜಾನ್.ಇನ್ ನಲ್ಲಿ ಲಭ್ಯ.
ಒನ್ ಪ್ಲಸ್ 7: ಒನ್ ಪ್ಲಸ್ 7 ಪ್ರೊ ತುಂಬಾ ದುಬಾರಿಯಾಯಿತು ಎಂದುಕೊಳ್ಳುವವರಿಗಾಗಿ ಒನ್ ಪ್ಲಸ್ 7 ಅನ್ನು ಕಂಪೆನಿ ಇದರ ಜೊತೆ ಬಿಡುಗಡೆ ಮಾಡಿತು. ಇದರಲ್ಲೂ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್ ಇದೆ. 48 ಮೆಪಿ ಕ್ಯಾಮರಾ ಇದೆ. ಆದರೆ ಮೂರು ಲೆನ್ಸ್ ಬದಲು ಎರಡು ಲೆನ್ಸ್ ಅಳವಡಿಸಲಾಗಿದೆ. ಸೆಲ್ಫಿàಗೆ 16 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಇದು 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ ಹಾಗೂ 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸಂಗ್ರಹದ ಎರಡು ಆವೃತ್ತಿ ಹೊಂದಿದೆ.
ಇದು 6.41 ಇಂಚಿನ, ಫುಲ್ ಎಚ್‌ಡಿ (1080*2340) ಅಮೋಲೆಡ್ ಡಿಸ್‌ಪ್ಲೇ, ಇದರಲ್ಲಿ ಸೆಲ್ಫಿà ಕ್ಯಾಮರಾ ಫೋನಿನ ಮುಂಭಾಗದ ಮೇಲೆ ನೀರಿನ ಹನಿಯಂಥ ನಾಚ್ ಒಳಗೆ ಇದೆ. ಇದರಲ್ಲೂ ಪರದೆಯ ಮೇಲೆ ಬೆರಳಚ್ಚು ಸೌಲಭ್ಯಇದ್ದು, 3700 ಎಂಎಎಚ್ ಬ್ಯಾಟರಿ ಹೊಂದಿದೆ. ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆ. ಟೈಪ್ ಸಿ ಕೇಬಲ್ ಇದೆ. ಎರಡು ಸಿಮ್ ಹೊಂದಿದೆ. 7 ಮತ್ತು 7 ಪ್ರೊ ಮಾಡೆಲ್‌ಗಳಲ್ಲಿ 3.5 ಎಂಎಂ ಆಡಿಯೋ ಜಾಕ್ ಇಲ್ಲ ಎಂಬುದನ್ನು ಗಮನಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.