ಕೊಳವೆ ಬಾವಿಯಿಂದ ಉಚಿತ ನೀರು ಕೊಡುವ ಸಂತ
ದಿನಕ್ಕೆ 150 ಟ್ಯಾಂಕರ್ ನೀರು ಪೂರೈಕೆ
Team Udayavani, May 20, 2019, 6:00 AM IST
ತಮ್ಮ ಕೊಳವೆ ಬಾವಿಯಿಂದ ಉಚಿತವಾಗಿ ನೀರು ನೀಡುವ ಅಬ್ದುಲ್ ರವೂಫ್ ಮುಸ್ಲಿಯಾರ್.
ಉಳ್ಳಾಲ: ಕುಡಿಯುವ ನೀರಿನ ಸಮಸ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಟ್ಯಾಂಕರ್ ನೀರಿಗೆ ಎಲ್ಲಿಲ್ಲದ ಬೇಡಿಕೆ. ಕೊಳವೆ ಬಾವಿ, ತೆರೆದ ಬಾವಿಯಲ್ಲಿ ನೀರಿರುವವರಿಗೆ ಹಣದ ಹೊಳೆ ಆದರೆ ಉಳ್ಳಾಲ ದಲ್ಲೊಬ್ಬರು ತಮ್ಮ ಕೊಳವೆ ಬಾವಿಯಲ್ಲಿರುವ ನೀರನ್ನು ಉಚಿತವಾಗಿ ನೀಡುವ ಮೂಲಕ ಹೃದಯ ಶ್ರೀಮಂತಿ ಕೆಯನ್ನು ಮೆರೆ ದಿದ್ದು, ನೀರಿನ ಸಾಹೇಬರೆಂದೇ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಇದು ಉಳ್ಳಾಲ ದರ್ಗಾ ಬಳಿ ವಾಸವಾಗಿರುವ 70ರ ಹರೆಯದ ಅಬ್ದುಲ್ ರವೂಫ್ ಮುಸ್ಲಿಯಾರ್ ಅವರೇ ನೀರನ್ನು ದಾನ ಮಾಡುತ್ತಿರುವ ಸಾಹೇಬರು. ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಸಹಾ ಯಕ ಧರ್ಮಗುರುಗಳಾಗಿ 47 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅವರು ಧಾರ್ಮಿಕವಾಗಿ ಸೇವೆ ಸಲ್ಲಿಸುವುದರೊಂದಿಗೆ ಊರಿನ ಜನರಿಗೆ ತನ್ನ ಕೊಳವೆ ಬಾವಿಯ ನೀರನ್ನು ದಾನ ಮಾಡುವ ಮೂಲಕ ನೀರಿನ ಸಂತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶುಲ್ಕವಿಲ್ಲ
ಉಳ್ಳಾಲದಾದ್ಯಂತ ನೀರಿನ ಸಮಸ್ಯೆಗೆ ಪರಿಹಾರವಾಗಿ ಉಳ್ಳಾಲ ನಗರಸಭೆ ನೀರು ಸರಬರಾಜು ಮಾಡುವ ಕಾರ್ಯ ನಡೆಸುತ್ತಿದೆ. ಉಳ್ಳಾಲ ದರ್ಗಾ ಬಾವಿಯಿಂದ ನಿರಂತ ರವಾಗಿ ನೀರು ಸರಬರಾಜು ನಡೆಯುತ್ತಿದ್ದರೆ, ಅಬ್ದುಲ್ ರವೂಫ್ ಮುಸ್ಲಿಯಾರ್ ಅವರ ಕೊಳವೆ ಬಾವಿ ಯಿಂದ ದಿನವೊಂದಕ್ಕೆ 150 ಟ್ಯಾಂಕರ್ ನೀರು ಸರಬರಾಜು ಆಗುತ್ತಿದೆ.
ಬಾವಿಯಲ್ಲಿ ನೀರು ಇರುವವರು ಪ್ರತೀ ಟ್ಯಾಂಕರ್‌ಗೆ 50 ರೂ. ಶುಲ್ಕ ತೆಗೆದರೆ ಉಳ್ಳಾಲದ ಮುಸ್ಲಿಯಾರ್ ಯಾವುದೇ ಶುಲ್ಕವನ್ನು ಪಡೆಯುತ್ತಿಲ್ಲ. ಬೆಳಗ್ಗೆ 5 ಗಂಟೆಯಿಂದ ತಡರಾತ್ರಿ 2 ಗಂಟೆ ತನಕ ನಿರಂತರವಾಗಿ ನೀರು ಪೂರೈಕೆಯಾಗುತ್ತದೆ. ಬೆಳಗ್ಗಿಂದ ರಾತ್ರಿ ತನಕ ಕೊಳವೆ ಬಾವಿ ಮೋಟಾರ್ ಚಾಲು ಆಗಿರುತ್ತದೆ. ರವೂಫ್ ಸಾಹೇಬರು ನೀರಿನ ಹಣವು ಪಡೆಯುವುದಿಲ್ಲ, ಇನ್ನೂ ವಿದ್ಯುತ್ ಬಿಲ್ ಕೂಡ ಅವರೇ ಪಾವತಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ರವೂಫ್ ಸಾಹೇಬರ ಮನೆಯಿಂದ ಉಚಿತವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ.
ಸಾಮಾಜಿಕ ಕಳಕಳಿ ಶ್ಲಾಘನೀಯ
ಅಬ್ದುಲ್ ರವೂಫ್ ಮುಸ್ಲಿಯಾರ್ ಅವರ ತಂದೆ ಯೂಸುಫ್ ಮುಸ್ಲಿಯಾರ್ ದರ್ಗಾದ ಖತೀಬರಾಗಿ, ಹೆಸರುವಾಸಿಯಾದ ವಿದ್ವಾಂಸರು. ಅವರ ಪುತ್ರ ಅಬ್ದುಲ್ ರವೂಫ್ ಮುಸ್ಲಿಯಾರ್ ಖತೀಬರಾಗಿ ಸಹಾಯಕ ಖಾಝಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಳಕಳಿ ಶ್ಲಾಘನೀಯ.
– ರಶೀದ್ ಉಳ್ಳಾಲ್, ಉಳ್ಳಾಲ ದರ್ಗಾ ಅಧ್ಯಕ್ಷರು.
ಪೂರ್ವಜರಿಗೆ ಸಂತೃಪ್ತಿ
ನೀರು ದೇವರಿಗೆ ಸೇರಿದ್ದು, ಅದೇನೂ ನನ್ನದಲ್ಲ, ಎಲ್ಲರಿಗೂ ಸೇರಿದ್ದು, ಈ ಒಂದು ಸಣ್ಣ ಸೇವೆಯಿಂದ ನನ್ನ ಹಿರಿಯರಿಗೆ, ಪೂರ್ವಜರಿಗೆ ಸಂತೃಪ್ತಿಯಾಗಬಹುದು ಎಂದು ನನ್ನ ನಂಬಿಕೆ.
– ಅಬ್ದುಲ್ ರವೂಫ್ ಮುಸ್ಲಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.