ಮೈತ್ರಿ ಸರ್ಕಾರಕ್ಕೆ ಸಂಕಷ್ಟವಿಲ್ಲ: ಸಿಎಂ


Team Udayavani, May 20, 2019, 3:00 AM IST

maitry

ಮೈಸೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರಕ್ಕೆ ಯಾವುದೇ ಸಂಕಷ್ಟವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ರೂಪಾ ಪ್ರಕಾಶನದ ಆಶ್ರಯದಲ್ಲಿ ಪರ್ತಕರ್ತ ಅಂಶಿ ಪ್ರಸನ್ನ ಕುಮಾರ್‌ ಅವರ ಸಮುದಾಯ ನಾಯಕರು ಮತ್ತು ಸಮಾಜಮುಖೀ ಶ್ರೀ ಸಾಮಾನ್ಯರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೈಸೂರು ಜಿಲ್ಲೆಯ ಜನರು ರಾಜಕೀಯ ನಾಯಕರನ್ನು ಜಾತಿಯಾಧಾರದ ಮೇಲೆ ಆಯ್ಕೆ ಮಾಡಿಲ್ಲ. ಸಣ್ಣ ಪ್ರಮಾಣದ ಜನ ಸಮುದಾಯದ ನಾಯಕರನ್ನು ಸಂಸದರು, ಶಾಸಕರನ್ನಾಗಿ ಆಯ್ಕೆಯಾಗಿದ್ದಾರೆ. ಆದರೆ, ಇತ್ತೀಚೆಗೆ ಮೈಸೂರಿನಲ್ಲಿಯೂ ಸಹ ರಾಜಕೀಯದಲ್ಲಿ ಸ್ವಲ್ಪಮಟ್ಟಿಗೆ ಜಾತಿ ಪಸರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆ ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಅನೇಕ ಪ್ರಭಾವಿ ನಾಯರನ್ನು ಈ ರಾಜ್ಯಕ್ಕೆ ನೀಡಿದ ಅಪರೂಪದ ಜಿಲ್ಲೆ. ಜೊತೆಗೆ 13 ಬಜೆಟ್‌ಗಳನ್ನು ಸಮರ್ಥವಾಗಿ ಕೊಟ್ಟ ಸಿದ್ದರಾಮಯ್ಯ, 13 ಚುನಾವಣೆಗಳನ್ನು ಎದುರಿಸಿದ ಶ್ರೀನಿವಾಸ್‌ ಪ್ರಸಾದ್‌ನಂತಹ ನಾಯಕರನ್ನು ನೀಡಿದೆ ಎಂದು ಹೇಳಿದರು.

ಡೇಂಜರಸ್‌: ಇತ್ತೀಚೆಗೆ ನಾನು ಮಾಧ್ಯಮದವರ ಹತ್ತಿರಕ್ಕೆ ಹೋಗ್ತಿಲ್ಲ. ಅವರ ಬಳಿ ಹೋಗೋದೇ ಡೇಂಜರಸ್‌ ಅಂತ ನಾನು ದೂರವೇ ಇದ್ದಿನಿ. ಹಿಂದಿನ ಕಾಲದ ಪತ್ರಿಕಾ ಧರ್ಮ ಪ್ರಿಂಟ್‌ ಮೀಡಿಯಾದಲ್ಲಿ ಉಳಿದುಕೊಂಡಿವೆ. ಇತ್ತೀಚೆಗೆ ಎಲೆಕ್ಟ್ರಾನಿಕ್‌ ಮಿಡಿಯಾಗಳನ್ನು ನೋಡಿದರೆ ನಮಗೆ ಗಾಬರಿಯಾಗುತ್ತಿದೆ.

ನಾನು ಮಾಧ್ಯಮಗಳನ್ನು ಅತ್ಯಂತ ಹತ್ತಿರಕ್ಕೆ ತೆಗೆದು ಕೊಂಡಿದ್ದೆ. ಆದರೆ, ಇತ್ತೀಚೆಗೆ ಮಾಧ್ಯಮಗಳನ್ನು ನಾನು ಲೆಕ್ಕಕ್ಕೆ ಇಟ್ಟಿಲ್ಲ. ಎಲೆಕ್ಟ್ರಾನಿಕ್‌ ಮಾಧ್ಯಮದ ಕೆಲವರು ಪ್ಯಾನಲ್‌ ಚರ್ಚೆ ಮಾಡುತ್ತಾ, ಅವರೇ ಈ ಭೂಮಿ ಮೇಲೆ ಎಲ್ಲವನ್ನು ಜವಾಬ್ದಾರಿ ಹೊತ್ತಿರುವವರಂತೆ ಮಾತನಾಡುತ್ತಾರೆ ಎಂದು ಮಾಧ್ಯಮದವರ ವಿರುದ್ಧ ಗರಂ ಆದರು.

ಟಿಆರ್‌ಪಿಗೆ ನಮ್ಮ ಬಳಕೆ: ನಿಮ್ಮ ಟಿಆರ್‌ಪಿಗಾಗಿ ನಮ್ಮನ್ನು ಬಳಸಿಕೊಳ್ತಿದ್ದಿರಾ. ಮಾಧ್ಯಮಗಳ ಮೇಲೆ ನಾನು ಕಾಯಿದೆ ಮಾಡುವ ಚಿಂತೆಯಿದೆ. ರಾಜಕಾರಣಿಗಳು ಅಂದ್ರೆ ಏನ್‌ ಅನ್ಕೊಂಡಿದ್ದೀರಾ ನೀವು ? ಅದ್ಯಾವೊª ಕಾಮಿಡಿ ಪ್ರೋಗ್ರಾಮ್‌ ಕಿಲ ಕಿಲ, ಕೇಳ್ರಪ್ಪೊ ಕೇಳಿ ಅಂತ ಅನ್ಕೊಂಡು ರಾಜಕಾರಣಿಗಳನ್ನು ನಿಮಗೆ ಬೇಕಾದಹಾಗೆ ತೋರಿಸುತ್ತಿದ್ದೀರಾ. ನಿಮಗೆ ಈ ಅಧಿಕಾರ ಕೊಟ್ಟವರು ಯಾರು?

ಅದ್ರಲ್ಲೂ ಎಲ್ಲಿದ್ದಿಯಪ್ಪಾ ನಿಖೀಲ್‌ ಅಂತ ಅರ್ಧ ಗಂಟೆ ಕಾರ್ಯಕ್ರಮ ಬೇರೆ ಎಂದು ದೃಶ್ಯ ಮಾಧ್ಯಮದವರ ಮೇಲೆ ಹರಿಹಾಯ್ದು, ಮಾಧ್ಯಮದವರು ಕೇವಲ ನಮ್ಮ ಬಗ್ಗೆ ಸ್ಟೋರಿ ಮಾಡುವುದನ್ನು ಬಿಟ್ಟು, ಜನಪರ ಕಾರ್ಯಕ್ರಮಗಳನ್ನು ಮಾಡಿ. ನಾನು ವರದಿಗಾರರ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ಸಂಪಾದಕರಿಗೆ ಹೇಳ್ತಿನಿ. ನಡೆಸೊಕ್ಕೆ ಆಗಿಲ್ಲ ಅಂದ್ರೆ ನಿಮ್ಮ ಚಾನೆಲ್‌ಗ‌ಳ ಬಾಗಿಲು ಮುಚ್ಚಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಲಿಗೆ ಹೆದರಲ್ಲ: ಎಲೆಕ್ಟ್ರಾನಿಕ್‌ ಮಾಧ್ಯಮದವರು ಊಹೇ ಮಾಡಿಕೊಂಡು ಸುದ್ದಿ ಮಾಡ್ತಿರಾ. ಸಮಾಜವನ್ನು ಹಾಳು ಮಾಡುವ ಕೆಲಸ ಮಾಡ್ತಿದ್ದೀರಾ, ನಾನು ಮಾಧ್ಯಮಗಳ ಕಡೆ ಮುಖ ಮಾಡೋಲ್ಲ. ಅದೇನ್‌ ಮಾಡ್ತಿರೋ ಮಾಡ್ಕೊಳಿ ಎಂದು ಹೇಳಿ, ಮಗ ನಿಖೀಲ್‌ ಸೋಲಿನಿಂದ ನಾನು ಮೀಡಿಯಾಗಳ ಬಳಿ ಹೋಗ್ತಿಲ್ಲ ಅಂತ ಹೇಳ್ತಾರೆ.

ಗ್ರಾಮ ಪಂಚಾಯತಿಯಿಂದ ಪ್ರಧಾನಿಯವರೆಗೂ ಹೋಗಿರುವ ಕುಟುಂಬ ನಮ್ಮದು. ಸೋಲು, ಗೆಲುವುಗಳಿಗೆ ಹೆದರುವ ಕುಟುಂಬ ನನ್ನದಲ್ಲ. ನಾನು ಮೀಡಿಯಾದರಿಂದ ಏನೂ ಅಧಿಕಾರಕ್ಕೆ ಬಂದಿಲ್ಲ ಎಂದು ನೇರವಾಗಿ ಮಾಧ್ಯಮಗಳ ವಿರುದ್ಧ ವಾಗ್ಧಾಳಿ ನಡೆಸಿದರು.

ಹೊಣೆ ಅರಿತು ಕೆಲಸ ಮಾಡಿ: ಕೊಡಗಿನಲ್ಲಾದ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ವೆಚ್ಚದಲ್ಲಿ 800 ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಜೊತೆಗೆ ಮತ್ತೆ ಅತೀವೃಷ್ಟಿಯಂತಹ ಅನಾಹುತಗಳು ಆಗದಂತೆ ಅಧಿಕಾರಿಗಳ ಸಭೆ ನಡೆಸಿ, ಮುಂಜಾಗೃತೆ ವಹಿಸಲಾಗಿದೆ. ಆದರೆ, ಈ ಬಗ್ಗೆ ಯಾವ ಮಾಧ್ಯಮದವರೂ ಹೇಳುವುದಿಲ್ಲ. ನಾಡನ್ನು ಕಟ್ಟಲು ನಮ್ಮಷ್ಟೇ ನಿಮಗೂ ಜವಾಬ್ದಾರಿ ಇದೆ. ಅದನ್ನು ಅರಿತು ಕೆಲಸ ಮಾಡಬೇಕು ಎಂದರು.

ಸುದ್ದಿ ತಿರುಚಬೇಡಿ: ಚಿಂಚೋಳ್ಳಿಯಲ್ಲಿ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಎಂದು ನಾನು ನೀಡಿದ್ದ ಹೇಳಿಕೆಯನ್ನು ಮಾಧ್ಯಮದವರು ತಿರುಚಿ, ಅದನ್ನ ಸಿದ್ದರಾಮಯ್ಯ ಹಾಗೂ ಖರ್ಗೆ ನಡುವೆ ತರುವ ಯತ್ನ ಅಂತ ಸ್ಟೋರಿ ಮಾಡಿದರು.

ಇಂದು ಬೆಳಗ್ಗೆ ಸಚಿವ ಪುಟ್ಟರಂಗಶೆಟ್ಟಿ ಅವರು ಸಿಎಂ ಸ್ಥಾನದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಇದ್ದಾರೆ. ನಾನು ಸಿದ್ದರಾಮಯ್ಯ ಅವರನ್ನು ಆ ಸ್ಥಾನದಲ್ಲಿ ಇಟ್ಟು ನೋಡುತ್ತೇನೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು ? ಅವರು ಸಿದ್ದರಾಮಯ್ಯ ನೆರಳಲ್ಲಿ ಬೆಳೆದು ಬಂದವರು. ಹಾಗಾಗಿ ಆ ರೀತಿ ಹೆಳಿದ್ದಾರೆ. ಅದನ್ನು ನಿಮ್ಮಿಷ್ಟ ಬಂದಂತೆ ಟಿಆರ್‌ಪಿಗಾಗಿ ಏಕೆ ಬಳಕೆ ಮಾಡಿಕೊಳ್ಳುತ್ತೀರಾ ? ಎಂದು ಗುಡುಗಿದರು.

ಚಿತ್ರ ಹಿಂಸೆ: ಕಳೆದ ಮೂರೂವರೆ ತಿಂಗಳಿನಿಂದ ನನ್ನ ನೆಮ್ಮದಿ ಹಾಳು ಮಾಡಿದ್ದೀರಿ, ಒಂದು ರೀತಿ ಚಿತ್ರಹಿಂಸೆ ನೀಡಿದ್ದೀರಿ. ಸರಕಾರ ಬಿಧ್ದೋಗುತ್ತೆ ಅಂತ ವರದಿ ಮಾಡ್ತೀರಾ. ಈ ಸರ್ಕಾರಕ್ಕೆ ಸಂಕಷ್ಟ ಇದೆ ಅಂತೀರಾ, ಆದರೆ ಈ ಸರ್ಕಾರ ಈಗಲೂ ನಡೆಯುತ್ತಿರುವುದು ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಎಂದು ಹೇಳಿದರು.

ನಾವು ಹೋದರೆ ಟೆಂಪಲ್‌ ರನ್‌, ಮೋದಿ ಹೋದರೆ ಸುಮ್ನಿರ್ತೀರಾ: ನಾವು ದೇವರ ಭಕ್ತರು, ದೇಸ್ತಾನಗಳಿಗೆ ಹೋಗ್ತಿವಿ ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಾವು ದೇವಸ್ತಾನಗಳಿಗೆ ಹೋದರೆ ಚುನಾವಣೆಗಾಗಿ ಟೆಂಪಲ್‌ ರನ್‌ ಅಂತಿರಾ. ನರೇಂದ್ರ ಮೋದಿ ಕೇದಾರನಾಥ, ಬದರಿನಾಥದಲ್ಲಿ ಈಶ್ವರನ ತಪಸ್ಸು ಮಾಡಿದರೆ ಏನು ಇಲ್ಲ. ಮೇ 23 ಬಳಿಕ ವರ ಖುರ್ಚಿ ಅಳ್ಳಾಡುತ್ತೆ ಅಂತ ಹೋಗಿ ತಪಸ್ಸಿಗೆ ಕೂತ್ಕೊಂಡಿರೋದು ಎಂದು ವ್ಯಂಗ್ಯವಾಡಿದರು.

ಟಾಪ್ ನ್ಯೂಸ್

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yoga-nara

Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

Untitled-1

Mysuru: ಕೆಆರ್‌ಎಸ್‌ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್‌

Dali-dhanajaya

Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ

2-hunsur

Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.