ಪುರಸಭೆ ಚುನಾವಣೆ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ
ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡಿರುವ ಪ್ರಭಾವಿಗಳು • ಪಕ್ಷೇತರರಾಗಿ ಸ್ಪರ್ಧೆ, 'ಕೈ'ನಲ್ಲಿ ತಳಮಳ
Team Udayavani, May 20, 2019, 12:17 PM IST
ಬಂಗಾರಪೇಟೆ ಪುರಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಪ್ರಭಾವಿ ಮುಖಂಡ ರಾದ ಡಿ.ಕುಮಾರ್, ಅಸ್ಲಂಪಾಷ, ವೆಂಕಟೇಶಗೌಡ, ಸಾಧಿಕ್ ಪಾಷ, ಜಬೀನ್ ತಾಜ್.
ಬಂಗಾರಪೇಟೆ: ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಬಂಗಾರಪೇಟೆ ಪುರಸಭೆ ಚುನಾವಣೆಯಲ್ಲಿ ಪೈಪೋಟಿ ಜೋರಾಗಿದೆ. ಮೀಸಲಾತಿಯಿಂದ ಕ್ಷೇತ್ರ ಕಳೆದುಕೊಂಡಿದ್ದ ಕೆಲ ಪ್ರಭಾವಿಗಳಿಗೆ ಬೇರೇ ವಾರ್ಡ್‌ಗಳಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ. ಆದರೆ, ಟಿಕೆಟ್ ಕೈತಪ್ಪಿರುವ ಇನ್ನೂ ಐವರು ಪ್ರಭಾವಿಗಳ ನಡೆ ಪಕ್ಷಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಪುರಸಭೆ ಮಾಜಿ ಅಧ್ಯಕ್ಷ ಡಿ.ಕುಮಾರ್, ಜಬೀನ್‌ತಾಜ್, ಮಾಜಿ ಉಪಾಧ್ಯಕ್ಷ ಅಸ್ಲಂ ಪಾಷ, ವೆಂಕಟೇಶಗೌಡ ಹಾಗೂ ಜೆಡಿಎಸ್‌ನಲ್ಲಿ ಗೆದ್ದಿದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದ ಸಾದಿಕ್ ಪಾಷರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವುದರಿಂದ ಡಿ.ಕುಮಾರ್ ಅವರ ಪುತ್ರಿ ಹಾಗೂ ಸಾದಿಕ್ ಪಾಷ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ.
ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ: ಕಳೆದ 30 ವರ್ಷಗಳಿಂದಲೂ ಪುರಸಭೆ ವ್ಯಾಪ್ತಿಯಲ್ಲಿ ಬಹುತೇಕ ಮುಖಂಡರು ಪ್ರಭಾವಿಗಳಾಗಿರುವುದರಿಂದ ಮೀಸಲಾತಿ ಬದಲಾವಣೆಯಾದರೂ ಕ್ಷೇತ್ರ ಬದಲಾವಣೆ ಮಾಡಿ ಗೆಲುವು ಸಾಧಿಸುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ಕಳೆದ ಅವಧಿಗೆ ಹೋಲಿಕೆ ಮಾಡಿದರೆ 10ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ತಮ್ಮ ಕ್ಷೇತ್ರ ಬದಲಾವಣೆ ಮಾಡಿ ಸ್ಪರ್ಧೆ ಮಾಡಿದ್ದಾರೆ.
ಟಿಕೆಟ್ ಪಡೆದವರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ವಿಜಯನಗರ ಪೂರ್ವ, ಮಾಜಿ ಅಧ್ಯಕ್ಷರಾದ ಎಂ.ಗುಣಶೀಲನ್ (ಅಣ್ಣದೊರೈ) ಕೆರೆಕೋಡಿ, ಎನ್.ಭಾಗ್ಯಮ್ಮ ಗಂಗಮ್ಮಪಾಳ್ಯ, ಗಂಗಮ್ಮ ವಿಜಯನಗರ ಉತ್ತರ, ಸಿ.ರಮೇಶ್ ಪತ್ನಿ ಪೊನ್ನಿ ಮುನಿಯಮ್ಮ ಲೇಔಟ್, ಮಾಜಿ ಉಪಾಧ್ಯಕ್ಷರಾದ ಅರುಣಾಚಲಂ ಮಣಿ ನ್ಯೂಟೌನ್, ಅರೋಕ್ಯರಾಜನ್ ದೇಶಿಹಳ್ಳಿ-2 ವಾರ್ಡ್‌ಗಳಲ್ಲಿ ಈ ಬಾರಿ ಸ್ಪರ್ಧಿಸಿದ್ದಾರೆ.
ಪುತ್ರಿಗೆ ತಪ್ಪಿದ ಟಿಕೆಟ್: ರೈಲ್ವೆ ಕ್ವಾಟ್ರಸ್ ಹಾಗೂ ಫಲವತಿಮ್ಮನಹಳ್ಳಿ ಕ್ಷೇತ್ರದಿಂದ ಕಳೆದ ಅವಧಿಯಲ್ಲಿ ಗೆದ್ದಿದ್ದ ಡಿ.ಕುಮಾರ್ ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಕ್ಷೇತ್ರವು ಸಾಮಾನ್ಯ ಮಹಿಳೆ ಮೀಸಲಿಟ್ಟಿದ್ದರಿಂದ ತಮ್ಮ ಪುತ್ರಿ ಅತಿದಿಗೆ ಟಿಕೆಟ್ ಬಯಸಿದ್ದರು. ನೀಡದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಾಮಚಂದ್ರಪ್ಪ ಶಿಷ್ಯ ರೈಲ್ವೆ ಕ್ವಾಟ್ರಸ್ ಮಂಜುನಾಥ್ ಪತ್ನಿ ಗೀತಾಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ.
ಹಿಂದೆ ಸರಿದ ಅಸ್ಲಂಪಾಷ: ಪುರಸಭೆ 1 ರಿಂದ 7ರವರೆಗಿನ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯವಿದೆ. ಇಲ್ಲಿ ಮುಸ್ಲಿಂ ಮುಖಂಡರಲ್ಲಿಯೇ ಪೈಪೋಟಿ ಎದುರಾಗಿದೆ. ಎರಡು ಬಾರಿ ಪುರಸಭೆ ಉಪಾಧ್ಯಕ್ಷರಾಗಿದ್ದ ಅಸ್ಲಂಪಾಷಗೆ ಈ ಬಾರಿ ಮೀಸಲಾತಿ ಬದಲಾವಣೆಯಾಗಿರುವುದರಿಂದ ಅವಕಾಶ ಕೈತಪ್ಪಿದೆ. ಬೇರೆ ಕಡೆ ಪ್ರಯತ್ನ ಮಾಡಿದರೂ ಟಿಕೆಟ್ ಸಿಕ್ಕಿಲ್ಲ. ಕಾಂಗ್ರೆಸ್ ಟಿಕೆಟ್ ತಪ್ಪಲು ಶಂಶುದ್ಧೀನ್ ಬಾಬು ಕಾರಣ ಎಂದು ಅವರ ವಿರುದ್ಧ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ್ದ ಅವರು, ಅಂತಿಮ ಕ್ಷಣದಲ್ಲಿ ಚುನಾವಣೆಯಿಂದಲೇ ದೂರ ಉಳಿದಿದ್ದಾರೆ.
ಕಳೆದ ಅವಧಿಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಪಕ್ಷಕ್ಕೆ ಸೇರಿ ಕಾಂಗ್ರೆಸ್ ಪ್ರಭಾವಿ ಮುಖಂಡ ಶಂಶುದ್ದೀನ್‌ಬಾಬು ವಿರುದ್ಧವೇ ಗೆಲುವು ಸಾಧಿಸಿದ್ದ ಪಿ.ಸಾಧಿಕ್ ಪಾಷ ಗೆದ್ದ 6 ತಿಂಗಳಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಅನಂತರ ಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಕೊಂಡಿದ್ದರು. ಈ ಅವಧಿಯಲ್ಲಿ ಒಮ್ಮೆ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ನಡೆಸಿದ ಕಸರತ್ತು ವಿಫಲವಾಗಿದೆ. ಮತ್ತೆ ವಾರ್ಡ್ ನಂ 4ರಲ್ಲಿ ಸೇಟ್ಕಾಂಪೌಂಡ್ ಕ್ಷೇತ್ರದಿಂದ ಟಿಕೆಟ್ ಬಯಸಿದರೂ ಅಂತಿಮ ಗಳಿಗೆಯಲ್ಲಿ ಶಂಶುದ್ದೀನ್ ಬಾಬು ಅವರ ಭಾಮೈದ ರಫಿಕ್‌ಗೆ ಟಿಕೆಟ್ ನೀಡಿದ್ದರಿಂದ ಇವರ ವಿರುದ್ಧ ಮತ್ತೆ ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ.
ಪುರಸಭೆ ಸದಸ್ಯರಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಲಗೈ ಬಂಟರಾಗಿದ್ದ ಜಿ.ವೆಂಕಟೇಶಗೌಡ ಸ್ಪರ್ಧಿಸಲು ಎಷ್ಟೇ ಪ್ರಯತ್ನ ಮಾಡಿದರೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ವತಃ ಟಿಕೆಟ್ ತಪ್ಪಿಸಿ ಪಕ್ಷೇತರರಾಗಿಯೂ ಸಹ ಸ್ಪರ್ಧಿಸದಂತೆ ಅಡ್ಡಗಾಲು ಹಾಕಿದ್ದರಿಂದ ಚುನಾವಣೆಯಿಂದಲೇ ದೂರ ಉಳಿದಿದ್ದಾರೆ. ಇನ್ನೂ ಶಾಸಕರ ಮತ್ತೂಬ್ಬ ಬಲಗೈ ಬಂಟ ಮುಕ್ತಿಯಾರ್ ವಾರ್ಡ್ ನಂ 4ರಲ್ಲಿ ಸೇಟ್ ಕಾಂಪೌಂಡ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಚುನಾವಣೆಯಿಂದಲೇ ದೂರವಾಗಿದ್ದಾರೆ. ಇವರ ಪತ್ನಿ ಜಬೀನ್‌ತಾಜ್ ಸಹ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರೂ ಸ್ಪರ್ಧಿಸಲು ಕ್ಷೇತ್ರದ ಅಭಾವದಿಂದ ಈ ಬಾರಿ ಟಿಕೆಟ್ ಕೈ ತಪ್ಪಿದೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಐದಾರು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಟಿಕೆಟ್ ಪೈಪೋಟಿಯಿಂದ ಬಂಡಾಯ ಎದ್ದಿರುವುದರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್ ಬಂಡಾಯ ಶಮನ ಮಾಡಲು ಎರಡು ದಿನಗಳಿಂದ ತೀವ್ರ ಕಸರತ್ತು ಮಾಡುತ್ತಿದ್ದರೂ ಸಫಲವಾಗುತ್ತಿಲ್ಲ. ಕಾಂಗ್ರೆಸ್-ಕಾಂಗ್ರೆಸ್ ನಡುವೆ ಪೈಪೋಟಿ ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಭಿನ್ನಮತ ಯಾವ ಮಟ್ಟಕ್ಕೆ ಶಮನವಾಗುವುದೋ ಕಾದುನೋಡಬೇಕಾಗಿದೆ.
● ಎಂ.ಸಿ.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.