ತಾರಸಿ ಮೇಲೆ ತರಕಾರಿ ಬೆಳೆದು ಆರೋಗ್ಯ ಕಾಪಾಡಿಕೊಳ್ಳಿ

ಗೃಹಿಣಿಯರಿಗೆ ಸಲಹೆ ನೀಡಿದ ತೋಟಗಾರಿಕೆ ಕಚೇರಿ ಹೆಚ್ಚುವರಿ ನಿರ್ದೇಶಕ ಡಾ.ಎಂ.ಪ್ರಕಾಶ್‌

Team Udayavani, May 20, 2019, 2:28 PM IST

mandya-tdy-9..

ತೋಟಗಾರಿಕೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ತಾರಸಿ ಕೈತೋಟಗಳ ಉತ್ತೇಜನ ಕುರಿತ ತರಬೇತಿ ನೀಡಲಾಯಿತು.

ಮಂಡ್ಯ: ನಮಗೆ ಬೇಕಾದ ಸೊಪ್ಪು, ತರಕಾರಿ ಸಾವಯವ ಪದ್ಧತಿಯಲ್ಲಿ ಮನೆಗಳ ತಾರಸಿ ಮೇಲೆ ಬೆಳೆದು ಉಪಯೋಗಿಸಿದರೆ ಆರೋಗ್ಯ ಸುಧಾರಣೆ ಹಾಗೂ ಮನಸ್ಸಿಗೆ ನೆಮ್ಮದಿ ಸಿಗಲಿದೆ ಎಂದು ಬೆಂಗಳೂರಿನ ಲಾಲ್ಬಾಗ್‌ ನರ್ಸರಿ ತೋಟಗಾರಿಕೆ ಕಚೇರಿ ಹೆಚ್ಚವರಿ ನಿರ್ದೇಶಕ ಡಾ.ಪ್ರಕಾಶ್‌ ಎಂ. ಸಬರದ ಸಲಹೆ ನೀಡಿದರು.

ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ತಾರಸಿ ಕೈತೋಟಗಳ ಉತ್ತೇಜನ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯ ನಾವು ಆಹಾರದಲ್ಲಿ ಸೊಪ್ಪು, ತರಕಾರಿ ಉಪಯೋಗಿಸುತ್ತೇವೆ. ಆದರೆ ಅವು ಎಲ್ಲಿ, ಯಾವ ಪೌಷ್ಟಿಕಾಂಶ ಹಾಕಿ ಬೆಳೆಸಲಾಗಿದೆ ಎಂಬ ಮಾಹಿತಿ ಇರುವುದಿಲ್ಲ. ಆದರೆ, ನಮ್ಮ ಆಹಾರಕ್ಕೆ ತರಕಾರಿ ನಾವೇ ಬೆಳೆಯುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಮನೆ ಮುಂದಿನ ಖಾಲಿ ಜಾಗ, ಮನೆ ತಾರಸಿ ಹಾಗೂ ಮಣ್ಣಿನ ಕುಂಡಗಳು, ಸಸಿ ಬೆಳೆಸುವ ಚೀಲಗಳಲ್ಲಿ ಸೊಪ್ಪು, ತರಕಾರಿ ಬೆಳೆಯಬಹುದು. ಇದರಿಂದ ಉತ್ತಮ ಆರೋಗ್ಯ, ನಾವೇ ಬೆಳೆದ ಖುಷಿ ಹಾಗೂ ಬಿಡುವಿನ ವೇಳೆ ಸದುಪಯೋಗ ಮಾಡಿದಂತಾಗುತ್ತದೆ ಎಂದು ಹೇಳಿದರು.

ಉಚಿತ ತರಬೇತಿ ಕಾರ್ಯಾಗಾರ: ಮನೆಯಲ್ಲಿನ ಅನುಪಯುಕ್ತ ತರಕಾರಿಗಳಿಂದ ಎರೆಹುಳು ಗೊಬ್ಬರ ತಯಾರಿಸಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯಬಹುದು. ತರಕಾರಿ ಬೆಳೆಯಲು ಬೇಕಾದ ಸಾಮಗ್ರಿ ಉಚಿತವಾಗಿ ನೀಡಲಾಗುವುದು. ಜೊತೆಗೆ ತೋಟಗಾರಿಕೆ ಇಲಾಖೆಯಲ್ಲಿ ಉಚಿತ ತರಬೇತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಕೂಡ ಏರ್ಪಡಿಸಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ವಾಟ್ಸಾಪ್‌ ಗ್ರೂಪ್‌ ಮಾಡಿಕೊಳ್ಳಿ: ತರಕಾರಿ ಬೀಜಗಳ ಗಾತ್ರಕ್ಕೆ ಅನುಗುಣವಾಗಿ ಸಣ್ಣ ಬೀಜಗಳನ್ನು ಮಣ್ಣಿನ ಮೇಲ್ಪದರದ ಮಡಿಯಲ್ಲಿ ಹಾಕಿ 20 ದಿನಗಳ ನಂತರ ಸಸಿಗಳನ್ನು ಕಿತ್ತು ಬೇರೆಡೆ ನಾಟಿ ಮಾಡಬೇಕು. ತರಕಾರಿ ಬೀಜಗಳು ದೊಡ್ಡದಾಗಿದ್ದರೆ ಭೂಮಿಯ ಸ್ವಲ್ಪ ಆಳ ಹಾಗೂ ಅಂತರದಲ್ಲಿ ನೇರವಾಗಿ ಉಳುಮೆ ಮಾಡಿ ಬೆಳೆಯಬಹುದು. ಈ ಕುರಿತು ತಾರಸಿ ತೋಟ ಮಾಡುವವರು ವಾಟ್ಸಾಪ್‌ ಗ್ರೂಪ್‌ ಮಾಡಿಕೊಂಡು ತಮ್ಮ ಬೆಳೆಯ ಪ್ರಯೋಗ ಹಾಗೂ ಸಮಸ್ಯೆ ಕುರಿತು ಚರ್ಚೆ ಮಾಡಿ ಉತ್ತಮವಾಗಿ ತರಕಾರಿ ಬೆಳೆಯಬೇಕು ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ ಮಾತನಾಡಿ, ತಾರಸಿ ತೋಟಗಳ ಕುರಿತು ನಮ್ಮ ಕಚೇರಿ ಆವರಣದಲ್ಲಿ ಕಿಚನ್‌ ಗಾರ್ಡನ್‌ ಬೆಳೆಸಿ ಪ್ರಾತ್ಯಕ್ಷಿಕೆ ನೀಡಲಾಗುವುದು. ಈ ಕುರಿತು ಯಾವುದೇ ಸಂದೇಹ ಹಾಗೂ ಸಮಸ್ಯೆಗಳಿದ್ದರೆ ಕಚೇರಿ ವೇಳೆಯಲ್ಲಿ ಬಂದು ಪರಿಹಾರ ಪಡೆದುಕೊಳ್ಳಬಹುದು ಎಂದು ಹೇಳಿದರು. ಈ ವೇಳೆ ಮದ್ದೂರು ತೋಟಗಾರಿಕಾ ಕ್ಷೇತ್ರದ ಯೋಜನಾ ಅಧಿಕಾರಿ ಡಾ.ಮಂಜುನಾಥ್‌ ಅಂಗಡಿ ಇತರರಿದ್ದರು.

ಟಾಪ್ ನ್ಯೂಸ್

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

Mandya: ಕದ್ದ ಚಿನ್ನ ಮನೆ ಮುಂದೆ ಇಟ್ಟು ಹೋದ ಕಳ್ಳರು!

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.