ಬೆದ್ರಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ
Team Udayavani, May 20, 2019, 4:35 PM IST
ಕುಮಟಾ: ತಾಲೂಕಿನ ಕಲ್ಲಬ್ಬೆ ಪಂಚಾಯಿತಿ ವ್ಯಾಪ್ತಿಯ ಸಾಣಕಲ್ ಬಳಿ ಬೆದ್ರಕೆರೆ ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾದ ಹಣ ಕೆರೆಯ ಅರ್ಧ ಹೂಳೆತ್ತಲೂ ಸಾಲದು. ಆದ್ದರಿಂದ ಹೆಚ್ಚಿನ ಅನುದಾನ ಕೊಟ್ಟು ಕೆರೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವಂತೆ ಸ್ಥಳೀಯರು ವಿನಂತಿಸಿದ್ದಾರೆ.
ಕಲ್ಲಬ್ಬೆ ಗ್ರಾಮದ ಎತ್ತರದ ಪ್ರದೇಶದಲ್ಲಿರುವ ಬೆದ್ರಕೆರೆ ಸುಮಾರು 9 ಗುಂಟೆಗೂ ಹೆಚ್ಚು ವಿಶಾಲವಾಗಿದೆ. ಊರಿನ ನಡುವೆ ಇರುವ ಈ ಕೆರೆಯಿಂದ ನೀರು ನಿರಂತರ ಹರಿಯುತ್ತಿತ್ತು. ಯಾವತ್ತೂ ಹೂಳೆತ್ತದೇ ಇದ್ದುದರಿಂದ ಜಲಮೂಲ ಕ್ಷೀಣಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಮನವಿಯ ಮೇರೆಗೆ ಜಿಪಂದಿಂದ ಕೆರೆಯನ್ನು ಅಭಿವೃದ್ಧಿಗೆ ಗುರುತಿಸಿ 5 ಲಕ್ಷ ರೂ. ಅನುದಾನ ಮಂಜೂರಿ ಮಾಡಿ ಕಾಮಗಾರಿ ಪ್ರಗತಿಯಲ್ಲಿದೆ.
ಬೆದ್ರಕೆರೆ ಜಾಗದ ಮಾಲಕ ಆರ್.ಜಿ. ಹೆಗಡೆ ಹೇಳುವಂತೆ, 9 ಗುಂಟೆ ಜಾಗದಲ್ಲಿರುವ ಈ ಕೆರೆಯ ಸಂಪೂರ್ಣ ಹೂಳೆತ್ತಿದರೆ ಮಾತ್ರ ನಿಜವಾದ ಪ್ರಯೋಜನವಿದೆ. ಆದರೆ ಲಭ್ಯವಿರುವ ಅನುದಾನದಲ್ಲಿ ಸದ್ಯ 4-5 ಗುಂಟೆಯಷ್ಟು ಜಾಗಕ್ಕೆ ಮಾತ್ರ ಹೂಳೆತ್ತಿ ಸುತ್ತಲೂ ಪಿಚಿಂಗ್ ಕಟ್ಟಲು ಸಾಧ್ಯ. ಬೆದ್ರಕೆರೆ ಸಂಪೂರ್ಣ ಹೂಳೆತ್ತಿ ಅಭಿವೃದ್ಧಿಯಾದರೆ ಇಡೀ ಕಲ್ಲಬ್ಬೆ ಗ್ರಾಮಕ್ಕೇ ಅನುಕೂಲವಿದೆ. ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ ಕೆರೆಯನ್ನು ಗುರುತಿಸಿ ಕಡಿಮೆ ಅನುದಾನಕೊಟ್ಟು ಅರೆಬರೆ ಹೂಳೆತ್ತಿ ಪಿಚಿಂಗ್ ಕಟ್ಟಿದರೆ ಕೆರೆ ಅಭಿವೃದ್ಧಿಯ ಮೂಲ ಆಶಯವೇ ವ್ಯರ್ಥವಾಗಲಿದೆ. ಈಗ ತೆಗೆದಿರುವ ಹೂಳು ಮಳೆಗಾಲ ಮುಗಿದ ನಂತರ ಪುನಃ ತುಂಬಿಕೊಳ್ಳುತ್ತದೆ. ಒಮ್ಮೆ ಅಭಿವೃದ್ಧಿ ಮಾಡಿದ ಕೆರೆಯೆಂದು ಮತ್ತೆ ಅನುದಾನ ಮಂಜೂರಿಗೂ ಕಷ್ಟ, ಮಂಜೂರಿ ದೊರೆತರೂ ಅಲ್ಪ ಪ್ರಮಾಣದಲ್ಲಿ ಮಾತ್ರ ಸಿಗಬಹುದು. ಒಟ್ಟಾರೆ ಕೆರೆಯ ನಿಜವಾದ ಪ್ರಯೋಜನಕಾರಿ ಪೂರ್ಣ ಸ್ವರೂಪ ಮತ್ತೆಂದೂ ಕಾಣಲು ಸಾಧ್ಯವೇ ಇಲ್ಲದಂತೆ ಆಗುತ್ತದೆ. ಬೊಕ್ಕಸದ ಹಣ ವ್ಯರ್ಥ ಮಾಡಿದಂತಾಗುತ್ತದೆ. ಹೀಗಾಗಿ ಇಂಥ ಕೆರೆಗಳ ಅಭಿವೃದ್ಧಿಯನ್ನು ಒಂದೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಮಾಡುವ ಬಗ್ಗೆ ಸಂಬಂಧಪಟ್ಟವರು ಮುತುವರ್ಜಿ ವಹಿಸಬೇಕು ಎಂದು ಸ್ಥಳೀಯರು ಕೋರಿದ್ದಾರೆ.
ಕಲ್ಲಬ್ಬೆ ಬೆದ್ರಕೆರೆ ಹಾಗೂ ಇತರ ನಾಲ್ಕು ಕೆರೆಗಳ ಅಭಿವೃದ್ಧಿಗೆ ಜಿ.ಪಂ ಅನುದಾನದಿಂದ ಕಾಮಗಾರಿ ಪ್ರಗತಿಯಲ್ಲಿದೆ. ಪೂರ್ಣ ಕೆರೆ ಅಭಿವೃದ್ಧಿಗೆ ಅನುದಾನ ಸಾಲದು. ಪೂರ್ಣ ಕೆರೆ ಅಭಿವೃದ್ಧಿಯ ಕ್ರಿಯಾಯೋಜನೆ ಅನ್ವಯಿಸಿ ಹೆಚ್ಚಿನ ಹಣ ಲಭ್ಯವಾದರೆ ಮಾತ್ರ ಜನರ ಆಶಯದಂತೆ ಕೆಲಸ ಮಾಡಲು ಸಾಧ್ಯ.
•ಗಜಾನನ ಪೈ, ಜಿ.ಪಂ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.