ಅಜ್ಜಿ,ನೀನೂ ಗ್ರೂಪ್ ಸೇರ್ಕೋ…
Team Udayavani, May 21, 2019, 6:03 AM IST
ನಮ್ಮದು ದೊಡ್ಡ ಕುಟುಂಬ. ನಮ್ಮ ತಂದೆಯ ಕಾಲದಲ್ಲಿ 30ರಿಂದ 35 ಮನೆಯ ಸದಸ್ಯರ ಸಂಖ್ಯೆ ಈಗ 55 ದಾಟಿದೆ. ಆದರೆ, ಇದರಲ್ಲಿ ಬಹುತೇಕರು ಉದ್ಯೋಗ ಮತ್ತು ಬದುಕಿನ ಇತರೆ ಉದ್ದೇಶ ನಿಮಿತ್ತ ಒಂದೊಂದು ದಿಕ್ಕಿಗೆ ಚದುರಿ ಹೋಗಿದ್ದಾರೆ. ಮದುವೆ- ಮುಂಜಿ, ಹಬ್ಬ-ಹರಿದಿನ ಇದ್ದರಷ್ಟೇ, ಮೂಲ ಮನೆಗೆ ಬರೋದು ಅನ್ನೋ ಪರಿಪಾಠ ರೂಢಿಯಾಗಿದೆ. ಕಂಪನಿಯಲ್ಲಿ ರಜೆ ಸಿಕ್ತಿಲ್ಲ, ಎಕ್ಸಾಮು, ಹಾಗೇ- ಹೀಗೆ ಅನ್ನೋ ನೆಪ ಹೇಳಿ ತಪ್ಪಿಸಿಕೊಳ್ಳುವವರೂ ಇದ್ದಾರೆ. ಇದಕ್ಕೆಲ್ಲ ಪರಿಹಾರವಾಗಿ, ಯಾವುದೇ ಕಮ್ಯುನಿಕೇಶನ್ ಗ್ಯಾಪ್ ಇರಬಾರದು ಎಂಬ ಕಾರಣಕ್ಕಾಗಿ ಹುಟ್ಟಿಕೊಂಡಿದ್ದೇ, “ಹನಗೋಡು ಮೊಮ್ಮಕ್ಕಳು’ ಎನ್ನುವ ಗ್ರೂಪು.
ನಮ್ಮ ಗುಂಪಿನಲ್ಲಿ 16ರಿಂದ 30 ವರ್ಷ ವರೆಗಿನ ಮೊಮ್ಮಕ್ಕಳೂ ಇದ್ದಾರೆ. ವಿದೇಶದಲ್ಲೂ ಕೆಲವರು ಸೆಟ್ಲ ಆಗಿದ್ದಾರೆ. ಇಲ್ಲಿ ಕಿರಿಯರಿಗೆ ಹಿರಿಯರೇ ಮಾರ್ಗದರ್ಶಕರು. ನಿತ್ಯವೂ ಹತ್ತಾರು ಪ್ರಶ್ನೆಗಳು… “ಅಣ್ಣಾ ಯಾವ ಲ್ಯಾಪ್ಟಾಪ್ ಚೆನ್ನಾಗಿದೆ?’, “ಯಾವ ಮೊಬೈಲ್ ಓಕೆ?’, “ಯಾವ ಕಾಂಬಿನೇಷನ್ ಬೆಸ್ಟ್?’- ಹೀಗೆ ಪ್ರಶ್ನೆಗಳ ಸುರಿಮಳೆ ಇಲ್ಲಿರುತ್ತೆ. ಊರ ಹಬ್ಬ, ಜಾತ್ರೆ ದಿನವಂತೂ ಅರ್ಧ ಜಿ.ಬಿ. ಇಂಟರ್ನೆಟ್ ಖಾಲಿ! ಆದರೆ, ಈ ಗುಂಪಿನಲ್ಲಿ ಪಾಲಿಟಿಕ್ಸ್ಗೆ ನೋ ಎಂಟ್ರಿ. “ವರ್ಷಕ್ಕೆ ಒಂದು ಸಲನಾದ್ರೂ ಊರ್ ಕಡೆ ಬರೊ’ ಅಂತ ಅಜ್ಜಿ ಗೋಳಾಡಿದ್ರೆ, “ಅಜ್ಜಿ ನೀನು ಗ್ರೂಪ್ ಸೇರ್ಕೋ… ಅಲ್ಲಿ ಎಲ್ಲ ಸಿಗ್ತಾರೆ’ ಅಂತ ನಗೆಚಟಾಕಿ ಹಾರಿಸೋರೂ ಇದ್ದಾರೆ.
– ಶಾಮ ಪ್ರಸಾದ್ ಹನಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.