ವಿದ್ಯುತ್ ಲೋಡ್ ಶೆಡ್ಡಿಂಗ್, ಪವರ್‌ಕಟ್ ಇಲ್ಲ
ಕೇರಳ ವಿದ್ಯುತ್ ಮಂಡಳಿ ನಿರ್ಧಾರ
Team Udayavani, May 21, 2019, 6:20 AM IST
ಕಾಸರಗೋಡು: ಕೇರಳದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್, ಪವರ್‌ಕಟ್ ಇತ್ಯಾದಿ ಯಾವುದೇ ರೀತಿಯ ವಿದ್ಯುತ್ ನಿಯಂತ್ರಣ ಏರ್ಪಡಿಸದಿರಲು ರಾಜ್ಯ ವಿದ್ಯುತ್ ಮಂಡಳಿಯು ತಿಳಿಸಿದೆ. ಈ ಬಾರಿಯ ಕಡು ಬೇಸಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆಯ ಪ್ರಮಾಣ ಮಿತಿಮೀರಿದ್ದರೂ ಅದಕ್ಕೆ ಹೊಂದಿಕೊಂಡು ರಾಜ್ಯದಲ್ಲಿ ವಿದ್ಯುತ್ ದೊರಕುತ್ತಿದೆ.
ಆದ್ದರಿಂದ ವಿದ್ಯುತ್ ನಿಯಂತ್ರಣ ವಾಗಲಿ ಅಥವಾ ಅಘೋಷಿತ ಪವರ್‌ಕಟ್ ಆಗಲಿ ಹೇರದಿರಲು ವಿದ್ಯುತ್ ಮಂಡಳಿಯು ನಿರ್ಧರಿಸಿದೆ. ವಿದ್ಯುತ್ ವಿಷಯದಲ್ಲಿ ಕೇರಳದಲ್ಲಿ ಆತಂಕಪಡುವ ಪರಿಸ್ಥಿತಿ ಈಗ ಖಂಡಿತಾ ಇಲ್ಲ. ಅಗತ್ಯದಷ್ಟು ವಿದ್ಯುತ್‌ನ್ನು ಹೊರಗಿನಿಂದ ತಂದು ಯಾವುದೇ ರೀತಿಯ ಲೋಡ್ ಶೆಡ್ಡಿಂಗ್ ಇಲ್ಲದೆ ವಿದ್ಯುತ್ ಪೂರೈಕೆಯನ್ನು ಸಮರ್ಪಕಗೊಳಿಸಲಾಗಿದೆ.
ಟ್ರಾನ್ಸ್‌ಫಾರ್ಮರ್ ಮತ್ತು ವಿದ್ಯುತ್ ಲೈನ್‌ಗಳ ದುರಸ್ತಿ ಕೆಲಸಗಳಿದ್ದಲ್ಲಿ ಮಾತ್ರವೇ ಅಂತಹ ಪ್ರದೇಶಗಳಲ್ಲಿ ಆ ಕೆಲಸ ಮುಗಿಯುವ ತನಕ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಚುನಾವಣ ನೀತಿ ಸಂಹಿತೆ ಹಾಗೂ ಬಿಸಿಲ ಬೇಗೆಯನ್ನು ಪರಿಗಣಿಸಿ ಹೆಚ್ಚಿನ ಎಲ್ಲ ದುರಸ್ತಿ ಕೆಲಸಗಳನ್ನೆಲ್ಲ ಈಗ ಮುಂದೂಡಲಾಗಿದೆ ಎಂದು ಮಂಡಳಿಯು ಹೇಳಿದೆ. ಅತಿ ಅಗತ್ಯದ ದುರಸ್ತಿಗಳನ್ನು ಮಾತ್ರ ಈಗ ನಿರ್ವಹಿಸಲಾಗುತ್ತಿದೆ.
ಇದೇ ವೇಳೆ ಕೇರಳದಲ್ಲಿ ವಿದ್ಯುತ್ ವೋಲ್ಟೆàಜ್ ಸಮಸ್ಯೆ ಹೆಚ್ಚಿನ ಜಿಲ್ಲೆ ಗಳಲ್ಲೂ ತಲೆದೋರತೊಡಗಿದೆ. ವಿದ್ಯುತ್ ಲೈನ್‌ಗಳಲ್ಲಿ ಲೋಡ್ ಹೆಚ್ಚಾಗುತ್ತಿರುವುದೇ ಇದಕ್ಕೆ ಪ್ರಧಾನ ಕಾರಣವಾಗಿದೆ. ಕೇರಳದ ವಿದ್ಯುತ್ ಲೈನ್ ಮತ್ತು ಲೈಟ್‌ಗಳು ಹಳೆಯ ಕಾಲದ್ದಾಗಿವೆ. ಹೆಚ್ಚಿನವುಗಳನ್ನು ಈ ತನಕ ಬದಲಾಯಿಸಿಲ್ಲ. ಅಲ್ಲದೆ ಅಧಿಕ ಸಾಮರ್ಥ್ಯದ ಲೈನ್ ಅಳವಡಿಸಲು ಮಂಡಳಿಯು ಮೀನಮೇಷ ಎಣಿಸುತ್ತಿದೆ.
ಅದರಿಂದಾಗಿ ಹೆಚ್ಚು ವಿದ್ಯುತ್ ಲಭಿಸಿದರೂ ಅದನ್ನು ಜನರಿಗೆ ತಲುಪಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಕ್ಕೆ ಅಗತ್ಯದಷ್ಟು ಹೊರರಾಜ್ಯಗಳಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಹೊರಗಿನಿಂದ ಯೂನಿಟ್‌ಗೆ ಸರಾಸರಿ 4ರಿಂದ 5ರೂ. ವರೆಗೆ ಹಣ ನೀಡಿ ವಿದ್ಯುತ್ ಖರೀದಿಸಲಾಗುತ್ತಿದೆ.
ರಾಜ್ಯದ ಜಲ ವಿದ್ಯುತ್ ಯೋಜನೆಗಳ ಅಣೆಕಟ್ಟುಗಳಲ್ಲಿ ಈಗ ಅಗತ್ಯದ ನೀರು ಇದೆ ಎಂದು ವಿದ್ಯುತ್ ಮಂಡಳಿಯು ಮಾಹಿತಿ ನೀಡಿದೆ. ಇಡುಕ್ಕಿ ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿ ಹೊಸ ಜಲ ವಿದ್ಯುತ್ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂಬುದು ಉಲ್ಲೇಖನೀಯ ಅಂಶವಾಗಿದೆ.
ಪೂರೈಕೆಗೆ ಕ್ರಮ
ಈ ಬಾರಿ ಕೇರಳದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಅದರೊಂದಿಗೆ ವಿದ್ಯುತ್ ಬಳಕೆಯೂ ಅಧಿಕವಾಗಿದೆ. ಅಲ್ಲದೆ ಉತ್ಪಾದನಾ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ. ಆದರೂ ಹೊರರಾಜ್ಯಗಳಿಂದ ವಿದ್ಯುತ್ ಸರಬರಾಜು ಸಮರ್ಥವಾಗಿ ನಡೆಯುತ್ತಿರುವುದರಿಂದ ಪವರ್‌ಕಟ್ ಮಾಡದಿರಲು ತೀರ್ಮಾನಿಸ ಲಾಗಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯೂ ಒಳಗೊಂಡಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂತನ ವಿದ್ಯುತ್ ಯೋಜನೆಗಳನ್ನು ಕಾರ್ಯ ಗತಗೊಳಿಸಲು ನಿರ್ಧರಿಸ ಲಾಗಿದೆ.
– ಎನ್.ಎಸ್.ಪಿಳ್ಳೆ, ಅಧ್ಯಕ್ಷರು, ಕೇರಳ ರಾಜ್ಯ ವಿದ್ಯುತ್ ಮಂಡಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.