ನಿತ್ಯ 400 ಮಂದಿಗೆ ಇಫ್ತಾರ್ ಆಯೋಜನೆ
ರಂಜಾನ್ ಪ್ರಯುಕ್ತ ಉಪವಾಸ ಇರುವವರಿಗೆ ಇಫ್ತಾರ್ ಕೂಟ
Team Udayavani, May 21, 2019, 8:19 AM IST
ಚಿಕ್ಕಬಳ್ಳಾಪುರ ನಗರದಲ್ಲಿ ಸೋಮವಾರ ರಂಜಾನ್ ಪ್ರಯುಕ್ತ ಉಪವಾಸ ಇರು ವವರಿಗೆ ಸಂಘ, ಸಂಸ್ಥೆಗಳು ಆಯೋಜಿ ಸಿದ್ದ ಇಫ್ತಾರ್ ಕೂಟ.
ಚಿಕ್ಕಬಳ್ಳಾಪುರ: ಪವಿತ್ರ ರಂಜಾನ್ ಮಾಸಚಾರಣೆ ಜಿಲ್ಲಾದ್ಯಂತ ಶುರುವಾದಂತೆ ಇಫ್ತಾರ್ ಕೂಟಗಳ ಆಯೋಜನೆ ಕೂಡ ಸಾಗಿದೆ. ಮುಸ್ಲಿಂ ಸಮುದಾಯದ ಪಾಲಿಗೆ ಶ್ರೇಷ್ಠವಾದ ರಂಜಾನ್ ಪ್ರಯುಕ್ತ ಜಿಲ್ಲೆಯ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ವಿಶೇಷ ಪ್ರಾರ್ಥನಾ ಕೂಟಗಳು ನಡೆಯುತ್ತಿದ್ದು, ಉಪವಾಸ ಅಂತ್ಯಗೊಳಿಸುವ ಸಂದರ್ಭದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗುತ್ತಿದೆ.
ನಿತ್ಯ 400 ಮಂದಿಗೆ ಇಫ್ತಾರ್: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಮಸೀದಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರದ ಜೂನಿಯರ್ ಕಾಲೇಜು ಮುಂಭಾಗ ಇರುವ ಮಸೀದ್ ಎ ಹುಸೇನಿಯಾದಲ್ಲಿ ರಂಜಾನ್ ಮಾಸ ಪ್ರಯುಕ್ತ ನಮಾಜ್ ಮಾಡುವ 400 ಕ್ಕೂ ಹೆಚ್ಚು ಮಂದಿಗೆ ನಿತ್ಯ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿದೆ.
ನಗರದ ಇಬ್ರಾಹೀಂ ಕಲೀಲ್, ಮೌಲ, ಸೈಯದ್ ಇಮ್ಲಾದ್ ಸೇರಿದಂತೆ ಯುವಕರ ಗುಂಪು ರಂಜಾನ್‌ನಲ್ಲಿ ಉಪವಾಸ ಇರುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇಫ್ತಾರ್ ಹಾಗೂ ಸೆಹ್ರಿ ವ್ಯವಸ್ಥೆಯನ್ನು ರಂಜಾನ್ ಮಾಸಾಂತ್ಯ ಮುಗಿಯುವವರೆಗೂ ಆಯೋಜಿಸಿದೆ.
ರಂಜಾನ್ ಹಬ್ಬದ ಸಂದರ್ಭದಲ್ಲಿ ಇಫ್ತಾರ್ ಕೂಟ ಆಯೋಜಿಸುವುದು ಸಂಪ್ರದಾಯ. ನಿತ್ಯ ನೂರಾರು ಮಂದಿ ಉಪವಾಸ ಇದ್ದು ನಮಾಜ್ ಮಾಡಿದ ಬಳಿಕ ಆಹಾರ ಸೇವನೆ ಮಾಡುತ್ತಾರೆಂದು ಚಿಕ್ಕಬಳ್ಳಾಪುರದ ಮಹಮ್ಮದ್ ಜಿಲಾನಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MP ಡಾ. ಸುಧಾಕರ್ ವಿರುದ್ಧ ಏನೂ ಮಾತನಾಡಲ್ಲ: ಪ್ರದೀಪ್
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Chintamani: ಹಳ್ಳಕ್ಕೆ ಬಿದ್ದು ಓಮ್ನಿ ಕಾರು ಸ್ಫೋಟ; ಒಬ್ಬ ಮೃತ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.