ಜೀವನದ ಆನಂದ ಅನುಭವಿಸಲು ದಾನ ಮಾಡಿ
Team Udayavani, May 21, 2019, 8:46 AM IST
ಗದಗ: ನಗರದ ಶ್ರೀ ವೀರಸೋಮೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿಯಿಂದ ನಿರ್ಮಿಸಿದ ಶ್ರೀ ಪವಾಡ ಆಂಜನೇಯ ಶಿಲಾಮೂರ್ತಿ ಪ್ರಾಣ ಪ್ರತಿಪಾuಪನೆ ಸಮಾರಂಭ ನಡೆಯಿತು.
ಗದಗ: ಹಣ ಮಾಡುವುದೇ ಬದುಕಿನ ಮೂಲ ಉದ್ದೇಶವಾಗಬಾರದು. ತಾನು ಸಂಪಾದನೆ ಮಾಡಿದ ಸಂಪತ್ತು ಕೇವಲ ಕುಟುಂಬ ನಿರ್ವಹಣೆ, ವೈಭವೋಪೇತ ಜೀವನ ಶೈಲಿಗೆ ಸೀಮಿತವಾಗದೇ ಅಲ್ಪಸ್ವಲ್ಪ ಹಣವಾದರೂ ದಾನ, ಧರ್ಮ ಕಾರ್ಯಗಳಿಗೆ ಸದ್ವಿನಿಯೋಗ ಆಗಬೇಕು ಎಂದು ಸೂಡಿ ಡಾ| ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಶ್ರೀಗಳು ಅಭಿಪ್ರಾಯಪಟ್ಟರು.
ನಗರದ ಶ್ರೀ ವೀರಸೋಮೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿಯಿಂದ ನಿರ್ಮಿಸಿದ ಶ್ರೀ ಪವಾಡ ಆಂಜನೇಯ ಶಿಲಾಮೂರ್ತಿ ಪ್ರಾಣ ಪ್ರತಿಪಾಪನೆ ನೆರವೇರಿಸಿ ಬಳಿಕ ಧರ್ಮಸಭೆಯಲ್ಲಿ ಅವರು ಮಾತನಾಡಿ, ಕೇವಲ ಹಣಕ್ಕಾಗಿ ಓದುವುದು, ಅದಕ್ಕಾಗಿಯೇ ದುಡಿಯುವುದರಲ್ಲಿ ಆನಂದವಿಲ್ಲ. ಇದರ ಜೊತೆಗೆ ದಾನ, ಧರ್ಮ ಮಾಡಬೇಕು. ನಿಸ್ವಾರ್ಥ ಸೇವೆಯಿಂದ ದೇವರ, ಸದ್ಗುರುವಿನ ಸನ್ನಿಧಿಯ ಸತ್ಸಂಗದಲ್ಲಿ ಜೀವನ ಮಾಡಬೇಕು. ಅಂದಾಗ ಜೀವನದ ಮೋಕ್ಷಕ್ಕೆ ದಾರಿ ಸಿಗುವುದು ಎಂದರು.
ಮಾನವ ಧರ್ಮವನ್ನು ಅರಿತು ನಾವು ಸಮಾಜದ ಸೇವೆ ಮಾಡಬೇಕು. ಸ್ವಾರ್ಥದಿಂದ ಜೀವನದ ಉದ್ದೇಶವನ್ನು ಮರೆಯಬಾರದು. ದಾನಗಳಲ್ಲಿ ಮೂರು ಪ್ರಕಾರಗಳು. ಅದರಲ್ಲಿ ನಿಸ್ವಾರ್ಥದಿಂದ ದೇವಸ್ಥಾನ ಕಟ್ಟಲು ಮಾಡಿದ ದಾನ ಶ್ರೇಷ್ಠವಾದದ್ದು ಎಂದರು.
ಮುಕ್ತಿಮಂದಿರದ ವಿಮಲರೇಣುಕ ಶಿವಾಚಾರ್ಯರು ಮಾತನಾಡಿ, ಉತ್ತಮ ವಿಚಾರದಿಂದ ಸಂವೇದನಶೀಲರಾಗುತ್ತೇವೆ. ಸಂವೇದನೆಯಿಂದ ಕೆಲಸವಾಗುತ್ತದೆ. ಅಂದಾಗ ನಮ್ಮ ಸ್ವಯಂ ಖುಷಿಯ ಜೊತೆಗೆ ಪರಿಸರದಲ್ಲಿ ಖುಷಿ ನಿರ್ಮಾಣವಾಗುತ್ತದೆ ಎಂದರು.
ಡಾ| ಜಯಶ್ರೀ ಹೊಸಮನಿ ಮಾತನಾಡಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ಎಸ್.ವೈ. ಚಿಕ್ಕಟ್ಟಿ, ಉಮೇಶ ನಾಲ್ವಾಡ, ಕೆ.ಎನ್. ಕಂಕಾಳೆ, ವಿ.ಬಿ. ಬಿಸನಳ್ಳಿ, ಶಂಭುಲಿಂಗ ಪಟ್ಟದಕಲ್ಲು, ಅಶೋಕ ಗೊಜನೂರ, ಮೃತ್ಯುಂಜಯ ಸಂಕೇಶ್ವರ ವೇದಿಕೆಯಲ್ಲಿದ್ದರು.
ಇದೇ ವೇಳೆ ಧಾರವಾಡದ ಪುರೋಹಿತ ಬಾಲದೀಕ್ಷಿತ ತಾಪಸು ಹಾಗೂ ದಾನಿಗಳಿಗೆ, ಶಿಲ್ಪಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಮತರ ಭರತ ನಾಟ್ಯ ಪ್ರದರ್ಶಿಸಿದಳು. ಮಹೇಶ ಕುಂದ್ರಾಳಹಿರೇಮಠ ಭಕ್ತಿಗೀತೆ ಪ್ರಸ್ತುತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.