ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಹೈಡ್ರಾಮ

ಪಕ್ಷದ ಅಭ್ಯರ್ಥಿಗಳಿಬ್ಬರು ನಾಮಪತ್ರ ವಾಪಸ್‌ ಪಡೆಯುತ್ತಿದ್ದಂತೆ ಭುಗಿಲೆದ್ದ ಆಕ್ರೋಶ • ಪೊಲೀಸರ ವಿರುದ್ಧ ಕಿಡಿ

Team Udayavani, May 21, 2019, 9:15 AM IST

KOPALA-TDY-1..

ಬಂಗಾರಪೇಟೆ ಪಟ್ಟಣದ ಪುರಸಭೆ ಕಚೇರಿ ಎದುರು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ನೇತೃತ್ವದಲ್ಲಿ ಚುನಾವಣಾಧಿಕಾರಿ ಚಂದ್ರಮರಕಲ ವಿರುದ್ಧ ತೀವ್ರ ವಾಗ್ಧಾಳಿಯೇ ನಡೆಸಿದರು.

ಬಂಗಾರಪೇಟೆ: ಪುರಸಭೆ ಚುನಾವಣೆ ನಾಮಪತ್ರ ವಾಪಸ್‌ ಪಡೆಯಲು ಕೊನೆ ದಿನವಾದ ಸೋಮವಾರ ಪಟ್ಟಣದ ಪುರಸಭೆ ಕಚೇರಿ ಮುಂದೆ ಬಿಜೆಪಿ ದೊಡ್ಡ ಹೈಡ್ರಾಮವೇ ನಡೆಸಿತು. ಒಳಗೆ ಯಾರನ್ನೂ ಬಿಡದೇ ಪೊಲೀಸ್‌ ಬಂದೋಬಸ್ತ್ ಮಾಡಿದ್ದರಿಂದ ಆಕ್ರೋಶಗೊಂಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟ ಮುನಿಯಪ್ಪ ಹಾಗೂ ಪೊಲೀಸರ ನಡುವೆ ವಾಗ್ಧಾದ ನಡೆಸಿದರು.

ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳನ್ನು ಮನವೊಲಿಸಿ ನಾಮಪತ್ರ ವಾಪಸ್‌ ಪಡೆಯಲು ರಣತಂತ್ರ ನಡೆಸಿದ್ದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಮುಖಂಡರು ಪುರಸಭೆ ಕಚೇರಿ ಎದುರು ಸೋಮವಾರ ಕಾದುಕುಳಿತ್ತಿದ್ದರು.

ನಾಮಪತ್ರ ವಾಪಸ್‌: ಪಟ್ಟಣದ ವಾರ್ಡ್‌ ನಂ 9ರಲ್ಲಿನ ಕುಂಬಾರಪಾಳ್ಯ ಹಾಗೂ ವಿವೇಕಾನಂದನಗರ ಪೂರ್ವ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳು ಬಿ ಫಾರಂ ನೀಡಿದ ಹಿರಿಯ ಮುಖಂಡರ ಗಮನಕ್ಕೆ ತರದೇ ನಾಮಪತ್ರಗಳನ್ನು ವಾಪಸ್‌ ಪಡೆದಿದ್ದರಿಂದ ರೊಚ್ಚಿಗೆದ್ದಿರುವ ಬಿಜೆಪಿ ಮುಖಂಡರು ಪುರಸಭೆ ಕಚೇರಿ ಎದುರು ಜಮಾಯಿಸಿದ್ದರು.

ಕ್ರಮಕ್ಕೆ ಆಕ್ರೋಶ: ಕಚೇರಿ ಮುಂದೆ ಸಬ್‌ಇನ್ಸ್‌ಪೆಕ್ಟರ್‌ ಮುರಳಿ ನೇತೃತ್ವದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಿ ಅಭ್ಯರ್ಥಿಗಳನ್ನು ಮಾತ್ರ ಕಚೇರಿ ಒಳಗಡೆ ಬಿಡುತ್ತಿದ್ದರು. ಸಾರ್ವಜನಿಕರು, ಪತ್ರಕರ್ತರನ್ನೂ ನಿಷೇಧ ಮಾಡಿದ್ದರು. ಸ್ಥಳಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟ ಮುನಿಯಪ್ಪ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮುಖಂಡರು ಆಗಮಿಸಿ ಪೊಲೀಸರ ಕ್ರಮವನ್ನು ಖಂಡಿಸಿದರು.

ಚುನಾವಣಾಧಿಕಾರಿ ವಿರುದ್ಧ ಕಿಡಿ: ಪುರಸಭೆ ಚುನಾವಣೆ ನಡೆದಾಗಿನಿಂದ ಇದುವರೆಗೂ ಪೊಲೀಸ್‌ ಬಂದೋಬಸ್ತ್ ಕಠಿಣಗೊಳಿಸಿಲ್ಲ. ನಾಮಪತ್ರಗಳನ್ನು ವಾಪಸ್‌ ಪಡೆಯುವ ದಿನದಂದು ಉದ್ದೇಶಪೂರ್ವಕವಾಗಿಯೇ ಕಚೇರಿ ಒಳಗಡೆ ಯಾರನ್ನೂ ಬಿಡದೇ ಚುನಾವಣಾಧಿಕಾರಿಗಳು ಕಾಂಗ್ರೆಸ್‌ ಪಕ್ಷದ ಏಜೆಂಟ್‌ಗಳಂತೆ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಯಾರಿಗೂ ಗೊತ್ತಿಲ್ಲದೇ ಕಚೇರಿಗೆ ಕರೆಯಿಸಿಕೊಂಡು ನಾಮಪತ್ರಗಳನ್ನು ಗೌಪ್ಯವಾಗಿ ವಾಪಸ್‌ ಪಡೆಯಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಆರೋಪಿಸಿದರು.

ಒಳ ಬಿಡದ್ದಕ್ಕೆ ಆಕ್ರೋಶ: ಪುರಸಭೆ ಕಚೇರಿ ಒಳಗೆ ಬಿಜೆಪಿ ಮುಖಂಡರನ್ನು ಬಿಡದೇ ಅಡ್ಡಗಟ್ಟಿ ನಿಲ್ಲಿಸಿದ್ದಕ್ಕೆ ತೀವ್ರವಾಗಿ ಕೋಪಗೊಂಡ ಬಿಜೆಪಿ ಮುಖಂಡರು ಪೊಲೀಸರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಸಿದರು. ಚುನಾವಣಾಧಿಕಾರಿಗಳು ಸೂಚನೆ ನೀಡಿರುವುದರಿಂದ ಬಂದೋಬಸ್ತ್ ನೀಡಲಾಗಿದೆ. ಚುನಾವಣಾಧಿಕಾರಿಗಳು ಹೇಳಿದರೆ ಬಿಡುವುದಾಗಿ ಸಬ್‌ಇನ್ಸ್‌ಪೆಕ್ಟರ್‌ ಹೇಳಿದಾಗ ಚುನಾವಣಾಧಿಕಾರಿಗಳನ್ನೇ ಕರೆಯಿಸಿ ಎಂದು ಗಲಾಟೆ ಮಾಡಿದರು.

ನಂತರ ಅಲ್ಲಿದ್ದ ಪೊಲೀಸರನ್ನು ಚುನಾವಣಾಧಿಕಾರಿಗಳನ್ನು ಕಚೇರಿಯಿಂದ ಹೊರಗೆ ಬಂದು ಬಿಜೆಪಿ ಮುಖಂಡರಿಗೆ ಸಮಜಾಯಿಷಿ ನೀಡುವಂತೆ ಹೇಳಿಕಳುಹಿಸಿದರು. ಆದರೆ, ಚುನಾವಣಾಧಿಕಾರಿಗಳು ಬರುವುದಿಲ್ಲ ಎಂದು ತಿಳಿಸಿದ್ದರಿಂದ ಬಿಜೆಪಿ ಮುಖಂಡರು ತೀವ್ರವಾಗಿ ಆಕ್ರೋಶಗೊಂಡು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಸ್ವತಃ ಸಬ್‌ ಇನ್ಸ್‌ಪೆಕ್ಟರ್‌ ಮುರಳಿ ಚುನಾವಣಾಧಿಕಾರಿಗಳಿಗೆ ಬಿಜೆಪಿ ಮುಖಂಡರ ಆಕ್ರೋಶವನ್ನು ತಿಳಿಸಿ ಕರೆದುಕೊಂಡು ಮಾತುಕತೆ ನಡೆಸಲು ಕರೆತಂದರು. 1ರಿಂದ 10ರವರೆಗಿನ ಚುನಾವಣಾಧಿಕಾರಿ ಚಂದ್ರಮರಕಲ ಅಗಮಿಸಿ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಅಭ್ಯರ್ಥಿಗಳು ಬರದೇ ಇದ್ದರೂ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನಾಮಪತ್ರ ವಾಪಸ್‌ ಪಡೆಯಲಾಗಿದೆ ಎಂದು ಬಿಜೆಪಿ ಮುಖಂಡರು ದೂರಿದಾಗ ಚುನಾವಣಾಧಿಕಾರಿಗಳೊಂದಿಗೆ ವಾಗ್ವಾ ದವೇ ನಡೆಯಿತು. ನಂತರ ಬಿಜೆಪಿ ಮುಖಂಡರನ್ನು ಸಮಾಧಾನಪಡಿಸಿದ ಜಿಲ್ಲಾಧ್ಯಕ್ಷ ಬಿ.ಪಿ. ವೆಂಕಟಮುನಿಯಪ್ಪ, ನಗರಾಧ್ಯಕ್ಷ ಶಶಿಕುಮಾರ್‌, ಜಿಪಂ ಸದಸ್ಯ ಬಿ.ವಿ.ಮಹೇಶ್‌ ಅವರನ್ನು ನಾಮ ಪತ್ರಗಳನ್ನು ವಾಪಸ್‌ ಪಡೆದಿರುವ ಬಗ್ಗೆ ದಾಖಲೆ ಪರಿಶೀಲನೆ ನಡೆಸಲು ಕಚೇರಿಗೆ ಕರೆದುಕೊಂಡು ಹೋದ ನಂತರ ಗಲಾಟೆ ತಹಬದಿಗೆ ಬಂತು. ಬಿಜೆಪಿ ತಾಲೂಕು ಅಧ್ಯಕ್ಷ ಎ.ಹನುಮಪ್ಪ, ನಗರಾಧ್ಯಕ್ಷ ಶಶಿಕು ಮಾರ್‌, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಹೊಸರಾಯಪ್ಪ, ಜಿಪಂ ಸದಸ್ಯ ಬಿ.ವಿ.ಮಹೇಶ್‌, ತಾಪಂ ಸದಸ್ಯ ಪಿ.ಅಮರೇಶ್‌, ಮುಖಂಡ ಮಾದ ಮಂಗಲ ಎಂ.ಪಿ.ಶ್ರೀನಿವಾಸಗೌಡ, ವೇಲುಮುರು ಗನ್‌, ನಾಗಪ್ರಕಾಶ್‌, ನಾರಾಯಣಸ್ವಾಮಿ ಇದ್ದರು.

ಕಾಂಗ್ರೆಸ್‌ನ ಮತ್ತೂಬ್ಬ ಅಭ್ಯರ್ಥಿ ರಾಕೇಶ್‌ಗೌಡ ಅವಿರೋಧ ಆಯ್ಕೆ:

ಬಂಗಾರಪೇಟೆ ವಾರ್ಡ್‌ ನಂ.6ರ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಿ.ಹೃದಯರಾಜ್‌ ನಾಮಪತ್ರ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ರಾಕೇಶ್‌ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರೊಂದಿಗೆ 27 ವಾರ್ಡ್‌ಗಳಲ್ಲಿ ಎರಡು ಕ್ಷೇತ್ರಗಳು ಅವಿರೋಧವಾಗಿ ಆಯ್ಕೆಯಾದಂತಾಗಿದೆ.

ಪುರಸಭೆಯ ವಾರ್ಡ್‌ ನಂ 6 ಸೇಟ್ಕಾಂಪೌಂಡ್‌-3ನೇ ವಾರ್ಡ್‌ ಬಿಸಿಎಂ ಬಿಗೆ ಮೀಸಲಿರಿಸಿದ್ದು, ಹೃದಯರಾಜ್‌ ಹಾಗೂ ರಾಕೇಶ್‌ಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ಗೆ ಅಭ್ಯರ್ಥಿಗಳ ಕೊರತೆಯಿಂದ ನಾಮಪತ್ರವೇ ಸಲ್ಲಿಸಿರಲಿಲ್ಲ. ಈ ಕ್ಷೇತ್ರದಲ್ಲಿ ಜಿ.ಹೃದಯರಾಜ್‌ಗೆ ಕಾಂಗ್ರೆಸ್‌ ಟಿಕೆಟ್ ನೀಡುವ ಬಗ್ಗೆ ಭರವಸೆ ನೀಡಲಾಗಿತ್ತು.

ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷರಾಗಿರುವ ಎಸ್‌.ರಾಕೇಶ್‌ಗೌಡರಿಗೆ ಟಿಕೆಟ್ ಅನ್ನು ಅಂತಿಮ ಕ್ಷಣದಲ್ಲಿ ನೀಡಲಾಗಿತ್ತು. ಇದರಿಂದ ಬೇಸತ್ತ ಜಿ.ಹೃದಯರಾಜ್‌ ಪಕ್ಷೇತರರಾಗಿ ಸ್ಪರ್ಧಿಸಿದ್ದರು.

ಪುರಸಭೆಯ ಸೇಟ್ಕಾಂಪೌಂಡ್‌-3 ವಾರ್ಡ್‌ ನಂ. 6ರಲ್ಲಿ ಕಾಂಗ್ರೆಸ್‌ ಟಿಕೆಟ್ ನೀಡುವ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು.

ಸಂಸದ ಕೆ.ಎಚ್.ಮುನಿಯಪ್ಪ ತಮ್ಮ ಹಿಂಬಾಲಕರಿಗೆ ಟಿಕೆಟ್ ನೀಡುವ ಭರವಸೆಯಲ್ಲಿ ಎಸ್‌.ರಾಕೇಶ್‌ಗೌಡರಿಗೆ ಟಿಕೆಟ್ ನೀಡುವಂತೆ ಸೂಚನೆ ನೀಡಿದ್ದರಿಂದ ಬೇಸತ್ತ ಸ್ಥಳೀಯ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ರಾಕೇಶ್‌ಗೌಡರ ವಿರುದ್ಧ ಮುನಿಸಿಕೊಂಡಿದ್ದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರನ್ನು ಸಮಾಧಾನ ಪಡಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಿ.ಹೃದಯರಾಜ್‌ ನಾಮಪತ್ರ ವಾಪಸ್‌ ಪಡೆದರು. ಪಕ್ಷದ ಅಭ್ಯರ್ಥಿ ರಾಕೇಶಗೌಡ ಅವಿರೋಧ ಆಯ್ಕೆ ಸುಗಮವಾಯಿತು.

ಟಾಪ್ ನ್ಯೂಸ್

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

Karnataka: ಅನರ್ಹರ ಕಾರ್ಡ್‌ ಮಾತ್ರ ಎಪಿಎಲ್‌ಗೆ: ಮುನಿಯಪ್ಪ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

Kolar: ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪೋಷಕರು ಪರಾರಿ

0528

Bangarapet: ಗ್ರಾಪಂಗಳಲ್ಲಿ ಇಲ್ಲ ಅಧಿಕಾರಿ-ಸಿಬ್ಬಂದಿ; ಸಮಸ್ಯೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

UTK

Speaker ಯು.ಟಿ.ಖಾದರ್‌ ವ್ಯಾಟಿಕನ್‌ ಸಿಟಿಗೆ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.