ಬಂಟ್ವಾಳದಲ್ಲಿ 3 ರೈತ ಸಂಪರ್ಕ ಕೇಂದ್ರ 2 ತಳಿಯ 135 ಕ್ವಿಂ. ಭತ್ತದ ಬೀಜ ಲಭ್ಯ
Team Udayavani, May 21, 2019, 10:50 AM IST
ಬಂಟ್ವಾಳ : ಪ್ರಮುಖ ಆಹಾರ ಬೆಳೆ ಎನಿಸಿಕೊಂಡಿರುವ ಭತ್ತದ ಬೆಳೆಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರವು ಬೆಳೆ ಗಾರರಿಗೆ ವಿವಿಧ ರೀತಿಯ ಪ್ರೋತ್ಸಾಹ ವನ್ನು ನೀಡುತ್ತಿದ್ದು, ಬೇಡಿಕೆ ಇರುವ ತಳಿಯ ಬೀಜವನ್ನು ಸಂಗ್ರಹಿಸಿ ಸಬ್ಸಿಡಿ ದರದಲ್ಲಿ ಕೃಷಿಕರಿಗೆ ನೀಡುತ್ತದೆ. ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 135 ಕ್ವಿಂಟಾಲ್ ಭತ್ತದ ಬೀಜ ವಿತರಣೆಗೆ ಸಿದ್ಧಗೊಂಡಿದೆ.
ತಾಲೂಕಿನಲ್ಲಿ ಒಟ್ಟು ಮೂರು ರೈತ ಸಂಪರ್ಕ ಕೇಂದ್ರಗಳಿದ್ದು, ರೈತರು ತಮ್ಮ ಜಮೀನಿನ ಕುರಿತು ಮಾಹಿತಿ ನೀಡಿ ಬೀಜ ಪಡೆಯಬಹುದಾಗಿದೆ. ಭತ್ತದ ಬೀಜವನ್ನು ಹೊರತು ಪಡಿಸಿದರೆ ಉಳಿದಂತೆ ಯಾವುದೇ ಬೀಜಕ್ಕೆ ಬೇಡಿಕೆ ಇಲ್ಲ ಎಂದು ಕೃಷಿ ಇಲಾಖೆ ಮಾಹಿತಿ ನೀಡುತ್ತದೆ. ಪ್ರಸ್ತುತ ಭತ್ತದ ಬೀಜ ದಾಸ್ತಾನಾಗಿದ್ದರೂ, ಬೆಳೆಗಾರರು ಮುಂಗಾರಿನ ಬಳಿಕವೇ ರೈತ ಸಂಪರ್ಕ ಕೇಂದ್ರದತ್ತ ಆಗಮಿಸಲಿದ್ದಾರೆ.
120 ಪ್ಲಸ್ 15 ಕ್ವಿಂಟಾಲ್
ಬಂಟ್ವಾಳ ತಾಲೂಕಿನ ಬಂಟ್ವಾಳ ಕಸ್ಬಾ, ಪಾಣೆಮಂಗಳೂರು ಹಾಗೂ ವಿಟ್ಲ ಹೋಬಳಿಗಳಲ್ಲಿರುವ ರೈತ ಸಂಪರ್ಕ ಕೇಂದ್ರ ಗಳಲ್ಲಿ ಭತ್ತದ ಬೀಜವನ್ನು ಸಂಗ್ರಹಿಸಿಟ್ಟುಕೊಳ್ಳಲಾ ಗಿದ್ದು, ತಾಲೂಕಿನಲ್ಲಿ ಒಟ್ಟು 2 ತಳಿಯ ಬೀಜ ಬೆಳೆಗಾರರಿಗೆ ಬಿತ್ತನೆಗೆ ಲಭ್ಯವಿದೆ.
ಅಂದರೆ 120 ಕ್ವಿಂಟಾಲ್ ಎಂಓ4 (ಭದ್ರಾ) ತಳಿ ಹಾಗೂ 15 ಕ್ವಿಂಟಾಲ್ ಬಿಳಿ ಜಯ ಸೇರಿ ತಾಲೂಕಿನಲ್ಲಿ ಒಟ್ಟು 135 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನಿರಿಸ ಲಾಗಿದೆ. ಅಂದರೆ ಕಳೆದ ವರ್ಷದ ಬೇಡಿಕೆ ಯನ್ನು ಗಮನಿಸಿ ಈ ಬಾರಿ ಬೀಜ ಸಂಗ್ರಹಿ ಸಲಾಗುತ್ತದೆ. ಬಂಟ್ವಾಳ ಕಸ್ಬಾ ಹಾಗೂ ಪಾಣೆಮಂಗಳೂರು ಸಂಪರ್ಕ ಕೇಂದ್ರದಲ್ಲಿ ತಲಾ 50 ಕ್ವಿ. ಎಂಓ4(ಭದ್ರಾ) ಹಾಗೂ ವಿಟ್ಲ ಕೇಂದ್ರದಲ್ಲಿ 20 ಕ್ವಿ. ಎಂಓ4(ಭದ್ರಾ) ದಾಸ್ತಾನಿದೆ.
ಒಟ್ಟು 15 ಕ್ವಿಂಟಾಲ್ ಬಿಳಿ ಜಯ ಭತ್ತದ ತಳಿಯಲ್ಲಿ ಬಂಟ್ವಾಳ ಕಸ್ಬಾದಲ್ಲಿ 10 ಕ್ವಿ. ಹಾಗೂ ಪಾಣೆಮಂಗಳೂರು ಕೇಂದ್ರದಲ್ಲಿ 5 ಕ್ವಿ. ಬೀಜ ಸಂಗ್ರಹಿಸಲಾಗಿದೆ. ವಿಟ್ಲದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಕೇವಲ ಎಂಓ4(ಭದ್ರಾ) ತಳಿ ಮಾತ್ರ ಇರುತ್ತದೆ. ಉಳಿದಂತೆ ಬೆಳೆಗಾರರೇ ತಮಗೆ ಬೇಕಾದ ಭತ್ತದ ಬೀಜ ತಯಾರಿಸುತ್ತಾರೆ. ಜತೆಗೆ ಪರಸ್ಪರ ಹಂಚಿಕೊಳ್ಳುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಟಾರ್ಗೆಟ್ ಹೀಗಿದೆ
ದ.ಕ. ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಬಂಟ್ವಾಳ ತಾಲೂಕಿಗೆ ಭತ್ತದ ಬೇಸಾಯದ ಕುರಿತು ಹೆಚ್ಚಿನ ಗುರಿ ನೀಡಲಾಗಿದ್ದು, ಮುಂಗಾರಿಗೆ 5,000 ಹೆಕ್ಟೇರ್, ಹಿಂಗಾರಿಗೆ 1,500 ಹೆಕ್ಟೇರ್ ಹಾಗೂ ಬೇಸಗೆಯ ಬೆಳೆಗೆ 450 ಹೆಕ್ಟೇರ್ ಟಾರ್ಗೆಟ್ ನೀಡಲಾಗಿದೆ. ಹೀಗಾಗಿ ತಾಲೂಕಿನಲ್ಲಿ ಹೆಚ್ಚಿನ ಭತ್ತದ ಬೀಜವನ್ನು ಸಂಗ್ರಹ ಮಾಡಿಟ್ಟುಕೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
5 ಸಾವಿರ ಹೆಕ್ಟೇರ್ ಗುರಿ
– ಕೆ. ನಾರಾಯಣ ಶೆಟ್ಟಿ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.