![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 21, 2019, 2:56 PM IST
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದಾರೆ. ಮರವೇರಿ ಮಾವಿನ ಹಣ್ಣುಗಳನ್ನು ಕಿತ್ತಿರುವ ವಿಡಿಯೋ ವೈರಲ್ ಆಗಿದೆ.
ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಜನಾರ್ದನ ರೆಡ್ಡಿ ಹೀಗೆ ಬರೆದಿದ್ದಾರೆ.
ನೆನಪಿಗೆ ಬಂದ ಆ ಬಾಲ್ಯದ ದಿನಗಳು …..
‘ನಿನ್ನೆ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶದಲ್ಲಿರುವ ನಮ್ಮ ಮಾವನವರ ಊರಿಗೆ ತೆರಳಿದ್ದೆ . ಅದೇ ಸಮಯದಲ್ಲಿ ನಮ್ಮ ಮಾವನವರ ತೋಟಕ್ಕೆ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾ ಜೊತೆಗೆ ಭೇಟಿ ಕೊಟ್ಟಿದ್ದೆ .
ತೋಟದಲ್ಲಿ 27 ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡಗಳು ಹೆಮ್ಮರವಾಗಿ ಬೆಳೆದು ಮಾವಿನ ಹಣ್ಣುಗಳಿಂದ ತುಂಬಿಕೊಂಡ ದೃಶ್ಯ ಮನ ಸೆಳೆಯಿತು. ಕೂಡಲೇ ನಾನೇ ಮರವನ್ನು ಹತ್ತಿ ಮಾವಿನ ಹಣ್ಣನ್ನು ಕಿತ್ತು ನನ್ನ ಶ್ರೀಮತಿಗೆ ನೀಡಿದೆ.
ಮರವೇರಿ ಇಳಿದ ತಕ್ಷಣ ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಸೇರಿ ಮರವೇರಿ ಆಡುತ್ತಿದ್ದ ಆಟಗಳು…, ಜೊತೆಯಲ್ಲಿದ್ದ ಸ್ನೇಹಿತರೆಲ್ಲಾ ನೆನಪಿಗೆ ಬಂದರು .’
– ಗಾಲಿ ಜನಾರ್ದನ ರೆಡ್ಡಿ
You seem to have an Ad Blocker on.
To continue reading, please turn it off or whitelist Udayavani.