![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 22, 2019, 1:23 PM IST
ಕುಷ್ಟಗಿ: ಸರ್ಕಾರಿ ಪಪೂ ಕಾಲೇಜಿನ ಗ್ರಂಥಾಲಯ ಕಟ್ಟಡದಲ್ಲಿ ಪಠ್ಯ ಪುಸ್ತಕಗಳನ್ನು ದಾಸ್ತಾನು ಮಾಡಿರುವುದು.
ಕುಷ್ಟಗಿ: ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಶೇ. 60ರಷ್ಟು ಪಠ್ಯಪುಸ್ತಕ ಪೂರೈಸಿದ್ದು, ಉಳಿದ ಶೇ. 40ರಷ್ಟು ಪಠ್ಯಪುಸ್ತಕಗಳ ಕೊರತೆಯ ನಡುವೆಯೂ ಆಯಾ ಕ್ಲಸ್ಟರ್‌ಗಳ ಮೂಲಕ ಮೇ 29ರೊಳಗೆ ತಾಲೂಕಿನ ಶಾಲೆಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 3.66 ಲಕ್ಷ ಪಠ್ಯ ಪುಸ್ತಕಗಳ ಬೇಡಿಕೆಯಲ್ಲಿ 2.50 ಲಕ್ಷ ಪುಸ್ತಕಗಳು ಬಂದಿವೆ. ಬಂದಿರುವ ಪುಸ್ತಕಗಳನ್ನು ಆಯಾ ಕ್ಲಸ್ಟರ್‌ಗಳ ಮೂಲಕ ಶಾಲೆಗಳಿಗೆ ಮೇ 29ರೊಳಗೆ ತಲುಪಿಸುವ ಕಟ್ಟುನಿಟ್ಟಿನ ಆದೇಶವಿದೆ. ಹೀಗಾಗಿ ಶೇ. 60ರಷ್ಟು ಪೂರೈಕೆಯಾಗಿರುವ ಪಠ್ಯಪುಸ್ತಕಗಳನ್ನು ಪೂರೈಸಬೇಕೋ, ಉಳಿದ ಶೇ. 40ರಷ್ಟು ಪಠ್ಯಪುಸ್ತಕಗಳು ಬಂದ ಮೇಲೆ ಪೂರೈಸಬೇಕೋ ಎನ್ನುವ ಗೊಂದಲ ಸೃಷ್ಟಿಯಾಗಿದೆ. ಸದ್ಯ ಪಠ್ಯಪುಸ್ತಕಗಳ ಕೊರತೆಯಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವ ಸಂಭವವಿದೆ. ಈ ಕುರಿತು ಶಿಕ್ಷಣ ಸಂಯೋಜಕ ಸೋಮಶೇಖರಗೌಡ ಪಾಟೀಲ ಪ್ರತಿಕ್ರಿಯಿಸಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೊರತೆಯಲ್ಲಿರುವ ಪುಸ್ತಕಗಳನ್ನು ಒತ್ತಡ ಹೇರಿ ತರಿಸಿಕೊಂಡು ಒಟ್ಟಿಗೆ ಆಯಾ ಕ್ಲಸ್ಟರ್ ಗಳಿಗೆ ತಲುಪಿಸಲಾಗುವುದು. ಈ ನಿಟ್ಟಿನಲ್ಲಿ ಬಿಇಒ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಿದ್ದೇವೆ. ಕನ್ನಡ, ಇಂಗ್ಲಿಷ್, ಉರ್ದು ಮಾಧ್ಯಮದಲ್ಲಿ ಒಟ್ಟು 209 ಶೀರ್ಷಿಕೆಯ ಪುಸ್ತಕಗಳಿದ್ದು ಬೇಡಿಕೆಯಾನುಸಾರ ಪೂರೈಸಿದರೆ, ಒಟ್ಟಿಗೆ ಆಯಾ ಶಾಲೆಗಳಿಗೆ ನಿಗದಿತ ವೇಳೆಯಲ್ಲಿ ತಲುಪಿಸಲು ಸಾಧ್ಯವಿದೆ. ಸದ್ಯ ಶೇ. 40ರಷ್ಟು ಪುಸ್ತಕ ಬಂದಿಲ್ಲ, ಬಂದಿರುದ ಶೇ. 60ರಷ್ಟು ಮಾತ್ರ ಪುಸ್ತಕಗಳನ್ನು ಪೂರೈಸಿದರೆ ಸಾಗಾಣಿಕಾ ವೆಚ್ಚ ಹೆಚ್ಚುವರಿಯಾಗುತ್ತಿದೆ ಎಂದರು.
ದಾಸ್ತಾನು ಕಟ್ಟಡಗಳಿಲ್ಲ: ಸ್ಥಳೀಯ ಸಾರ್ವಜನಿಕ ಶಿಕ್ಷಣ ಇಲಾಖೆ ಪಠ್ಯ ಪುಸ್ತಕ, ಸಮವಸ್ತ್ರಗಳ ದಾಸ್ತಾನಿಗೆ ಸ್ವಂತ ಕಟ್ಟಡಗಳಿಲ್ಲದಿರುವ ಹಿನ್ನೆಲೆಯಲ್ಲಿ ಇತರೇ ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಪ್ರತಿ ವರ್ಷ ಸ್ಥಳೀಯ ಗುರುಭವನದಲ್ಲಿ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ದಾಸ್ತಾನ ಮಾಡುತ್ತಿತ್ತು. ಆದರೆ ಸದರಿ ಕಟ್ಟಡ ಶಿಥಿಲಾವಸ್ಥೆಯಾಗಿರುವ ಹಿನ್ನೆಲೆಯಲ್ಲಿ ಸಿಆರ್‌ಪಿ ಕೊಠಡಿ ಹಾಗೂ ಸರ್ಕಾರಿ ಪಪೂ ಕಾಲೇಜಿನ ಹೊಸ ಗ್ರಂಥಾಲಯದ ಕಟ್ಟಡವನ್ನು ಸದ್ಯಕ್ಕೆ ಬಳಸಿಕೊಳ್ಳಲಾಗಿದೆ. ಪ್ರತಿ ವರ್ಷವೂ ಈ ಸಮಸ್ಯೆ ಎದುರಿಸುವಂತಾಗಿದ್ದು, ದಾಸ್ತಾನಿಗೆ ಪ್ರತ್ಯೇಕ ಕಟ್ಟಡ ಭಾಗ್ಯ ಇಲ್ಲದಂತಾಗಿದೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.