ಆಯುಷ್ ಗ್ರಾಮ ಅಭಿಯಾನ ಸ್ವಚ್ಛ , ಸ್ವಸ್ಥ ಗ್ರಾಮ ನಿರ್ಮಾಣಕ್ಕೆ ಪೂರಕ’
Team Udayavani, May 23, 2019, 6:00 AM IST
ಮುಡಿಪು: ಬಂಟ್ವಾಳ ತಾಲೂಕಿನ ಬಾಳೆಪುಣಿ, ಕೈರಂಗಳ ಗ್ರಾಮ ಗಳಲ್ಲಿ ಆರಂಭವಾದ ಆಯುಷ್ ಗ್ರಾಮ ಅಭಿಯಾನವು ಸ್ವಚ್ಛ , ಸ್ವಸ್ಥ ಗ್ರಾಮ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಉದ್ಯಮಿ ರಮೇಶ್ ಶೇಣವ ಅಭಿಪ್ರಾಯಪಟ್ಟರು.
ಮುಡಿಪು ನವಚೇತನ ಜೀವ ಶಿಕ್ಷಣ ಕೇಂದ್ರದಲ್ಲಿ ನಡೆದ ಆಯುಷ್ ಗ್ರಾಮ ಆರೋಗ್ಯ ಅಭಿಯಾನ ಕುರಿತ ಸಂವಾದ ವನ್ನು ಸೋಲಾರ್ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಅಭಿಯಾನದ ಮೂಲಕ ಆಯುಷ್ ಔಷಧ ಪದ್ಧತಿಗಳನ್ನು ಮನೆ ಮನೆಗೆ ಪರಿ ಚಯಿಸುವ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಜಿಲ್ಲಾ ಆಯುಷ್ ಇಲಾಖೆ, ಫಾದರ್ ಮುಲ್ಲರ್ ಹೋಮಿಯೋಪತಿ ಮಹಾ ವಿದ್ಯಾಲಯ, ಗ್ರಾಮ ಪಂಚಾಯತ್, ಆಯುಷ್ ಫೌಂಡೇಶನ್, ಸ್ಥಳೀಯ ಸಂಘ ಸಂಸ್ಥೆ ಗಳು ಹಾಗೂ ಸಮುದಾಯದ ಸಹ ಭಾಗಿತ್ವದಲ್ಲಿ ನಡೆಯುವ ಆಯುಷ್ ಗ್ರಾಮ ಅಭಿಯಾನದ ಪರಿಕಲ್ಪನೆ, ಧೇಯೋದ್ದೇಶಗಳ ಬಗ್ಗೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿ ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಜನವಸತಿ ಪ್ರದೇಶಗಳಲ್ಲಿ ಪ್ರಥಮ ಹಂತದಲ್ಲೇ ಅಭಿಯಾನ ಸಮೀಕ್ಷೆ ಮತ್ತು ಆಯುಷ್ ಶಿಬಿರಗಳನ್ನು ಹಮ್ಮಿಕೊಳ್ಳುವುದು ಸೂಕ್ತವೆಂದು ಜಿ.ಪಂ. ಸದಸ್ಯೆ ಮಮತಾ ಗಟ್ಟಿ ಸಲಹೆ ನೀಡಿದರು.
ಈ ಅಭಿಯಾನವು ಒಂದು ಉತ್ತಮ ಪರಿಕಲ್ಪನೆಯಾಗಿದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ಆಯುಷ್ ಇಲಾಖೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದೆಂದು ಮಂಗಳೂರು ತಾಲೂಕು ಆಯುಷ್ ಅಧಿಕಾರಿ ಡಾ|ಸಹನಾ ತಿಳಿಸಿದರು.
ಘನ ತ್ಯಾಜ್ಯಗಳನ್ನು ಸಂಪನ್ಮೂಲವಾಗಿ ಪರಿವರ್ತಿಸುವ ತ್ಯಾಜ್ಯ ನಿರ್ವಹಣಾ ಘಟಕವನ್ನು ಬಾಳೆಪುಣಿಯಲ್ಲಿ ಸ್ಥಾಪಿಸಿ ಬಾಳೆಪುಣಿ, ಕೈರಂಗಳವನ್ನು ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದೆಂದು ಪಿ.ಡಿ.ಓ ಸುನೀಲ್ ತಿಳಿಸಿದರು.
ಫಾದರ್ ಮುಲ್ಲರ್ ಹೋಮಿಯೋಪತಿ ಮಹಾವಿದ್ಯಾಲಯ ವತಿಯಿಂದ ನಡೆ ಸಲಾಗುವ ಸರ್ವ ಕುಟುಂಬ ಆರೋಗ್ಯ ಸ್ಥಿತಿಗತಿ ಅಧ್ಯಯನ ಸಮೀಕ್ಷಾ ಕಾರ್ಯವನ್ನು ನವಗ್ರಾಮ, ಗರಡಿಪಳ್ಳ,ದುರ್ಗಾಲಾಪು, ಬಂಗಾರುಗುಡ್ಡೆ ಜನ ವಸತಿ ಪ್ರದೇಶದಲ್ಲಿ ಏಕ ಕಾಲದಲ್ಲಿ ನಡೆಸುವುದು, ಸಮೀಕ್ಷೆಯ ನಂತರ ಎಲ್ಲ ಜನವಸತಿ ಪ್ರದೇಶಗಳಲ್ಲಿ ಉಚಿತ ಆಯುಷ್ ಆರೋಗ್ಯ ಶಿಬಿರ ಹಾಗೂ ಆಯುಷ್ ಆರೋಗ್ಯ ಅರಿವು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೆಂದು ತೀರ್ಮಾನಿಸಲಾಯಿತು.
ಕಿರಿಯ ಆರೋಗ್ಯ ಸಹಾಯಕ ಸಂದೀಪ್,ಪತ್ರಕರ್ತ ಗುರುವಪ್ಪ ಬಾಳೆಪುಣಿ, ಪ್ರೇರಕಿ ಜಯಾ,ಒಡಿಯೂರು ಸೇವಾ ಸಂಸ್ಥೆಯ ಸೇವಾ ದೀಕ್ಷಿತೆ ಶಶಿಪ್ರಭಾ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ಹಜೀಜ್,ಜಾಗೃತಿ ವೇದಿಕೆಯ ಸೆಮೀಮಾ, ಘನ ತ್ಯಾಜ್ಯ ನಿರ್ವಾಹಕ ಇಸ್ಮಾಯಿಲ್, ಆಶಾ ಕಾರ್ಯಕರ್ತೆ, ಜನ ಶಿಕ್ಷಣ ಟ್ರಸ್ಟ್‌ನಸಮಾಜ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಸಲಹೆ, ಸೂಚನೆಗಳನ್ನು ನೀಡಿದರು.ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕರು ಕೃಷ್ಣ ಮೂಲ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಂಚಾಯತ್ ಸಿಬಂದಿ ಸದಾನಂದ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.