ಜಾರಿ ಬೀಳುತ್ತಿವೆ ಕಾರು,ರಿಕ್ಷಾ,ಸ್ಕೂಟರ್ ಗಳು
ತ್ಯಾಜ್ಯ ನೀರು ಸುರಿದು ಅಪಾಯಕಾರಿಯಾದ ರಸ್ತೆ
Team Udayavani, May 23, 2019, 6:05 AM IST
ವಾಮಂಜೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಮೀಪದ ರಸ್ತೆಯಲ್ಲಿ ಕಸ ಸಾಗಿಸುವ ವಾಹನಗಳ ತ್ಯಾಜ್ಯ ನೀರು ರಸ್ತೆಗೆ ಸುರಿಸುತ್ತಿರುವುದರಿಂದ ವಾಹನ ಸಂಚಾರ ಸಂಚಕಾರವಾಗಿದೆ. ಮುಖ್ಯವಾಗಿ ದ್ವಿಚಕ್ರ ವಾಹನಗಳು ಜಾರಿ ಬೀಳುವ ಅಪಾಯವಿದೆ.
ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಾಹನಗಳಲ್ಲಿ ತಂದು ಕಸವನ್ನು ಸುರಿಯಲಾಗುತ್ತಿದೆ. ಈ ವಾಹನಗಳು ತೆರೆದ ಸ್ಥಿತಿ ಯಲ್ಲಿದ್ದು, ಇದರಿಂದ ವಾಸನೆ ಎಲ್ಲೆಡೆ ವ್ಯಾಪಿಸುತ್ತದೆ. ಅಲ್ಲದೆ ಹಸಿ ಕಸಗಳ ವಾಸನೆ ಮಿಶ್ರಿತ ನೀರು ರಸ್ತೆಗೆ ಸುರಿಯು ತ್ತಿರುವುದರಿಂದ ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾ ರರು ಜಾರಿ ಬೀಳುತ್ತಿದ್ದಾರೆ. ರಸ್ತೆಯಲ್ಲಿ ತ್ಯಾಜ್ಯ ನೀರು ಸುರಿದು ಕಪ್ಪು ಬಣ್ಣದ ಪದರ ನಿರ್ಮಾಣವಾಗಿದೆ. ಇದಕ್ಕೆ ನೀರು ಸೇರಿದರೆ ಇದು ಇನ್ನಷ್ಟು ಅಂಟಂಟಾಗಿ ವಾಹನಗಳು ಜಾರು ತ್ತಿವೆ.
ಕಾರು, ರಿಕ್ಷಾದಂತಹ ವಾಹನಗಳು ವೇಗವಾಗಿ ಬರುವಾಗ ಜಾರುವ ಅನೇಕ ಘಟನೆಗಳು ಈಗಾಗಲೇ ನಡೆದಿವೆ. ಬೈಕ್, ಸ್ಕೂಟರ್ ಗಳು ಪಲ್ಟಿ ಹೊಡೆಯುತ್ತಿವೆ. ಹೀಗಾಗಿ ಇಲ್ಲಿ ಅತ್ಯಂತ ಜಾಗರೂಕತೆಯಿಂದ ನಿಧಾನವಾಗಿ ಚಲಿಸಬೇಕಾ ಗುತ್ತದೆ. ರಸ್ತೆ ಅಗಲವಾಗಿದೆ ಎಂದು ವೇಗವಾಗಿ ಹೋದರೆ ಅಪಾಯ ಗ್ಯಾರಂಟಿ.
ಕಸ ಸಾಗಿಸುವ ವಾಹನಗಳು ತೆರೆದ ಸ್ಥಿತಿ ಯಲ್ಲಿ ಕಸ ಸಾಗಿಸುವುದರಿಂದಲೇ ಅದರ ತ್ಯಾಜ್ಯದ ನೀರು ರಸ್ತೆಗೆ ಸುರಿಯುತ್ತದೆ. ಅಲ್ಲದೆ ವಾಹನಗಳಲ್ಲಿರುವ ಕೊಳೆತ ಕಸ ದಿಂದ ಕೆಟ್ಟ ವಾಸನೆಯೂ ಬೀರುತ್ತದೆ. ಹೀಗಾಗಿ ಕಸ ಸಾಗಾಟದ ವಾಹನ ಮಾಲಕರಿಗೆ ಎಚ್ಚರಿಕೆ ನೀಡಿ ಕ್ರಮ ಕೈ ಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಹೊಗೆಯಾಡುತ್ತಲೇ ಇದೆ ಡಂಪಿಂಗ್ ಯಾರ್ಡ್
ಸದ್ಯಕ್ಕೆ ಡಂಪಿಂಗ್ ಯಾರ್ಡ್‌ನಲ್ಲಿ ಹೊತ್ತಿಕೊಂಡ ಬೆಂಕಿ ಹತೋಟಿಗೆ ಬಂದಿದ್ದರೂ ಹೊಗೆ ಮಾತ್ರ ಇನ್ನೂ ಇದೆ. ಕಸದ ಮೇಲೆ ಮಣ್ಣು ಸುರಿದಿರುವುದರಿಂದ ಒಳಗಡೆ ರಾಸಾಯನಿಕ ಸಂಯೋಜನೆಗೊಂಡು ಮಣ್ಣಿನ ಮೇಲಿಂದ ಹೊಗೆ ಬರುತ್ತಿರುವುದು ನಿಂತಿಲ್ಲ. ರಾತ್ರಿ ವೇಳೆ ಇದರ ತೀವ್ರತೆ ಹೆಚ್ಚಾಗಿರುತ್ತದೆ. ಮಂಗಳವಾರ ರಾತ್ರಿಯೂ ಹೊಗೆ ಜಾಸ್ತಿ ಇತ್ತು ಎನ್ನುತ್ತಾರೆ ಸ್ಥಳೀಯರು.
ಮಳೆ ಸುರಿದರೆ ಸಮಸ್ಯೆ
ಮತ್ತಷ್ಟು ಹೆಚ್ಚಳ
ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಅಂಟಿದ ತ್ಯಾಜ್ಯಕ್ಕೆ ಸೇರುವುದರಿಂದ ಇದು ಇನ್ನು ಅಪಾಯಕಾರಿಯಾಗಿದೆ. ಮೊದಲೇ ತ್ಯಾಜ್ಯ ನೀರು ಬಿದ್ದು ಅಂಟಾಗಿರುವ ರಸ್ತೆಯಲ್ಲಿ ತ್ಯಾಜ್ಯದ ನೀರು ಮತ್ತಷ್ಟು ಸ್ಥಳಕ್ಕೆ ವ್ಯಾಪಿಸಿಕೊಳ್ಳುತ್ತದೆ. ಇದ ರಿಂದ ಸಮಸ್ಯೆ ಮತ್ಥಷ್ಟು ಹೆಚ್ಚಳವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.