ಇಂದು ಬೆಳಗ್ಗೆ 7ರಿಂದ ಎಣಿಕೆ ಪ್ರಕ್ರಿಯೆ ಪ್ರಾರಂಭ
ಮತದಾರರ ಚಿತ್ತ ಎನ್‌ಐಟಿಕೆಯ ಮತ ಎಣಿಕೆ ಕೇಂದ್ರದತ್ತ ;ಎಲ್ಲೆಡೆ ಬಿಗಿ ಬಂದೋಬಸ್ತ್
Team Udayavani, May 23, 2019, 6:00 AM IST
ಸುರತ್ಕಲ್: ಎನ್‌ಐಟಿಕೆ ಮತ ಎಣಿಕೆ ಕೇಂದ್ರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಿರುವುದು.
ಮಹಾನಗರ/ಸುರತ್ಕಲ್: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಕೈಗೊಂಡಿದ್ದು, ಗುರುವಾರ ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.ಆ ಮೂಲಕ,ಬಹುದಿನಗಳ ನಿರೀಕ್ಷೆ-ಕುತೂಹಲಕ್ಕೆ ತೆರೆ ಬೀಳಲಿದೆ.
ಸುರತ್ಕಲ್ ಎನ್‌ಐಟಿಕೆ ಮತ ಎಣಿಕೆ ಕೇಂದ್ರದ ಸುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಬುಧವಾರ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಪರೀಕ್ಷೆಗೆ ಒಳಪಡಿಸಲಾಯಿತು. ಶ್ವಾನದಳ ತಂಡವು ಮತ ಎಣಿಕೆ ಕೇಂದ್ರದ ಸುತ್ತ ಪರೀಕ್ಷೆ ನಡೆಸಿತು. ಮತ ಎಣಿಕೆ ಕೇಂದ್ರಕ್ಕೆ ಹೋಗುವ ಪ್ರತೀ ಗೇಟ್‌ನಲ್ಲೂ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾರ್ಗದರ್ಶನ ನೀಡಿದರು. ಸರ್ವಿಸ್ ರಸ್ತೆಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್, ಜನರು ಗುಂಪು ಗೂಡದಂತೆ ಬ್ಯಾರಿಕೇಡ್ ಅಳವಡಿಸ ಲಾಗಿದೆ. ಕಾಲೇಜಿನ ವಿದ್ಯಾರ್ಥಿ ಗಳಿಗೆ ರಜೆ ಸಾರಲಾಗಿದ್ದು, ಎನ್‌ಐಟಿಕೆ ಮುಂಭಾಗದ ಅಂಗಡಿಗಳನ್ನು ಮುಚ್ಚಲಾಗಿದೆ.
ಸಿಆರ್‌ಪಿಎಫ್ ತುಕಡಿ ಸಹಿತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಮತ ಎಣಿಕೆ ಕೇಂದ್ರದ ಭಾಗಕ್ಕೆ ಬರುವವರಿಗೆ ಸರಕಾರಿ ಅಧಿಕೃತ ಗುರುತು ಪತ್ರ ನೀಡಲಾಗಿದ್ದು, ಇತರರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮತ ಎಣಿಕೆ ಕೇಂದ್ರಗಳಿಗೆ ಗರಿಷ್ಠ ಭದ್ರತೆ ನೀಡುವ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರದಲ್ಲಿಯೂ ಅಮೂಲಾಗ್ರ ಬದಲಾವಣೆ ಮಾಡಲಾಗಿದೆ. ಹೆದ್ದಾರಿ ಯಲ್ಲಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಪೊಲೀಸ್, ಚುನಾವಣಾಧಿಕಾರಿಗಳು, ಅತ್ಯಾವಶ್ಯಕ (ತುರ್ತು) ಸೇವೆಗಳ ವಾಹನಗಳು ಮತ್ತು ಅಧಿಕೃತ ಪಾಸ್ ಹೊಂದಿರುವ ವಾಹನಗಳಿಗೆ, ಕೌಂಟಿಂಗ್ ಸ್ಟಾಫ್, ಕೌಂಟಿಂಗ್ ಏಜೆನ್ಸಿ, ಮೀಡಿಯಾ ಮತ್ತು ಅಭ್ಯರ್ಥಿಗಳ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಮಂಗಳೂರಿನಿಂದ ಮತ ಎಣಿಕಾ ಕೇಂದ್ರಕ್ಕೆ ಬರುವ ವಾಹನಗಳನ್ನು ತಡಂಬೈಲ್ ಸಮೀಪ , ಉಡುಪಿ ಕಡೆಯಿಂದ ಆಗಮಿಸುವ ವಾಹನಗಳನ್ನು ಚೇಳಾçರು ಕ್ರಾಸ್ ಬಳಿ ತಪಾಸಣೆ ನಡೆಸಿ ಅಧಿಕೃತ ಪಾಸ್ ಹೊಂದಿದ್ದಲ್ಲಿ ಮಾತ್ರ ಮುಂದಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ.
ಬೆಳಗ್ಗೆ 7 ಗಂಟೆಗೆ ಮತಯಂತ್ರಗಳನ್ನು ಇರಿಸಿರುವ ಎನ್‌ಐಟಿಕೆಯ ಸ್ಟ್ರಾಂಗ್ ರೂಂಗಳನ್ನು ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು, ಎಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಗುವುದು. ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಆರಂಭ ಗೊಳ್ಳಲಿದೆ. ಮತ ಎಣಿಕೆ ಬಗ್ಗೆ ಸಾರ್ವಜ
ನಿಕರಿಗೆ ಮಾಹಿತಿ ನೀಡಲು ಧ್ವನಿವರ್ಧಕ ಗಳನ್ನು ಅಳವಡಿಸಲಾಗಿದೆ.
ಇಂದು ಸಂಚಾರದಲ್ಲಿ ವ್ಯತ್ಯಯ
ಮತ ಎಣಿಕೆ ಕೇಂದ್ರದ ಸಮೀಪ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಹೆವಿ ವೆಹಿಕಲ್‌ಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಉಡುಪಿಯಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಉಡುಪಿಗೆ ಮೂಲ್ಕಿ ಮುಖೇನ ಬರುವ ಬಸ್‌ಗಳ ಸಂಚಾರ ಎಂದಿನಂತೆ ಮುಂದುವರಿಯಲಿದ್ದು, ಬಸ್‌ಗಳಿಗೆ ಎನ್‌ಐಟಿಕೆಯಲ್ಲಿ ನಿಲುಗಡೆ ಮಾತ್ರ ಇರುವುದಿಲ್ಲ.
ಮಂಗಳೂರಿನಿಂದ ಉಡುಪಿಗೆ
ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲ ತರಹದ ಹೆವಿ ಗೂಡ್ಸ್ ವಾಹನಗಳು ಕೆಪಿಟಿ ಮುಖೇನ ಮಾರ್ಗ ಬದಲಾವಣೆ ಮಾಡಿ ಕಾವೂರು ಜಂಕ್ಷನ್-ಬಜಪೆ-ಕಟೀಲು-ಮೂರು ಕಾವೇರಿ-ಕಿನ್ನಿಗೋಳಿ- ಮೂಲ್ಕಿಯಾಗಿ ಉಡುಪಿ ಕಡೆಗೆ ಸಂಚರಿಸಲಿದೆ.
ಜತೆಗೆ, ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲ ತರಹದ ಹೆವಿ ಗೂಡ್ಸ್ ವಾಹನಗಳು ಕೂಳೂರು ಮುಖೇನವೂ ಮಾರ್ಗ ಬದಲಾವಣೆ ಮಾಡಿ ಕಾವೂರು ಜಂಕ್ಷನ್- ಬಜಪೆ- ಕಟೀಲು- ಮೂರು ಕಾವೇರಿ- ಕಿನ್ನಿಗೋಳಿ- ಮೂಲ್ಕಿಯಾಗಿ ಉಡುಪಿ ಕಡೆಗೆ ಸಂಚರಿಸಬಹುದು. ಸುರತ್ಕಲ್‌ನಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲ ಲಘು ವಾಹನಗಳು (ಕಾರು ಇತ್ಯಾದಿ) ಎಂಆರ್‌ಪಿಎಲ್-ಕಾನಾ- ಬಜಪೆ- ಮೂರು ಕಾವೇರಿ- ಕಿನ್ನಿಗೋಳಿ- ಮೂಲ್ಕಿಯಾಗಿ ಸಂಚರಿಸಬೇಕು.
ಉಡುಪಿಯಿಂದ ಮಂಗಳೂರಿಗೆ
ಉಡುಪಿಯಿಂದ ಮಂಗಳೂರು ಕಡೆಗೆ ಬರುವ ಲಘು ವಾಹನ ಮತ್ತು ದ್ವಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿ ಚೇಳಾÂರು ಕ್ರಾಸ್‌ನಿಂದ ಎಡಕ್ಕೆ ಬಂದು ಮಧ್ಯ ವೃತ್ತದ ಮುಖೇನ ಮುಂಚೂರು ಕ್ರಾಸ್‌ನಲ್ಲಿ ಹೆದ್ದಾರಿಗೆ ಸೇರಬೇಕು. ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ದ್ವಿಚಕ್ರ ಹಾಗೂ ಲಘು ವಾಹನಗಳು ತಡಂಬೈಲ್ ಕ್ರಾಸ್ ಸದಾಶಿವ ದೇವಸ್ಥಾನ ದ್ವಾರದ ಮೂಲಕ ಎನ್‌ಐಟಿಕೆ ಲೈಟ್‌ಹೌಸ್- ರೆಡ್‌ರಾಕ್ ಕ್ರಾಸ್‌ನಲ್ಲಿ ಎಡಕ್ಕೆ ತಿರುಗಿ ಮುಕ್ಕ ಮುಖಾಂತರ ಉಡುಪಿ ಕಡೆಗೆ ಸಂಚರಿಸಬೇಕು.
ಮೂಲ್ಕಿಯಿಂದ ಮಂಗಳೂರಿಗೆ
ಮೂಲ್ಕಿಯಿಂದ ಮಂಗಳೂರು ಕಡೆಗೆ ಸಂಚರಿಸುವ ಎಲ್ಲ ತರಹದ ದ್ವಿಚಕ್ರ ಮತ್ತು ಲಘು ವಾಹನಗಳು (ಕಾರು ಇತ್ಯಾದಿ) ಮೂಲ್ಕಿ ವಿಜಯ ಸನ್ನಿಧಿಯಿಂದ ಕಿನ್ನಿಗೋಳಿ- ಮೂರು ಕಾವೇರಿ- ಬಜಪೆ- ಕಾವೂರು ಜಂಕ್ಷನ್- ಕೆಪಿಟಿ ಮೂಲಕ ಸಂಚರಿಸಬೇಕು.
ಹಳೆಯಂಗಡಿಯಿಂದ ಮಂಗಳೂರು ಕಡೆಗೆ ಸಂಚರಿಸುವ ದ್ವಿಚಕ್ರ ಮತ್ತು ಲಘು ವಾಹನಗಳು (ಕಾರು ಇತ್ಯಾದಿ) ಪಕ್ಷಿಕೆರೆ- ದಾಮಸ್‌ಕಟ್ಟೆ- ಕಿನ್ನಿಗೋಳಿ- ಮಾರು ಕಾವೇರಿ- ಬಜಪೆ- ಕಾವೂರು ಜಂಕ್ಷನ್- ಕೆಪಿಟಿ ಮೂಲಕ ಸಂಚರಿಸಬೇಕು.
ಸಂಪೂರ್ಣವಾಗಿ ನಿರ್ಬಂಧ
ತಡಂಬೈಲ್ ಕ್ರಾಸ್‌ನಿಂದ ರೆಡ್‌ಕ್ರಾಸ್ ಕ್ರಾಸ್‌ವರೆಗೆ ಹಾಗೂ ಮುಂಚೂರು ಕ್ರಾಸ್‌ನಿಂದ ಎನ್‌ಐಟಿಕೆವರೆಗೆ ಎರಡೂ ಬದಿಯಲ್ಲಿ ಸರ್ವಿಸ್ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಸಂಚಾರ ಬದಲಾವಣೆಗೆ ಆಕ್ರೋಶ
ರಾಷ್ಟ್ರೀಯ ಹೆದ್ದಾರಿಯಿಂದ ಮತ ಎಣಿಕೆ ಕೇಂದ್ರ ದೂರದಲ್ಲಿದ್ದರೂ ಸಂಚಾರ ಬದಲಾವಣೆ ವ್ಯವಸ್ಥೆ ಅಸಮಾಧಾನ ವ್ಯಕ್ತವಾಗಿದೆ. ಹೆದ್ದಾರಿ ಬದಿಯ ಸರ್ವಿಸ್ ರಸ್ತೆ ಬೇಕಿದ್ದರೆ ನಿರ್ಬಂಧಕ್ಕೆ ಒಳಪಡಿಸ ಬಹುದಿತ್ತು. ಹೆದ್ದಾರಿ ಸಂಚಾರ ನಿಲುಗಡೆ ರಹಿತ ಓಡಾಟಕ್ಕೆ ಅವಕಾಶ ಕಲ್ಪಿಸ ಬೇಕಿತ್ತು ಎಂಬುದು ವಾಹನ ಸವಾರರ ಅಭಿಪ್ರಾಯ. ಈ ಬಾರಿ ಹಿಂದೆಂದೂ ಕಂಡಿರದ ಭದ್ರತೆಯನ್ನು ಅಳವಡಿಸಿರುವುದು ಶಾಂತಿಯುತ ವಾತಾವರಣಕ್ಕಾಗಿ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿ ಸಂಭ್ರಮಾಚರಣೆ ನಡೆಸಲು ಈ ಬಾರಿ ಕಷ್ಟವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.