ಹೊಸ ನಿಯಮ: ಉದ್ದಿಮೆದಾರರಿಗೆ ಸಂಕಷ್ಟ
Team Udayavani, May 23, 2019, 6:00 AM IST
ವಿಶೇಷ ವರದಿ-ಮಹಾನಗರ: ಮಹಾನಗರ ಪಾಲಿಕೆಯು ಉದ್ದಿಮೆ ಪರವಾನಿಗೆ ನವೀಕರಣ ಕುರಿತಂತೆ ಹೊಸ ನಿಯಮ ರೂಪಿಸಿದ್ದು, ಇದರಿಂದಾಗಿ ಈಗ ನಗರದ ಬಹುತೇಕ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಹಿಂದೆ ಉದ್ದಿಮೆ ಪರವಾನಿಗೆಯನ್ನು ನವೀಕರಿಸಲು, ವ್ಯಾಪಾರಸ್ಥರು ಮನಪಾದ ಆರೋಗ್ಯ ವಿಭಾಗಕ್ಕೆ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಅರ್ಜಿ ಸಲ್ಲಿಸಬೇಕು. ಆ ಬಳಿಕದ ಎಲ್ಲ ಪ್ರಕ್ರಿಯೆಗಳು ಮುಗಿದು 8-10 ದಿನಗಳ ಒಳಗಾಗಿ ಉದ್ದಿಮೆದಾರರ ಕೈಗೆ ಪರವಾನಿಗೆ ದೊರೆಯುತ್ತಿತ್ತು. ಆದರೆ ಈಗ ಪಾಲಿಕೆ ತಂದಿರುವ ಬದಲಾವಣೆಯಿಂದ ಅರ್ಜಿ ಸಲ್ಲಿಸಿ ಮೂರು ತಿಂಗಳುಗಳು ಕಳೆದರೂ ಪರವಾನಿಗೆ ನವೀಕರಣವಾಗದೆ ಸಮಸ್ಯೆಗೆ ಸಿಲುಕಿದ್ದಾರೆ.
ಹೊಸ ನಿಯಮದ ಕಿರಿಕಿರಿ
ಹೊಸ ನಿಯಮಕ್ಕೂ ಮೊದಲು ಉದ್ದಿಮೆ ಪರವಾನಿಗೆ ನವೀಕರಣ ಮಾಡಲು ಉದ್ದಿಮೆದಾರರು ಅರ್ಜಿ ತುಂಬಿ ಆರೋಗ್ಯ ಇಲಾಖೆಗೆ ಸಲ್ಲಿಸ ಬೇಕಿತ್ತು. ಹಳೆಯ ಪರವಾನಿಗೆ ನೀಡಿ ದರೆ ಅಧಿಕಾರಿಗಳು ಅದಕ್ಕೆ ಚಲನ್ ನೀಡುತ್ತಿದ್ದರು.
ಉಳಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಸುಮಾರು 10 ದಿನಗಳೊಳಗಾಗಿ ಉದ್ದಿಮೆ ಪರವಾನಿಗೆ ಉದ್ದಿಮೆದಾರರ ಕೈ ಸೇರುತ್ತಿತ್ತು. ಆದರೆ ಈ ಬಾರಿ ನವೀಕರಣಕ್ಕೆ ಕಟ್ಟಡದ ಖಾತಾ, ತೆರಿಗೆ ರಶೀದಿ ನೀಡಬೇಕು ಎಂಬ ಶರತ್ತು ಹಾಕಲಾಗಿತ್ತು. ಆದರೆ ಖಾತಾ ನೀಡಲು ಸಾಧ್ಯವಾಗದ ಕಾರಣ ಆ ಶರತ್ತನ್ನು ಬಿಟ್ಟುಬಿಡಲಾಯಿತು. ಆ ಬಳಿಕ ಅರ್ಜಿ ಸಲ್ಲಿಸಿದ ಉದ್ದಿಮೆಯ ಬಗ್ಗೆ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕವೇ ಚಲನ್ ನೀಡುವುದು ಎಂದು ನಿರ್ಧರಿಸಲಾಯಿತು. ಆದರೆ ಆರೋಗ್ಯ ವಿಭಾಗದಲ್ಲಿ ಇರುವುದೇ ಆರು ಮಂದಿ ಸಿಬಂದಿ. ಮಂಗಳೂರಿನ 35 ಸಾವಿರಕ್ಕೂ ಅಧಿಕ ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಿದರೆ ಇರುವ ಆರು ಮಂದಿ ಎಲ್ಲಿಗೆ ಹೋಗಿ ಪರಿಶೀಲನೆ ನಡೆಸುತ್ತಾರೆ. ಇದರಿಂದ ತಡವಾಗುತ್ತಿದೆ. ಪಾಲಿಕೆಯ ಈ ನಿಯಮ ಈಗ ಉದ್ದಿಮೆದಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
6 ಬಂದಿ ಮಾತ್ರ !
ಉದ್ದಿಮೆದಾರರು ದಾಖಲೆಯಲ್ಲಿ ತಪ್ಪು ಮಾಹಿತಿ ನೀಡುತ್ತಾರೆ ಎಂಬ ಕಾರಣಕ್ಕಾಗಿ ಹೊಸ ನಿರ್ಧಾರ ಮಾಡಲಾಗಿದೆ. ಆದರೆ ಆರೋಗ್ಯ ಇಲಾಖೆಯಲ್ಲಿರುವ ಆರು ಮಂದಿ ಸಿಬಂದಿ ಸುಮಾರು 35 ಸಾವಿರಕ್ಕೂ ಅಧಿಕ ಉದ್ದಿಮೆದಾರರ ಸ್ಥಳ ಪರಿಶೀಲನೆ ಮಾಡಿ, ದಾಖಲೆ ನೀಡುವುದು ಯಾವಾಗ ಎಂಬುದೇ ಪ್ರಶ್ನೆ. ಪಾಲಿಕೆಯ ಈ ಅವ್ಯವಸ್ಥೆಯಿಂದಾಗಿ ನಗರ ವ್ಯಾಪ್ತಿಯ ಉದ್ದಿಮೆದಾರರು ಪಾಲಿಕೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇವರಲ್ಲಿ ಕೆಲವರಿಗೆ ಪರವಾನಿಗೆ ತಡವಾಗಿ ಕೈ ಸೇರಿದ್ದು, ಇನ್ನೂ ಸುಮಾರು 15 ಸಾವಿರಕ್ಕೂ ಅಧಿಕ ಉದ್ದಿಮೆದಾರರು ಪರವಾನಿಗೆಗಾಗಿ ಅಲೆದಾಡುತ್ತಿದ್ದಾರೆ.
ಸಮಸ್ಯೆ ನಿವಾರಿಸಲು ಹೊಸ ಕ್ರಮ
ಉದ್ದಿಮೆ ಪರವಾನಿಗೆ ನೀಡುವ ವೇಳೆ ಈ ಹಿಂದೆ ಎದುರಾಗಿದ್ದ ಕೆಲವು ಸಮಸ್ಯೆ ನಿವಾ ರಿಸಲು ಹೊಸ ಕ್ರಮ ಕೈಗೊಳ್ಳಲಾಗಿದೆ. ಕೆಲವರು ಪರವಾನಿಗೆ ನೀಡುವ ವೇಳೆ ತಪ್ಪು ಮಾಹಿತಿ ನೀಡುತ್ತಿದ್ದರು. ಪಾರದರ್ಶಕ ನಿಯಮ ತರಲು ಈ ರೀತಿ ಮಾಡಲಾಗಿದೆ.
– ನಾರಾಯಣಪ್ಪ,
ಪ್ರಭಾರ ಆಯುಕ್ತರು, ಮನಪಾ
2 ತಿಂಗಳಾದರೂ ಪರವಾನಿಗೆ ಸಿಕ್ಕಿಲ
ಉದ್ದಿಮೆ ಪರವಾನಿಗೆಗೆ
ಮಾ. 19ರಂದು ಅರ್ಜಿ ಸಲ್ಲಿಸಿದ್ದೆ. ಚುನಾವಣೆ, ಅಧಿಕಾರಿಗಳ ಸ್ಥಳ ಪರಿಶೀಲನೆ ಎಂಬಿತ್ಯಾದಿ ಕಾರಣಗಳಿಂದ ಈವರೆಗೆ ನನಗೆ ಉದ್ದಿಮೆ ಪರವಾನಿಗೆ ಲಭಿಸಿಲ್ಲ. ಇದಕ್ಕಾಗಿ ಎಷ್ಟೋ ಬಾರಿ ಪಾಲಿಕೆಗೆ ಅಲೆದಾಡಿದ್ದೇನೆ. ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ.
- ಪ್ರಶಾಂತ್, ಉದ್ದಿಮೆದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.