ರಫೇಲ್ ದಾಖಲೆ ಕಳವು ಯತ್ನ
Team Udayavani, May 23, 2019, 6:00 AM IST
ಪ್ಯಾರಿಸ್: ಫ್ರಾನ್ಸ್‌ನಲ್ಲಿರುವ ಭಾರತೀಯ ವಾಯುಪಡೆಯ ರಫೇಲ್ ಪ್ರಾಜೆಕ್ಟ್ ನಿರ್ವಹಣೆ ತಂಡದ ಕಚೇರಿಯಲ್ಲಿ ದಾಖಲೆ ಕಳ್ಳತನ ಯತ್ನ ರವಿವಾರ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ. ಆದರೆ ಯಾವುದೇ ಹಾರ್ಡ್‌ಡಿಸ್ಕ್ ಅಥವಾ ದಾಖಲೆ ಕಳ್ಳತನವಾಗಿಲ್ಲ ಎಂದು ವಾಯುಪಡೆ ವಿವರಿಸಿದೆ. ಇದು ಬೇಹುಗಾರಿಕೆಯ ಯತ್ನವಾಗಿತ್ತು. ಇದರ ಉದ್ದೇಶ ಮತ್ತಿತರ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿವೆ ಎಂದು ಮೂಲಗಳು ತಿಳಿಸಿವೆ. ರಫೇಲ್ ಪ್ರಾಜೆಕ್ಟ್ ತಂಡದಲ್ಲಿ ಗ್ರೂಪ್ ಕ್ಯಾಪ್ಟನ್ ಶ್ರೇಣಿಯ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಇವರು ಒಪ್ಪಂದಕ್ಕೆ ಸಂಬಂಧಿಸಿದ ವಿಚಾರಗಳ ಮೇಲ್ವಿಚಾರಣೆ ನಡೆಸುತ್ತಾರೆ.
ಉತ್ಪಾದನೆ ಕಾಲಾವಧಿ ಮತ್ತು ಭಾರತೀಯ ಸಿಬಂದಿಯ ತರಬೇತಿ ಹಾಗೂ ಇತರ ವಿಚಾರಗಳ ನಿಗಾ ವಹಿಸುವುದು ಇವರ ಜವಾಬ್ದಾರಿ ಯಾಗಿರುತ್ತದೆ. ಸದ್ಯ ಈ ಕಚೇರಿಯು ಪ್ಯಾರಿಸ್‌ನ ಸೇಂಟ್ ಕೌÉಡ್‌ನಲ್ಲಿದ್ದು, ಇದು ರಫೇಲ್ ಉತ್ಪಾದನೆ ಮಾಡುತ್ತಿರುವ ಕಂಪೆನಿ ಡಸಾಲ್ಟ್ನ ಕಚೇರಿಗೆ ಸಮೀಪದಲ್ಲಿದೆ. ಸದ್ಯ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಈಗಾಗಲೇ ರಕ್ಷಣಾ ಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.