ಸುಪ್ರೀಂ ಕೋರ್ಟ್‌ಗೆ ನಾಲ್ವರು ನ್ಯಾಯಮೂರ್ತಿಗಳ ನೇಮಕಕ್ಕೆ ಅಸ್ತು
Team Udayavani, May 23, 2019, 6:00 AM IST
ನವದೆಹಲಿ: ಕರ್ನಾಟಕ ಮೂಲದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಸೇರಿ ನಾಲ್ವರು ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್‌ಗೆ ನೇಮಕ ಮಾಡಲು ಕೊನೆಗೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ನ್ಯಾ.ಬೋಪಣ್ಣ ಅವರಲ್ಲದೆ ನ್ಯಾ. ಅನಿರುದ್ಧ ಬೋಸ್, ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್ ಅವರಿಗೆ ಬಡ್ತಿ ನೀಡಲಾಗಿದೆ. ಈ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿದ್ದ ನ್ಯಾಯಮೂರ್ತಿಗಳ ಒಟ್ಟು 31 ಹುದ್ದೆಗಳೂ(ಸಿಜೆಐ ಸೇರಿ) ಭರ್ತಿಯಾದಂತಾಗಿದೆ.
ಈ ನಾಲ್ವರು ನ್ಯಾಯಮೂರ್ತಿಗಳ ನೇಮಕಕ್ಕೂ ಮುನ್ನ ಸುಪ್ರೀಂನಲ್ಲಿ 27 ಜಡ್ಜ್ಗಳಷ್ಟೇ ಇದ್ದರು. ಆರಂಭದಲ್ಲಿ ನ್ಯಾ. ಬೋಪಣ್ಣ ಹಾಗೂ ನ್ಯಾ.ಅನಿರುದ್ಧ ಬೋಸ್ ಅವರ ಹೆಸರನ್ನು ಕೊಲೀಜಿಯಂ ಶಿಫಾರಸು ಮಾಡಿತ್ತಾದರೂ, ಕೇಂದ್ರ ಸರ್ಕಾರವು ಈ ಹೆಸರನ್ನು ವಾಪಸ್ ಕಳುಹಿಸಿತ್ತು. ಇದಕ್ಕೆ ಸರ್ಕಾರವು ಸೇವಾ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧಿತ್ವದ ಕಾರಣಗಳನ್ನು ನೀಡಿತ್ತು. ಆದರೆ, ಸುಪ್ರೀಂಕೋರ್ಟ್ ಕೊಲೀಜಿಯಂ ಈ ಇಬ್ಬರು ನ್ಯಾಯಮೂರ್ತಿಗಳ ನೇಮಕದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟನೆ ನೀಡಿ, ಮತ್ತೂಮ್ಮೆ ಅವರ ಹೆಸರನ್ನು ಸರ್ಕಾರಕ್ಕೆ ಕಳುಹಿಸಿತ್ತು. ಜತೆಗೆ, ನ್ಯಾ.ಗವಾಯಿ ಹಾಗೂ ನ್ಯಾ.ಸೂರ್ಯ ಕಾಂತ್ ಹೆಸರನ್ನೂ ಶಿಫಾರಸು ಮಾಡಿತ್ತು. ಈಗ ಸರ್ಕಾರವು ಈ ಎಲ್ಲ ನಾಲ್ವರು ನ್ಯಾಯಮೂರ್ತಿಗಳಿಗೂ ಬಡ್ತಿ ನೀಡಲು ಒಪ್ಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.