ಮುನಿಯಪ್ಪ, ಮುನಿಸ್ವಾಮಿ ಭವಿಷ್ಯ ಇಂದು ಪ್ರಕಟ
ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಎದೆಯಲ್ಲಿ ನಡುಕ • ಗೆಲುವಾಗಿ ದೇವರಿಗೆ ಮೊರೆ
Team Udayavani, May 23, 2019, 10:59 AM IST
ಕೋಲಾರ: ಲೋಕಸಭಾ ಚುನಾವಣೆಯಲ್ಲಿ 14 ಅಭ್ಯರ್ಥಿಗಳ ಭವಿಷ್ಯವನ್ನು 12.55 ಲಕ್ಷ ಮತದಾರರು ನಿರ್ಧರಿಸಿದ್ದು, ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಶಾಂತಿಯುತವಾಗಿ ಫಲಿತಾಂಶ ಘೋಷಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಸೋಲು ಗೆಲುವಿನ ಬಗ್ಗೆ ಕೋಲಾರ ಕ್ಷೇತ್ರದ ಎರಡು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ತವಕ ಹೆಚ್ಚಾಗಿದೆ.
ಕೋಲಾರ ಕ್ಷೇತ್ರದಲ್ಲಿ ಏ.18 ರಂದು ಮತದಾನ ನಡೆದಿದ್ದು, 35 ದಿನಗಳಿಂದಲೂ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಹಾಗೂ ಬಿಜೆಪಿಯ ಎಸ್.ಮುನಿಸ್ವಾಮಿ ಸೇರಿ 14 ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಇದೀಗ ಕಾಯುವಿಕೆಗೆ ತೆರೆ ಬೀಳುತ್ತಿದ್ದು, ಮತಯಂತ್ರಗಳಲ್ಲಿ ಅಡಗಿದ್ದ ಅಭ್ಯರ್ಥಿಗಳ ಭವಿಷ್ಯ ಗುರುವಾರ ಬೆಳಗ್ಗೆ 8 ಗಂಟೆಯಿಂದ ಹೊರಗೆ ಬರಲಿದ್ದು, ಸಂಜೆ ವೇಳೆಗೆ ಪೂರ್ಣಪ್ರಮಾಣದಲ್ಲಿ ಲಭ್ಯವಾಗಲಿದೆ.
12.55 ಲಕ್ಷ ಮತದಾನ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16,28,782 ಅರ್ಹ ಮತದಾರರಿದ್ದು, ಇವರಲ್ಲಿ 8,16,475 ಪುರುಷ, 8,12,149 ಮಹಿಳೆ ಹಾಗೂ 158 ಇತರೆ ಮತದಾರರು ಸೇರಿದ್ದರು. ಏಪ್ರಿಲ್ 18 ರಂದು ಕ್ಷೇತ್ರದಲ್ಲಿ ಒಟ್ಟು 2,100 ಮತಗಟೆrಗಳಲ್ಲಿ ಮತದಾನ ನಡೆದು ಶೇ.77.15 ಪ್ರಮಾಣದಲ್ಲಿ ಒಟ್ಟು 12,55,976 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರಲ್ಲಿ 6,42,349 ಪುರುಷ, 6,13,607 ಮಹಿಳಾ ಹಾಗೂ 20 ಇತರೆ ಮತದಾರರು ಮತ ಚಲಾಯಿಸಿದ್ದರು.
ಕಣದಲ್ಲಿದ್ದವರು: ಕೋಲಾರ ಲೋಕಸಭಾ ಚುನಾವಣಾ ಕಣದಲ್ಲಿ ಒಟ್ಟು 14 ಮಂದಿ ಅಭ್ಯರ್ಥಿಗಳಿದ್ದಾರೆ. ಬಿಎಸ್ಪಿ ಅಭ್ಯರ್ಥಿಎಂ.ಜಿ.ಜಯಪ್ರಸಾದ್, ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ, ಬಿಜೆಪಿ ಎಸ್.ಮುನಿಸ್ವಾಮಿ, ಪ್ರಾದೇಶಿಕ ಪಕ್ಷಗಳಾದ ಅಂಬೇಡ್ಕರ್ ಸಮಾಜ ಪಕ್ಷದ ಎಂ.ಬಿ.ಅಶೋಕ, ರಿಪಬ್ಲಿಕನ್ ಸೇನಾ ಪಕ್ಷದ ಜಿ.ಚಿಕ್ಕನಾರಾಯಣ, ಉತ್ತಮ ಪ್ರಜಾಕೀಯ ಪಕ್ಷದ ಆರ್.ರಾಮಾಂಜಿನಪ್ಪ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ವೆಂಕಟೇಶಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಎನ್.ಎಂ.ಸರ್ವೇಶ. ಪಕ್ಷೇತರರಾಗಿ ಮೇಡಿಹಾಳ ಛಲವಾದಿ ಎಂ.ಚಂದ್ರಶೇಖರ್, ಪಿ.ಮುನಿರಾಜಪ್ಪ, ಡಾ. ವಿ.ಎಂ.ರಮೇಶ್, ಎಲ್.ರಾಜ್‌ಕುಮರೇಸನ್, ಸಿ.ಶಂಕರಪ್ಪ ಹಾಗೂ ಎನ್.ಸಿ.ಸುಬ್ಬರಾಯಪ್ಪ ಚುನಾವಣಾ ಕಣದಲ್ಲಿದ್ದಾರೆ. ಜೊತೆಗೆ ನೋಟಾ ಬಟನ್ ಇದ್ದು, ಎಷ್ಟು ಮತ ಚಲಾವಣೆಯಾಗಿದೆ ಎನ್ನುವುದು ಕುತೂಹಲ ಕೆರಳಿಸಿದೆ.
ಬಂದೋಬಸ್ತ್: ಮತಯಂತ್ರಗಳನ್ನು ಕಳೆದ 35 ದಿನಗಳಿಂದಲೂ ಸರ್ಪಗಾವಲಿನಲ್ಲಿ ಹಗಲು ರಾತ್ರಿ ಪಾಳಿಯ ಮೇಲೆ ಸಮರ್ಪಕವಾಗಿ ಕಾದ ಪೊಲೀಸ್ ಸಿಬ್ಬಂದಿ, ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಲು ಅಗತ್ಯ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದ್ದಾರೆ.
ಮತ ಎಣಿಕೆ ದಿನಕ್ಕಾಗಿ ಕೋಲಾರ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುತ್ತಮುತ್ತಲ ಎಲ್ಲಾ ರಸ್ತೆಗಳಲ್ಲಿಯೂ ಕಟಕಟೆಗಳನ್ನು ಕಟ್ಟಿದ್ದು, ಇಡೀ ದಿನ ಈ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿಯೇ ಮದ್ಯ ಮಾರಾಟ ನಿಷೇಧಿಸಲಾಗಿದೆ. ವಿಜಯೋತ್ಸವಕ್ಕೆ ಕಡಿವಾಣ ಹಾಕಲಾಗಿದೆ.
ಸಂಜೆ ವೇಳೆಗೆ ಫಲಿತಾಂಶ: ಮತ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಆರಂಭವಾದರೂ, ಪೂರ್ಣ ಪ್ರಮಾಣದಲ್ಲಿ ಫಲಿತಾಂಶ ಪ್ರಕಟವಾಗಲು ಸಂಜೆ 4 ಗಂಟೆ ಆಗಬಹುದು ಎಂದು ಅಂದಾಜಿಸಲಾಗಿದೆ. ಬಹುತೇಕ ಸಮೀಕ್ಷೆಗಳಲ್ಲಿ ಕೆಲವು ಕಾಂಗ್ರೆಸ್ ಮತ್ತು ಕೆಲವು ಬಿಜೆಪಿ ಗೆಲುವು ಎಂದು ಬಿಂಬಿಸಿವೆ.
ಇದರಿಂದ ಕೋಲಾರ ಫಲಿತಾಂಶ ಕುರಿತಂತೆ ಗೊಂದಲ ಮುಂದುವರಿದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರಲ್ಲಿ ಡವ ಡವ ಹೆಚ್ಚಾಗುವಂತಾಗಿದೆ.
ನಮೋ ಅಲೆಯಲ್ಲಿ ಕೆಎಚ್ಎಂ ತಂತ್ರಗಾರಿಕೆ ಫಲಿಸುವುದೇ?:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.