ಮಳೆ-ಗಾಳಿ: 37 ಮನೆಗಳಿಗೆ ಹಾನಿ

ನಾಲ್ಕು ಎಕರೆ ಸಪೋಟ ತೋಟಕ್ಕೆ ಹಾನಿ•ಧರೆಗುರಳಿದ 100 ವಿದ್ಯುತ್‌ ಕಂಬಗಳು

Team Udayavani, May 23, 2019, 11:22 AM IST

23-May-8

ಹರಪನಹಳ್ಳಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗಾಳಿಗೆ ಹಾರಿ ಹೋಗಿರುವ ಮನೆಗಳ ಮೇಲ್ಛಾವಣೆಗಳು

ಹರಪನಹಳ್ಳಿ: ತಾಲೂಕಿನ ಹಲವೆಡೆ ಮಂಗಳವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಒಟ್ಟು 37 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, 4 ಎಕರೆ ಸಪೋಟ ತೋಟ ಹಾನಿಯಾಗಿದೆ. ಕೆಲವೆಡೆ ಮರಗಳು ಧರೆಗುರಿಳಿದ ವಿದ್ಯುತ್‌ ಸಂಪರ್ಕ ಕಡಿತಗೊಂಡು ಜನ ಜೀವನ ಅಸ್ತವ್ಯಸ್ತವಾಗಿದೆ.

ತೋಗರಿಕಟ್ಟೆ ಗ್ರಾಮದಲ್ಲಿ 7 ಮನೆ, ಕೆಂಗನಹೊಸೂರು-1, ನಂದಿಬೇವೂರು-1, ನಂದಿಬೇವೂರು ತಾಂಡದಲ್ಲಿ ಭಾಗಶಃ ಹಾನಿ-22, ತೀವ್ರ ಹಾನಿ-5 ಸೇರಿ 27, ಸಾಸ್ವಿಹಳ್ಳಿ-1 ಸೇರಿದಂತೆ ಒಟ್ಟು 37 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇದರಲ್ಲಿ 5 ಮನೆಗಳು ತೀವ್ರ ಹಾನಿಯಾಗಿವೆ. 1.85 ಲಕ್ಷರೂ ಅಂದಾಜು ನಷ್ಟವಾಗಿದೆ. ತೊಗರಿಕಟ್ಟೆ ಗ್ರಾಮದಲ್ಲಿ 4 ಎಕರೆ ಸಪೋಟ ತೋಟ ಹಾಳಾಗಿದೆ. ಇ-ಬೇವಿನಹಳ್ಳಿ ಗ್ರಾಮದ ಯಡಿಹಳ್ಳಿ ಬಸವರಾಜ್‌ ಎಂಬುವವರ ರೇಷ್ಮೆ ಬೆಳೆ ಬೆಳೆಯುವ ಮನೆ ಮೇಲ್ಛಾವಣೆ ಹಾರಿ ಹೋಗಿ ಸಂಪೂರ್ಣ ಹಾಳಾಗಿದೆ. ಸ್ಥಳಕ್ಕೆ ರೇಷ್ಮೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಸುಮಾರು 4 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಪಟ್ಟಣದ ಆಚಾರ್ಯ ಬಡಾವಣೆಯಲ್ಲಿ ವಿದ್ಯುತ್‌ ತಂತಿಯ ಮೇಲೆ ಬೃಹತ್‌ ಮರವೊಂದು ಬಿದ್ದ ಪರಿಣಾಮ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಪಟ್ಟಣದ ಪ್ರತಿಷ್ಠಿತ ಬಡಾವಣೆ ಎಂದು ಕರೆಸಿಕೊಳ್ಳುವ ಆಚಾರ ಬಡಾವಣೆಯಲ್ಲಿ ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ, ಶಾಸಕ ಜಿ.ಕರುಣಾಕರರೆಡ್ಡಿ ವಾಸವಿದ್ದು, ಮಂಗಳವಾರ ಸಂಜೆ 4 ಗಂಟೆಯಿಂದ ಬುಧವಾರ ಬೆಳಿಗ್ಗೆ 11ರ ವರೆಗೆ ಇಲ್ಲಿ ನಿವಾಸಿಗಳು ವಿದ್ಯುತ್‌ ಇಲ್ಲದೇ ಪರದಾಟ ನಡೆಸುವಂತಾಗಿತ್ತು. ರಾತ್ರಿವಿಡೀ ಸೆಖೆಯಿಂದ ನಿದ್ದೆ ಇಲ್ಲದೇ ಕೆಲವರು ಜಾಗರಣೆ ಮಾಡಿದ್ದಾರೆ.

ಬೆಸ್ಕಾಂ ಇಲಾಖೆಯ ಹರಪನಹಳ್ಳಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಬೀಸಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ವಿವಿಧ ಹಳ್ಳಿಗಳಲ್ಲಿ 100 ವಿದ್ಯುತ್‌ ಕಂಬಗಳು ಮುರಿದಿದ್ದು, 85ಕ್ಕೂ ಅಧಿಕ ಕಂಬಗಳು ಬಾಗಿರುತ್ತವೆ. 6 ವಿದ್ಯುತ್‌ ಪರಿವರ್ತಕಗಳು ವಿಫಲವಾಗಿವೆ. ಇದರಿಂದ ವಿದ್ಯುತ್‌ ಸರ‌ಬರಾಜಿನಲ್ಲಿ ವ್ಯತ್ಯಯವಾಗಿದೆ. ತಾಲೂಕಿನ ನಾಗರಕೊಂಡ, ಮತ್ತಿಹಳ್ಳಿ ಗ್ರಾಮಗಳ ಸುತ್ತಮುತ್ತ 5-6 ಹಳ್ಳಿಗಳು ಹಾಗೂ ನಂದಿಬೇವೂರು ತಾಂಡ, ಕೂಲಹಳ್ಳಿ, ಬಾಗಳಿ ಗ್ರಾಮಗಳ ಸುತ್ತಮುತ್ತ 8ರಿಂದ 10 ಹಳ್ಳಿಗಳಿಗೆ ರಾತ್ರಿ ವೇಳೆ ವಿದ್ಯುತ್‌ ಸರ‌ಬರಾಜಿನಲ್ಲಿ ವ್ಯತ್ಯಯವಾಗಿದೆ. ಬುಧವಾರ ಎಲ್ಲ ಗ್ರಾಮಗಳಿಗೂ ವಿದ್ಯುತ್‌ ಸರಬರಾಜು ನೀಡಲಾಗಿದೆ. ಮಳೆಯಿಂದ 15 ಲಕ್ಷ ರೂ. ಹಾನಿಯಾಗಿರುತ್ತದೆ ಎಂದು ಬೆಸ್ಕಾಂ ಇಲಾಖೆ ಎಇಇ ಜಯ್ಯಪ್ಪ ತಿಳಿಸಿದ್ದಾರೆ.

ಟಾಪ್ ನ್ಯೂಸ್

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.