ಬಮೂಲ್ ನಿರ್ದೇಶಕರ ಪದಚ್ಯುತಿ
ಅಧ್ಯಕ್ಷ ಸ್ಥಾನ ಅನರ್ಹಗೊಳಿಸಿ ಆದೇಶ ಹೊರಡಿಸಿದ ಸಹಾಯಕ ನಿಬಂಧಕ • ನಿಯಮ ಉಲ್ಲಂಘನೆ ಆರೋಪ
Team Udayavani, May 23, 2019, 12:23 PM IST
ಮಾಗಡಿ: ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬೆಂಗಳೂರು ಹಾಲು ಒಕ್ಕೂಟಕ್ಕೆ ಚುನಾಯಿತರಾಗಿದ್ದ ನರಸಿಂಹಮೂರ್ತಿ ಸ್ಥಾನವನ್ನು ಅನರ್ಹಗೊಳಿಸಿ 3ವರ್ಷಗಳ ಕಾಲ ಚುನಾಯಿತರಾಗದಿರುವಂತೆ ರಾಮನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಾಜು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಮಾಗಡಿ ತಾಲೂಕು ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಕ ಹುದ್ದೆಯನ್ನು ನೇಮಕಾತಿ ಮಾಡುವ ವೇಳೆ ನಿಯಮ 17(3) ರ ರೀತ್ಯ ಸಹಕಾರ ಸಂಘದ ನಿಬಂಧಕರ ಪ್ರತಿನಿಧಿಯನ್ನು ಒಳಗೊಂಡ ಉಪಸಮಿತಿಯನ್ನು ರಚಿಸಿ ಸಿಬ್ಬಂದಿ ನೇಮಕಾತಿ ಮಾಡಬೇಕಾಗಿತ್ತು. ಆದರೆ ನರಸಿಂಹಮೂರ್ತಿ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘದ ಅದಿನಿಯಮ 1959 ರ ಪ್ರಕರಣ 29-ಸಿ (8)ಸಿ ಅನ್ವಯ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನವನ್ನು ಅನರ್ಹಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಚಾರಣೆ: ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 2016 ರಲ್ಲಿ ನಿಯಮ ಬಾಹಿರವಾಗಿ ಮುಖ್ಯಕಾರ್ಯನಿರ್ವಾಹಕ ಹುದ್ದೆ ನೇಮಕ ಮಾಡಿಕೊಂಡಿರುವ ಪ್ರಕರಣದಡಿ ಆಡಳಿತ ಮಂಡಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡೇರಿ ಸದಸ್ಯ ಎಂ.ಸಿ.ಗಂಗಣ್ಣ ಏ. 15 ರಂದು ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಏ. 24 ರಂದು ದಿನಾಂಕ ನಿಗಧಿಪಡಿಸಿ ತುರ್ತು ನೋಟಿಸ್ ಜಾರಿ ಮಾಡಲಾಗಿತ್ತು. ಕಾಲಾವಕಾಶ ಮೇರೆಗೆ ಮೇ.13 ವಿಚಾರಣೆ ನಿಗದಿಪಡಿಸಲಾಗಿತ್ತಾದರೂ ಪ್ರತಿವಾದಿಗಳು ವಿಚಾರಣೆಗೆ ಗೈರಾಗಿದ್ದ ಕಾರಣ ಮತ್ತೆ ಪ್ರಕರಣವನ್ನು ಮೇ.27ಕ್ಕೆ ನಿಗದಿಪಡಿಸಲಾಗಿತ್ತು.
ಅರ್ಜಿದಾರರ ಪರ ವಕೀಲ ಜಯಪ್ರಕಾಶ್ ರೆಡ್ಡಿ 2019 ರ ಮೇ 20 ರಂದು ಸಿಪಿಸಿ ಪ್ರಕರಣದಡಿ ಸಹಾಯಕ ಉಪ ನಿಬಂಧಕರಿಗೆ ವಿಚಾರಣೆಯನ್ನು ಮುಂಗಡವಾಗಿ ಕೈಗೊಳ್ಳಬೇಕೆಂದು ಮನವಿ ಮಾಡಿದ್ದು, ಈ ಸಂಬಂಧ ತುರ್ತು ನೋಟಿಸ್ ಸಹ ಜಾರಿ ಮಾಡಿದ್ದಾರೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇದರ ಅನ್ವಯ ಮೇ.21 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ಉಪನಿಬಂಧಕರು ವಿಚಾರಣೆ ನಡೆಸಿದ್ದಾರೆ.
ಪೂರ್ವಾನ್ವಯ ನೇಮಕ: ಡೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ವಯೋನಿವೃತ್ತಿ ಹೊಂದಿದ್ದರಿಂದ 2016 ರ ಜೂನ್ 22 ರಂದು ಸಂಘದ ಆಡಳಿತ ಮಂಡಲಿ ತಾತ್ಕಾಲಿಕವಾಗಿ ಹಾಲು ಪರೀಕ್ಷಕ ಹಾಗೂ ಶುಚಿಗಾರ ಹಾಗೂ ಸಹಾಯಕರನ್ನು ನೇಮಕ ಮಾಡಿಕೊಂಡಿತ್ತು. ನಿಯಮದಲ್ಲಿ ಅವಕಾಶವಿಲ್ಲದಿದ್ದರೂ ಸಹ ಸಂಘಕ್ಕೆ ಸಹಾಯಕರಾಗಿ ಬಿ.ಚೇತನ್ ಅವರನ್ನು 2016 ಜ. 2 ರಂದೇ ಪೂರ್ವಾನ್ವಯ ಆಡಳಿತ ಮಂಡಲಿ ನೇಮಕ ಮಾಡಿಕೊಂಡಿದೆ.
ನಿಯಮ ಉಲ್ಲಂಘನೆ: ಮುಖ್ಯಕಾರ್ಯ ನಿರ್ವಾಹಕ ಗೈರು ಹಾಜರಿಯಲ್ಲಿ ಆಡಳಿತ ಮಂಡಲಿ ಠರಾವು ಹೊರಡಿಸಿ ನಿಯಮ ಉಲ್ಲಂಘಿಸಿದೆ. 2016 ರ ನ. 28 ರಲ್ಲಿ ಆಡಳಿತ ಮಂಡಲಿ ತಾತ್ಕಾಲಿಕ ನೇಮಕಾತಿಯನ್ನು ನಿಯಮ ಉಲ್ಲಂಘಿಸಿ ಖಾಯಂ ಸಹಗೊಳಿಸಿತ್ತು. ಮುಂದುವರಿದು 2017 ರ ಫೆ.10 ರಂದು ಆಡಳಿತ ಮಂಡಲಿ ಬಿ. ಚೇತನ್ ಅವರನ್ನು ಮುಖ್ಯಕಾರ್ಯನಿರ್ವಾಹಕ ಹುದ್ದೆ ಮುಂಬಡ್ತಿ ಸಹ ನೀಡಿ ಮತ್ತೆ ನಿಯಮ ಉಲ್ಲಂಘಿಸಿದೆ. 2017 ರ ಜು. 2 ರಂದು ಖಾಯಂ ಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ 2018 ರ ಅ. 30ರಂದು ರೈತರಿಂದ ದೂರುಗಳ ಬಂದ ನಂತರ ನಿಯಮಾನುಸಾರ ನೇಮಕಾತಿ ಮಾಡಿಕೊಳ್ಳುವಂತೆ ಸೂಚನೆ ನೀಡಿದರೂ ಸಹ ಮತ್ತೆ 2018 ರ ನ. 29ರಂದು ಆಡಳಿತ ಮಂಡಲಿ ಮತ್ತೆ ತಾತ್ಕಾಲಿಕವಾಗಿ ಮುಖ್ಯಕಾರ್ಯನಿರ್ವಾಹಕ ಹುದ್ದೆಯನ್ನು ಮುಂದುವರಿಸಲು ತೀರ್ಮಾನ ಕೈಗೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಮತ್ತೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ರಾಮನಗರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮೇಲ್ಕಂಡ ನೇಮಕಾತಿ ವಿಚಾರವಾಗಿ ಸಹಕಾರ ಸಂಘಗಳ ನಿಯಮಾವಳಿ ಪಾಲಿಸದೆ ಇರುವುದು ಸಾಭೀತಾದ ಹಿನ್ನೆಲೆಯಲ್ಲಿ ಮೇ.21 ರಂದು ಆಗಲಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಲಿಯ ಅಧ್ಯಕ್ಷ ಸ್ಥಾನ ಮತ್ತು ಮೇ 12 ರಂದು ಬಮೂಲ್ಗೆ ಆಯ್ಕೆಯಾಗಿದ್ದ ನರಸಿಂಹಮೂರ್ತಿಯ ನಿರ್ದೇಶಕ ಸ್ಥಾನವನ್ನು ಅನರ್ಹಗೊಳಿಸಿದ್ದಾಗಿ ಆದೇಶ ಹೊರಡಿಸಿದ್ದಾರೆ.
ಕೃಷ್ಣಮೂರ್ತಿ ಕುತಂತ್ರಕ್ಕೆ ಅಧ್ಯಕ್ಷ ಸ್ಥಾನ ಕೈತಪ್ಪಿದೆ: ನರಸಿಂಹಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.