ರೈತರಿಗೆ ನೋಟಿಸ್‌ ಸೋಲಾರ್‌ ದೀಪ ಅಳವಡಿಕೆಯಲ್ಲಿ ರೈತರಿಗೆ ವಂಚನೆ

ಹಣ ಪಾವತಿಸುವಂತೆ ಬ್ಯಾಂಕ್‌ನಿಂದ ರೈತರಿಗೆ ನೋಟಿಸ್‌

Team Udayavani, May 23, 2019, 4:10 PM IST

tumkur-tdy-03..

ಹುಳಿಯಾರು ಹೋಬಳಿಯ ರಂಗನಕೆರೆ ಗ್ರಾಮಸ್ಥರು ಹೊಯ್ಸಳಕಟ್ಟೆ ಕಾವೇರಿ ಗ್ರಾಮೀಣ ಬ್ಯಾಂಕ್‌ ಶಾಖೆಗೆ ಮುತ್ತಿಗೆ ಹಾಕಿ, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದರು.

ಹುಳಿಯಾರು: ಸೋಲಾರ್‌ ಗ್ರಾಮ ನಿರ್ಮಾಣ ಮಾಡುವುದಾಗಿ ಹೊಯ್ಸಳಕಟ್ಟೆ ಕಾವೇರಿ ಗ್ರಾಮೀಣ ಬ್ಯಾಂಕ್‌ ಶಾಖೆ ಹಾಗೂ ಒಆರ್‌ಬಿ ಕಂಪನಿ ವಂಚನೆ ಮಾಡಿದೆ ಎಂದು ರಂಗನಕೆರೆ ಗ್ರಾಮದ ಸೋಲಾರ್‌ ದೀಪ ಹಾಕಿಸಿಕೊಂಡಿದ್ದ ರೈತರು ಬ್ಯಾಂಕ್‌ ಮುತ್ತಿಗೆ ಹಾಕಿದ್ದರು.

ಕಳೆದ ಆರೇಳು ವರ್ಷಗಳ ಹಿಂದೆ ಹೊಯ್ಸಳಕಟ್ಟೆ ಕಾವೇರಿ ಗ್ರಾಮೀಣ ಬ್ಯಾಂಕ್‌ ಶಾಖಾ ವ್ಯವ ಸ್ಥಾಪಕರು, ತುರುವೇಕೆರೆಯಲ್ಲಿ ಕಚೇರಿ ಹೊಂದಿದೆ ಎನ್ನಲಾದ ಒಆರ್‌ಬಿ ಸೋಲಾರ್‌ ಕಂಪನಿ ಸಹ ಯೋಗದಲ್ಲಿ ರಂಗನಕೆರೆ ಗ್ರಾಮದಲ್ಲಿ ಸುಮಾರು 15 ಮನೆಗಳಿಗೆ ಸೋಲಾರ್‌ ಅಳವಡಿಸಿದ್ದರು. 2 ದೀಪದ ಸಟ್‌ಗೆ 15 ರೂ. ಸಾವಿರ ಹಾಗೂ 3 ದೀಪದ ಸಟ್‌ಗೆ 20 ರೂ. ಸಾವಿರ ಹಣ ಸಾಲ ನೀಡಿತ್ತು. ದೀಪ ಅಳವಡಿಸಿದ ವೇಳೆ ಬೆಸ್ಕಾಂ ಬಿಲ್ನಲ್ಲಿ ಶೇ.40 ರಿಯಾಯಿತಿ ಹಾಗೂ ಬ್ಯಾಂಕ್‌ನಿಂದ ರಿಯಾಯಿತಿ ಕೊಡುವುದಾಗಿ ಗ್ರಾಹಕರಿಗೆ ಆಸೆ ಹುಟ್ಟಿಸಿತ್ತು. ಇದರಿಂದ ಸುಮಾರು 15 ರೈತರು ದೀಪ ಅಳವಡಿಸಿಕೊಂಡಿದ್ದರು.

ಕಂಪೆನಿ ಕಚೇರಿ ಖಾಲಿ: ಆರಂಭದಲ್ಲಿ 5 ವರ್ಷ ಗಳವರೆಗೆ ಉಚಿತ ಸೇವೆ ನೀಡುವುದಾಗಿ ಹೇಳಿದ್ದ ಒಆರ್‌ಬಿ ಕಂಪನಿ ಕೇವಲ ಒಂದು ವರ್ಷ ಮಾತ್ರ ಸೇವೆ ನೀಡಿ, ನಂತರ ತಮ್ಮ ಕಚೇರಿ ಖಾಲಿ ಮಾಡಿತ್ತು. ಆದರೆ, ದೀಪ ಅಳವಡಿಸಿದ 2 ವರ್ಷದಲ್ಲಿ ಹಾಳಾ ಗಿದೆ. ಈ ಬಗ್ಗೆ ಗ್ರಾಹಕರು ಹಲವು ಬಾರಿ ಸಂಬಂಧ ಪಟ್ಟ ಕಂಪನಿಯವರನ್ನು ಕರೆಸುವಂತೆ ಮನವಿ ಮಾಡಿದ್ದರು. ಆದರೆ, ಕಂಪನಿ ಮುಚ್ಚಿ ಹೋಗಿದೆ ಎಂಬ ಸಬೂಬು ಹೇಳಿ ಬ್ಯಾಂಕ್‌ ನವರು ಸುಮ್ಮ ನಾಗಿದ್ದರು. ಈಗ ಇದ್ದಕ್ಕಿದ್ದಂತೆ ಸೋಲಾರ್‌ ಅಳ ವಡಿಸಿಕೊಂಡಿರುವ ರೈತರು 45 ರೂ. ಸಾವಿರ ದವರೆಗೆ ಹಣ ಪಾವತಿಸುವಂತೆ ಬ್ಯಾಂಕ್‌ನಿಂದ ನೊಟೀಸ್‌ ನೀಡಿದ್ದರು. ಗ್ರಾಮದ ಸ್ತ್ರೀಶಕ್ತಿ ಸಂಘದ ಗುಂಪುಗಳಿಗೆ ಸಾಲ ನೀಡಲು ನಿಮ್ಮ ಗ್ರಾಮದ ಸೋಲಾರ್‌ ದೀಪ ಸಾಲ ಕಟ್ಟಿಸುವಂತೆ ಒತ್ತಡ ಹೇರುತ್ತಿದ್ದರು. ಇದರಿಂದ ಬೇಸತ್ತ ರೈತರು ರೈತ ಸಂಘದ ಮುಖಂಡ ಕೆಂಕೆರೆ ಸತೀಶ್‌ ಹಾಗೂ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್‌ ನೇತೃತ್ವದಲ್ಲಿ ಮುತ್ತಿಗೆ ಹಾಕಿದ್ದರು.

ಹೇಳಿದಂತೆ ನಡೆದುಕೊಂಡಿಲ್ಲ: ರೈತ ಸಂಘದ ಕೆಂಕೆರೆ ಸತೀಶ್‌ ಮಾತನಾಡಿ, ಕಂಪನಿ ಹಾಗೂ ಬ್ಯಾಂಕ್‌ ಮೊದಲು ಹೇಳಿದಂತೆ ನಡೆದುಕೊಂಡಿಲ್ಲ. ರೈತರಿಗೆ ಅನ್ಯಾಯ ಮಾಡಿದ್ದು, ಮಾಡಿದ ತಪ್ಪಿಗೆ ರೈತರಿಂದ ಕಡಿಮೆ ಹಣ ಪಾವತಿಸಿಕೊಂಡು ಸಾಲ ಮುಕ್ತ ಮಾಡುವಂತೆ ಬ್ಯಾಂಕ್‌ ವ್ಯವಸ್ಥಾಪಕರನ್ನು ಒತ್ತಾಯಿಸಿದರು. ಅಂತಹ ಅಧಿಕಾರ ತಮಗೆ ಇಲ್ಲದ ಕಾರಣ ಪ್ರಾದೇಶಿಕ ಕಚೇರಿಯನ್ನು ಭೇಟಿ ಮಾಡುವಂತೆ ತಿಳಿಸಿದರು.

ಈ ವೇಳೆ ರೈತರಾದ ಆರ್‌.ಟಿ.ನಾಗರಾಜು, ಎಚ್. ಪರಮೆಶ್‌, ಆದಂದಯ್ಯ, ಆರ್‌.ಬಿ. ನಾಗರಾಜು, ತಿಪ್ಪೇಸ್ವಾಮಿ, ಆರ್‌.ಸಿ.ವೀರಭದ್ರಯ್ಯ, ಟಿ.ಟಿ.ರುದ್ರಯ್ಯ, ರೈತ ಸಂಘದ ಮರುಳಪ್ಪ, ಓಂಕಾರಪ್ಪ ಮತ್ತಿತರರು ಇದ್ದರು.

ಟಾಪ್ ನ್ಯೂಸ್

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

4-pavagada

Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

10-up-yodhas

Pro Kabaddi: ದ್ವಿತೀಯ ಸ್ಥಾನಕ್ಕೆ ಯೋಧಾಸ್‌

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

9-ind-pak

Kho Kho ವಿಶ್ವಕಪ್‌: ಭಾರತ- ಪಾಕಿಸ್ಥಾನ ಉದ್ಘಾಟನ ಪಂದ್ಯ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.