ಶ್ರೀಮನ್ಮಹಾಭಾರತ ಮಂಗಳ್ಳೋತ್ಸವಕ್ಕೆ ಚಾಲನೆ

•ನಾಲ್ಕು ವೇದಗಳ ಸಂಗಮದ ಸನ್ನಿಧಾನವೇ ಮಹಾಭಾರತ: ವಿಶ್ವಪ್ರಿಯತೀರ್ಥರು

Team Udayavani, May 23, 2019, 4:28 PM IST

hubali-tdy-2..

ಧಾರವಾಡ: ಕಂಠಪಲ್ಲಿ ಸಮೀರಾಚಾರ್ಯ ಅವರಿಂದ ನಾಲ್ಕು ವರ್ಷಗಳ ಪರ್ಯಂತ ನಡೆದ ಶ್ರೀಮನ್ಮಹಾಭಾರತ ಮಂಗಳ್ಳೋತ್ಸವಕ್ಕೆ ಉಡುಪಿ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ಚಾಲನೆ ನೀಡಿದರು.

ಧಾರವಾಡ: ನಾಲ್ಕು ವೇದಗಳ ಸಂಗಮದ ಸನ್ನಿಧಾನವೇ ಮಹಾಭಾರತ ಆಗಿದೆ ಎಂದು ಉಡುಪಿಯ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.

ನಗರದ ಕವಿಸಂನ ಪುಂಡರೀಕ್ಷಕ ಸಭಾಂಗಣದ ವ್ಯಾಸಪೀಠ ವೇದಿಕೆಯಲ್ಲಿ ಲೋಕ ಕಲ್ಯಾಣಾರ್ಥ ಮೇ 22ರಿಂದ ಮೇ 26ರವರೆಗೆ ಹಮ್ಮಿಕೊಂಡ ಪಂಡಿತ ಕಂಠಪಲ್ಲಿ ಸಮೀರಾಚಾರ್ಯ ಅವರಿಂದ ನಾಲ್ಕು ವರ್ಷಗಳ ಪರ್ಯಂತ ನಡೆದ ಶ್ರೀಮನ್ಮಹಾಭಾರತ ಮಂಗಳ್ಳೋತ್ಸವಕ್ಕೆ ಚಾಲನೆ ನೀಡಿ ಅವರು ಆರ್ಶೀವಚನ ನೀಡಿದರು.

ಪ್ರತಿಯೊಬ್ಬರು ಎಲ್ಲ ವೇದಗಳನ್ನು ಅಧ್ಯಯನ ಮಾಡಲಾಗದು. ಇಂತಹ ಸಂದರ್ಭದಲ್ಲಿ ಮಹಾಭಾರತದ ಅಧ್ಯಯನದಿಂದ ವೇದಗಳ ಸನ್ನಿಧಾನ ಪ್ರಾಪ್ತಿ ಆಗುತ್ತದೆ. ಅದರಲ್ಲೂ ಇಡೀ ವಿಶ್ವಕ್ಕೆ ಕಣ್ಣಿನಂತೆ ಮಹಾಭಾರತ, ರಾಮಾಯಣ ಆಗಿದ್ದು, ಇವು ವಿಶ್ವಕ್ಕೆ ಶ್ರೇಷ್ಠ ಗ್ರಂಥಗಳಾಗಿವೆ ಎಂದರು.

ಭಾರತ ದೇಶ, ನಮ್ಮ ಸಂಸ್ಕೃತಿ ಆಚಾರ-ವಿಚಾರಗಳ ಬಗ್ಗೆ ಅಪಮಾನ, ಟೀಕಿಸುವ ಜನರಿಗೆ ತಕ್ಕ ಪಾಠ ಕಲಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ವಿಚಾರದ ಚಿಂತನೆಗಳ ಬೀಜ ಬಿತ್ತುವ ಕಾರ್ಯವಾಗಬೇಕು. ಯಾರೇ ತಪ್ಪು ಮಾಡಿದ್ದರೂ ಅದನ್ನು ನೇರವಾಗಿ ಹೇಳುವ, ಎದುರಿಸುವ ತಾಕತ್ತು ಕೊಡುವ ಶಕ್ತಿ ಮಹಾಭಾರತಕ್ಕಿದೆ. ಅದಕ್ಕಾಗಿ ಪ್ರತಿ ದಿನ ಅದರ ಒಂದು ಶ್ಲೋಕವನ್ನಾದರೂ ಮಾಡಬೇಕೆಂದು ಸಲಹೆ ನೀಡಿದರು.

ಮಹಾಭಾರತ-ರಾಮಾಯಣ ಗ್ರಂಥಗಳು ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡಿವೆ. ಈ ಗ್ರಂಥಗಳನ್ನು ನಾವು ಪ್ರತಿನಿತ್ಯ ಪಠಣ ಮಾಡಬೇಕು. ಈ ಮಹಾನ್‌ ಗ್ರಂಥಗಳ ಪರಿಚಯ ಇಂದಿನ ಜನಾಂಗಕ್ಕೆ ಅವಶ್ಯವಿದೆ. ನಮ್ಮ ಸಂಸ್ಕತಿಯ ಹಿರಿಮೆ ನಮಗೆ ಗೊತ್ತೇ ಇಲ್ಲ. ಮಹಾಪುರುಷರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಡಾ|ಸತ್ಯಧ್ಯಾನಾಚಾರ್ಯ ಕಟ್ಟಿ ಮಾತನಾಡಿ, ಮಕ್ಕಳು ಪೋಷಕರು ಮಾತು ಕೇಳುತ್ತಿಲ್ಲ. ಮನೆಯಲ್ಲಿ ಸಮ್ಮತಿಯ ಮದುವೆಗಳೇ ಆಗುತ್ತಿಲ್ಲ. ಆದ ಮದುವೆಗಳು ಮುರಿದು ಬೀಳುತ್ತಿವೆ. ಪೋಷಕರನ್ನು ವೃದ್ಧಾಶ್ರಮಕ್ಕೆ ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಮೌಲ್ಯಗಳು ನಶಿಸಿ ಹೋಗುತ್ತಿವೆ. ಹೀಗಾಗಿ ಸಮಾಜದಲ್ಲಿ ಮತ್ತೆ ಮೌಲ್ಯಗಳ ಪುನರ್‌ ಸ್ಥಾಪಿಸಲು ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.

ರಾಮಾಯಣ, ಮಹಾಭಾರತದಂತಹ ಶ್ರೇಷ್ಠ ಗ್ರಂಥಗಳನ್ನು ಬರೀ ಪತಿ-ಪತ್ನಿ, ಸಹೋದರರ ಜಗಳದ ಮನೋಭಾವಕ್ಕೆ ಹೋಲಿಸುತ್ತಿರುವುದು ವಿಷಾದನೀಯ. ಮೊಬೈಲ್, ಟಿವಿಗಳಿಂದ ಎಂದಿಗೂ ಮನಸ್ಸಿಗೆ ನೆಮ್ಮದಿ, ಸುಖ, ಶಾಂತಿ ಲಭಿಸಲಾರದು. ಬದಲಾಗಿ ಈ ಗ್ರಂಥಗಳಿಂದ ಮಾತ್ರವೇ ಸುಖ-ಶಾಂತಿ ಪಡೆಯಲು ಸಾಧ್ಯ. ಮಹಾಭಾರತ, ರಾಮಾಯಣದಂತಹ ಶ್ರೇಷ್ಠ ಗ್ರಂಥಗಳಿಂದ ಸಮಾಜ ದೂರವಾದಷ್ಟು ದುಃಖ, ಅಶಾಂತಿಗೆ ಸ್ವಾಗತ ಕೋರಿದಂತೆ ಎಂದರು.

ಪಂ|ಸಮೀರಾಚಾರ್ಯ ಕಂಠಪಲ್ಲಿ, ಡಾ|ಆರ್‌. ಜಿ. ಜೋಶಿ, ಎಸ್‌.ಎಂ.ಸರಾಫ್‌, ಪ್ರಕಾಶ ಬೇಗೂರ, ಕೃಷ್ಣಮೂರ್ತಿ, ಎಸ್‌.ಎನ್‌. ದೇಶಪಾಂಡೆ ಸೇರಿದಂತೆ ಹಲವರು ಇದ್ದರು. ತೇಜಸ್ವಿನಗರದ ತೇಜಸ್ವಿ ಮಹಿಳಾ ಮಂಡಳದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಂಗಳ್ಳೋತ್ಸವ ಪ್ರಯುಕ್ತ ಮೇ 26 ರವರೆಗೆ ದಿನನಿತ್ಯ ವಿವಿಧ ಕಾರ್ಯಕ್ರಮ ಜರುಗಲಿವೆ.

ಟಾಪ್ ನ್ಯೂಸ್

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.