ಇದು ಬುದ್ಧಿವಂತರ ಸಿನಿಮಾ!
ಉಪ್ಪಿ ಹೊಸ ಚಿತ್ರಕ್ಕೆ "ಬುದ್ಧಿವಂತ-2' ಟೈಟಲ್ ಫಿಕ್ಸ್
Team Udayavani, May 23, 2019, 5:01 PM IST
ನಟ ಉಪೇಂದ್ರ ಅವರು ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆ ಚಿತ್ರಕ್ಕೆ ಆಗಿನ್ನೂ ಶೀರ್ಷಿಕೆ ಪಕ್ಕಾ ಆಗಿರಲಿಲ್ಲ. ಈಗ ಆ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿದ್ದು, ಚಿತ್ರಕ್ಕೆ “ಬುದ್ಧಿವಂತ-2′ ಎಂದು ನಾಮಕರಣ ಮಾಡಲಾಗಿದೆ. ಈ ಹಿಂದೆ “ಬುದ್ಧಿವಂತ’ ಎಂಬ ಚಿತ್ರದಲ್ಲಿ ಉಪೇಂದ್ರ ನಟಿಸಿದ್ದರು. ಆ ಚಿತ್ರ ಹಿಟ್ ಆಗಿತ್ತು. ಈ ಚಿತ್ರದ ಕಥೆ ಕೂಡ ಆ ಶೀರ್ಷಿಕೆಯನ್ನೇ ಡಿಮ್ಯಾಂಡ್ ಮಾಡಿದ್ದರಿಂದ, ಕಥೆಗೆ ಅದು ಪೂರಕವಾಗುತ್ತದೆ ಎಂಬ ಉದ್ದೇಶದಿಂದ ಚಿತ್ರಕ್ಕೆ “ಬುದ್ಧಿವಂತ -2′ ಎಂದು ನಾಮಕರಣ ಮಾಡಲಾಗಿದೆ’ ಎಂಬುದು ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಅವರ ಹೇಳಿಕೆ.
ಅಂದಹಾಗೆ, ಚಿತ್ರಕ್ಕೆ ಮೌರ್ಯ ನಿರ್ದೇಶಕರು. ಇದು ಅವರ ಮೊದಲ ಚಿತ್ರ. ಕಥೆ ಕೇಳಿದ ಉಪೇಂದ್ರ ಅವರು ಚಿತ್ರ ಒಪ್ಪಿದ್ದಾರೆ, ಈ ಹಿಂದೆ “ಚಮಕ್’, “ಅಯೋಗ್ಯ’ ಮತ್ತು “ಬೀರ್‌ಬಲ್’ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕ ಚಂದ್ರಶೇಖರ್ ಅವರಿಗೂ ಹೊಸತನದ ಕಥೆ ಎನಿಸಿದ್ದರಿಂದ ಅವರೂ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೇ.24 ರಂದು “ಬುದ್ಧಿವಂತ-2′ ಚಿತ್ರಕ್ಕೆ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಲಿದ್ದು, ಮೇ.27 ರಿಂದ ಚಿತ್ರೀಕರಣ ಶುರುವಾಗಲಿದೆ.
ಈ ಚಿತ್ರದಲ್ಲಿ ಉಪೇಂದ್ರ ಅವರು ದ್ವಿಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ “ಬುದ್ಧಿವಂತ’ ಚಿತ್ರದಲ್ಲಿ ಹಲವು ಶೇಡ್ ಇರುವ ಪಾತ್ರಗಳ ಮೂಲಕ ಗಮನಸೆಳೆದಿದ್ದ ಉಪೇಂದ್ರ ಅವರು, ಪುನಃ ಈ ಚಿತ್ರದಲ್ಲಿ ದ್ವಿಪಾತ್ರಧಾರಿಯಾಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಇನ್ನು, ಚಿತ್ರಕ್ಕೆ ಇಬ್ಬರು ನಾಯಕಿಯರಿದ್ದಾರೆ. ಸೋನಾಲ್ ಮಾಂತೆರೋ ಮತ್ತು ಮೇಘನರಾಜ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ. ಈಗಾಗಲೇ ಉಪೇಂದ್ರ ಅವರ ಹಿಂದಿನ ಚಿತ್ರಗಳಿಗೆ ಗುರುಕಿರಣ್ ಸಂಗೀತದ ಸ್ಪರ್ಶವಿತ್ತು. ಅವರಿಬ್ಬರ ಕಾಂಬಿನೇಷನ್ ಮೋಡಿ ಮಾಡಿದ್ದರ ಬಗ್ಗೆ ಎಲ್ಲರಿಗೂ ಗೊತ್ತು. ಈಗ ಪುನಃ ಇಬ್ಬರ ಕಾಂಬಿನೇಷನ್‌ನಲ್ಲಿ ಚಿತ್ರ ಶುರುವಾಗಲಿದೆ. “ಬೀರ್‌ಬಲ್’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ, ಭರತ್ ಪರಶುರಾಮ್ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರಕ್ಕೆ ಯಾವ ಶೀರ್ಷಿಕೆ ಇಡಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಈಗ “ಬುದ್ಧಿವಂತ -2′ ಶೀರ್ಷಿಕೆ ಅಂತಿಮವಾಗಿದೆ. ಈ ಟೈಟಲ್ ಈಗ ಮತ್ತಷ್ಟು ಕುತೂಹಲ ಕೆರಳಿಸಿರುವುದಂತೂ ಸುಳ್ಳಲ್ಲ. ಉಪೇಂದ್ರ ಅವರು ಸಾಮಾನ್ಯವಾಗಿ ಕಥೆ ಒಪ್ಪುವುದು ಕಷ್ಟ. ಈ ಚಿತ್ರದ ಕಥೆ ಒಪ್ಪಿದ್ದಾರೆಂದರೆ, ಅಲ್ಲೊಂದು ವಿಶೇಷವಿದೆ. ಅದರಲ್ಲೂ “ಬುದ್ಧಿವಂತ -2′ ಟೈಟಲ್ ಇಟ್ಟಿರುವುದು ಚಿತ್ರದ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಬುಧವಾರ ಚಿತ್ರಕ್ಕೆ ಫೋಟೋ ಶೂಟ್ ಕೂಡ ಭರ್ಜರಿಯಾಗಿಯೇ ನಡೆದಿದೆ. ರಾಮ್ ಕೆ. ಲಕ್ಷ್ಮಣ್ ಸಂಭಾಷಣೆ ಬರೆದಿದ್ದಾರೆ. ಇನ್ನು, ಆರ್.ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ಅಭಿನಯಿಸಿರುವ “ಐ ಲವ್‌ಯು’ ಚಿತ್ರ ಜೂ.14 ರಂದು ಬಿಡುಗಡೆಯಾಗಲಿದ್ದು, ಅದಕ್ಕು ಮೊದಲೇ “ಬುದ್ಧಿವಂತ-2′ ಚಿತ್ರಕ್ಕೆ ಚಾಲನೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.