ದಾಸಪ್ಪರೈಯವರಿಗೆ ಮಾಧವ ಶೆಟ್ಟಿ ಪ್ರಶಸ್ತಿ

Team Udayavani, May 24, 2019, 5:50 AM IST

q-8

ಕಲಾವಿದನಾಗಿ ಮೇಳದ ವ್ಯವಸ್ಥಾಪಕರಾಗಿ ಯಕ್ಷಗಾನರಂಗದಲ್ಲಿ ಕೆ.ಹೆಚ್‌.ದಾಸಪ್ಪ ರೈಗಳದ್ದು ದೊಡ್ಡ ಹೆಸರು. ಕರ್ನಾಟಕ, ಕದ್ರಿ, ಕುಂಬ್ಳೆ, ಮಂಗಳಾದೇವಿ ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿದ ರೈಗಳದ್ದು ಸುಮಾರು ಐದಾರು ದಶಕಗಳ ಕಲಾಸೇವೆ. ತುಳು-ಕನ್ನಡ ಪ್ರಸಂಗಗಳ ಕಥಾನಾಯಕ ಮತ್ತು ಖಳನಾಯಕನಾಗಿ ಮೆರೆದ ರೈಗಳಿಗೆ ಕೋಟಿ-ಚೆನ್ನಯ ಪ್ರಸಂಗದ ಕೋಟಿಯ ಪಾತ್ರ ಅಪಾರ ಕೀರ್ತಿಯನ್ನು ತಂದು ಕೊಟ್ಟಿದೆ. ಮೂಡಬಿದ್ರೆ ಮಾಧವ ಶೆಟ್ಟರ ನಿಡುಗಾಲದ ಒಡನಾಡಿಯಾಗಿರುವ ಕೆ.ಹೆಚ್‌.ದಾಸಪ್ಪ ರೈ, ಮಾಧವ ಶೆಟ್ಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಮಾಧವ ಶೆಟ್ಟಿ
1930ರಲ್ಲಿ ತನ್ನ ಮೊದಲ ತಿರುಗಾಟ ಪ್ರಾರಂಭಿಸಿದ ಮಾಧವ ಶೆಟ್ಟರು ನಿತ್ಯವೇಷ, ಸ್ತ್ರೀವೇಷ, ಪುಂಡುವೇಷ, ಪೀಠಿಕೆ ವೇಷ ಹೀಗೆ ಹಂತಹಂತವಾಗಿ ಮೇಲೇರುತ್ತಾ ಹೋಗಿ ಬಣ್ಣದ ವೇಷ ನಿರ್ವಹಿಸುವುದಕ್ಕೂ ಸಮರ್ಥರಾದರು. ಕುಂಬ್ಳೆಯಿಂದ ಮೂಡಬಿದ್ರೆಗೆ ವಲಸೆ ಬಂದು ನೆಲೆಸಿದ ಶೆಟ್ಟರು ಮೂಡಬಿದ್ರೆ ಮಾಧವ ಶೆಟ್ಟಿ ಎಂದು ಕಲಾಲೋಕದಲ್ಲಿ ವಿಖ್ಯಾತರಾದರು.

ಕೂಡ್ಲು, ಕಟೀಲು, ಮುಲ್ಕಿ, ಧರ್ಮಸ್ಥಳ, ಕರ್ನಾಟಕ, ಕದ್ರಿ ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿದ ಮಾಧವ ಶೆಟ್ಟರ ಬಹುಕಾಲದ ತಿರುಗಾಟ ನಡೆದದ್ದು ಕಲ್ಲಾಡಿ ಮನೆತನದ ಕುಂಡಾವು ಮತ್ತು ಕರ್ನಾಟಕ ಮೇಳಗಳಲ್ಲಿ. ರಂಗಸ್ಥಳದಲ್ಲಿ ಅಸಾಧಾರಣ ವೇಷಧಾರಿಯಾಗಿ ಮೆರೆದ ಮಾಧವ ಶೆಟ್ಟರು ತಾಳಮದ್ದಳೆಯ ಅರ್ಥಧಾರಿಯಾಗಿಯೂ ಸೈ ಎನಿಸಿದ್ದಾರೆ. ಪಾತ್ರಗೌರವವರಿತು ಹಿತಮಿತವಾಗಿ ಚೊಕ್ಕವಾಗಿ ಮಾಧವ ಶೆಟ್ಟರ ಮಾತು ಪ್ರೇಕ್ಷಕ ಸಮುದಾಯವನ್ನು ಮೋಡಿಮಾಡುವಂತಿತ್ತು.

ದೇವೇಂದ್ರ, ಇಂದ್ರಜಿತು, ಹಿರಣ್ಯಾಕ್ಷ, ಹಿರಣ್ಯಕಶ್ಯಪ, ಕರ್ಣ, ಕಂಸ, ಕೌರವ, ರಾವಣ, ಮೈರಾವಣ, ಭೀಮ, ವಾಲಿ, ನರಕಾಸುರ, ಶೂರ್ಪನಖೀ, ಅಜಮುಖೀ…ಹೀಗೆ ರಾಜಬಣ್ಣ, ಹೆಣ್ಣುಬಣ್ಣ, ಎದುರುವೇಷ, ಪೀಠಿಕೆ ವೇಷ, ನಾಟಕೀಯ ವೇಷ ಮುಂತಾದ ಎಲ್ಲಾರೀತಿಯ ಪಾತ್ರಗಳನ್ನು ನಿರ್ವಹಿಸಿದವರು ಮಾಧವ ಶೆಟ್ಟರು. ತೆರೆಕಲಾಸು, ಸಭಾಕಲಾಸು, ತೆರೆಪೊರಪ್ಪಾಟುಗಳು, ಒಡ್ಡೋಲಗದ ಕ್ರಮಗಳು…ಹೀಗೆ ಸಮಗ್ರ ಸಂಗತಿಗಳ ಜ್ಞಾನವಿದ್ದ ಮೂಡಬಿದ್ರೆ ಮಾಧವ ಶೆಟ್ಟರು ರಂಗಸ್ಥಳದ ಸಮಗ್ರತೆಯ ಸಂಕೇತವಾಗಿದ್ದರು.

ರಾಜವೇಷಗಳಲ್ಲಿ ಅಪಾರಸಿದ್ಧಿ ಪಡೆದಿದ್ದ ಶೆಟ್ಟರು ರಾಮ, ನಳ, ಹರಿಶ್ಚಂದ್ರ ಮುಂತಾದ ಪಾತ್ರಗಳಲ್ಲಿ ಸೈ ಅನಿಸಿದ್ದರು. ಕೋಟಿ-ಚೆನ್ನಯ, ದೇವುಪೂಂಜ ಪ್ರಸಂಗದ ಕಾಂತಣ್ಣ, ದಳವಾಯಿ ದುಗ್ಗಣ್ಣ ಪ್ರಸಂಗದ ಯುವರಾಜ, ಸಿರಿಮಹಾತ್ಮೆಯ ಬಿರ್ಮಣ್ಣ ಪಾತ್ರಗಳು ಇವರಿಗೇ ಮೀಸಲು. ವೃದ್ಧನ ಪಾತ್ರವನ್ನು ಇವರಂತೆ ನಿರ್ವಹಿಸುತ್ತಿದ್ದ ಕಲಾವಿದ ಇವರೋರ್ವರೇ. ಪಾತ್ರಗಳಲ್ಲಿ ಎದ್ದು ತೋರುತ್ತಿದ್ದುದು ಭಾವಸಹಿತ ಅಭಿನಯ.

– ತಾರಾನಾಥ ವರ್ಕಾಡಿ

ಟಾಪ್ ನ್ಯೂಸ್

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

7-lokayuktha

Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.