ಥಟ್‌ ಅಂತ ಹೇಳಿ !


Team Udayavani, May 4, 2019, 6:00 AM IST

q-10

ಕಾಲೇಜಿನ ಗ್ರಂಥಾಲಯದ ಕಡೆ ಹೆಜ್ಜೆ ಹಾಕುತ್ತಿದ್ದ ನನ್ನ ಕಣ್ಣು ಪದೇಪದೇ ಮಿಟುಕುತ್ತಿತ್ತು. ಜೇಬಿನಲ್ಲಿದ್ದ ಮೊಬೈಲ್‌ ವೈಬ್ರೇಷನ್‌ ಮೋಡಿನಲ್ಲಿ ರಿಂಗಣಿಸಿತ್ತು. ತತ್‌ಕ್ಷಣ ಕರೆ ಸ್ವೀಕರಿಸಿದಾಗ ಮನ ಉಲ್ಲಸಿತಗೊಂಡಿತ್ತು. ಕಾರಣ ಆ ಕರೆ ಪ್ರಖ್ಯಾತ ಟಿ. ವಿ. ರಸಪ್ರಶ್ನಾ ಕಾರ್ಯಕ್ರಮ, “ಥಟ್‌ ಅಂತ ಹೇಳಿ’ ಯ ಕಡೆಯಿಂದ ಬಂದಿತ್ತು. ಬಹುದಿನಗಳ ವಾಂಛೆ ಕೈಗೂಡುವ ಕಾಲ ಬಂದೊದಗಿತ್ತು. ಉತ್ಸುಕ ಮನಸ್ಸಿನ, ಉತ್ತುಂಗ ಉತ್ಸಾಹ ಹೊರಗೆ ತೋರ್ಪಡಿಸುವ ಗೋಜಿಗೆ ಹೋಗಲಿಲ್ಲ.. ಆಜುಬಾಜು ಮೂರು ವರ್ಷಗಳ ಹಿಂದೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಕಾರ್ಯಕ್ರಮ “ಥಟ್‌ ಅಂತ ಹೇಳಿ’ ಕಡೆಯಿಂದ ಕರೆ ಬಂದಿತ್ತು.

ಹೊತ್ತಗೆ ಓದುವ ಹವ್ಯಾಸವು ಕಮ್ಮಿ ಆಗೋ ಹೊತ್ತಿಗೆ, ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಜ್ಞಾನ ದೀವಿಗೆ ಹಚ್ಚಿದ ಶ್ರೇಯ ಗಿನ್ನೆಸ್‌ ದಾಖಲೆಯ “ಥಟ್‌ ಅಂತಾ ಹೇಳಿ’ ಕಾರ್ಯಕ್ರಮದ್ದು. ಇದರಲ್ಲಿ ಭಾಗವಹಿಸಿದ್ದು ನನ್ನ ಜೀವನದಲ್ಲಿನ ಮಹತ್ತಮ ನೆನಪು ಎನ್ನಬಹುದು.

ಕಾಂಕ್ರೀಟ್‌ ಕಾಡಿನ ಅನ್ವೇಷಣಾಯಾನ!
ಅಂದು ಬಂದಿದ್ದ ಕರೆಯಲ್ಲಿ ರೆಕಾರ್ಡಿಂಗ್‌ ದಿನಾಂಕ ಮತ್ತಿತರ ವಿಚಾರಗಳನ್ನು ಉಲ್ಲೇಖ ಮಾಡಿದ್ದರು. ಯಾವ ತರದ ವಸನ, ಸಮಯದ ನೆವನದ ಬಗ್ಗೆ ತಿಳಿಹೇಳಿದ್ದರು. ಆದಾಗ್ಯೂ ಬೆಂದಕಾಳೂರಿನ ಏರಿಯಾಗಳ ಬಗ್ಗೆ ಅರಿಯದ ನಾನು ಗೆಳೆಯನ ರೂಮ್‌ ಒಂದರಲ್ಲಿ ಒಂದು ದಿನ ಮುಂಚಿತವಾಗಿಯೇ ಠಿಕಾಣಿ ಹೂಡಿ, ವೃಥಾ ಹುಡುಕಾಡುವ ಗೊಂದಲಕ್ಕೆ ತೆರೆ ಎಳೆದಿದ್ದೆ. ರೆಕಾರ್ಡಿಂಗ್‌ ದಿನದಂದು ಸ್ವಲ್ಪ ಗತ್ತಿನಿಂದಲೇ, ಕತ್ತೆತ್ತಿ ಚಂದನವನ್ನು ಅರಸುತ್ತ ಹೋದವನಿಗೆ ಬೃಹತ್‌ ಬೆಂಗಳೂರಿನ, ಬೃಹತ್‌ ದೂರದರ್ಶನದ ಟವರ್‌ ಸ್ವಾಗತಿಸಿತ್ತು. ಎನ್‌ಟ್ರಿ ಪಾಸ್‌ ಪಡೆದು, ಕಚೇರಿಯ ಒಳಗೆ ಕುಳಿತಾಗ ರೆಕಾರ್ಡಿಂಗ್‌ ಮಧ್ಯಾಹ್ನ 2 ಗಂಟೆಗೆ ಅಂದುಬಿಟ್ಟಿದ್ದರು. ಆಗಿನ್ನೂ ಸಮಯ 12:30.

ಹಾಟ್‌ಸೀಟ್‌ನ ಮೇಲೆ
ಊಟದ ವಿರಾಮದ ನಂತರ ವೇದಿಕೆಯ ಮೇಲಿನ ಹಾಟ್‌ಸೀಟ್‌ನ ಮೇಲೆ ಜುಮ್ಮನೆ ಕೂರುವ ಕ್ಷಣ. ಭಯದ ಬೆವರು ಒಸರದಷ್ಟು ಕೊರೆವ ಎಮತ್ತಷ್ಟೂ ಥರಗುಟ್ಟಿತ್ತು. ಎದುರುಗಡೆ ಕಾರ್ಯಕ್ರಮದ ದಶಕಗಳ ನಿಸ್ಪೃಹ ರೂವಾರಿ ಡಾ| ನಾ. ಸೋಮೇಶ್ವರರ ಉಪಸ್ಥಿತಿ. ನಗುಮುಖದ ಜತೆಗೆ, ಧೈರ್ಯದಿಂದ ಆಡುವ ಕೃತ್ತಿಮ ಸಲಹೆಗಳನ್ನ ನೀಡಿದರು. ಮನೆಯಲ್ಲಿ ಕುಳಿತು ಟಿ.ವಿ.ಯಲ್ಲಿ ಕಾರ್ಯಕ್ರಮ ನೋಡುತ್ತ sಚಠಿಜಿrಛಿs ಮಾಡುತ್ತಿದ್ದ ನನಗೆ ಅಲ್ಲಿ ನಿಜವಾದ ಬಿಸಿ ಮನದಟ್ಟಾಗಿತ್ತು. ಜವಾಬು ಗೊತ್ತಿದ್ದರೂ, ಜರೂರು ಮಾಡದೆ, ಜತನದಿಂದ ಓದುವಷ್ಟರಲ್ಲಿ ಪ್ರತಿಸ್ಪರ್ಧಿಗಳು ಬಝರ್‌ ಒತ್ತಿಬಿಟ್ಟಿರುತ್ತಿದ್ದರು. ಜಿದ್ದಿಗೆ ಬಿದ್ದು ಆಯ್ಕೆಗಳು ಬರುವ ಮುಂಚೆ ಬಝರ್‌ ಝೇಂಕರಿಸಿದರೆ ಸರಿ ಉತ್ತರ ನೀಡದೆ ವಿಧಿಯಿಲ್ಲ . ಅದರಲ್ಲೂ “ನೇಗಿಲು’ ಎಂಬ ಸಮಾನಾರ್ಥಕ ಪದ ಕೇಳಿದಾಗ “ರಂಟೆ’ ಅನ್ನುವ ಪದ ಹೊಳೆದಿತ್ತಾದರೂ ಹಾಟ್‌ಸೀಟ್‌ನ ಪ್ರಭಾವದಿಂದಲೋ ಏನೋ ಮೊದಲ ಆಯ್ಕೆ ಬಂದಾಗ ಉತ್ತರ ನೀಡಿದ್ದೆ. 2-3 ದಿನಗಳಿಂದ ಸತತ ಪ್ರಯತ್ನ ಪಟ್ಟಿದ್ದ ಲೆಕ್ಕದ ಪ್ರಶ್ನೆ ಸರಿಯಾದ ಉತ್ತರ ನನ್ನ ಕೈಯಿಂದ ಬರಿಸಿತ್ತು. ಪರಿಪೂರ್ಣ ಪ್ರತಿಸ್ಪರ್ಧಿಗಳ ನಡುವೆ ನಡೆದ ಪೈಪೋಟಿ ಕಾರ್ಯಕ್ರಮ ಕಳೆಗಟ್ಟಿಸಿತ್ತು. something is better than nothing ಅನ್ನುವಂತೆ ಮೂರು ಪುಸ್ತಕಗಳು ನನ್ನ ಕೈ ಸೇರಿದವು.

ವರ್ಷಗಳೂ ಕಳೆದರೂ ಎಲ್ಲಿಯೂ ಘನತೆಗೆ ಚ್ಯುತಿ ಬಾರದೆ ಹಳೆಯ ಸೊಗಡನ್ನು ಮುಂದುವರಿಸುತ್ತ ಬಂದ, “ಥಟ್‌ ಅಂತ ಹೇಳಿ’ ಕಾರ್ಯಕ್ರಮಕ್ಕೆ ಹ್ಯಾಟ್ಸ್‌ ಆಪ್‌ ಎನ್ನಲೇ ಬೇಕು. ಅಷ್ಟಕ್ಕೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾವು ಮಾಡಬೇಕಾದಿದಿಷ್ಟೆ : producer.thattantaheligmail.com ಮಿಂಚಂಚೆಗೆ ಸ್ವ-ವಿವರಗಳನ್ನ ಇತ್ತರೆ ಸಾಕು.

ಸುಭಾಷ್‌ ಮಂಚಿ, 
ಎಂಬಿಎ, ಪ್ರವಾಸೋದ್ಯಮ ವಿಭಾಗ, ಮಂಗಳಗಂಗೋತ್ರಿ

ಟಾಪ್ ನ್ಯೂಸ್

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.