ಮತ ಎಣಿಕೆ ಕೇಂದ್ರದ ಬಗ್ಗೆಯೇ ಆಕ್ಷೇಪ; ಕಾರ್ಯಕರ್ತರ ಪರದಾಟ!
Team Udayavani, May 24, 2019, 6:00 AM IST
Opposition to vote counting center; Workers Fight!
ಮಹಾನಗರ: ಇದೇ ಮೊದಲ ಬಾರಿಗೆ ದ.ಕ. ಲೋಕಸಭಾ ಕ್ಷೇತ್ರದ ಮತ ಎಣಿಕೆ ನಗರದಿಂದ ಸಂಪೂರ್ಣ ಹೊರಗೆ ಸುರ ತ್ಕಲ್‌ನಲ್ಲಿ ನಡೆದ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದ ಪಕ್ಷದ ಕಾರ್ಯ ಕರ್ತರಿಗೆ ಮತ ಎಣಿಕೆ ಕೇಂದ್ರಕ್ಕೆ ಬರಲು ಸಮಸ್ಯೆ ಎದುರಾಯಿತು.
ಜತೆಗೆ, ಹೆದ್ದಾರಿ ಸಂಚಾರ ನಿರ್ಬಂಧದ ಹಿನ್ನೆಲೆ ಯಲ್ಲಿ ಬಹುತೇಕ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಬರಲು ಪರದಾ ಡುವಂತಾ ಯಿತು. ಹೀಗಾಗಿ ಇದೇ ಮೊದಲ ಬಾರಿಗೆ ಮತ ಎಣಿಕೆ ಕೇಂದ್ರದ ಸುತ್ತ ಕಾರ್ಯ ಕರ್ತರೇ ಇರಲಿಲ್ಲ. ಬದಲಾಗಿ ಪೊಲೀಸ್ ಬಂದೋಬಸ್ತ್ ಮಾತ್ರ ಕಾಣಿಸುತ್ತಿತ್ತು.
ಮತ ಎಣಿಕೆಗೆ ಬರೋಬ್ಬರಿ 1 ತಿಂಗಳು ಕಾಯಬೇಕಾದ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಹಾಗೂ ವಿವಿ ಪ್ಯಾಟ್‌ಗಳನ್ನು ಇಡಲು ಸೂಕ್ತ ಸ್ಥಳಾವಕಾಶದ ಅಗತ್ಯದ ಕಾರಣದಿಂದ ಮತ ಎಣಿಕೆ ಕೇಂದ್ರವನ್ನು ಈ ಬಾರಿ ಸುರತ್ಕಲ್‌ಗೆ ಶಿಫ್ಟ್ ಮಾಡಲಾಗಿತ್ತು. ಕೊಣಾಜೆಯ ಮಂಗಳೂರು ವಿ.ವಿ.ಯಲ್ಲಿ ಮತ ಎಣಿಕೆ ಮಾಡುವ ಬಗ್ಗೆಯೂ ಒಂದೊಮ್ಮೆ ಜಿಲ್ಲಾಡಳಿತ ಚರ್ಚಿಸಿ, ಕೊನೆಗೆ ಸುರತ್ಕಲ್ ಕೇಂದ್ರವನ್ನು ಆಯ್ಕೆ ಮಾಡಿತ್ತು.
2009ರ ದ.ಕ. ಲೋಕಸಭಾ ಚುನಾವಣೆ ಮತ ಎಣಿಕೆ ಮಂಗಳೂರಿನ ಕೆನರಾ ಕಾಲೇಜು ಆವರಣದಲ್ಲಿ ನಡೆದಿತ್ತು. ಇದರಿಂದಾಗಿ ನಗರ ಮಧ್ಯಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಿಂದ ಅನಂತರದ (2014) ಮತ ಎಣಿಕೆ ನಗರದಿಂದ ಸ್ವಲ್ಪ ಹೊರವಲಯದ ಬೋಂದೆಲ್ ಮಹಾತ್ಮಾ ಗಾಂಧಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಸ್ಥಳಾಂತರ ವಾಗಿತ್ತು. ಕಳೆದ ಬಾರಿಯ ವಿಧಾ ನಸಭಾ ಚುನಾವಣೆ ಮತ ಎಣಿಕೆಯೂ ಬೋಂದೇಲ್‌ನಲ್ಲಿಯೇ ನಡೆದಿತ್ತು. ಜತೆಗೆ, ಮಂಗÙ ೂರಿನ ಕೆಪಿಟಿ, ಪಾದುವ ಹೈಸ್ಕೂಲ್, ಸ್ಟೇಟ್‌ಬ್ಯಾಂಕ್ ಬಳಿಯ ರೊಸಾರಿಯೋ ಕಾಲೇಜಿನ ಆವರಣದಲ್ಲಿ ವಿವಿಧ ಚುನಾ ವಣೆಯ ಮತ ಎಣಿಕೆ ನಡೆದಿತ್ತು.
ಬಿಗಿ ಭದ್ರತೆಯ ವ್ಯವಸ್ಥೆಗೆ ಈ ಬಾರಿ ಮತದಾನ ಕೇಂದ್ರವನ್ನು ಮಂಗಳೂರಿನ ಹೊರ ವಲಯದ ಸುರತ್ಕಲ್‌ಗೆ ಸ್ಥಳಾಂತರಿ ಸಲಾಗಿತ್ತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು. ಮತ ಎಣಿಕೆಯನ್ನು ವಿವಿಧ ರೀತಿಯಲ್ಲಿ ಸುಗಮ ಮತ್ತು ಸುವ್ಯವಸ್ಥಿತವಾಗಿಸಲು ಎನ್‌ಐಟಿಕೆ ಆವರಣ ಆಯ್ಕೆ ಮಾಡಲಾಗಿತ್ತು.
ಬೋಂದೆಲ್ ಎಂಜಿಸಿಯಲ್ಲಿ ಮತ ಎಣಿಕೆ ಮಾಡುವ ಸಂದರ್ಭ ಮಂಗಳೂರು ವಿಮಾನ ನಿಲ್ದಾಣ ರಸ್ತೆಯನ್ನು ಬೋಂದೆಲ್ ಚರ್ಚ್ ಬಳಿಯಿಂದ ಬೋಂದೆಲ್ ವೃತ್ತದ ತನಕ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಬಂದ್ ಮಾಡಬೇಕಾಗುತ್ತದೆ. ಇದರಿಂದ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ತೊಂದರೆ ಯಾಗುತ್ತದೆ. ಕಳೆದ ಎರಡು ಬಾರಿಯೂ ಈ ಸಮಸ್ಯೆ ಎದುರಾಗಿತ್ತು. ಜತೆಗೆ, ನಗರದ ಕಾಲೇಜು ಆವರಣದಲ್ಲಿ ಮತ ಎಣಿಕೆ ನಡೆಸಿದರೆ ಪಕ್ಷಗಳ ಬೆಂಬಲಿಗರು ಜಮಾಯಿಸುವುದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗುತ್ತದೆ. ಈ ಎಲ್ಲ ಉದ್ದೇಶಗಳಿಂದ ಮತ ಎಣಿಕೆ ಕೇಂದ್ರವನ್ನು ನಗರದಿಂದ ಹೊರ ವಲಯಕ್ಕೆ ಬದಲಾಯಿಸಲಾಗಿತ್ತು. ಆದರೆ, ಎನ್‌ಐಟಿಕೆಯ ಮುಂಬಾಗ ಹೆದ್ದಾರಿ ಇರುವ ಕಾರಣದಿಂದ ಉಡುಪಿ-ಕಾಸರಗೋಡು ಭಾಗಕ್ಕೆ ತೆರಳುವ ವಾಹನಗಳು ಮಾತ್ರ ದಿನಪೂರ್ತಿ ಸಮಸ್ಯೆ ಅನುಭವಿಸುವಂತಾಯಿತು. ಹೆದ್ದಾರಿ ಬದಿಯಲ್ಲಿ ಮತ ಎಣಿಕೆ ಮಾಡಿ ಎಲ್ಲರಿಗೂ ಸಮಸ್ಯೆಯಾಯಿತು ಎಂದು ಸಾರ್ವಜನಿಕರು ಆಕ್ಷೇಪಿಸಿದ ಘಟನೆಯೂ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.