ಅಭಿಷೇಕ್ ಹೇಳಿದ ಅಮರ್ ಚಿತ್ರಕಥೆ
ಅಪ್ಪನ ಮಾತಿಗೆ ಮಗನ ಕಾತರ
Team Udayavani, May 24, 2019, 6:00 AM IST
ರೆಬೆಲ್‌ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ “ಅಮರ್’ ಇದೇ ಮೇ 31ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಅಮರ್ ವಿಶೇಷತೆಗಳ ಬಗ್ಗೆ ಮಾತಿಗಿಳಿದ ಅಭಿಷೇಕ್ ತೆರೆಮುಂದೆ, ತೆರೆಹಿಂದಿನ ಒಂದಷ್ಟು ಸಂಗತಿಗಳನ್ನು ಮೆಲುಕು ಹಾಕಿದ್ದಾರೆ.
ಅಂಬಿ ಮೆಚ್ಚಿದ ಫಸ್ಟ್‌ಹಾಫ್
“ಅಮರ್’ ಚಿತ್ರದ ಪ್ರತಿಯೊಂದು ಹಂತದಲ್ಲೂ ಅಂಬರೀಶ್ ಚಿತ್ರತಂಡಕ್ಕೆ ಸಾಕಷ್ಟು ಸಲಹೆ, ಸೂಚನೆ ಕೊಡುತ್ತಿದ್ದರು. ಚಿತ್ರದ ಕಥೆ, ಟೈಟಲ್, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯಿಂದ ಹಿಡಿದು ಚಿತ್ರದ ಶೂಟಿಂಗ್‌ವರೆಗೂ ಅಂಬಿ ಎಲ್ಲವನ್ನೂ ಗಮನಿಸುತ್ತಿದ್ದರು. ಈ ಬಗ್ಗೆ ಮಾತನಾಡುವ ಅಭಿಷೇಕ್, “”ಅಮರ್’ ಸಿನಿಮಾ ಏನಾಗುತ್ತಿದೆ, ಹೇಗೆ ಬರುತ್ತಿದೆ ಹೀಗೆ ಚಿತ್ರದ ಬಗ್ಗೆ ಪ್ರತಿಯೊಂದು ಅಪ್ಡೆàಡ್ಸ್ ಅನ್ನು ತಿಳಿದುಕೊಳ್ಳುತ್ತಿದ್ದರು. ಅಪ್ಪ ತೀರಿಹೋಗುವ ಮುನ್ನ ಸಿನಿಮಾದ ಫಸ್ಟ್‌ಹಾಫ್ ನೋಡಿದ್ದರು. ನನ್ನ ಆ್ಯಕ್ಟಿಂಗ್ ಬಗ್ಗೆ ಏನಾದ್ರೂ ಹೇಳಬಹುದು ಅಂತ ನಾನೂ ಕಸಿವಿಸಿಯಲ್ಲಿದ್ದೆ. ಆದ್ರೆ ಫಸ್ಟ್ ಹಾಫ್ ನೋಡಿದವರು “ನೀನು ಬದುಕೋತಿಯಾ ಬಿಡ್ಲಾ..’ ಅಂತಾ ಹೇಳಿದ್ರು. ನನ್ನ ಕಾನ್ಫಿಡೆನ್ಸ್ ಬಿ¨ªೋಗುತ್ತೆ ಅಂತಾ ಅಪ್ಪ ನನ್ನ ಆ್ಯಕ್ಟಿಂಗ್ ಬಗ್ಗೆ ಯಾವಾಗಲೂ ಕ್ರಿಟಿಕ್ ಮಾಡುತ್ತಿರಲಿಲ್ಲ. ಬದಲಾಗಿ ಅಮ್ಮನೇ ಎಲ್ಲವನ್ನು ಹೇಳ್ತಿದ್ರು. ನನ್ನ ಫಸ್ಟ್ ಸಿನಿಮಾದ ಕೆಲವು ದೃಶ್ಯಗಳನ್ನು ಅಪ್ಪ ನೋಡಿ ಮೆಚ್ಚಿದ್ದರು ಎಂಬ ಖುಷಿ, ಹೆಮ್ಮೆ ಇದೆ’ ಎನ್ನುತ್ತಾರೆ ಅಭಿಷೇಕ್.
ಧೈರ್ಯ ತಂದ ದರ್ಶನ್ ಮಾತು
ಇನ್ನು “ಅಮರ್’ ಚಿತ್ರದ ಆರಂಭದ ದಿನಗಳಿಂದಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ “ಅಮರ್’ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಬಗ್ಗೆ ಮಾತನಾಡುವ ಅಭಿಷೇಕ್, “ದರ್ಶನ್ ಅವರು ನನಗೆ ಹಿರಿಯ ಅಣ್ಣನಂತೆ. ಅಪ್ಪಾಜಿ ಮೊದಲ ಸಲ ಸೆಟ್‌ಗೆ ಬಂದಾಗ ಭಯ ಆಗಿತ್ತು. ಆಮೇಲೆ ದರ್ಶನ್ ಸೆಟ್‌ಗೆ ಬಂದಾಗ ಅಂಥದ್ದೊಂದು ಭಯ ಕಾಣಿಸ್ತು. ಇದನ್ನ ಸ್ವತಃ ಅವರ ಬಳಿಯೇ ಹೇಳಿದ್ದೆ. ಅದಕ್ಕೆ ಅವರೊಂದು ಕಥೆ ಹೇಳಿದ್ರು. ಅಂಬರೀಶ್ ಜೊತೆ ದರ್ಶನ್ ಮೊದಲ ಸಿನಿಮಾ ಅಣ್ಣಾವ್ರು ಮಾಡಿದಾಗ ಅಪ್ಪಾಜಿ ಜೊತೆ ದರ್ಶನ್ ಅವರ ಮೊದಲ ದೃಶ್ಯವಿತ್ತಂತೆ. ಆಗ ದರ್ಶನ್ ನರ್ವಸ್ ಇದ್ರೂ ಚೆನ್ನಾಗಿ ಮಾಡಿದ್ರಂತೆ. ಅದಕ್ಕೆ ಅಪ್ಪಾಜಿ ಕೇಳಿದ್ರಂತೆ “ಏನೋ ಎಲ್ಲರಿಗೂ ನನ್ನ ಕಂಡ್ರೆ ಒಂಥರಾ ಭಯ. ನೀನು ಕಣ್ಣಲ್ಲಿ ಕಣ್ಣಿಟ್ಟು ಡೈಲಾಗ್ ಹೊಡೆದೆ’ ಎಂದರಂತೆ. ಅದಕ್ಕೆ ದರ್ಶನ್ “ಅಪ್ಪಾಜಿ ಬೇಜಾರಾಗಬೇಡಿ, ಆ್ಯಕ್ಷನ್ ಅಂತ ಡೈರೆಕ್ಟರ್ ಹೇಳಿದ್ಮೇಲೆ ನೀವು ಆ್ಯಕ್ಟರೇ, ನಾನು ಆ್ಯಕ್ಟರ್ ಅಷ್ಟೆ. ದೊಡ್ಡವರು, ಸಣ್ಣವರೆಂದಿಲ್ಲ ಅಂಥ ಹೇಳಿದ್ರಂತೆ. ಅದನ್ನೇ ನನಗೂ ಹೇಳಿದ್ರು. ಆ ಮಾತು ನನಗೆ ಹೊಸ ಎನರ್ಜಿ ತಂದುಕೊಟ್ಟಿತು. “ಅಮರ್’ ಶುರುವಾದಾಗಿನಿಂದ ಇಲ್ಲಿಯವರೆಗೆ ಪ್ರತಿಹಂತದಲ್ಲೂ ಅವರು ನಮ್ಮ ಜೊತೆಗಿದ್ದಾರೆ. ಅದನ್ನು ಮರೆಯುವಂತಿಲ್ಲ. ದರ್ಶನ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಚಿತ್ರಕ್ಕೆ ಶಕ್ತಿ ಹೆಚ್ಚಿಸಿದೆ’ ಎನ್ನುತ್ತಾರೆ.
ವಾಕಿಂಗ್ ಸ್ಟೈಲ್ ಮತ್ತು ಅಂಬಿ ಮಾತು
ನಟನಾಗಿ ತನ್ನ ವೀಕ್‌ನೆಸ್‌ಗಳ ಬಗ್ಗೆ ಮಾತನಾಡುವ ಅಭಿಷೇಕ್, “”ಅಮರ್’ ಸಿನಿಮಾ ಮಾಡುವ ಮುನ್ನ ನನಗೆ ಸಾವಿರಾರು ವೀಕ್‌ನೆಸ್ ಇತ್ತು. ಅದನ್ನೆಲ್ಲ ಹೇಳುತ್ತಾ ಹೋದರೆ, ಸಿನಿಮಾದಲ್ಲಿ ಇರೋದಕ್ಕೆ ಆಗುವುದಿಲ್ಲ. ಆದರೆ ನಮ್ಮ ಎಲ್ಲಾ ವೀಕ್‌ನೆಸ್‌ಗಳನ್ನು ನಮ್ಮ ಜೊತೆಯಲ್ಲಿದ್ದವರು ಹೇಳಿದಾಗ ನಾವು ತಿದ್ದಿಕೊಳ್ಳಬಹುದು. ಅಂಥ ವೀಕ್‌ನೆಸ್‌ಗಳಲ್ಲಿ ನನ್ನ ವಾಕಿಂಗ್ ಸ್ಟೈಲ್ ಕೂಡ ಒಂದು. ಅಪ್ಪನಿಗೆ ನನ್ನ ವಾಕಿಂಗ್ ಸ್ಟೈಲ್ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅದನ್ನು ಸರಿಪಡಿಸಿ ಆ್ಯಕ್ಟ್ ಮಾಡಿಸುವಂತೆ ಡೈರೆಕ್ಟರ್‌ಗೂ ಹೇಳಿದ್ದರು. ಇನ್ನು ನಿರ್ದೇಶಕರು ಕೂಡ ಅವೆಲ್ಲಾ ತಪ್ಪುಗಳನ್ನು ತಿದ್ದಿ ಸರಿಯಾಗಿ ನಟಿಸುವಂತೆ ಮಾಡಿ¨ªಾರೆ. ಮೊದಲ ಸಿನಿಮಾದಲ್ಲೇ ಸಾಕಷ್ಟು ಕಲಿತಿದ್ದೇನೆ. ಇನ್ನೂ ಕಲಿಯುವುದು ತುಂಬಾ ಇದೆ. ನಿಮ್ಮ ಸಿನಿಮಾದಲ್ಲಿ ನಿಮ್ಮ ಅಪ್ಪನ ಸ್ಟೈಲ್ ಜಾಸ್ತಿ ಇರುತ್ತದೆಯಾ ಅಂತ ತುಂಬ ಜನ ಕೇಳ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ಖಂಡಿತ ಅಪ್ಪನ ಸ್ಟೈಲ್ ಇರೋದಿಲ್ಲ ಪಾತ್ರದಲ್ಲಿ ತುಂಬಾನೇ ಬದಲಾವಣೆ ಇರುತ್ತೆ’ ಎನ್ನುವುದು ಅಭಿಷೇಕ್ ಮಾತು.
ಮೊದಲ ಭಯ
“”ಅಮರ್’ ಚಿತ್ರದಲ್ಲಿ ಅಭಿಷೇಕ್ ಮೊದಲ ಬಾರಿ ಕ್ಯಾಮರಾ ಎದುರಿಸುವಾಗ ಸಾಕಷ್ಟು ಭಯಗೊಂಡಿದ್ದರಂತೆ. ಈ ಬಗ್ಗೆ ಮಾತನಾಡುವ ಅಭಿಷೇಕ್, ಅಂಬರೀಶ್ ಮಗ ಹೇಗೆ ಆ್ಯಕ್ಟಿಂಗ್ ಮಾಡಬಹುದು ಎಂಬ ಕುತೂಹಲ ಬಹುತೇಕರಲ್ಲಿ ಇರುತ್ತದೆ. ಹಾಗಾಗಿ, ನಾನು ಹೇಗೆ ಆ್ಯಕ್ಟಿಂಗ್ ಮಾಡುತ್ತೇನೆ ಅಂತ ನೋಡಲು ಸಾಕಷ್ಟು ಜನ ಇದ್ದರು. ನಾನೇನಾದರೂ ಸರಿಯಾಗಿ ಆ್ಯಕ್ಟಿಂಗ್ ಮಾಡದಿದ್ದರೆ, ನೋಡಿದವರು ಏನಂದುಕೊಳ್ಳುತ್ತಾರೋ ಎನ್ನುವ ಆತಂಕ ಮನದಲ್ಲಿತ್ತು. ಅದೇ ಆತಂಕದಲ್ಲಿಯೇ ಸೆಟ್‌ಗೆ ಹೋಗಿ ಫಸ್ಟ್‌ಡೇ ಕ್ಯಾಮರಾ ಎದುರಿಸಿದ್ದೆ. ಆದರೆ ಮೊದಲ ದೃಶ್ಯದ ಅಭಿನಯದ ನಂತರ ಅಲ್ಲಿದ್ದವರಿಂದ ಬಂದ ಪ್ರತಿಕ್ರಿಯೆ ಕಂಡು ನನ್ನ ನರ್ವಸ್ ದೂರವಾಯ್ತು’ ಎನ್ನುತ್ತಾರೆ ಅಭಿಷೇಕ್
“ನನಗೆ ಮೊದಲಿನಿಂದಲೂ ಆ್ಯಕ್ಷನ್ ದೃಶ್ಯಗಳು ಅಂದ್ರೆ ಇಷ್ಟ. ಹಾಗಾಗಿ ಅಮರ್ ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳನ್ನ ಮಾಡೋದು ಸುಲಭವಾಯಿತು. ಆದ್ರೆ ಚಿತ್ರದ ರೊಮ್ಯಾನ್ಸ್ ದೃಶ್ಯಗಳು ನನಗೆ ಅಷ್ಟಾಗಿ ಒಗ್ಗದಿದ್ದ ಕಾರಣ ಅವುಗಳನ್ನು ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದೆ. ಆ್ಯಕ್ಷನ್ ದೃಶ್ಯಗಳನ್ನು ಮಾಡಿದ ಬಳಿಕ ಹತ್ತಾರು ಜನರಿಗೆ ಹೊಡೆದ ಫೀಲ್, ಇನ್ನಷ್ಟು ಜನರಿಗೆ ಹೊಡೆಯಬಲ್ಲೆ ಎನ್ನುವ ಎನರ್ಜಿ ಬರುತ್ತಿತ್ತು. ಆದರೆ ರೊಮ್ಯಾನ್ಸ್ ದೃಶ್ಯಗಳು ಹಾಗಲ್ಲ’ ಎನ್ನುವ ವಿವರಣೆ ಅಭಿಷೇಕ್ ಅವರದ್ದು.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.