ಪಟ್ನಾಯಕ್ ಬಿಜೆಡಿಗೆ ಮೋದಿ-ಅಮಿತ್ ಶಾ ಎಚ್ಚರಿಕೆ
Team Udayavani, May 24, 2019, 3:05 AM IST
ಭುವನೇಶ್ವರ: ಜಗನ್ನಾಥನ ಕ್ಷೇತ್ರ ಒಡಿಶಾದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಬಿಜು ಜನತಾ ದಳ ಗರಿಷ್ಠ 13 ಲೋಕಸಭಾ ಸ್ಥಾನ ಗೆದ್ದಿದೆ. ಆದರೂ ಪಕ್ಷದ ಪಾಳೆಯದಲ್ಲಿ ಸಂತಸದ ವಾತಾವರಣವೇನು ಕಾಣುತ್ತಿಲ್ಲ. ಇದಕ್ಕೆ ಕಾರಣ, 2014ರ ಚುನಾವಣೆಯಲ್ಲಿ 20 ಸೀಟುಗಳನ್ನು ಗೆದ್ದಿದ್ದ ಬಿಜೆಡಿ, ಈ ಬಾರಿ 8 ಸೀಟುಗಳನ್ನು ಕಳೆದುಕೊಂಡಿರುವುದು.
ಒಡಿಶಾದಲ್ಲಿರುವ 21 ಸ್ಥಾನಗಳಲ್ಲಿ, ಈ ಬಾರಿ ಬಿಜೆಪಿ 08 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಳೆದ ಬಾರಿ ಕೇವಲ 1 ಸ್ಥಾನ ಗೆದ್ದಿದ್ದ ಅದು, 7 ಸ್ಥಾನಗಳನ್ನು ಹೆಚ್ಚುವರಿಯಾಗಿ ಬಾಚಿಕೊಂಡಿದೆ. ಈ ಬಾರಿ ಉತ್ತರಪ್ರದೇಶದಲ್ಲಿ ಕಳೆದುಕೊಳ್ಳಬಹುದಾದ ಸ್ಥಾನಗಳನ್ನು ಒಡಿಶಾದಲ್ಲೂ ಬಾಚಿಕೊಳ್ಳುವ ಯೋಜನೆಯೊಂದು ಬಿಜೆಪಿ ಪಾಳೆಯದಲ್ಲಿ ಸಿದ್ಧವಾಗಿತ್ತು. ಅದರಲ್ಲಿ ಅಮಿತ್ ಶಾ ಸ್ಪಷ್ಟ ಯಶಸ್ಸು ಗಳಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರವಾದ ಒಡಿಶಾದ ಪುರಿಯಲ್ಲಿ ಬಿಜೆಪಿ ನಾಯಕ ಸಂಭಿತ್ ಪಾತ್ರ, ಹಾಲಿ ಸಂಸದ ಬಿಜೆಡಿ ಪಕ್ಷದ ಪಿನಾಕಿ ಮಿಶ್ರಾ ಅವರನ್ನು 1600 ಮತಗಳಿಂದ ಸೋಲಿಸಿದ್ದಾರೆ. ಈ ಮೂಲಕ ಬಿಜೆಡಿಯ ಭದ್ರಕೋಟೆ ಎಂದೇ ಹೆಸರಾದ ಪುರಿಗೆ ಬಿಜೆಪಿ ಲಗ್ಗೆಯಿಟ್ಟಿದೆ. ನಾಲ್ಕು ಹಂತಗಳಲ್ಲಿ ನಡೆದಿದ್ದ ಚುನಾವಣೆಗೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಫ್ಯಾನಿ ಚಂಡಮಾರುತದ ಕಾರಣದಿಂದಾಗಿ ಹೆಚ್ಚಿನ ಮತದಾರರು ಮತ ಚಲಾಯಿಸಲು ಆಸಕ್ತಿ ತೋರಿರಲಿಲ್ಲ.
ಈ ಬಾರಿಯ ಬಿಜೆಪಿ ಯಶಸ್ಸು, ಆಡಳಿತ ಪಕ್ಷಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೊಂದೆಡೆ ಕಾಂಗ್ರೆಸ್, ಈ ಬಾರಿಯೂ ಒಂದೂ ಸ್ಥಾನ ಗೆದ್ದಿಲ್ಲ.
ಮೋದಿ ಮತ್ತು ಅಮಿತ್ ಶಾ ಇಬ್ಬರೂ ರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಡಗೂಡಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು. ಆದರೆ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಅದೇಕೋ ಪ್ರಚಾರಕ್ಕೆ ಮನಸ್ಸು ಮಾಡಲಿಲ್ಲ. ಸ್ಥಳೀಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ರಾಜ್ಯವನ್ನು ಕಡೆಗಣಿಸುತ್ತಿದ್ದಾರೆ ಎಂದು ಅಸಮಾಧಾನ ತೋಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮತದಾನಕ್ಕೆ ಜನರ ನಿರಾಸಕ್ತಿ: ನಾಲ್ಕು ಹಂತಗಳಲ್ಲಿ ನಡೆದಿದ್ದ ಚುನಾವಣೆಗೆ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಫ್ಯಾನಿ ಚಂಡಮಾರುತದ ಕಾರಣದಿಂದಾಗಿ ಹೆಚ್ಚಿನ ಮತದಾರರು ಮತ ಚಲಾಯಿಸಲು ಆಸಕ್ತಿ ತೋರಿರಲಿಲ್ಲ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹಿನ್ನಡೆಯನ್ನು ಅನುಭವಿಸಲು ಇದೂ ಒಂದು ಕಾರಣವೆಂದು ಬಿಜೆಡಿ ಕಾರ್ಯಕರ್ತರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಪುರಿಯಲ್ಲಿ ತ್ರಾಸದ ಜಯ: ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರವಾದ ಓಡಿಶಾದ ಪುರಿಯಲ್ಲಿ ಬಿಜೆಪಿ ನಾಯಕ ಸಂಭಿತ್ ಪಾತ್ರ, ಹಾಲಿ ಸಂಸದ ಬಿಜೆಡಿ ಪಕ್ಷದ ಪಿನಾಕಿ ಮಿಶ್ರಾ ಅವರನ್ನು 1600 ಮತಗಳಿಂದ ಸೋಲಿಸಿದ್ದಾರೆ. ಈ ಮೂಲಕ ಬಿಜೆಡಿಯ ಭದ್ರಕೋಟೆ ಎಂದೇ ಹೆಸರಾದ ಪುರಿಯಲ್ಲಿ ಬಿಜೆಪಿ ಲಗ್ಗೆಯಿಟ್ಟಿದೆ. ಪುರಿ ಸಂಸದೀಯ ಕ್ಷೇತ್ರ ಬಹಳ ಹಿಂದಿನಿಂದಲೂ ಬಿಜೆಡಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾ ಬಂದಿದ್ದ ಕ್ಷೇತ್ರ. 1998ರಿಂದ ಇಲ್ಲಿಯವರೆಗೆ ಇತರೆ ಪಕ್ಷದ ಯಾರೂ ಇಲ್ಲಿ ಗೆಲುವು ಸಾಧಿಸಲಾಗಿರಲಿಲ್ಲ.
ಗೆದ್ದ ಪ್ರಮುಖರು
-ಸಂಭಿತ್ ಪಾತ್ರ, ಪುರಿ
-ಜುವಾಲ್ ಓರಾಮ್, ಸುಂದರ್‌ಗಡ್
-ಸರ್ಮಿಷ್ಠಾ ಸೇಠಿ, ಜಾಜ್‌ಪುರ್
-ನಿತೇಶ್ ಗಂಗಾ, ಸಂಬಲ್ಪುರ
-ಚಂದ್ರಾಣಿ ಮರ್ಮು, ಕಿಯೊಂಜØರ್
ಸೋತ ಪ್ರಮುಖರು
-ಪಿನಾಕಿ ಮಿಶ್ರಾ, ಪುರಿ
-ಕಾಳಿಕೇಶ್ ನಾರಾಯಣ್, ಬೋಲಾಂಗಿರ್
-ಜಾರ್ಜ್ ಟಿರ್ಕೆ, ಸುಂದರ್‌ಗಡ್
-ಅರೂಪ್ ಮೋಹನ್, ಭುವನೇಶ್ವರ
-ಪುಷ್ಪೇಂದ್ರ ಸಿಂಗ್‌ದೇವ್, ಕಾಳಹಂದಿ
ಒಡಿಶಾ ನನಗೆ ತುಂಬಾ ತಲೆನೋವು ಉಂಟು ಮಾಡಿದೆ. ಅಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಭರ್ಜರಿ ಜಯ ಗಳಿಸಿದ್ದಾರೆ.
-ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಮುಖಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.