ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಸೇನಾ ಮಾಯೆ


Team Udayavani, May 24, 2019, 3:09 AM IST

maharashtra

ಮುಂಬೈ: ಕೆಲವು ದಶಕಗಳಿಂದ ಬಿಜೆಪಿಗೆ ಗರಿಷ್ಠ ಬೆಂಬಲ ನೀಡಿದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. 2019ರಲ್ಲೂ ಮತದಾರರು ಬಿಜೆಪಿ ಮತ್ತು ಶಿವಸೇನೆ ಮೈತ್ರಿಯನ್ನು ಒಪ್ಪಿ ಕೊಳ್ಳುವ ಮೂಲಕ, ನಂಬಿಕೆ ಉಳಿಸಿಕೊಂಡಿದ್ದಾರೆ. ಅಚ್ಚರಿ ಯೆಂದರೆ ಎನ್‌ಡಿಎ ಮೈತ್ರಿಕೂಟಕ್ಕೆ 2014ರಲ್ಲಿ 41 ಸ್ಥಾನ ಲಭಿಸಿತ್ತು. ಈ ಬಾರಿಯೂ ಅಷ್ಟೇ ಸ್ಥಾನ ಲಭಿಸಿದೆ. ಇನ್ನೂ ವಿಶೇಷವೆಂದರೆ ಎರಡೂ ಪಕ್ಷಗಳು 2014ರಲ್ಲಿ ಗೆದ್ದಷ್ಟೇ ಸ್ಥಾನ ವನ್ನು ಈ ಬಾರಿಯೂ ಗೆದ್ದಿವೆ (ಬಿಜೆಪಿ 23, ಶಿವಸೇನೆ 18)!

ಶಿವಸೇನೆ-ಬಿಜೆಪಿ ಮೈತ್ರಿಸರ್ಕಾರ ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದರೂ, ಶಿವಸೇನೆ ಕಳೆದ ಐದೂ ವರ್ಷ ವಿರೋಧ ಪಕ್ಷದಂತೆಯೇ ವರ್ತಿಸಿದೆ. ಪದೇ ಪದೇ ಬಿಜೆಪಿಯನ್ನು ಟೀಕಿಸಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತಳೆದಿದೆ, ಮೈತ್ರಿ ಧರ್ಮವನ್ನು ಉಲ್ಲಂ ಸಿದೆ ಎನ್ನುವುದು ಅದರ ಬೇಸರಕ್ಕೆ ಮೂಲ ಕಾರಣ. ಶಿವಸೇನೆ ವಿರೋಧದ ತೀವ್ರತೆಯನ್ನು ಕಂಡಾಗ ಈ ಬಾರಿ, ಅಲ್ಲಿ ಮೈತ್ರಿ ಕಡಿದುಹೋಗಬಹುದು,

ರಾಜ್ಯಸರ್ಕಾರವೂ ಉರುಳ ಬಹುದು ಎಂಬ ಲೆಕ್ಕಾಚಾರಗಳೆಲ್ಲ ಒಳಗೊಳಗೇ ಶುರು ವಾಗಿತ್ತು. ಈ ಬಾರಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಲೇ ಅಚ್ಚರಿಯೆನ್ನುವಂತೆ ಶಿವಸೇನೆ ಧೋರಣೆ ಬದಲಾಯಿತು. ಎರಡೂ ಪಕ್ಷಗಳು ಮತ್ತೆ ಒಗ್ಗಟ್ಟಾಗಿ ಕಣಕ್ಕಿಳಿದವು. ಭರ್ಜರಿ ಯಶಸ್ಸನ್ನೂ ಗಳಿಸಿದವು. ಇಡೀ ಮಹಾರಾಷ್ಟ್ರದಲ್ಲಿ ಇರುವ ಅತಿದೊಡ್ಡ ಸಮಸ್ಯೆಯೆಂದರೆ ಬರ.

ನೀರಿನ ಕೊರತೆಯಿಂದ ಜನರು ನರಳುತ್ತಿದ್ದಾರೆ. ಅದಕ್ಕೆ ಪರಿಹಾರ ಕಂಡುಹಿಡಿಯಲು ಅಲ್ಲಿನ ಸರ್ಕಾರಗಳಿಗೆ ಸಾಧ್ಯ ವಾಗಿಲ್ಲ. ಅಲ್ಲದೇ ರೈತರ ಆತ್ಮಹತ್ಯೆಯೂ ಇದೆ. ಇವೆಲ್ಲದರ ನಡುವೆ ದೇವೇಂದ್ರ ಫ‌ಡ್ನವೀಸ್‌ ಸರ್ಕಾರದ ಬಗ್ಗೆ ಅಲ್ಲಿ ಬಹಳ ಒಲವೇನು ಇರಲಿಲ್ಲ. ಆದರೂ ಮೋದಿ ಮೇಲಿನ ಅಭಿಮಾನದಿಂದ ಜನರು ಮೈತ್ರಿಕೂಟದ ಕೈಹಿಡಿದರು.

ಗಡ್ಕರಿ, ಸುಪ್ರಿಯಾಗೆ ಜಯ: ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಗಮನ ಸೆಳೆದಿದ್ದ ಕ್ಷೇತ್ರಗಳಲ್ಲಿ ಕೇಂದ್ರ ಮಂತ್ರಿ ನಿತಿನ್‌ ಗಡ್ಕರಿ ಸ್ಪರ್ಧಿಸಿದ್ಧ ನಾಗ್ಪುರವೂ ಸೇರಿದೆ. ಇಲ್ಲಿ ನಿತಿನ್‌ ಶ್ರೀರಾಮ್‌ ಗಡ್ಕರಿ ಗೆಲುವು ಸಾಧಿಸಿದ್ದಾರೆ. ಇನ್ನೊಂದು ಕಡೆ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ, ಬಾರಾಮತಿಯಲ್ಲಿ ಗೆದ್ದಿದ್ದಾರೆ. ದಿವಂಗತ ಗೋಪಿನಾಥ್‌ ಮುಂಡೆ ಪುತ್ರಿ ಪ್ರೀತಮ್‌ ಮುಂಡೆ ಬೀಡ್‌ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದಾರೆ.

ಗೆದ್ದ ಪ್ರಮುಖರು
-ನಿತಿನ್‌ ಗಡ್ಕರಿ, ನಾಗ್ಪುರ
-ಸುಪ್ರಿಯಾ ಸುಳೆ, ಬಾರಾಮತಿ
-ಭಾವನಾ ಪುಂಡಲೀಕರಾವ್‌, ಯಾವತ್ಮಲ್‌ ವಶಿಮ್‌
-ಡಾ.ಶ್ರೀಕಾಂತ್‌ ಶಿಂಧೆ, ಕಲ್ಯಾಣ್‌
-ಗೋಪಾಲ್‌ ಶೆಟ್ಟಿ, ಮುಂಬೈ ಉತ್ತರ

ಸೋತ ಪ್ರಮುಖರು
-ದತ್‌ ಪ್ರಿಯಾ ಸುನೀಲ್‌, ಮುಂಬೈ ಕೇಂದ್ರ
-ಮಿಲಿಂದ್‌ ದೇವ್ರಾ, ಮುಂಬೈ ದಕ್ಷಿಣ
-ರಾಣಾ ಜಗಜಿತ್‌ ಸಿನ್ಹಾ, ಒಸ್ಮಾನಾಬಾದ್‌
-ಊರ್ಮಿಳಾ ಮಾತೋಂಡ್ಕರ್‌,
-ಮುಂಬೈ ಉತ್ತರ
-ಅಹಿರ್‌ ಹನ್ಸರಾಜ್‌, ಚಂದ್ರಾಪುರ

ಒಮ್ಮೆ ಫ‌ಲಿತಾಂಶ ಪ್ರಕಟವಾದ ಮೇಲೆ ನಾನು ಇವಿಎಂ ಮೇಲೆ ಗೂಬೆ ಕೂರಿಸಲು ಕೂರಿಸಲು ಹೋಗುವುದಿಲ್ಲ. ಅದನ್ನು ಗೌರವಯುತವಾಗಿ ಒಪ್ಪಿಕೊಳ್ಳುತ್ತೇನೆ. ಬಿಜೆಪಿಯ ಈ ಪರಿಯ ಯಶಸ್ಸನ್ನು ಊಹಿಸಿರಲಿಲ್ಲ.
-ಶರದ್‌ ಪವಾರ್‌ ಎನ್‌ಸಿಪಿ ನಾಯಕ

ಮೋದಿಯನ್ನು ಎದುರಿಸಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಇಡೀ ದೇಶವೇ ಒಪ್ಪಿಕೊಳ್ಳಬೇಕಿದೆ. ಗುರುವಾರದ ಫ‌ಲಿತಾಂಶ ಅದನ್ನು ಸಾಬೀತು ಮಾಡಿದೆ. ಮೋದಿಯ ಬಗ್ಗೆ ಸೃಷ್ಟಿಸಲಾಗಿದ್ದ ಸುಳ್ಳುಗಳೆಲ್ಲ ಕಳಚಿಕೊಂಡಿವೆ.
-ಸಂಜಯ್‌ ರಾವತ್‌, ಶಿವಸೇನಾ ಸಂಸದ

ಟಾಪ್ ನ್ಯೂಸ್

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

1-sun

Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!

Jagdish-Shetter

Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2011

ಬೆಂಗಳೂರಿನಲ್ಲೊಂದು ಟೈ ರೋಮಾಂಚನ

rajani-kanth

ಮೋದಿಯೂ ವರ್ಚಸ್ವಿ ನಾಯಕ

smruthi-irani

ಬರಿಗಾಲಲ್ಲೇ ವಿನಾಯಕ ದೇಗುಲಕ್ಕೆ ತೆರಳಿದ್ದ ಸ್ಮತಿ!

Asshivrda

ಮಾಜಿ ರಾಷ್ಟ್ರಪತಿ ಪ್ರಣಬ್ ರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

Lalu-head-scratch-700

ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರ ಆತ್ಮಾಹುತಿಯದ್ದು : ಲಾಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ullal

Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

FRAUD-1

ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್‌’ ತೆರೆಯದಂತೆ ಪೊಲೀಸರ ಸೂಚನೆ

de

Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು

4

Udupi: ಗಾಂಜಾ ಮಾರಾಟ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.