ಮೋದಿ ಅಲೆಯಲ್ಲೂ ಪ್ರಜ್ವಲ್‌ಗೆ ಗೆಲುವು
Team Udayavani, May 24, 2019, 3:30 AM IST
ಹಾಸನ: ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾಗಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎ.ಮಂಜು ಅವರನ್ನು 1,41,324 ಮತಗಳ ಅಂತರದಿಂದ ಪರಾಭವಗೊಳಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿನಿಧಿ ಸುತ್ತಿದ್ದ ಕ್ಷೇತ್ರದ ವಾರಸುದಾರನಾಗಿ ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಭಾರೀ ಬಹುಮತಗಳೊಂದಿಗೆ ಆಯ್ಕೆಯಾಗುವುದರೊಂದಿಗೆ ರಾಷ್ಟ್ರದಲ್ಲಿ ಮೋದಿ ಅಲೆಯ ಸುನಾಮಿಯ ನಡುವೆಯೂ ಹಾಸನ ಜೆಡಿಎಸ್ ಭದ್ರಕೋಟೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ.
ತನ್ನ ಅಜ್ಜ ದೇವೇಗೌಡರು ಧಾರೆ ಎರೆದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿ ಭಾರೀ ವಿಜಯದ ದಾಖಲೆ ಮಾಡಿರುವ ಪ್ರಜ್ವಲ್ ರೇವಣ್ಣ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಎದುರಿಸಿದ ಪರೀಕ್ಷೆಯಲ್ಲೇ ಪಾಸಾಗಿದ್ದಾರೆ.
ಒಂದು ಬಾರಿ ಮಾತ್ರ ಅಂದರೆ 1999ರ ಚುನಾವಣೆಯಲ್ಲಿ ದೇವೇಗೌಡರು ಸೋಲು ಅನುಭವಿಸಿದ್ದು ಬಿಟ್ಟರೆ 1991 ರಿಂದಲೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬವು ಹಾಸನ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆ ಯಾಗಿ ನಿರ್ಮಿಸಿಕೊಂಡಿದೆ. ದೇವೇಗೌಡರು 5 ಬಾರಿ ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಈಗ ಅವರ ಮೊಮ್ಮಗ ಕ್ಷೇತ್ರದ ಉತ್ತಾರಾಧಿಕಾ ರಿಯಾಗಿದ್ದಾರೆ.
ಚಲಾವಣೆಯಾಗಿದ್ದ 12,74,438 ಮತಗಳ ಪೈಕಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 6,76,606 ಮತ ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎ.ಮಂಜು 5,35,282 ಮತಗಳನ್ನು ಗಳಿಸಿದ್ದಾರೆ. ಬಿಎಸ್‌ಪಿ ಅಭ್ಯರ್ಥಿ ಕೆ.ಎಸ್.ವಿನೋದ್‌ರಾಜ್ 38,682 ಮತ ಗಳನ್ನು ಪಡೆದಿದ್ದಾರೆ. ಪ್ರಜಾಕೀಯ ಪಕ್ಷದ ಎಚ್.ಎಂ.ಚಂದ್ರೇಗೌಡ 7007 ಮತಗಳನ್ನು ಪಡೆದರೆ ಪಕ್ಷೇತರರಾದ ಎಂ. ಮಹೇಶ್ 3,706 ಮತ್ತು ಆರ್.ಜಿ. ಸತೀಶ್ 4,501 ಮತ ಗಳಿಸಿದ್ದಾರೆ. 11,6641 ನೋಟಾ ಮತಗಳು ದಾಖಲಾಗಿವೆ.
ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ: ರಾಜ್ಯದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಲೋಕ ಸಭಾ ಚುನಾವಣೆ ಎದುರಿಸುವ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಲ್ಲಿ 2 ಪಕ್ಷಗಳ ನಡುವೆ ಹೊಂದಾಣಿಕೆಯ ಕೊರತೆ ಕಾಣಿಸಿಕೊಂಡಿತ್ತು. ಆದರೆ ಕ್ಷೇತ್ರದಲ್ಲಿ ಮಾತ್ರ ಎರಡೂ ಪಕ್ಷಗಳೂ ಸಂಘಟಿತ ಹೋರಾಟ ನಡೆಸಿದವು. ಲೋಕೋ ಪಯೋಗಿ ಸಚಿವರೂ ಆದ ಎಚ್.ಡಿ.ರೇವಣ್ಣ, ಜಿಪಂ ಸದಸ್ಯೆ ಪ್ರಜ್ವಲ್ ತಮ್ಮ ಪುತ್ರನ ಗೆಲುವಿಗಾಗಿ ಕಾಂಗ್ರೆಸ್ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿದರು.
ಅದರ ಪರಿಣಾಮ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಜೆಡಿಎಸ್ ಅಭ್ಯರ್ಥಿ ಬಹುಮತ ಸಾಧಿಸಲು ಸಾಧ್ಯವಾಯಿತು. ಇನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳೂ ಪ್ರಜ್ವಲ್ ರೇವಣ್ಣ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ.
ಮೌನಕ್ಕೆ ಶರಣಾದ ಸಚಿವ ಎಚ್.ಡಿ.ರೇವಣ್ಣ: ಚುನಾವಣೆಯ ಸಂದರ್ಭದಲ್ಲೂ ಚುನಾವಣೆ ಮುಗಿದ ನಂತರ, ಫಲಿತಾಂಶ ಪ್ರಕಟವಾದ ನಂತರ ಎಚ್.ಡಿ.ರೇವಣ್ಣ ಅವರು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾಗಿ ಜನತೆಗೆ ಕೃತಜ್ಞತೆ ಹೇಳುತ್ತಿದ್ದರು. ಆದರೆ ಈ ಬಾರಿ ಜೆಡಿಎಸ್ ವರಿಷ್ಠರ ಸೋಲಿನೊಂದಿಗೆ ನಿಖೀಲ್ ಹೀನಾಯವಾಗಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಸಚಿವ ರೇವಣ್ಣ ಅವರು ಮೌನಕ್ಕೆ ಶರಣಾಗಿದ್ದರು.
ಮತ ಎಣಿಕೆ ಕೇಂದ್ರದತ್ತಲೂ ರೇವಣ್ಣ ಅವರು ಸುಳಿಯಲಿಲ್ಲ. ಭವಾನಿ ರೇವಣ್ಣ ಅವರು ಮಾತ್ರ ಪುತ್ರ ಪ್ರಜ್ವಲ್, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರೊಂದಿಗೆ ಎಣಿಕೆ ಕೇಂದ್ರಕ್ಕೆ ಬಂದು ಫಲಿತಾಂಶ ಘೋಷಣೆಗಾಗಿ ಕಾಯುತ್ತಾ ಕುಳಿತಿದ್ದರು. ಪ್ರಮಾಣ ಪತ್ರ ವಿತರಣೆ ನಂತರ ಎಣಿಕೆ ಕೇಂದ್ರದಿಂದ ಪ್ರಜ್ವಲ್ ಮತ್ತು ಪಕ್ಷದ ಮುಖಂಡರೊಂದಿಗೆ ಹೊರಟರು.
ಎಲ್ಲಾ ಕ್ಷೇತ್ರದಲ್ಲೂ ಪ್ರಜ್ವಲ್‌ಗೆ ಲೀಡ್: ಹಾಸನ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಮಾತ್ರ ಪ್ರಜ್ವಲ್‌ಗೆ 12,019 ಮತಗಳ ಹಿನ್ನಡೆಯಾಗಿದ್ದರೆ, ಜಿಲ್ಲೆಯ ವ್ಯಾಪ್ತಿಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಜ್ವಲ್ ಮುನ್ನಡೆ ಸಾಧಿಸಿದ್ದಾರೆ. ಸಚಿವ ರೇವಣ್ಣ ಪ್ರತಿನಿಧಿಸುವ ಹೊಳೆನರಸೀಪುರ ವೊಂದ ರಲ್ಲೇ ಪ್ರಜ್ವಲ್ ಪ್ರತಿಸ್ಪರ್ಧಿಗಿಂತ 74,665 ಮತಗಳ ಮುನ್ನಡೆ ಪಡೆದಿದ್ದರೆ,
-ಶ್ರವಣಬೆಳಗೊಳ ಕ್ಷೇತ್ರದಲ್ಲಿ 39,115 ಮತಗಳ ಮುನ್ನಡೆ ಪಡೆದಿದ್ದಾರೆ. ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಪ್ರತಿನಿಧಿಸುವ ಹಾಸನ ವಿಧಾನಸಭಾ ಕ್ಷೇತ್ರದಲ್ಲೂ ಪ್ರಜ್ವ ಲ್‌ಗೆ 14,965 ಮತ ಮುನ್ನಡೆ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿ ಮಂಜು ತವರು ಕ್ಷೇತ್ರ ಅರಕಲಗೂಡಿನಲ್ಲೂ 4443 ಮತಗಳ ಮುನ್ನಡೆ ಪಡೆದಿರುವ ಪ್ರಜ್ವಲ್ ಇನ್ನುಳಿದಂತೆ ಸಕಲೇಶಪುರ, ಬೇಲೂರು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿದ್ದಾರೆ.
ಗೆದ್ದರೂ ನಡೆಯದ ವಿಜಯೋತ್ಸವ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು 1.43 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದರೂ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಅಚರಿಸಲಿಲ್ಲ. ಮತ ಎಣಿಕೆ ಕೇಂದ್ರ ದತ್ತ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಸುಳಿಯಲೂ ಇಲ್ಲ. ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಿದ್ದರೂ ಹಾಸನ ನಗರದಲ್ಲಿಯೂ ವಿಜಯೋತ್ಸವ ಆಚರಿಸಲು ಹೋಗಲಿಲ್ಲ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಪುತ್ರ ನಿಖೀಲ್ ಕುಮಾರ್ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ವಿಜಯೋತ್ಸವ ಆಚರಿಸಲಿಲ್ಲ.
ಗೆಲುವಿನ ಮೇಲೂ ಸೂತಕದ ಛಾಯೆ: ಪ್ರತಿಷ್ಠಿತ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ – ಕಾಂಗ್ರೆಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 1.42 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೂ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಂಭ್ರಮಿಸಲಿಲ್ಲ. ಪ್ರತಿಷ್ಠಿತ ಕ್ಷೇತ್ರದ ಗೆಲುವಿನ ಮೇಲೂ ಸೂತಕದ ಛಾಯೆ ಆವರಿಸಿದಂತಿತ್ತು.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತುಮಕೂರು ಕ್ಷೇತ್ರದಲ್ಲಿ ಸತತ ಹಿನ್ನಡೆಯೊಂದಿಗೆ ಸೋಲು ಅನುಭವಿಸಿದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖೀಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡದ್ದು ಹಾಸನ ಲೋಕಸಭಾ ಕ್ಷೇತ್ರದ ಗೆಲುವಿನ ಮೇಲೆ ಮಂಕು ಆವರಿಸಿತ್ತು.
ಜೆಡಿಎಸ್ ಪಾಳೆಯದಲ್ಲಷ್ಟೆ ಅಲ್ಲ. ಕಾಂಗ್ರೆಸ್ ಕಾರ್ಯಕರ್ತರಲ್ಲೂ ವಿಷಾದದ ಛಾಯೆ ಆವರಿಸಿತ್ತು. ಪಕ್ಷದ ಹಿರಿಯ ಮುಖಂಡರೆಲ್ಲಾ ಸೋಲಿನ ಹಾದಿಯತ್ತ ಸಾಗಿದ್ದರಿಂದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ. ಹಾಸನ ನಗರದ ಪ್ರಮುಖ ಸ್ಥಳಗಳಲ್ಲೂ ಕಾಣಿಸಿಕೊಳ್ಳದೆ ಪಕ್ಷದ ನಾಯಕರ ಸೋಲಿನ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಕುಳಿತರು.
ಜೆಡಿಎಸ್‌ನ ಆಧಾರ ಸ್ತಂಭ, ಹಿರಿಯ ರಾಜಕೀಯ ಮುತ್ಸದ್ಧಿ ದೇವೇಗೌಡರೇ ಸೋತಿರುವುದರಿಂದ ಮುಂದೆ ರಾಜ್ಯದಲ್ಲಿ ಪಕ್ಷದ ಗತಿ ಏನು ? ರಾಜ್ಯದ ಸಮ್ಮಿಶ್ರ ಸರ್ಕಾರದ ಮೇಲೂ ಸೋಲು ದುಷ್ಪರಿಣಾಮ ಬೀರಿ ಸರ್ಕಾರ ಅಭದ್ರವಾಗಬಹುದೆಂಬ ಆತಂಕದಲ್ಲಿದ್ದ ಜೆಡಿಎಸ್ ಮುಖಂಡರು ಹಾಸನ ಕ್ಷೇತ್ರದ ಗೆಲುವಿನ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಇಲ್ಲಿ ಗೆದ್ದರೂ, ಗೌಡರು ಸೋತ ಮೇಲೆ ನಮಗೆಲ್ಲಿ ಸಂತೋಷ ಎಂದು ಹತಾಶೆಯಿಂದ ನುಡಿದರು.
ಮೌನಕ್ಕೆ ಶರಣಾದ ಸಚಿವ ಎಚ್.ಡಿ.ರೇವಣ್ಣ: ಚುನಾವಣೆಯ ಸಂದರ್ಭದಲ್ಲೂ ಚುನಾವಣೆ ಮುಗಿದ ನಂತರ, ಫಲಿತಾಂಶ ಪ್ರಕಟವಾದ ನಂತರ ಎಚ್.ಡಿ.ರೇವಣ್ಣ ಅವರು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾಗಿ ಜನತೆಗೆ ಕೃತಜ್ಞತೆ ಹೇಳುತ್ತಿದ್ದರು. ಆದರೆ ಈ ಬಾರಿ ಜೆಡಿಎಸ್ ವರಿಷ್ಠರ ಸೋಲಿನೊಂದಿಗೆ ನಿಖೀಲ್ ಹೀನಾಯವಾಗಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಸಚಿವ ರೇವಣ್ಣ ಅವರು ಮೌನಕ್ಕೆ ಶರಣಾಗಿದ್ದರು. ಮತ ಎಣಿಕೆ ಕೇಂದ್ರದತ್ತಲೂ ರೇವಣ್ಣ ಅವರು ಸುಳಿಯಲಿಲ್ಲ.
ಭವಾನಿ ರೇವಣ್ಣ ಅವರು ಮಾತ್ರ ಪುತ್ರ ಪ್ರಜ್ವಲ್, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರೊಂದಿಗೆ ಎಣಿಕೆ ಕೇಂದ್ರಕ್ಕೆ ಬಂದು ಫಲಿತಾಂಶ ಘೋಷಣೆಗಾಗಿ ಕಾಯುತ್ತಾ ಕುಳಿತಿದ್ದರು. ಪ್ರಮಾಣ ಪತ್ರ ವಿತರಣೆ ನಂತರ ಎಣಿಕೆ ಕೇಂದ್ರದಿಂದ ಪ್ರಜ್ವಲ್ ಮತ್ತು ಪಕ್ಷದ ಮುಖಂಡರೊಂದಿಗೆ ಹೊರಟರು.
ನನ್ನ ತಂದೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಜಿಲ್ಲೆಯ ಜನರು ಮನ್ನಣೆ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಅದಕ್ಕೆ ನಾನು ಋಣಿ. ಕೇಂದ್ರದಿಂದ ಮತ್ತಷ್ಟು ಅನುದಾನ ತಂದು ಕ್ಷೇತ್ರದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ನಡೆಸುವೆ.
-ಪ್ರಜ್ವಲ್ ರೇವಣ್ಣ, ಮೈತ್ರಿ ಅಭ್ಯರ್ಥಿ
ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿನ ಲೋಪ ಪ್ರಶ್ನಿಸಿ ಕೋರ್ಟಿಗೆ ಹೋಗುವೆ. ಇನ್ನು ನಾಲ್ಕು ತಿಂಗಳಲ್ಲಿ ಅವರು ಅನರ್ಹರಾಗುವರು. ನಾನು ಸಂಸತ್‌ಗೆ ಹೋಗುವೆ. ನಾನು ಸೋತಿದ್ದಕ್ಕೆ ಬೇಸರವಿಲ್ಲ. ದೇವೇಗೌಡರು ಕೊನೆಗಾಲದಲ್ಲಿ ಸೋತಿದ್ದಕ್ಕೆ ಹಾಸನ ಜಿಲ್ಲೆಯವನಾಗಿ ನನಗೆ ಬೇಸರವಿದೆ.
-ಎ.ಮಂಜು, ಬಿಜೆಪಿ ಅಭ್ಯರ್ಥಿ
ಹಾಸನ (ಜೆಡಿಎಸ್)
-ವಿಜೇತರು ಪ್ರಜ್ವಲ್ ರೇವಣ್ಣ
-ಪಡೆದ ಮತ 6,76,606
-ಎದುರಾಳಿ ಎ.ಮಂಜು (ಬಿಜೆಪಿ)
-ಪಡೆದ ಮತ 5,35,282
-ಗೆಲುವಿನ ಅಂತರ 1,41,324
ಕಳೆದ ಬಾರಿ ಗೆದ್ದವರು: ಎಚ್.ಡಿ.ದೇವೇಗೌಡ (ಜೆಡಿಎಸ್)
ಗೆಲುವಿಗೆ 3 ಕಾರಣ
-ಜೆಡಿಎಸ್‌ನ ತಳಮಟ್ಟದ ಸಂಘಟನೆಯೇ ಪ್ರಮುಖ ಕಾರಣ
-ಜಿಲ್ಲೆಯಲ್ಲಿ ಪ್ರಜ್ವಲ್ ಪರ ನಿಂತ ಕಾಂಗ್ರೆಸ್ ನಾಯಕರು
-ಲೋಕೋಪಯೋಗಿ ಸಚಿವ ರೇವಣ್ಣ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಪ್ರಜ್ವಲ್ ಗೆಲುವಿಗೆ ಸಹಕಾರಿ
ಸೋಲಿಗೆ 3 ಕಾರಣ
-ಹಾಸನ ನಗರದಲ್ಲಿ ಬಿಟ್ಟರೇ
-ಕ್ಷೇತ್ರದ ಯಾವ ಕಡೆಯೂ ಬಿಜೆಪಿಯ ಭದ್ರ ನೆಲೆ ಇಲ್ಲದ್ದು.
-ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ದಿಢೀರನೆ ಬಿಜೆಪಿ ಸೇರಿದ್ದು.
ನಾಯಕರ ಸಂಘಟಿತ ಹೋರಾಟದ ಕೊರತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.