ಮೋದಿ ಮಾತು ಏಕೆ ರುಚಿಸಿತು?

Team Udayavani, May 24, 2019, 6:05 AM IST

mathu

ಮಣಿಪಾಲ: ಮೋದಿ ಜನ ಪ್ರಿಯತೆಯು ಉತ್ತುಂಗಕ್ಕೆ ಏರಿರುವುದು ಈ ಬಾರಿಯ ಫ‌ಲಿತಾಂಶದಲ್ಲಿ ದೃಢಪಟ್ಟಿದೆ. 2014ರ ಚುನಾವಣೆಯಲ್ಲಿ ಮೋದಿ ಅವರಿಗೆ ಕೋಟ್ಯಂತರ ಅಭಿಮಾನಿಗಳು ಸೃಷ್ಟಿಯಾಗಿದ್ದರು. ಇದು ರಾಷ್ಟ್ರದಲ್ಲಿ ಬಿಜೆಪಿ ಬಲಿಷ್ಠಗೊಳ್ಳಲು ಕಾರಣವಾಗಿತ್ತು. 2019ರ ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಮತ್ತೆ ಅದೇ ಮೋದಿ ಅವರ ಹೆಸರಲ್ಲಿ ಮತ ಯಾಚಿಸಿತು. ಈ 5 ವರ್ಷದ ಅವಧಿಯಲ್ಲಿ ಮೋದಿ ವರ್ಚಸ್ಸು ಮತ್ತಷ್ಟು ಬೆಳೆದಿತ್ತು ಎಂಬುದು ವಿಶೇಷ. ಪಕ್ಷ ಮತ್ತು ಅಭಿಮಾನಿಗಳು ಪ್ರಧಾನ ಮಂತ್ರಿಯ ಮೇಲೆ ಅತ್ಯುತ್ಛ ಅಭಿಮಾನವನ್ನು ಹೊಂದಿದ್ದರು. ಪ್ರಧಾನ ಮಂತ್ರಿಗಳು ಹೋದ ಕಡೆ, ಬಂದ ಕಡೆ ಅವರ ಪರವಾದ ಘೋಷಣೆಗಳು ಹೆಚ್ಚಾಗುತ್ತಿದ್ದವು. ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದ ನರೇಂದ್ರ ಮೋದಿ ತಮ್ಮ ಬೆಂಬಲಿಗರ ಪ್ರೀತಿಗೆ ಮನಸೂರೆಗೊಂಡಿದ್ದರು. ಮೋದಿ ಅವರ ಇಂತಹ ಗುಣ ಅಭಿಮಾನಿಗಳನ್ನು ಆಪ್ತರನ್ನಾಗಿಸಿತು. ಮೋದಿಯೇ ನಮ್ಮ ಸವೋತ್ಛ ನಾಯಕರು ಎಂಬ ಭಾವನೆ ಅಭಿಮಾನಿಗಳಲ್ಲಿ ಇತ್ತು. ಮನ್‌ಕಿ ಬಾತ್‌, ನಮೋ ಆ್ಯಪ್‌, ನಮೋ ಟಿವಿ ಜನರಿಗೆ ಮತ್ತಷ್ಟು ಹತ್ತಿರವಾಗಿಸಿದವು.

ಮನ್‌ ಕೀ ಬಾತ್‌

ತಾವು ಅಧಿಕಾರಕ್ಕೆ ಬಂದ ಬಳಿಕ ಆರಂಭಿಸಿದ ಮನ್‌ ಕಿ ಬಾತ್‌ ಕಾರ್ಯಕ್ರಮ ಜನರನ್ನು ತಲುಪಲು ನೆರವಾಗಿತ್ತು. ಇಂತಹ ಕಾರ್ಯಕ್ರಮಗಳಿಂದ ಮೋದಿ ಅವರು ಸುಲಭವಾಗಿ ಜನರನ್ನು ತಲುಪುತ್ತಿದ್ದರು. ಇದರಿಂದ ದೇಶದಲ್ಲಿ ಒಂದು ಸಂಚಲನ ನಿರ್ಮಾಣವಾಗುವುದರ ಜತೆಗೆ ಪ್ರಚಾರವೂ ಲಭಿಸಿತು. ಈ ಕಾರ್ಯಕ್ರಮದ ಪ್ರಭಾವವನ್ನು ಅರಿತು ಅವರು 5 ವರ್ಷದ ಅಧಿಕಾರಾವಧಿಯಲ್ಲಿ ಅದನ್ನು ಮುಂದುವರಿಸಿದರು. ಇದರಿಂದ ಮೋದಿ ಜನಮಾನಸದಲ್ಲಿ ಒಂದು ಬ್ರ್ಯಾಂಡ್‌ ಆಗಿ ಬದಲಾದರು.

ಸದಾ ಕ್ರಿಯಾಶೀಲವಾಗಿದ್ದ ಮೋದಿ ಅವರು ಪ್ರತಿದಿನ ಒಂದಲ್ಲ ಇಂದು ರೀತಿಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಮೋದಿ ಅವರ ಈ ನಡೆ ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸುತ್ತಿತ್ತು. ಮೋದಿ ಏನು ಮಾಡಿದರೂ ಸರಿ ಎಂಬ ಭಾವನೆ ಅಭಿಮಾನಿಗಳಲ್ಲಿ ಮನಮಾಡಿತ್ತು.

ನಮೋ ಆ್ಯಪ್‌
ಬಿಜೆಪಿ ಪ್ರಚಾರದಲ್ಲಿ ಯಾವತ್ತೂ ಮುಂದೆ. ಇದನ್ನು ನಮೋ ಆ್ಯಪ್‌ ಮೂಲಕ ಅದು ಸಾಧಿಸಿದೆ. ಮೋದಿ ಅವರ ದೈನಂದಿನ ದಿನಚರಿ ಮತ್ತು ವಿವಿಧ ಸರಕಾರಿ ಸವಲತ್ತುಗಳ ಮಾಹಿತಿಯನ್ನು ನಮೋ ಆ್ಯಪ್‌ ನೀಡುತ್ತಿತ್ತು. ಇದರಿಂದ ಮೋದಿ ಅವರು ಏನು ಮಾಡುತ್ತಿದ್ದಾರೆ ಎಂಬುದು ಜನರಿಗೆ ಅರಿವಾಗುತ್ತಿತ್ತು. ಮೋದಿ ಅವರ ವರ್ಚಸ್ಸು ಹೆಚ್ಚಾಗಲು ಇದೂ ಒಂದು ಕಾರಣ.

ನಮೋ ಟಿವಿ
ನಮೋ ಟಿವಿಯ ಮೂಲಕ ಮತ್ತೂಮ್ಮೆ ಮನೆ-ಮನಗಳನ್ನು ತಲುಪಲು ಪ್ರಯತ್ನಿಸಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ನಮೋ ಟಿವಿ ಪ್ರಸಾರವಾಗಲಿಲ್ಲ. ಆದರೂ ಅದೃಷ್ಟ ಮೋದಿ ಕೈ ಹಿಡಿಯಿತು. ಮೋದಿ 2014ರ ಬಳಿಕ ಒಂದು ಬ್ರ್ಯಾಂಡ್‌ ಆಗಿ ಬದಲಾದರು. ಮೋದಿ ಹೆಸರಿನ ವಿವಿಧ ಬಗೆಯ ವಸ್ತ್ರಗಳು, ಸ್ಟಿಕ್ಕರ್‌ಗಳು ಬಹುತೇಕ ರಾಜ್ಯಗಳಲ್ಲಿ ಹೆಚ್ಚಿನ ವ್ಯಾಪಾರವನ್ನು ಕಂಡಿತ್ತು. ಮೋದಿ ಬ್ರ್ಯಾಂಡ್‌ ಪಕ್ಷಕ್ಕೆ ಹೆಚ್ಚು ಮತವನ್ನು ತಂದುಕೊಟ್ಟಿತು. ಯುವ ಜನರನ್ನು ಸೆಳೆಯುವಲ್ಲಿ ಇದು ಬಹಳಷ್ಟು ಕೆಲಸ ಮಾಡಿತು.

ಟಾಪ್ ನ್ಯೂಸ್

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2011

ಬೆಂಗಳೂರಿನಲ್ಲೊಂದು ಟೈ ರೋಮಾಂಚನ

rajani-kanth

ಮೋದಿಯೂ ವರ್ಚಸ್ವಿ ನಾಯಕ

smruthi-irani

ಬರಿಗಾಲಲ್ಲೇ ವಿನಾಯಕ ದೇಗುಲಕ್ಕೆ ತೆರಳಿದ್ದ ಸ್ಮತಿ!

Asshivrda

ಮಾಜಿ ರಾಷ್ಟ್ರಪತಿ ಪ್ರಣಬ್ ರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

Lalu-head-scratch-700

ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರ ಆತ್ಮಾಹುತಿಯದ್ದು : ಲಾಲು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.