ಗೆಲುವಿಗೆ ಕಾರಣವಾದ ಐದು ಅಂಶಗಳು
ಭರತಖಂಡ ಗೆದ್ದ ನರೇಂದ್ರ
Team Udayavani, May 24, 2019, 6:07 AM IST
ಚುನಾವಣಪೂರ್ವ ಸಮೀಕ್ಷೆಗಳು ಹಾಗೂ ಚುನಾವಣೆ ಬಳಿಕದ ಸಮೀಕ್ಷೆಗಳು ಪ್ರಚುರಪಡಿಸಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಎರಡನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 1ರ ಅಭಿವೃದ್ಧಿ ಹಾಗೂ ಜನಪ್ರಿಯ ಕಾರ್ಯಕ್ರಮಗಳಿಗೆ ಪ್ರಜೆಗಳು ಜೈ ಎಂದಿದ್ದಾರೆ. ಹಾಗಾದರೆ ಮೋದಿ ಮುಂದಿನ 5 ವರ್ಷಗಳ ಅವಧಿಗೆ ದೇಶದ ಚುಕ್ಕಾಣಿ ಹಿಡಿಯಲು ಕಾರಣವಾದ ಅಂಶಗಳೇನು…
ನಿಷ್ಕಳಂಕ ಆಡಳಿತ
ಭ್ರಷ್ಟಾಚಾರ ರಹಿತ ಆಡಳಿತ ಬಿಜೆಪಿ ಸರಕಾರದಲ್ಲಿ ಕಂಡು ಬಂದಿತ್ತು. ಯಾವುದೇ ಗಂಭೀರ ಸ್ವರೂಪದ ಆರೋಪಗಳು ಕೇಳಿಬರದಂತೆ ಸರಕಾರ ನಡೆದಿತ್ತು. ತನ್ನ ಸಂಸದರು ಮತ್ತು ಸಚಿವರನ್ನು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಪಕ್ಷ ಎಚ್ಚರಿಕೆ ವಹಿಸಿತ್ತು. ಇದು ಪರೋಕ್ಷವಾಗಿ ದೇಶದಲ್ಲಿ ಮೋದಿ ಹಾಗೂ ಸರಕಾರದ ಕುರಿತು ಒಳ್ಳೆಯ ಅಭಿಪ್ರಾಯ ಮೂಡಿ ಬರಲು ನೆರವಾಗಿತ್ತು.
ರಾಜತಾಂತ್ರಿಕ ಬೆಳವಣಿಗೆ
ಸಂಬಂಧ ವೃದ್ಧಿಗಾಗಿ ಮೋದಿ ನಡೆಸಿದ ವಿದೇಶ ಪ್ರವಾಸ ಪ್ಲಸ್ ಆಯಿತು. ಜಗತ್ತಿನ ಬಲಿಷ್ಠ ರಾಷ್ಟ್ರಗಳ ಜತೆಗೆ ಸ್ನೇಹ ವೃದ್ಧಿಗೆ ಸರಕಾರ ಗಮನ ಹರಿಸಿತ್ತು. ಪುಲ್ವಾಮಾ ಮತ್ತು ಬಾಲಾಕೋಟ್ ಘಟನೆ ಬಳಿಕ ಪಾಕಿಸ್ಥಾನದ ಜತೆಗೆ ಯುದೊœàನ್ಮಾದ ಏರ್ಪಟ್ಟಾಗ ಚೀನ ಹೊರತು ಪಡಿಸಿ ಇತರ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತವು. ಜೈಶ್ ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸುವ ಭಾರತದ ಆಗ್ರಹಕ್ಕೆ ರಾಷ್ಟ್ರಗಳ ಬೆಂಬಲ ವ್ಯಕ್ತವಾಗಿತ್ತು.
ಸಾಮಾಜಿಕ ಮಾಧ್ಯಮ
ಬಿಜೆಪಿ ತನ್ನ ಐಟಿ ಸೆಲ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿದೆ. ಪಕ್ಷ ಅಧಿಕಾರಕ್ಕೆ ಬಂದಾಗಿನ ದಿನಗಳಿಂದ ಸರಕಾರದ ಹಲವು ಕಾರ್ಯಕ್ರಮಗಳಿಗೆ ಪ್ರಚಾರ ನೀಡಿದೆ. ವಿಪಕ್ಷಗಳ ಆರೋಪಗಳಿಗೆ ಸಾಮಾಜಿಕ ಜಾಲತಾಣದಲ್ಲೇ ಉತ್ತರ ನೀಡುತ್ತಿತ್ತು. ಬಿಜೆಪಿ ಐಟಿ ಸೆಲ್‌ಗಳಿಗೆ ಪ್ರತಿ ಯಾಗಿ ವಿಪಕ್ಷಗಳ ಐಟಿ ಸೆಲ್‌ಗಳು ಪೈಪೋಟಿ ನೀಡುವಂತಿರಲಿಲ್ಲ. ಇದು ಯುವ ಜನರನ್ನು ಸೆಳೆಯಿತು.
ಯುವ ಮತದಾರರತ್ತ ಪ್ರಭಾವ
ಬಿಜೆಪಿ ಯುವ ಮತದಾರರ ಮೇಲೆ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಮೋದಿ ಅವರ ಹಿಂದೂ ಟ್ರಂಪ್ ಕಾರ್ಡ್ ಮತ್ತು ಕೆಲವು ಘೋಷಣೆಗಳು ಯುವಕರನ್ನು ಹೆಚ್ಚು ಆಪ್ತರನ್ನಾಗಿಸಿತು. ಫೇಸ್‌ಬುಕ್, ಟ್ವೀಟರ್‌ನಲ್ಲಿ ಮೋದಿ ಬೆಂಬಲಿಸುವ ಯುವಕರ ಸಂಖ್ಯೆ ಹೆಚ್ಚಾಯಿತು. ಇತ್ತೀಚಿನ ವರ್ಷಗಳಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಅಂಶ ಬಿಜೆಪಿಯ ಪರವಾಗಿ ಕೆಲಸ ಮಾಡಿತು.
ಸದಾ ಕ್ರಿಯಾಶೀಲತೆ
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪ್ರತಿ ನಿತ್ಯವೂ ಸುದ್ದಿಯಲ್ಲಿರುತ್ತಿದ್ದರು. ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಪ್ರಧಾನಿಯಾದ ಬಳಿಕ ನಡೆದ ಕೆಲವು ಘಟನೆಗಳಿಗೆ ಸ್ಪಂದಿಸಿದ ರೀತಿ ದೇಶದ ಜನರ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿದಿನ ಒಂದಲ್ಲ ಒಂದು ಕಾರ್ಯದ ನಿಮಿತ್ತ ಸದಾ ಸುದ್ದಿಯ ಮುಖ್ಯ ಭೂಮಿಕೆಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಇದರಿಂದ ಜನರಿಗೂ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ಮೋದಿ ಅವರಿಂದ ದೇಶದಲ್ಲಿ ಅಭಿವೃದ್ಧಿ ಕಾರ್ಯ ನಡೆಯಬಹುದು ಎಂಬ ನಂಬಿಕೆ ಅವರಲ್ಲಿ ಮನೆ ಮಾಡಿ ಕಮಲದತ್ತ ಮತ ಚಲಾಯಿಸಲ್ಪಟ್ಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.