ರಾಯಚೂರಿಗೆ ರಾಜಾ ಅಮರೇಶ್ವರ ನಾಯಕ
Team Udayavani, May 24, 2019, 5:09 AM IST
ರಾಯಚೂರಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಪಕ್ಷದ ಮುಖಂಡರು ರಾಜಾ ಅಮರೇಶ್ವರ ನಾಯಕರಿಗೆ ಹಾರ ತುರಾಯಿ ಹಾಕಿ ಸನ್ಮಾನಿಸಿದರು.
ರಾಯಚೂರು: ಹಾಲಿ ಕಾಂಗ್ರೆಸ್ ಸಂಸದರ ವಿರೋಧಿ ಅಲೆ ಜತೆ ದೇಶದಲ್ಲಿ ಎದ್ದಿರುವ ಮೋದಿ ಅಲೆಯಿಂದಾಗಿ ರಾಯಚೂರು ಲೋಕಸಭೆ ಕ್ಷೇತ್ರ ಬಿಜೆಪಿ ಪಾಲಾಗಿದೆ. ಇತಿಹಾಸದಲ್ಲಿಯೇ ಈ ಕ್ಷೇತ್ರದಲ್ಲಿ ಬಿಜೆಪಿ ಎರಡನೇ ಬಾರಿಗೆ ಗೆಲ್ಲುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದೆ.
ಈ ಹಿಂದೆ ನಡೆದಿದ್ದ 16 ಚುನಾವಣೆಗಳಲ್ಲಿ 13ರಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಕಳೆದ ಬಾರಿ ನರೇಂದ್ರ ಮೋದಿ ಅಲೆಯಲ್ಲಿಯೂ ಕಾಂಗ್ರೆಸ್‌ನ ಬಿ.ವಿ. ನಾಯಕ 1,499 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಈ ಬಾರಿ ಮೋದಿ ಅಲೆಗೆ ಎದೆಯೊಡ್ಡುವ ಸಾಮರ್ಥ್ಯ ಕಳೆದುಕೊಂಡ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಐದು ವರ್ಷ ಅ ಧಿಕಾರ ನಡೆಸಿದ ಹಾಲಿ ಸಂಸದ ಬಿ.ವಿ.ನಾಯಕ ಅಭಿವೃದಿಟಛಿಗೆ ತೋರಿದ ಅನಾದರವೇ ಅವರ ಗೆಲುವಿಗೆ ಅಡ್ಡಿಯಾಗಿದೆ. ಎಲ್ಲೆಡೆ ಅವರ ವಿರೋಧಿ ಅಲೆ ಈ ಬಾರಿ ತುಸು ಹೆಚ್ಚಾಗಿಯೇ ಇತ್ತು. ಆದರೆ, ಬಿಜೆಪಿ ಪ್ರಬಲ ಅಭ್ಯರ್ಥಿ ಇಲ್ಲ ಎಂಬ ಲೆಕ್ಕಾಚಾರ ಕಾಂಗ್ರೆಸ್‌ಗೆ ಗೆಲುವಿನ ಕನಸು ಕಾಣುವಂತೆ ಮಾಡಿತ್ತು. ವಲಸಿಗ ಕಾಂಗ್ರೆಸ್ ನಾಯಕರಿಗೆ ಮಣೆ ಹಾಕಿದ ಬಿಜೆಪಿ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕರನ್ನು ಕಣಕ್ಕಿಳಿಸುವ ಮೂಲಕ ಜಾಣ ನಡೆ ಪ್ರದರ್ಶಿಸಿತು.
ಕೊನೆ ಗಳಿಗೆಯಲ್ಲಿ ಬೀಸಿದ ದಾಳಕ್ಕೆ ಕಾಂಗ್ರೆಸ್ ಸುಲಭದ ತುತ್ತಾಗಿದೆ. ಮತ ಎಣಿಕೆ ಆರಂಭವಾದಾಗಿನಿಂದ ಬಿಜೆಪಿ ಕೊನೆವರೆಗೂ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ತನ್ನ
ಪ್ರಾಬಲ್ಯ ಮೆರೆಯಿತು. ಪ್ರತಿ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಸಾಧಿಸುತ್ತಲೇ ಸಾಗಿತ್ತು. 12ನೇ ಸುತ್ತಿನ ಎಣಿಕೆ ವೇಳೆಗೆ 83 ಸಾವಿರ ಮತಗಳ ಮುನ್ನಡೆ ಸಾಧಿ ಸಿತ್ತು. 8 ವಿಧಾನಸಭೆ ಕ್ಷೇತ್ರಗಳಲ್ಲಿ 5 ಕಡೆ ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಹಾಗೂ ಒಂದು ಕಡೆ ಜೆಡಿಎಸ್ ಅ ಧಿಕಾರದಲ್ಲಿತ್ತು. ಕಾಂಗ್ರೆಸ್, ಜೆಡಿಎಸ್ ಶಾಸಕರಿರುವ ಕಡೆಯೂ ಬಿಜೆಪಿ ಮುನ್ನಡೆ ಸಾಧಿ ಸಿರುವುದು ವಿಶೇಷ. ಹಾಲಿ ಸಂಸದರ ವಿರೋಧಿ ಅಲೆಯನ್ನು ಸರಿಯಾಗಿ ಬಳಸಿಕೊಂಡ ಬಿಜೆಪಿ ಗೆಲುವಿನ ದಾರಿ ಸುಗಮ ಮಾಡಿಕೊಂಡಿದೆ.
ಕೊನೆಗೂ ಕೈ ಹಿಡಿದ 9: ರಾಜಕೀಯದಲ್ಲಿ ಹೆಚ್ಚಾಗಿ ಅದೃಷ್ಟದಾಟವೇ ಪ್ರಧಾನ. ರಾಜಾ ಅಮರೇಶ್ವರ ನಾಯಕರ ವಿಚಾರದಲ್ಲಿ ಇಂಥದ್ದೇ ಒಂದು ಮಾತು ಪ್ರಚಲಿತವಾಗಿದೆ. ಅವರು ಗೆಲುವು ಸಾಧಿಸಿರುವುದು ಹೆಚ್ಚಾಗಿ 9 ಸಂಖ್ಯೆ ಇರುವ ವರ್ಷಗಳಲ್ಲೇ. ಆ ನಂಬಿಕೆ ಈ ಬಾರಿ ಮತ್ತೂಮ್ಮೆ ಸಾಬೀತಾಗಿದೆ. ಅವರು ಮೊದಲು ಗೆದ್ದಿದ್ದು 1989ರಲ್ಲಿ. ಎರಡನೇ ಬಾರಿ 1999ರಲ್ಲಿ ಶಾಸಕರಾಗಿದ್ದರು. 22019ರಲ್ಲಿ ಅವರು ಮತ್ತೂಮ್ಮೆ ಗೆದ್ದಿರುವುದು 9ರ ಕರಾಮತ್ತು ಮತ್ತೂಮ್ಮೆ ತೋರಿದಂತಾಗಿದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲು ದೇಶದಲ್ಲಿರುವ ಮೋದಿ ಅಲೆಯೇ ಕಾರಣ. ಅದರ ಜತೆಗೆ
ಸ್ಥಳೀಯ, ರಾಜ್ಯ ಮಟ್ಟದ ನಾಯಕರ ಹಾಗೂ ಕಾರ್ಯಕರ್ತರ ಪರಿಶ್ರಮವೂ ಕಾರಣ.
● ರಾಜಾ ಅಮರೇಶ್ವರ ನಾಯಕ, ವಿಜೇತ ಅಭ್ಯರ್ಥಿ
ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ, ಜನಾದೇಶಕ್ಕೆ ತಲೆ ಬಾಗಬೇಕು. ದೇಶದಲ್ಲಿ ಎಲ್ಲ ಕಡೆ ಫಲಿತಾಂಶ ನಿರೀಕ್ಷೆ ಹುಸಿಯಾಗಿದೆ. ಜನರನ್ನು ತಲುಪುವಲ್ಲಿ ನಾವು ವಿಫಲವಾಗಿದ್ದೇವೆ. ಸಾಕಷ್ಟು ಪ್ರಚಾರ
ನಡೆಸಲಾಗಿತ್ತು. ಉತ್ತಮ ಪೈಪೋಟಿ ನೀಡಿದ್ದೇವೆ.
● ಬಿ.ವಿ.ನಾಯಕ, ಪರಾಜಿತ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.