ನಾವಾದರೂ ಪ್ರಬಲ ಸ್ಪರ್ಧೆ ನೀಡುತ್ತಿದ್ದೆವು: ಕಾಂಗ್ರೆಸ್
ಕುತೂಹಲ ಮೂಡಿಸಿದ ಪ್ರಮೋದ್ ಮಧ್ವರಾಜ್ ಮುಂದಿನ ನಡೆ
Team Udayavani, May 25, 2019, 6:01 AM IST
ಉಡುಪಿ: ಅನಿರೀಕ್ಷಿತ ಎಂಬಂತೆ ಜೆಡಿಎಸ್ ಅಭ್ಯರ್ಥಿಯಾಗಿ ಭಾರೀ ಸಂಚಲನ, ಗೊಂದಲ, ಕುತೂಹಲ, ಟೀಕೆ, ಅಸಮಾಧಾನಗಳಿಗೂ ಕಾರಣವಾಗಿ ಈಗ ಸೋಲೊಪ್ಪಿಕೊಂಡಿರುವ ಪ್ರಮೋದ್ ಮಧ್ವರಾಜ್ ಅವರ ಮುಂದಿನ ನಡೆಯೇನು ಎಂಬ ಕುತೂಹಲ ಸಾರ್ವ ಜನಿಕರು ಮಾತ್ರವಲ್ಲದೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು, ಮುಖಂಡರಲ್ಲಿಯೂ ಇದೆ.
ಜೆಡಿಎಸ್ ಬದಲು ನಮ್ಮದೇ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ ಪ್ರಬಲ ಸ್ಪರ್ಧೆಯನ್ನಾದರೂ ನೀಡ ಬಹುದಿತ್ತು ಎಂಬ ಮಾತು ಕಾಂಗ್ರೆಸ್ ಮುಖಂಡರಿಂದ ಕೇಳಿಬಂದಿದೆ. ಹಾಗಾಗಿ ಕಾಂಗ್ರೆಸ್ ಮಂದಿ ಪ್ರಮೋದ್‌ರನ್ನು ಬಿಟ್ಟುಕೊಡಲಾರರು ಎಂದು ಭಾವಿಸಬಹುದು. ಆದರೆ ಜೆಡಿಎಸ್ ಕಡೆಯಿಂದ ಮಹತ್ವದ ಜವಾಬ್ದಾರಿಯ ಆಫರ್ ಬಂದರೆ ಅದನ್ನು ಒಪ್ಪಲೂ ಬಹುದು. ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡನಾಗಿಯೇ ಉಳಿದು ಮುಖ್ಯಮಂತ್ರಿ, ದೇವೇಗೌಡರ ಜತೆಗೆ ನಿಕಟ ಸಂಪರ್ಕ ಮುಂದು ವರಿಸುವ ಇರಾದೆಯೂ ಇರುವಂತಿದೆ. ಇದು “ಮೈತ್ರಿ ಧರ್ಮ’ಕ್ಕೂ ಸೂಕ್ತವಾದೀತು. ಆದರೆ ಮುಂದೆ ಚುನಾವಣೆಗಳು ಬಂದಾಗ ಇಲ್ಲವೆ ಅದಕ್ಕೂ ಮೊದಲು ಕಾಂಗ್ರೆಸ್‌ನಿಂದ ಆಕ್ಷೇಪ ಬಂದರೆ ಗಟ್ಟಿ ನಿರ್ಧಾರ ಅನಿವಾರ್ಯ.
ವರ್ಚಸ್ಸು ಹೆಚ್ಚುವುದೇ, ಕುಗ್ಗುವುದೇ?
ಮೊದಲ ಬಾರಿಗೆ 2013ರಲ್ಲಿ ಶಾಸಕನಾಗಿ ಆಯ್ಕೆಯಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದಲ್ಲಿ ಸಚಿವರಾಗಿದ್ದ ಪ್ರಮೋದ್ ಕಾಂಗ್ರೆಸ್ ಕಟ್ಟಾಳು. ಆದರೆ ಕಳೆದ ವಿಧಾನಸಭಾ ಚುನಾವಣೆ ವೇಳೆ “ಬಿಜೆಪಿ ಸೇರುತ್ತಾರಂತೆ’ ಎಂಬ ವದಂತಿಗಳಿಗೆ ವಸ್ತುವಾದರು. ಆದಾಗ್ಯೂ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 12,044 ಮತಗಳಿಂದ ಸೋಲುಂಡಿದ್ದರು. ಈ ಬಾರಿಯ
ಲೋಕಸಭಾ ಚುನಾವಣೆಯಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 47,276 ಮತಗಳ ಹಿನ್ನಡೆ ಅನು ಭವಿಸಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ತನ್ನ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಂಡರೋ ಅಥವಾ ಕಾಂಗ್ರೆಸ್-ಜೆಡಿಎಸ್ ವರಿಷ್ಠರ ನಿರ್ಧಾರಕ್ಕೆ ಕಟ್ಟುಬಿದ್ದು ಕಾಂಗ್ರೆಸ್‌ನಲ್ಲಿ ತನ್ನ ಪ್ರಭಾವ ಕುಗ್ಗಿಸಿಕೊಂಡರೋ ಹೇಳಲಾಗದು. ಆದರೆ ದೇಶ ದಲ್ಲೇ ಮೊದಲ ಬಾರಿ ಎಂಬಂತೆ ಒಂದು ಪಕ್ಷದ ಮುಖಂಡನಾಗಿದ್ದುಕೊಂಡು ಮತ್ತೂಂದು ಪಕ್ಷದಿಂದ ಬಿ ಫಾರಂ ಪಡೆದಿದ್ದಂತೂ ಹೌದು.
ಎರಡೂ ಪಕ್ಷಗಳಿಗೆ ನಾಯಕ
“ನಾನು ಎರಡು ಪಕ್ಷಗಳ ಮೈತ್ರಿ ಅಭ್ಯರ್ಥಿ. ಗೆದ್ದರೆ ಎರಡೂ ಪಕ್ಷದ ವರನ್ನು ಸಮಾನವಾಗಿ ಕಾಣುತ್ತೇನೆ. ಅದಕ್ಕಾಗಿಯೇ ಎರಡೂ ಪಕ್ಷಗಳ ಚಿಹ್ನೆ ಇರುವ ಶಾಲನ್ನು ಹಾಕಿ ಕೊಂಡಿದ್ದೇನೆ’ ಎಂದು ಪ್ರಮೋದ್ ಹೇಳುತ್ತಿದ್ದರು. ಆದರೆ ಕಾಂಗ್ರೆಸ್ ಸದಸ್ಯತ್ವದ ಕುರಿತ ಪ್ರಶ್ನೆಗೆ “ಅದನ್ನು ಪಕ್ಷದವರು ನೋಡಿಕೊಳ್ಳುತ್ತಾರೆ’ ಎಂದಷ್ಟೇ ಪ್ರತಿ ಕ್ರಿಯಿಸಿದ್ದರು. ಸದ್ಯ ಪ್ರಮೋದ್ ಕಾಂಗ್ರೆಸ್- ಜೆಡಿಎಸ್ ಮುಖಂಡರಾಗಿದ್ದಾರೆ.
“ಕಳೆದ ಬಾರಿ ಸಚಿವನಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ ಮೋದಿ ಅಲೆಯಿಂದ ಸೋಲ ಬೇಕಾಯಿತು’ ಎಂದು ಹೇಳಿಕೆ ನೀಡಿದ್ದ ಅವರು ಈ ಬಾರಿ “ಬಿಜೆಪಿ ಅಲೆಯ ಎದುರು ನಾವೆಲ್ಲ ಅಸಹಾಯಕರಾಗಿದ್ದೇವೆ’ ಎಂದಿದ್ದಾರೆ. ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ನೀಡಲು ಸಿದ್ಧ ಎಂದು ಜೆಡಿಎಸ್ ವರಿಷ್ಠರು ಫಲಿತಾಂಶದ ಮೊದಲು ಹೇಳಿದ್ದರು. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೂಡ ರಾಜ್ಯದಲ್ಲಿ ನೆಲಕಚ್ಚಿದೆ. ವೈಯಕ್ತಿಕ ವರ್ಚಸ್ಸನ್ನು ಉಳಿಸಿಕೊಳ್ಳಲು ಪ್ರಮೋದ್ ಆಯ್ಕೆ ಮುಂದಿನ ರಾಜ್ಯ ರಾಜಕೀಯದ ಬೆಳವಣಿಗೆಗಳನ್ನು ಅವಲಂಬಿಸಿರಲೂಬಹುದು.
ಕಾರ್ಯಕರ್ತರು ಕೈಕೊಟ್ಟರೆ?
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟ ವರಿಷ್ಠರ ಬಗ್ಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಎದ್ದಿತ್ತು. ಎಐಸಿಸಿ ಸದಸ್ಯ ಅಮೃತ್ ಶೆಣೈ ಬಂಡಾಯವಾಗಿ ಕಣಕ್ಕಿಳಿದಿದ್ದರು. ಕಟ್ಟಾ ಕಾಂಗ್ರೆಸಿಗರು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ಹಿಂದೇಟು ಹಾಕಿರಬಹುದು ಎಂಬ ಲೆಕ್ಕಾಚಾರಗಳು ಮುನ್ನೆಲೆಗೆ ಬಂದಿವೆ.
ಪ್ರಮೋದ್ ನಿರ್ಧಾರ
ಪ್ರಮೋದ್ ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ಇದ್ದಿದ್ದರೆ ಪ್ರಬಲ ಸ್ಪರ್ಧೆ ನೀಡುತ್ತಿದ್ದೆವು. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮುಂದುವರಿಸುತ್ತೇವೆ. ಪ್ರಮೋದ್ ಮುಂದಿನ ನಿರ್ಧಾರ ಅವರಿಗೆ ಬಿಟ್ಟದ್ದು.
– ಎಂ.ಎ. ಗಫೂರ್,
ಕೆಪಿಸಿಸಿ ಕಾರ್ಯದರ್ಶಿ
ಜೆಡಿಎಸ್ ಸೇರಿ ತಪ್ಪು ಮಾಡಿದರು
ಪ್ರಮೋದ್‌ಗೆ ಕಾಂಗ್ರೆಸ್ ಅನ್ಯಾಯ ಮಾಡಿಲ್ಲ. ಅವರು ಮೊದಲ ಬಾರಿ ಶಾಸಕನಾದಾಗಲೇ ಅವರಿಗೆ ಸಚಿವ ಸ್ಥಾನ ನೀಡಿದರು. ಪ್ರಮೋದ್ ಮೇಲೆ ಗೌರವ ಇದೆ. ಆದರೆ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ ದೊಡ್ಡ ತಪ್ಪು ಮಾಡಿದ್ದಾರೆ. ಅವರು ಯಾವ ಆಧಾರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು, ಅವರ ಮುಂದಿನ ನಡೆ ಏನು ಎಂಬುದು ಯಕ್ಷ ಪ್ರಶ್ನೆ.
-ಶೋಭಾ ಕರಂದ್ಲಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.