ಅನಿವಾಸಿ ಭಾರತೀಯರಿಗೆ ಕ್ಷಣಕ್ಷಣದ ಮಾಹಿತಿ
ಜಾಲತಾಣಗಳಲ್ಲಿ ಚುನಾವಣಾ ವಿಶ್ಲೇಷಣೆ
Team Udayavani, May 25, 2019, 6:00 AM IST
ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದ ಘೋಷಣೆಯು ಅತಿ ಹೆಚ್ಚು ಜನಾಸಕ್ತಿ ಗಳಿಸುವಲ್ಲಿ ಸಫಲವಾಗಿರುವುದು ಸಾಮಾಜಿಕ ತಾಣಗಳು. ವಿಶೇಷವೆಂದರೆ, ಟ್ವಿಟರ್, ಫೇಸುಬುಕ್, ವಾಟ್ಸ್‌ಆ್ಯಪ್ ಸೇರಿದಂತೆ ಇಡೀ ಸಾಮಾಜಿಕ ತಾಣಗಳೇ ಗುರುವಾರ ಚುನಾವಣಾ ಫಲಿತಾಂಶದ ಸುದ್ದಿ ಜತೆಗೆ ವಿಶ್ಲೇಷಣೆ, ವಿಡಂಬನೆಗೆ ವೇದಿಕೆ ಯಾಗಿದ್ದವು.
ಜತೆಗೆ ಅನಿವಾಸಿ ಭಾರತೀಯರಿಗೂ ಸ್ವದೇಶದ ಚುನಾ ವಣಾ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳಲು ನೆರವಾಗಿದ್ದು ಇದೇ ಸಾಮಾಜಿಕ ತಾಣಗಳು. ವಿದೇಶದಲ್ಲಿರುವ ಭಾರತೀಯರಿಗೆ ಈ ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಸ್ವದೇಶದ ಮಾಹಿತಿಗಳನ್ನು ಕ್ಷಿಪ್ರವಾಗಿ ತಿಳಿಯುವುದು ಕಷ್ಟವಾಗುತ್ತಿತ್ತು. ಈ ಬಾರಿ ಹಾಗಾಗಲಿಲ್ಲ. ಅವರೆಲ್ಲರೂ ಗುರುವಾರ ಬೆಳಗ್ಗಿನಿಂದಲೇ ಭಾರತದ ಲೋಕ ಫಲಿತಾಂಶವನ್ನು ಸಾಮಾಜಿಕ ತಾಣಗಳಲ್ಲಿ ವೀಕ್ಷಿಸಿದರು. “ಎಲ್ಲ ಕೆಲಸಗಳನ್ನು ಬದಿಗೊತ್ತಿ ವಿದೇಶದ ನೆಲದಿಂದಲೇ ಸ್ವದೇಶದ ಕ್ಷಣಕ್ಷಣದ ಅಪ್‌ಡೇಟ್‌ಗಳನ್ನು ನೋಡುವಂತಾಯಿತು’ ಎಂದು ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ಚೇತನ್ ಹೇಳುತ್ತಾರೆ.
ಎಲ್ಲರ ಸ್ಟೇಟಸ್ “ಮೋದಿ’
ಫಲಿತಾಂಶಕ್ಕೆ ವಾರವಿರುವಾಗಲೇ ಸಾಮಾಜಿಕ ತಾಣ ಬಳಕೆದಾರರು ಚಟುವಟಿಕೆ ಆರಂಭಿಸಿದ್ದರು. ಗುರುವಾರ ಬೆಳಗ್ಗೆ ಮತ ಎಣಿಕೆ ಆರಂಭ ವಾಗುತ್ತಿದ್ದಂತೆ ಅಭ್ಯರ್ಥಿಗಳ ಪರವಾಗಿ ಪೋಸ್ಟ್, ಇತರ ಪಕ್ಷಗಳ ಕಾಲೆಳೆಯುವಿಕೆ, ಟ್ರೋಲಿಂಗ್ ನಡೆದೇ ಇತ್ತು. ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡ ಅನಂತರ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿ ಗಳು ಮೋದಿ ಮತ್ತು ಗೆದ್ದ ಅಭ್ಯರ್ಥಿಗಳ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಿ ಅಭಿನಂದನೆ ಕೋರಿದರು.
ವಿಶೇಷವೆಂದರೆ, ಫಲಿತಾಂಶ ಕೊನೆಗೊಳ್ಳುವ ಹೊತ್ತಿಗೆ ಮೋದಿ ಅಭಿಮಾನಿಗಳ ಸಾಮಾಜಿಕ ತಾಣ ಖಾತೆಗಳೆಲ್ಲ ಮೋದಿಮಯವಾಗಿ ಬದಲಾಗಿತ್ತು. ಕಾಂಗ್ರೆಸ್, ಜೆಡಿಎಸ್‌ನ ಗೆದ್ದ ಅಭ್ಯರ್ಥಿಗಳ ಪರವಾಗಿಯೂ ಅಭಿಮಾನಿಗಳು ಸ್ಟೇಟಸ್‌ಗಳನ್ನು ಹಾಕಿ ಶುಭ ಕೋರುತ್ತಿದ್ದರು.
ಈ ನಡುವೆ ಪರಾಜಿತ ಅಭ್ಯರ್ಥಿಗಳ ಬಗ್ಗೆ ವಿಡಂಬನೆಗಳನ್ನು ಬರೆದು ಕೆಲವರು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುತ್ತಿದ್ದರು. ಆದರೆ ಪರಾಜಿತ ಅಭ್ಯರ್ಥಿಗಳು ಮತ್ತು ಪಕ್ಷಗಳು ಸೋಲನ್ನು ಧನಾತ್ಮಕವಾಗಿಯೇ ಸ್ವೀಕರಿಸಿ, ಜನಾದೇಶಕ್ಕೆ ತಲೆಬಾಗು ವುದಾಗಿ ಹೇಳಿದ್ದರು. ಮಂಡ್ಯ ಪಕ್ಷೇತರ ಅಭ್ಯರ್ಥಿಯ ಗೆಲುವನ್ನು ನೆಟ್ಟಿಗರು ಸ್ವಾಗತಿಸಿ ವಿಶೇಷ ಪೋಸ್ಟ್‌ಗಳನ್ನು ಬರೆಯುತ್ತಿದ್ದರು.
ಅಭಿನಂದನೆ ಮಹಾಪೂರ
ನಳಿನ್ ಅವರಿಗೆ ಇದು ಹ್ಯಾಟ್ರಿಕ್ ಗೆಲುವು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರ ಫೋಟೋ ಸ್ಟೇಟಸ್ ಹಾಕಿಕೊಂಡು ಅಭಿನಂದನೆ ಸಲ್ಲಿಸಿದರು.
ಟ್ರೋಲಿಂಗ್; ಕಾಟೂìನ್…
ವಿಶೇಷ ವ್ಯಕ್ತಿಗಳು, ಚಲನಚಿತ್ರ ತಾರೆಯರ ಚಿತ್ರಗಳು, ಸಂಭಾಷಣೆ ಗಳನ್ನು ಬಳಸಿಕೊಂಡು ಟ್ರೋಲ್ ಮಾಡುವುದು ಇಡೀ ದಿನ ನಡೆದೇ ಇತ್ತು.
ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ
ರಾಜ್ಯದಲ್ಲಿ ತಲಾ ಒಂದು ಸೀಟ್ ಲಭ್ಯವಾಗಿರುವುದಕ್ಕೆ, “ಮೈತ್ರಿ ಧರ್ಮ ಎಂದರೆ ಹೀಗಿರಬೇಕು; ಸಮಬಾಳು ತಣ್ತೀದಡಿ ತಲಾ ಒಂದೊಂದು ಸೀಟು ಗಳಿಸಿದ ಮೈತ್ರಿ ಪಕ್ಷಗಳು’ ಎಂದು ನೆಟ್ಟಿಗರು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದರು. ನರೇಂದ್ರ ಮೋದಿಯವರು ಅಮಿತ್ ಶಾ ಅವರತ್ತ ಕೈ ತೋರಿಸುತ್ತಿರುವ ಫೋಟೋವನ್ನು ಬಳಸಿಕೊಂಡು “ವಿಶ್ವಕಪ್‌ನ್ನು ಕೂಡ ನಾವೇ ಆಡೋಣ ಎನ್ನುತ್ತಿ ದ್ದಾರೆ’ ಎಂದು ಹೇಳುತ್ತಿರುವಂತೆ ಸಂಭಾಷಣೆ ಬರೆದ ಟ್ರೋಲ್ ವೈರಲ್ ಆಗಿತ್ತು. “2014ರಲ್ಲಿ ಬಿಜೆಪಿ 282; 2019ರಲ್ಲಿ ಜಿಎಸ್‌ಟಿ ಸೇರಿ 303′ ಸೀಟ್ ಗಳಿಸಿದೆ ಎಂಬ ಟ್ರೋಲ್‌ಹರಿದಾಡಿದವು.
ಈ ನಡುವೆ ವಿವಿಧ ಹವ್ಯಾಸಿ ಕಾಟೂìನಿಸ್ಟ್‌ಗಳು ಬರೆದ ಕಾಟೂìನ್‌ಗಳೂ ಹರಿದಾಡಿದವು.
ಹೌ ಈಸ್ ದ ಜೋಶ್
“ಉರಿ’-ದ ಸರ್ಜಿಕಲ್ ಸ್ಟೈಕ್’ ಸಿನೆಮಾ ತೆರೆಕಂಡ ಬಳಿಕ “ಹೌ ಈಸ್ ದ ಜೋಶ್’ ಸಂಭಾಷಣೆ ಎಲ್ಲರ ಬಾಯಲ್ಲೂ ಹರಿದಾಡಿತ್ತು. ಇದೀಗ ಚುನಾವಣಾ ಫಲಿತಾಂಶದ ದಿನದಂದೂ ಈ ಡೈಲಾಗ್ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ. ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ, ಮತ್ತು ಫಲಿತಾಂಶ ಘೋಷಣೆಯಾದ ಬಳಿಕವೂ ಮೋದಿ ಅಭಿಮಾನಿಗಳು ಮೋದಿ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಿಕೊಂಡು “ಹೌ ಈಸ್ ದ ಜೋಶ್’ ಎಂದು ಬರೆದುಕೊಂಡು ಖುಷಿ ಪಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.